ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

CDSCO ಮತ್ತು ರಾಜ್ಯ ಡ್ರಗ್ಸ್ ನಿಯಂತ್ರಣ ಆಡಳಿತಾಧಿಕಾರಿಗಳಿಂದ ಔಷಧಿ ತಯಾರಿಕಾ ಘಟಕಗಳ ಜಂಟಿ ತಪಾಸಣೆ ಪ್ರಾರಂಭ


ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯ ವಿಧಾನಗಳ ಪ್ರಕಾರ ದೇಶಾದ್ಯಂತ ಜಂಟಿ ತಪಾಸಣೆ 

ತಪಾಸಣೆ, ವರದಿ ಮತ್ತು ನಂತರ  ಕ್ರಮದ ಪ್ರಕ್ರಿಯೆ ಉಸ್ತುವಾರಿಗೆ CDSCO (HQ)ನಲ್ಲಿ ಎರಡು ಜಂಟಿ ಔಷಧ ನಿಯಂತ್ರಕರ ಸಮಿತಿ ರಚನೆ

Posted On: 27 DEC 2022 2:06PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡೋವಿಯ ಅವರ ನಿರ್ದೇಶನದ ಮೇರೆಗೆ, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅಪಾಯ ಆಧಾರಿತ ವಿಧಾನದ ಪ್ರಕಾರ ರಾಜ್ಯ ಔಷಧಗಳ ನಿಯಂತ್ರಣ ಆಡಳಿತವು ಗುರುತಿಸಲಾದ ಔಷಧ ಉತ್ಪಾದನಾ ಘಟಕಗಳ ಜಂಟಿ ತಪಾಸಣೆ ನಡೆಸಲು ಆರಂಭಿಸಲಾಗಿದೆ.

ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳ ಪ್ರಕಾರ ದೇಶಾದ್ಯಂತ ಜಂಟಿ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯಿದೆ, 1940 ಮತ್ತು ಅದರ ಅಡಿಯಲ್ಲಿನ ನಿಯಮಗಳನ್ನು ಖಚಿತಪಡಿಸಿಕೊಳ್ಳಲು ತಪಾಸಣೆ, ವರದಿ ಮತ್ತು ನಂತರ ಕ್ರಮದ ಪ್ರಕ್ರಿಯೆಯ ಮೇಲೆ ನಿಗಾ ವಹಿಸಲು CDSCO (HQ) ನಲ್ಲಿ ಎರಡು ಜಂಟಿ ಔಷಧ ನಿಯಂತ್ರಕರ ಸಮಿತಿಯನ್ನು ರಚಿಸಲಾಗಿದೆ. ಇದು ದೇಶದಲ್ಲಿ ತಯಾರಿಸಿದ ಔಷಧಿಗಳಿಗೆ ಸಂಬಂಧಿಸಿದಂತೆ ಗುಣಮಟ್ಟಕ್ಕೆ ಸಂಬಂಧಿಸಿದ ಅನುಕರಣೀಯ ನಿಯಮಗಳನ್ನು ಹಾಗೂ  ಉನ್ನತ ಗುಣಮಟ್ಟ ಖಾತರಿಪಡಿಸುತ್ತದೆ.

ಸ್ಟ್ಯಾಂಡರ್ಡ್ ಗುಣಮಟ್ಟದ (NSQ)/ಕಲಬೆರಕೆ/ನಕಲಿ ಔಷಧಗಳ ಉತ್ಪಾದನೆಯು ಸಂಕಷ್ಟಕರ ಎಂದು ಗುರುತಿಸಲಾದ ಉತ್ಪಾದನಾ ಘಟಕಗಳ ರಾಷ್ಟ್ರವ್ಯಾಪಿ ತಪಾಸಣೆಗಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ.

ದೇಶದಲ್ಲಿ ಲಭ್ಯವಿರುವ ಔಷಧಿಗಳ ಸುರಕ್ಷತೆ, ಪರಿಣಾಮ ಮತ್ತು ಗುಣಮಟ್ಟವನ್ನು ಖಚಿತಪಡಿಸುವುದು ಔಷಧ ನಿಯಂತ್ರಣದ ಉದ್ದೇಶವಾಗಿದೆ. ಉತ್ಪಾದನಾ ಘಟಕಗಳು ಡ್ರಗ್ಸ್ & ಕಾಸ್ಮೆಟಿಕ್ಸ್ ಆಕ್ಟ್, 1940 ಮತ್ತು ಅದರ ಅಡಿಯಲ್ಲಿ ಉತ್ತಮ ಉತ್ಪಾದನಾ ಅಭ್ಯಾಸಗಳ (GMP) ಅವಶ್ಯಕತೆಗಳಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಔಷಧ ನಿಯಂತ್ರಣ ಆಡಳಿತ ಅತ್ಯಗತ್ಯವಾಗಿದ ಎಂದು ಪ್ರತಿಪಾದಿಸಲಾಗಿದೆ.

*****



(Release ID: 1886909) Visitor Counter : 94