ಚುನಾವಣಾ ಆಯೋಗ
azadi ka amrit mahotsav

ಜನತಾ ಪ್ರಾತಿನಿಧ್ಯ ಕಾಯಿದೆಯ 1950 ರ ಸೆಕ್ಷನ್ 8ಎ ಪ್ರಕಾರ ಅಸ್ಸಾಂ ರಾಜ್ಯದಲ್ಲಿ ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರಗಳನ್ನು ವಿಂಗಡಿಸಲು ಚುನಾವಣಾ ಆಯೋಗವು  ಆರಂಭಿಸಿದೆ

 
2001 ರ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ರಾಜ್ಯದಲ್ಲಿ ಎಸಿಗಳು ಮತ್ತು ಪಿಸಿಗಳ ಮರುಹೊಂದಾಣಿಕೆ ಉದ್ದೇಶಕ್ಕಾಗಿ ಬಳಸಲಾಗುವುದು

ಜನವರಿ 1, 2023ರಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಹೊಸ ಆಡಳಿತ ಘಟಕಗಳ ರಚನೆಗೆ ನಿಷೇಧ  

Posted On: 27 DEC 2022 2:47PM by PIB Bengaluru

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಸ್ವೀಕರಿಸಿದ ವಿನಂತಿಯ ಅನುಸಾರವಾಗಿ, ಭಾರತದ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆಯ 1950, ಸೆಕ್ಷನ್ 8A ಪ್ರಕಾರ ಅಸ್ಸಾಂ ರಾಜ್ಯದಲ್ಲಿ ವಿಧಾನಸಭೆ ಮತ್ತು ಸಂಸದೀಯ ಕ್ಷೇತ್ರಗಳ ಮರುವಿಂಘಡಿಸುವುದನ್ನು   ಪ್ರಾರಂಭಿಸುವ ನಿರ್ಧಾರವನ್ನು ಕೈಗೊಂಡಿದೆ.

ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಶ್ರೀ ಅನುಪ್ ಚಂದ್ರ ಪಾಂಡೆ ಮತ್ತು ಶ್ರೀ ಅರುಣ್ ಗೋಯೆಲ್ ನೇತೃತ್ವದ ಆಯೋಗವು ಜನವರಿ 1, 2023 ರಿಂದ ಹೊಸ ಆಡಳಿತ ಘಟಕಗಳ ರಚನೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರುವಂತೆ ಅಸ್ಸಾಂನ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಮರುವಿಂಗಡಣೆ ಕಾರ್ಯ ಪೂರ್ಣಗೊಳ್ಳುವವರೆಗೆ ಆದೇಶ ಜಾರಿಯಲ್ಲಿರುತ್ತದೆ. ಸಂವಿಧಾನದ 170ನೇ ವಿಧಿಯ ಅಡಿಯಲ್ಲಿ ಕಡ್ಡಾಯಗೊಳಿಸಿದಂತೆ, ಜನಗಣತಿ ಅಂಕಿಅಂಶಗಳನ್ನು (2001) ರಾಜ್ಯದಲ್ಲಿ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಮರುಹೊಂದಾಣಿಕೆಯ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಭಾರತದ ಸಂವಿಧಾನದ 330 ಮತ್ತು 332 ನೇ ವಿಧಿಗಳ ಪ್ರಕಾರ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸ್ಥಾನಗಳ ಮೀಸಲಾತಿಯನ್ನು ಒದಗಿಸಲಾಗುತ್ತದೆ.

ಆಯೋಗವು ಕ್ಷೇತ್ರಗಳನ್ನು ವಿಂಗಡಣೆ  ಮಾಡುವ ಉದ್ದೇಶಕ್ಕಾಗಿ ತನ್ನದೇ ಆದ ಮಾರ್ಗಸೂಚಿಗಳು ಮತ್ತು ವಿಧಾನವನ್ನು ವಿನ್ಯಾಸಗೊಳಿಸುತ್ತದೆ ಮತ್ತು ಅಂತಿಮಗೊಳಿಸುತ್ತದೆ. ವಿಂಗಡಣೆ  ಸಮಯದಲ್ಲಿ, ಆಯೋಗವು ಭೌತಿಕ ಲಕ್ಷಣಗಳು, ಆಡಳಿತಾತ್ಮಕ ಘಟಕಗಳ ಅಸ್ತಿತ್ವದಲ್ಲಿರುವ ಗಡಿಗಳು, ಸಂವಹನದ ಸೌಲಭ್ಯ, ಸಾರ್ವಜನಿಕ ಅನುಕೂಲತೆಗಳನ್ನು ಗಮನದಲ್ಲಿಕೊಳ್ಳುತ್ತದೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ, ಕ್ಷೇತ್ರಗಳನ್ನು ಭೌಗೋಳಿಕವಾಗಿ ನಿಕಟವಾಗಿ ಏಕೀಕೃತವಾದ ಪ್ರದೇಶವಾಗಿ ಇರಿಸಲಾಗುತ್ತದೆ.

ಅಸ್ಸಾಂ ರಾಜ್ಯದಲ್ಲಿನ ಕ್ಷೇತ್ರಗಳ ವಿಂಗಡಣೆಯ ಕರಡು ಪ್ರಸ್ತಾವನೆಯನ್ನು ಆಯೋಗವು ಅಂತಿಮಗೊಳಿಸಿದ ನಂತರ, ಸಾಮಾನ್ಯ ಸಾರ್ವಜನಿಕರಿಂದ ಸಲಹೆಗಳು/ಆಕ್ಷೇಪಣೆಗಳನ್ನು ಆಹ್ವಾನಿಸಲು ಕೇಂದ್ರ ಮತ್ತು ರಾಜ್ಯ ರಾಜ್ಯಪತ್ರಗಳಲ್ಲಿ ಅದನ್ನು ಪ್ರಕಟಿಸಲಾಗುತ್ತದೆ. ಈ ನಿಟ್ಟಿನಲ್ಲಿ, ರಾಜ್ಯದಲ್ಲಿ ನಡೆಯುವ ಸಾರ್ವಜನಿಕ ಸಭೆಗಳ ದಿನಾಂಕ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸುವ ರಾಜ್ಯದ ಎರಡು ಸ್ಥಳೀಯ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಸಹ ಪ್ರಕಟಿಸಲಾಗುವುದು.

ಅಸ್ಸಾಂ ರಾಜ್ಯದಲ್ಲಿ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗಳನ್ನು ನಡೆಸಲು ಕಾನೂನು ಮತ್ತು ನ್ಯಾಯ ಸಚಿವಾಲಯವು ಭಾರತದ ಚುನಾವಣಾ ಆಯೋಗವನ್ನು ವಿನಂತಿಸಿದೆ, 15ನೇ ನವೆಂಬರ್, 2022 ದಿನಾಂಕದ ಪತ್ರ ಸಂಖ್ಯೆ.H-11019/06/2022-Leg.II. ಡಿಲಿಮಿಟೇಶನ್ ಆಕ್ಟ್, 1972 ರ ನಿಬಂಧನೆಗಳ ಅಡಿಯಲ್ಲಿ, ಅಸ್ಸಾಂ ರಾಜ್ಯದಲ್ಲಿನ ಕ್ಷೇತ್ರಗಳ ಕೊನೆಯ ವಿಂಗಡಣೆಯನ್ನು ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ 1976 ರಲ್ಲಿ ಆಗಿನ ಡಿಲಿಮಿಟೇಶನ್ ಆಯೋಗವು 1971 ರಲ್ಲಿ ಮಾಡಿತ್ತು.

******


(Release ID: 1886970) Visitor Counter : 236