ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಡಿಸೆಂಬರ್ 24ರಂದು ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್ ಕೋಟ್ ಸಂಸ್ಥಾನದ 75ನೇ ಅಮೃತ ಮಹೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿಗಳು

Posted On: 23 DEC 2022 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2022ರ ಡಿಸೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್ ಕೋಟ್ ಸಂಸ್ಥಾನದ 75ನೇ ಅಮೃತ ಮಹೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಶ್ರೀ ಸ್ವಾಮಿನಾರಾಯಣ ಗುರುಕುಲ ರಾಜ್ ಕೋಟ್ ಸಂಸ್ಥಾನವನ್ನು 1948ರಲ್ಲಿ ಗುರುದೇವ್ ಶಾಸ್ತ್ರೀಜಿ ಮಹಾರಾಜ್ ಶ್ರೀ ಧರ್ಮಜೀವನದಾಸ್ ಜೀ ಸ್ವಾಮಿಗಳು ರಾಜ್ ಕೋಟ್ ನಲ್ಲಿ ಸ್ಥಾಪಿಸಿದರು. ಈ ಸಂಸ್ಥಾನವು ವಿಸ್ತಾರಗೊಂಡಿದ್ದು, ಪ್ರಸ್ತುತ ವಿಶ್ವದಾದ್ಯಂತ 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ, ಇದು 25,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆ, ಪದವಿಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕೆ ಸೌಲಭ್ಯಗಳನ್ನು ಒದಗಿಸುತ್ತದೆ.

*****


(Release ID: 1886014)