ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಬುಡಕಟ್ಟು ಸಬಲೀಕರಣ ಕುರಿತು ಕೇಂದ್ರ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು
ಬುಡಕಟ್ಟು ಸಮುದಾಯಕ್ಕಾಗಿ ದೃಢವಾದ ಮತ್ತು ಸೇರ್ಪಡೆಯ ಕ್ರಮಗಳು ಸರ್ಕಾರದ ನೀತಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ: ಶ್ರೀ ಧರ್ಮೇಂದ್ರ ಪ್ರಧಾನ್
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಬುಡಕಟ್ಟು ಸಮುದಾಯಕ್ಕೆ ಬಹುಕಾಲದಿಂದ ಸಲ್ಲಬೇಕಾಗಿದ್ದ ಗೌರವವನ್ನು ನೀಡುತ್ತಿದ್ದಾರೆ - ಶ್ರೀ ಧರ್ಮೇಂದ್ರ ಪ್ರಧಾನ್
ಸ್ಥಳೀಯ ಭಾಷೆ ಮತ್ತು ಮಾತೃಭಾಷೆಯಲ್ಲಿ ಶಿಕ್ಷಣವು ಬುಡಕಟ್ಟು ಜನರನ್ನು ಸಬಲಗೊಳಿಸುತ್ತದೆ - ಶ್ರೀ ಧರ್ಮೇಂದ್ರ ಪ್ರಧಾನ್
Posted On:
21 DEC 2022 5:46PM by PIB Bengaluru
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ನವದೆಹಲಿಯಲ್ಲಿ ಬುಡಕಟ್ಟು ಸಮುದಾಯದ ಸಬಲೀಕರಣ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ಬುಡಕಟ್ಟು ಸಮುದಾಯದ ಉನ್ನತಿಗಾಗಿ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳು ಮತ್ತು ಬುಡಕಟ್ಟು ಜನರನ್ನು ಸಬಲೀಕರಣಗೊಳಿಸುವಲ್ಲಿ ಸಾಧಿಸಿದ ಪ್ರಗತಿಯ ಕುರಿತು ಅವರು ಮಾತನಾಡಿದರು.
ಈ ಪತ್ರಿಕಾಗೋಷ್ಠಿಯು ರಾಷ್ಟ್ರೀಯ ಆದ್ಯತೆಗಳ ಕಡೆಗೆ ಸಾಮೂಹಿಕ ಕ್ರಮಕ್ಕೆ ಬದ್ಧವಾಗಿರುವ ಸಂಪೂರ್ಣ-ಸರ್ಕಾರದ ವಿಧಾನದ ಭಾಗವಾಗಿದೆ ಎಂದು ಶ್ರೀ ಪ್ರಧಾನ್ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಬುಡಕಟ್ಟು ಸಮುದಾಯಕ್ಕೆ ಬಹುಕಾಲದಿಂದ ಸಲ್ಲಬೇಕಾಗಿದ್ದ ಗೌರವವನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಧನಸಹಾಯದಲ್ಲಿ ಭಾರೀ ಜಿಗಿತು ಕುರಿತು ಅವರು ಮಾತನಾಡಿದರು. ಬುಡಕಟ್ಟು ಜನಾಂಗದವರ ಸರ್ವಾಂಗೀಣ ಅಭಿವೃದ್ಧಿಗೆ ಸಕಾರಾತ್ಮಕ ಕ್ರಮ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಸರ್ಕಾರದ ನೀತಿಯ ಪ್ರಮುಖ ಕ್ಷೇತ್ರವಾಗಿದೆ ಎಂದು ಅವರು ಹೇಳಿದರು. ಎಸ್ ಟಿ ಸಿ ನಿಧಿಗಳ ಹಂಚಿಕೆಯನ್ನು 2014-15 ರಲ್ಲಿದ್ದ 19,437 ಕೋಟಿ ರೂ.ಗಳಿಂದ 2022-23ರಲ್ಲಿ 87,585 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅನುದಾನವನ್ನು 2014-15ರಲ್ಲಿದ್ದ 3832 ಕೋಟಿ ರೂ.ಗಳಿಂದ 2022-23 ರಲ್ಲಿ 8407 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದರು. ಅನುದಾನ ಹೆಚ್ಚಳದ ಕುರಿತು ಮಾತನಾಡಿದ ಅವರು, ಸರ್ಕಾರಕ್ಕೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ಪ್ರಯಾಸ್’ಕೇವಲ ಘೋಷಣೆಯಾಗಿರದೆ ಮಾರ್ಗದರ್ಶಿ ತತ್ವ ಮತ್ತು ಜವಾಬ್ದಾರಿಯುತ ಬದ್ಧತೆಯಾಗಿದೆ ಎಂದರು. ಬುಡಕಟ್ಟು ಜನಾಂಗದವರ ಸಂಸ್ಕೃತಿಯನ್ನು ರಕ್ಷಿಸುವುದು, ಅವರ ಅಸ್ಮಿತೆಯನ್ನು ಗೌರವಿಸುವುದು, ಶಿಕ್ಷಣ, ಆರೋಗ್ಯ, ಸ್ವಯಂ ಉದ್ಯೋಗ ಸೇರಿದಂತೆ ಇತರ ಅಂಶಗಳ ಮೂಲಕ ಬುಡಕಟ್ಟು ಜನರ ಉನ್ನತಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಶಿಕ್ಷಣ ಕುರಿತು ಮಾತನಾಡಿದ ಅವರು, ಸ್ಥಳೀಯ ಭಾಷೆಗಳು ಮತ್ತು ಮಾತೃಭಾಷೆಯಲ್ಲಿ ಶಿಕ್ಷಣವು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಲ್ಲಿ ಒಂದಾಗಿದೆ, ಇದರಲ್ಲಿ ಬುಡಕಟ್ಟು ಜನರು ಪ್ರಮುಖ ಫಲಾನುಭವಿಗಳಾಗಿರುತ್ತಾರೆ. ಬುಡಕಟ್ಟು ಜನರಿಗಾಗಿ ಏಕಲವ್ಯ ಮಾದರಿ ವಸತಿ ಶಾಲೆಗಳ ಕುರಿತು ಅವರು ಮಾತನಾಡಿ, ಈ ಶಾಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂದರು.
ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಗ್ರಾಮಗಳನ್ನು ಮಾದರಿ ಗ್ರಾಮವಾಗಿ (ಆದರ್ಶ ಗ್ರಾಮ) ಪರಿವರ್ತಿಸುವ ಗುರಿಯನ್ನು ಹೊಂದಿರುವ 'ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ (ಪಿಎಂಎಎಜಿವೈ)' ಅನ್ನು ಉಲ್ಲೇಖಿಸಿದ ಶ್ರೀ ಪ್ರಧಾನ್, ಕನಿಷ್ಠ ಶೇ.50 ರಷ್ಟು ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ 36,428 ಹಳ್ಳಿಗಳನ್ನು ಈ ಯೋಜನೆಯಡಿ ಒಳಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಈ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳು ಮತ್ತು ಸೌಲಭ್ಯಗಳನ್ನು ಮಿಷನ್ ಮೋಡ್‌ನಲ್ಲಿ ಸಾಧಿಸುವುದು ಈ ಯೋಜನೆಯ ಗುರಿಯಾಗಿದೆ. ಇದರ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ ವಾರ್ಷಿಕವಾಗಿ 7500 ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದರು.
ಎಂ ಎಸ್ ಪಿ ಅಡಿಯಲ್ಲಿ 87 ಕಿರು ಅರಣ್ಯ ಉತ್ಪನ್ನಗಳು (ಎಂ ಎಫ್ ಪಿ), SFURTI ಅಡಿಯಲ್ಲಿ 273 ಬುಡಕಟ್ಟು ಕ್ಲಸ್ಟರ್‌ಗಳನ್ನು ಸೇರಿಸುವ ಮೂಲಕ ಬುಡಕಟ್ಟು ಸ್ವಸಹಾಯ ಗುಂಪುಗಳಿಗೆ ವನಧನ್ ಕೇಂದ್ರಗಳ ಯೋಜನೆಯಡಿಯಲ್ಲಿ ಆದಿವಾಸಿಗಳಿಗೆ ಜೀವನೋಪಾಯದ ಅವಕಾಶಗಳನ್ನು ಸರ್ಕಾರ ಖಾತ್ರಿಪಡಿಸುತ್ತಿದೆ. ಪ್ರಧಾನಮಂತ್ರಿಯವರ ಗಮನವು ಪೌಷ್ಠಿಕ ಆಹಾರವನ್ನು ನೀಡುವ ಮತ್ತು ಪ್ರಾಥಮಿಕವಾಗಿ ಬುಡಕಟ್ಟು ಪ್ರದೇಶಗಳಲ್ಲಿ ಬೆಳೆಯುವ ಸಿರಿಧಾನ್ಯಗಳನ್ನು ಉತ್ತೇಜಿಸುವುದರ ಮೇಲೆ ಕೇಂದ್ರೀಕರಿಸಿದೆ ಎಂದು ಸಚಿವರು ವಿವರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಉಪಕ್ರಮದ ಮೇರೆಗೆ ಇತ್ತೀಚೆಗೆ ಘೋಷಿಸಲಾದ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವು ಸಿರಿಧಾನ್ಯ ಕೃಷಿಗೆ ಪ್ರಮುಖ ಕೊಡುಗೆ ನೀಡುವ ಬುಡಕಟ್ಟು ಜನರನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ನಾಯಕರ ಕೊಡುಗೆ ಮತ್ತು ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ತೆರೆಯುವುದು, ಜನಜಾತಿಯ ಗೌರವ ದಿವಸ್ ಮತ್ತು ಇತರ ಉಪಕ್ರಮಗಳನ್ನು ಒಳಗೊಂಡಂತೆ ಈ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಗೌರವಿಸಲು ಸರ್ಕಾರದ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ರೀ ಪ್ರಧಾನ್ ಮಾತನಾಡಿದರು. ಅವರು ವನಧನ್ ವಿಕಾಸ ಕೇಂದ್ರಗಳು, ಹುಡುಕಬಹುದಾದ ಬುಡಕಟ್ಟು ಡಿಜಿಟಲ್ ದಾಖಲೆಯ ಭಂಡಾರ ಅಭಿವೃದ್ಧಿ, ಸ್ಫೂರ್ತಿ (SFRUTI) ಯೋಜನೆ ಮತ್ತು ಮೊದಲ ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆ ಸ್ಥಾಪನೆಯಂತಹ ಇತರ ಉಪಕ್ರಮಗಳ ಬಗ್ಗೆ ವಿವರಿಸಿದರು.
*****
(Release ID: 1885556)
Visitor Counter : 174