ಪಿಎಮ್‍ಇಎಸಿ

ರಾಜ್ಯಗಳು ಮತ್ತು ಜಿಲ್ಲೆಗಳ ಸಾಮಾಜಿಕ ಪ್ರಗತಿ ಸೂಚ್ಯಂಕ (ಎಸ್‌ ಪಿ ಐ) ಬಿಡುಗಡೆ ಮಾಡಿದ ಇಎಸಿ-ಪಿಎಂ

Posted On: 20 DEC 2022 2:01PM by PIB Bengaluru

ಪುದುಚೇರಿ, ಲಕ್ಷದ್ವೀಪ ಮತ್ತು ಗೋವಾ ಅತ್ಯುತ್ತಮ-ಕಾರ್ಯನಿರ್ವಹಣೆಯ ರಾಜ್ಯಗಳಾಗಿ ಹೊರಹೊಮ್ಮಿವೆ; ಐಜ್ವಾಲ್ (ಮಿಜೋರಾಂ), ಸೋಲನ್ (ಹಿಮಾಚಲ ಪ್ರದೇಶ) ಮತ್ತು ಶಿಮ್ಲಾ (ಹಿಮಾಚಲ ಪ್ರದೇಶ) ಅತ್ಯುತ್ತಮ ಪ್ರದರ್ಶನದ ಅಗ್ರ 3 ಜಿಲ್ಲೆಗಳಾಗಿವೆ

ಆರ್ಥಿಕ ಸಲಹಾ ಮಂಡಳಿ-ಪ್ರಧಾನಿ (ಇಎಸಿ-ಪಿಎಂ), ಸ್ಪರ್ಧಾತ್ಮಕತೆ ಮತ್ತು ಸಾಮಾಜಿಕ ಪ್ರಗತಿಯ ಅಗತ್ಯತೆಯ ಸಂಸ್ಥೆಯೊಂದಿಗೆ ಭಾರತದ ರಾಜ್ಯಗಳು ಮತ್ತು ಜಿಲ್ಲೆಗಳ ಸಾಮಾಜಿಕ ಪ್ರಗತಿ ಸೂಚ್ಯಂಕವನ್ನು ಇಂದು ಬಿಡುಗಡೆ ಮಾಡಿದೆ. 

ಎಸ್‌ ಪಿ ಐ ಒಂದು ಸಮಗ್ರ ಸಾಧನವಾಗಿದ್ದು ಅದು ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಾಮಾಜಿಕ ಪ್ರಗತಿಯ ಸಮಗ್ರ ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಸೂಚ್ಯಂಕವು ಸಾಮಾಜಿಕ ಪ್ರಗತಿಯ ಮೂರು ನಿರ್ಣಾಯಕ ಆಯಾಮಗಳಾದ ಮೂಲಭೂತ ಮಾನವ ಅಗತ್ಯಗಳು, ಯೋಗಕ್ಷೇಮದ ಅಡಿಪಾಯಗಳು ಮತ್ತು ಅವಕಾಶಗಳ 12 ಘಟಕಗಳ ಆಧಾರದ ಮೇಲೆ ರಾಜ್ಯಗಳು ಮತ್ತು ಜಿಲ್ಲೆಗಳನ್ನು ಮೌಲ್ಯಮಾಪನ ಮಾಡುತ್ತದೆ. ಸೂಚ್ಯಂಕವು ರಾಜ್ಯ ಮಟ್ಟದಲ್ಲಿ 89 ಮತ್ತು ಜಿಲ್ಲಾ ಮಟ್ಟದಲ್ಲಿ 49 ಸೂಚಕಗಳನ್ನು ಒಳಗೊಂಡಿರುವ ವ್ಯಾಪಕ ಚೌಕಟ್ಟನ್ನು ಬಳಸುತ್ತದೆ.

ಮೂಲಭೂತ ಮಾನವ ಅಗತ್ಯಗಳ ಆಯಾಮವು ಪೌಷ್ಠಿಕಾಂಶ ಮತ್ತು ಮೂಲಭೂತ ವೈದ್ಯಕೀಯ ಆರೈಕೆ, ನೀರು ಮತ್ತು ನೈರ್ಮಲ್ಯ, ವೈಯಕ್ತಿಕ ಸುರಕ್ಷತೆ ಮತ್ತು ಆಶ್ರಯ (ವಾಸದ ಮನೆ) ದ ವಿಷಯದಲ್ಲಿ ರಾಜ್ಯಗಳು ಮತ್ತು ಜಿಲ್ಲೆಗಳ ಕಾರ್ಯಕ್ಷಮತೆಯನ್ನು ನಿರ್ಣಯಸುತ್ತದೆ.

ಯೋಗಕ್ಷೇಮದ ಅಡಿಪಾಯಗಳು ಆಯಾಮವು ಮೂಲಭೂತ ಜ್ಞಾನಕ್ಕೆ ಪ್ರವೇಶ, ಮಾಹಿತಿ ಮತ್ತು ಸಂವಹನದ ಲಭ್ಯತೆ, ಆರೋಗ್ಯ ಮತ್ತು ಸ್ವಾಸ್ಥ್ಯ ಮತ್ತು ಪರಿಸರ ಗುಣಮಟ್ಟದ ಲಭ್ಯತೆಗಳ ಅಂಶಗಳಾದ್ಯಂತ ದೇಶವು ಸಾಧಿಸಿದ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ.

ಅವಕಾಶದ ಆಯಾಮವು ವೈಯಕ್ತಿಕ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ, ಒಳಗೊಳ್ಳುವಿಕೆ ಮತ್ತು ಸುಧಾರಿತ ಶಿಕ್ಷಣದ ಲಭ್ಯತೆಯ ಮೇಲೆ ಕೇಂದ್ರೀಕರಿಸುತ್ತದೆ.

ಎಸ್‌ ಪಿ ಐ ಅಂಕಗಳ ಆಧಾರದ ಮೇಲೆ, ರಾಜ್ಯಗಳು ಮತ್ತು ಜಿಲ್ಲೆಗಳು ಸಾಮಾಜಿಕ ಪ್ರಗತಿಯ ಆರು ಶ್ರೇಣಿಗಳ ಅಡಿಯಲ್ಲಿ ಸ್ಥಾನ ಪಡೆದಿವೆ. ಶ್ರೇಣಿ 1: ಅತಿ ಹೆಚ್ಚು ಸಾಮಾಜಿಕ ಪ್ರಗತಿ; ಶ್ರೇಣಿ 2: ಉನ್ನತ ಸಾಮಾಜಿಕ ಪ್ರಗತಿ; ಶ್ರೇಣಿ 3: ಮೇಲ್ಮಧ್ಯಮ ಸಾಮಾಜಿಕ ಪ್ರಗತಿ; ಶ್ರೇಣಿ 4: ಕೆಳ ಮಧ್ಯಮ ಸಾಮಾಜಿಕ ಪ್ರಗತಿ; ಶ್ರೇಣಿ 5: ಕಡಿಮೆ ಸಾಮಾಜಿಕ ಪ್ರಗತಿ; ಮತ್ತು ಶ್ರೇಣಿ 6: ಅತ್ಯಂತ ಕಡಿಮೆ ಸಾಮಾಜಿಕ ಪ್ರಗತಿ.

ಪುದುಚೇರಿಯು ದೇಶದಲ್ಲಿ ಅತಿ ಹೆಚ್ಚು ಎಸ್‌ ಪಿ ಐ ಅಂಕ 65.99 ಪಡೆದುಕೊಂಡಿದೆ. ಇದು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ, ಆಶ್ರಯ ಹಾಗೂ ನೀರು ಮತ್ತು ನೈರ್ಮಲ್ಯದಂತಹ ಘಟಕಗಳಲ್ಲಿ ಅದರ ಗಮನಾರ್ಹ ಕಾರ್ಯಕ್ಷಮತೆಗೆ ಕಾರಣವಾಗಿದೆ. ಲಕ್ಷದ್ವೀಪ ಮತ್ತು ಗೋವಾ ಅನುಕ್ರಮವಾಗಿ 65.89 ಮತ್ತು 65.53 ಅಂಕಗಳೊಂದಿಗೆ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಜಾರ್ಖಂಡ್ ಮತ್ತು ಬಿಹಾರ ಅನುಕ್ರಮವಾಗಿ 43.95 ಮತ್ತು 44.47 ಕಡಿಮೆ ಅಂಕಗಳನ್ನು ಗಳಿಸಿವೆ.

ಮೂಲಭೂತ ಮಾನವ ಅಗತ್ಯಗಳ ಆಯಾಮದಲ್ಲಿ, ಗೋವಾ, ಪುದುಚೇರಿ, ಲಕ್ಷದ್ವೀಪ ಮತ್ತು ಚಂಡೀಗಢಗಳು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ ನೀರು ಮತ್ತು ನೈರ್ಮಲ್ಯ ಮತ್ತು ಆಶ್ರಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಮೊದಲ ನಾಲ್ಕು ರಾಜ್ಯಗಳಾಗಿವೆ. ಇದರ ಜೊತೆಗೆ, ನೀರು ಮತ್ತು ನೈರ್ಮಲ್ಯದಲ್ಲಿ ಗೋವಾ ಅತ್ಯಧಿಕ ಘಟಕ ಅಂಕ ಪಡೆದಿದೆ, ಕೇರಳವು ಪೋಷಣೆ ಮತ್ತು ಮೂಲಭೂತ ವೈದ್ಯಕೀಯ ಆರೈಕೆ ಘಟಕದಾದ್ಯಂತ ಹೆಚ್ಚಿನ ಅಂಕಗಳನ್ನು ಗಳಿಸಿದೆ. ಆಶ್ರಯ ಮತ್ತು ವೈಯಕ್ತಿಕ ಸುರಕ್ಷತೆಯಲ್ಲಿ, ಚಂಡೀಗಢ ಮತ್ತು ನಾಗಾಲ್ಯಾಂಡ್ ಕ್ರಮವಾಗಿ ಮುಂಚೂಣಿಯಲ್ಲಿವೆ.

ಮಿಜೋರಾಂ, ಹಿಮಾಚಲ ಪ್ರದೇಶ, ಲಡಾಖ್ ಮತ್ತು ಗೋವಾ ಯೋಗಕ್ಷೇಮದ ಅಡಿಪಾಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳಾಗಿ ಹೊರಹೊಮ್ಮಿವೆ. ಮೂಲ ಜ್ಞಾನಕ್ಕೆ ಪ್ರವೇಶದ ಆಯಾಮದಲ್ಲಿ, ಪಂಜಾಬ್ 62.92 ರ ಅತ್ಯಧಿಕ ಅಂಕ ಪಡೆದಿದೆ, ದೆಹಲಿಯು 71.30 ಅಂಕಗಳೊಂದಿಗೆ ಮಾಹಿತಿ ಮತ್ತು ಸಂವಹನ ಲಭ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆರೋಗ್ಯ ಮತ್ತು ಸ್ವಾಸ್ಥ್ಯದಲ್ಲಿ, ರಾಜಸ್ಥಾನವು ಅತ್ಯಧಿಕ ಘಟಕ ಅಂಕ 73.74 ಅನ್ನು ಪಡೆದಿದೆ. ಪರಿಸರ ಗುಣಮಟ್ಟದಲ್ಲಿ, ಅಗ್ರ ಮೂರು ರಾಜ್ಯಗಳು ಈಶಾನ್ಯ ಪ್ರದೇಶಕ್ಕೆ ಸೇರಿವೆ, ಅವುಗಳೆಂದರೆ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಮೇಘಾಲಯ.

ಕೊನೆಯದಾಗಿ, ಅವಕಾಶದ ಆಯಾಮದಲ್ಲಿ, ತಮಿಳುನಾಡು ಅತ್ಯಧಿಕ ಘಟಕ ಅಂಕ 72.00 ಅನ್ನು ಸಾಧಿಸಿದೆ. ಈ ಆಯಾಮದೊಳಗೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ವೈಯಕ್ತಿಕ ಹಕ್ಕುಗಳಲ್ಲಿ ಅತ್ಯಧಿಕ ಘಟಕ ಸ್ಕೋರ್ ಹೊಂದಿದ್ದರೆ, ಸಿಕ್ಕಿಂ ಒಳಗೊಳ್ಳುವಿಕೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಆಯಾಮದ ಎರಡು ಘಟಕಗಳಲ್ಲಿ ಅಂದರೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಯ್ಕೆ ಮತ್ತು ಸುಧಾರಿತ ಶಿಕ್ಷಣದ ಲಭ್ಯತೆಯಲ್ಲಿ ಪುದುಚೇರಿ ಅತ್ಯಧಿಕ ಅಂಕಗಳನ್ನು ಗಳಿಸಿದೆ.

ಶ್ರೇಣಿ-I: ಅತ್ಯುನ್ನತ ಸಾಮಾಜಿಕ ಪ್ರಗತಿ
 

ರಾಜ್ಯ 

ಎಸ್‌ ಪಿ ಐ

ಶ್ರೇಣಿ

ಪುದುಚೇರಿ 

65.99

1

ಲಕ್ಷದ್ವೀಪ

65.89

2

ಗೋವಾ

65.53

3

ಸಿಕ್ಕಿಂ

65.10

4

ಮಿಜೋರಾಂ

64.19

5

ತಮಿಳುನಾಡು

63.33

6

ಹಿಮಾಚಲ ಪ್ರದೇಶ

63.28

7

ಚಂಡೀಗಢ

62.37

8

ಕೇರಳ

62.05

9

 ಶ್ರೇಣಿ-II: ಉನ್ನತ ಸಾಮಾಜಿಕ ಪ್ರಗತಿ
 

ರಾಜ್ಯ 

ಎಸ್‌ ಪಿ ಐ

ಶ್ರೇಣಿ

ಜಮ್ಮು ಮತ್ತು ಕಾಶ್ಮೀರ

60.76

10

ಪಂಜಾಬ್

60.23

11

ದಾದ್ರಾ ಮತ್ತು ನಗರ ಹವೇಲಿ ಮತ್ತು ‌
ದಮನ್ ಮತ್ತು ದಿಯು

59.81

12

ಲಡಾಖ್

59.53

13

ನಾಗಾಲ್ಯಾಂಡ್

59.24

14

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

58.76

15

 ಶ್ರೇಣಿ-III: ಮೇಲ್ಮಧ್ಯಮ ಸಾಮಾಜಿಕ ಪ್ರಗತಿ
 

ರಾಜ್ಯ 

ಎಸ್‌ ಪಿ ಐ

ಶ್ರೇಣಿ

ಉತ್ತರಾಖಂಡ

58.26

16

ಕರ್ನಾಟಕ

56.77

17

ಅರುಣಾಚಲ ಪ್ರದೇಶ

56.56

18

ದೆಹಲಿ

56.28

19

ಮಣಿಪುರ

56.27

20

 ಶ್ರೇಣಿ-IV: ಕೆಳ ಮಧ್ಯಮ ಸಾಮಾಜಿಕ ಪ್ರಗತಿ
 

ರಾಜ್ಯ

ಎಸ್‌ ಪಿ ಐ

ಶ್ರೇಣಿ

ಹರಿಯಾಣ

54.15

21

ಗುಜರಾತ್‌

53.81

22

ಆಂಧ್ರಪ್ರದೇ

53.60

23

ಮೇಘಾಲಯ

53.22

24

ಪಶ್ಚಿಮಬಂಗಾಳ

53.13

25

ತೆಲಂಗಾಣ

52.11

26

ತ್ರಿಪುರಾ

51.70

27

ಚತ್ತೀಸಗಢ

51.36

28

ಮಹಾರಾಷ್ಟ್ರ

50.86

29

ರಾಜಸ್ತಾನ

50.69

30

 ಶ್ರೇಣಿ-V: ಕಡಿಮೆ ಸಾಮಾಜಿಕ ಪ್ರಗತಿ
 

ರಾಜ್ಯ

ಎಸ್‌ ಪಿ ಐ

ಶ್ರೇಣಿ

ಉತ್ತರ ಪ್ರದೇಶ

49.16

31

ಒಡಿಸ್ಸಾ

48.19

32

ಮಧ್ಯ ಪ್ರದೇಶ

48.11

33

ಶ್ರೇಣಿ-VI: ಅತ್ಯಂತ ಕಡಿಮೆ ಸಾಮಾಜಿಕ ಪ್ರಗತಿ
 

ರಾಜ್ಯ

ಎಸ್‌ ಪಿ ಐ

ಶ್ರೇಣಿ

ಅಸ್ಸಾಂ

44.92

34

ಬಿಹಾರ

44.47

35

ಜಾರ್ಖಂಡ್‌

43.95

36

2015-16 ರಿಂದ ಕೆಲವು ಪ್ರಮುಖ ಸೂಚಕಗಳ ಕಾರ್ಯನಿರ್ವಹಣೆಯಲ್ಲಿನ ಬದಲಾವಣೆಯನ್ನು ಮೌಲ್ಯಮಾಪನ ಮಾಡುವ ಮೂಲಕ, ವರದಿಯು ಭಾರತದಲ್ಲಿನ ಸಾಮಾಜಿಕ ಪ್ರಗತಿಯ ವಿಶಾಲ ಚಿತ್ರಣವನ್ನು ಪ್ರಸ್ತುತಪಡಿಸುತ್ತದೆ. ಜೊತೆಗೆ, ವರದಿಯು ದೇಶದ 112 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಸಾಧಿಸಿದ ಪ್ರಗತಿಯನ್ನು ಎತ್ತಿ ತೋರಿಸುತ್ತದೆ, ಅವರ ಸಾಮಾಜಿಕ ಪ್ರಗತಿಯ ಪ್ರಯಾಣವನ್ನು ಅನುಸರಿಸಲು ಮತ್ತು ಹೆಚ್ಚಿನ ಗಮನ ಅಗತ್ಯವಿರುವ ಕ್ಷೇತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ವರದಿಯಲ್ಲಿನ ಸಂಶೋಧನೆಗಳು ದೃಢವಾದ ವಿಧಾನ ಮತ್ತು ಆಳವಾದ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ಆಧರಿಸಿವೆ, ಮುಂದಿನ ವರ್ಷಗಳಲ್ಲಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀತಿ ನಿರೂಪಕರಿಗೆ ದಾರಿ ಮಾಡಿಕೊಡುತ್ತವೆ. ಇದು ಸಾಮಾಜಿಕ ಪ್ರಗತಿಯ ಪಯಣದ ಮುಂದಿನ ಹಂತದ ಆರಂಭವನ್ನು ಸೂಚಿಸುತ್ತದೆ ಮತ್ತು ದೇಶದಲ್ಲಿ ಸಾಮಾಜಿಕ ಪ್ರಗತಿಯ ಕಾರಣವನ್ನು ಮುನ್ನಡೆಸುವ ಆಶಯವನ್ನು ಹೊಂದಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕತೆಯ ಸಂಸ್ಥೆಯ ಗೌರವಾಧ್ಯಕ್ಷ ಮತ್ತು ಉಪನ್ಯಾಸಕ ಡಾ. ಅಮಿತ್ ಕಪೂರ್ ಅವರು, “'ಸಾಮಾಜಿಕ ಪ್ರಗತಿ ಸೂಚ್ಯಂಕ ವರದಿಯು ಸಾಮಾಜಿಕ ಪ್ರಗತಿಯ ಮೂರು ಆಧಾರ ಸ್ತಂಭಗಳಾದ ಮೂಲಭೂತ ಮಾನವ ಅಗತ್ಯಗಳು , ಯೋಗಕ್ಷೇಮ ಮತ್ತು ಅವಕಾಶದ ಅಡಿಪಾಯಗಳ ಮೇಲೆ ಕೇಂದ್ರೀಕೃತವಾಗಿರುವ ಸ್ವತಂತ್ರ ಕಾರ್ಯವಾಗಿದೆ. ಭಾರತದಲ್ಲಿ ಅಂತಹ ಆಳ ಮತ್ತು ವಿಶ್ಲೇಷಣೆಯೊಂದಿಗೆ ಸಾಮಾಜಿಕ ನಿಯತಾಂಕಗಳನ್ನು ನೋಡುವ ಒಂದು ಸೂಚ್ಯಂಕ ಇರಲಿಲ್ಲ. ಕಾಲಾನಂತರದಲ್ಲಿ ಬದಲಾವಣೆಗಳನ್ನು ಮತ್ತು ಆ ಬದಲಾವಣೆಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಈ ಸೂಚಕಗಳ ರೇಖಾಂಶದ ಮೌಲ್ಯಮಾಪನವನ್ನು ಮಾಡುವುದು ಮುಂದಿನ ಹಂತವಾಗಿದೆ” ಎಂದು ತಮ್ಮ ಆರಂಭಿಕ ಭಾಷಣದಲ್ಲಿ ವಿವರಿಸಿದರು.
ಸಾಮಾಜಿಕ ಪ್ರಗತಿ ಸೂಚ್ಯಂಕದ ಸಿಇಒ ಮೈಕೆಲ್ ಗ್ರೀನ್ ಅವರ ಕೊಡುಗೆಗಳನ್ನು ಸೂಚ್ಯಂಕವು ಹೊಂದಿದೆ, ಅವರು ಈ ಕುರಿತು ಮಾತನಾಡಿ, "ಸಾಮಾಜಿಕ ಪ್ರಗತಿ ಸೂಚ್ಯಂಕ ವರದಿಯು ಮಾನದಂಡದ ಶಕ್ತಿಯನ್ನು ವಿವರಿಸುತ್ತದೆ ಮತ್ತು ಪ್ರಮಾಣ ಮತ್ತು ಪ್ರಾಯೋಗಿಕ ಕ್ರಿಯೆಗಳನ್ನು ರಚಿಸಲು ಹಾಗೂ ಭಾರತದ ಜನರಿಗೆ ಅವುಗಳನ್ನು ತಲುಪಿಸಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರಗಳಿಗೆ ಸಂಬಂಧಿಸಿದ ಸಾಧನವನ್ನು ನೀಡುತ್ತದೆ. ಸರ್ಕಾರ, ಉದ್ಯಮಗಳು ಮತ್ತು ನಾಗರಿಕ ಸಮಾಜವು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯನ್ನು ಕೇಂದ್ರೀಕರಿಸುವ ಮೂಲಕ ಅಂತರ್ಗತ ಬೆಳವಣಿಗೆಯನ್ನು ಹೆಚ್ಚಿಸಲು ಕೆಲಸ ಮಾಡಲು ಇದು ಸಾಮಾನ್ಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ.
ಸಂವಾದಾತ್ಮಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಇಲ್ಲಿ ಪ್ರವೇಶಿಸಬಹುದು:

ರಾಜ್ಯ ಮಟ್ಟದ ಸಾಮಾಜಿಕ ಪ್ರಗತಿ ಸೂಚ್ಯಂಕ: https://eacpm.gov.in/state-level-social-progress-index/
ಜಿಲ್ಲಾ ಮಟ್ಟದ ಸಾಮಾಜಿಕ ಪ್ರಗತಿ ಸೂಚ್ಯಂಕ: https://eacpm.gov.in/district-level-social-progress-index/

ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಇಎಸಿ-ಪಿಎಂ ಅಧ್ಯಕ್ಷ ಬಿಬೆಕ್ ಡೆಬ್ರಾಯ್, “ವರದಿಯು ವಸ್ತುನಿಷ್ಠ ಡೇಟಾವನ್ನು ವ್ಯಾಪಕವಾಗಿ ಆಧರಿಸಿದೆ ಮತ್ತು ಪ್ರಾಥಮಿಕವಾಗಿ ಪ್ರಮಾಣಕ/ಪೂರ್ವಭಾವಿ ಕ್ರಮವಾಗಿದೆ. ಇದು ರಾಜ್ಯಗಳು ಮತ್ತು ಜಿಲ್ಲೆಗಳಾದ್ಯಂತ ಬಹುವಿಭಾಗದ ಡೇಟಾವನ್ನು ಪ್ರಸ್ತುತಪಡಿಸುತ್ತದೆ ಮತ್ತು ಆಯ್ದ ರಾಜ್ಯಗಳು ಮತ್ತು ಜಿಲ್ಲೆಗಳ ವೈಯಕ್ತಿಕ ಶ್ರೇಯಾಂಕಗಳಿಗಿಂತ ಹೆಚ್ಚಾಗಿ ರಾಜ್ಯಗಳನ್ನು ಗುಂಪು ಮಾಡುವ ಮೂಲಕ ಅಭಿವೃದ್ಧಿಯ ವಿವಿಧ ಹಂತಗಳನ್ನು ನೋಡುವುದರ ಮೇಲೆ ಕೇಂದ್ರೀಕರಿಸುತ್ತದೆ.

ಎನ್‌ ಎ ಸಿ ಆರ್‌ ಪ್ರಾಧ್ಯಾಪಕ ಪ್ರೊ. ಸೋನಾಲ್ಡೆ ದೇಸಾಯಿ ವರದಿಯನ್ನು ಶ್ಲಾಘಿಸಿದರು, “ರಾಜ್ಯ ಮತ್ತು ಜಿಲ್ಲಾ ಆಡಳಿತಗಾರರಿಗೆ ಸುಧಾರಣೆಯ ಅಗತ್ಯವಿರುವ ಪ್ರದೇಶಗಳನ್ನು ಅಧ್ಯಯನ ಮಾಡಲು ಇದು ಅತ್ಯುತ್ತಮ ಸಾಧನವಾಗಿದೆ. ಈ ವರದಿಗಿಂತ ಉತ್ತಮವಾದ ಸಂಕಲನವಿಲ್ಲ. ವರದಿಯ ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ಜಿಲ್ಲೆಗಳ ನಡುವಿನ ವೈವಿಧ್ಯತೆಯಾಗಿದೆ. ರಾಜ್ಯಗಳ ನಡುವಿನ ವೈವಿಧ್ಯತೆಯ ಶ್ರೇಣಿಯ ಪಟ್ಟಿಯನ್ನು ಒಟ್ಟುಗೂಡಿಸಲು ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ” ಎಂದು ಅವರು ಹೇಳಿದರು.

ಇಎಸಿ-ಪಿಎಂ ಸದಸ್ಯ ಸಂಜೀವ್ ಸನ್ಯಾಲ್ ಮಾತನಾಡಿ, "ಜಿಡಿಪಿಯು ಪ್ರಗತಿಯ ಅಪೂರ್ಣ ಮಾಪನವಾಗಿದೆ, ಆದರೂ ನಿಖರವಾಗಿಲ್ಲ. ಸಾಮಾಜಿಕ ನಿಯತಾಂಕಗಳನ್ನು ಅಧ್ಯಯನ ಮಾಡುವ ಸಾಮಾಜಿಕ ಪ್ರಗತಿ ಸೂಚ್ಯಂಕದಂತಹ ಪ್ರಯತ್ನಗಳು, ವಿಧಾನಗಳು ಮತ್ತು ಡೇಟಾದ ವಿಶ್ಲೇಷಣೆಯನ್ನು ಹೆಚ್ಚು ದೃಢವಾಗಿ ಮತ್ತು ವಿಶ್ವಾಸಾರ್ಹವಾಗಿ ಮಾಡಬಹುದು.” ಎಂದರು.

EGROW ಫೌಂಡೇಶನ್ ಸಿಇಒ ಡಾ. ಚರಣ್ ಸಿಂಗ್ ಕೂಡ ಪ್ರತಿಕ್ರಿಯಿಸಿ, "ನಾವು ಆರ್ಥಿಕ ಪ್ರಗತಿಗೆ ಸಮಾಜಶಾಸ್ತ್ರೀಯ ಅಂಶಗಳನ್ನು ನೇಯಬೇಕಾಗುತ್ತದೆ ಮತ್ತು ಆರ್ಥಿಕ ಸೂಚಕಗಳು ಆರ್ಥಿಕವಲ್ಲದ ಸಮಸ್ಯೆಗಳನ್ನು ಕಂಡು ಹಿಡಿಯಲು ಮತ್ತೆ ವಿಫಲವಾಗಿವೆ. ಜಿಡಿಪಿಯ ಮೇಲಿನ ಏಕ ಗಮನವು ಸಮಸ್ಯಾತ್ಮಕವಾಗಿದೆ.” ಎಂದರು.
ಡಿಸೆಂಬರ್ 20, 2022 ರಂದು ನವದೆಹಲಿಯ ತೀನ್‌ ಮೂರ್ತಿ ಭವನದ ರಾಷ್ಟ್ರೀಯ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಸ್ಪರ್ಧಾತ್ಮಕತೆ ಸಂಸ್ಥೆಯ ಗೌರವ ಅಧ್ಯಕ್ಷರಾದ ಡಾ. ಅಮಿತ್ ಕಪೂರ್, ಸೋಶಿಯಲ್ ಪ್ರೋಗ್ರೆಸ್ ಇಂಪರೇಟಿವ್ ಸಿಇಒ ಮೈಖಲ್‌ ಗ್ರೀನ್‌ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಇಎಸಿ-ಪಿಎಂ ಅಧ್ಯಕ್ಷ ಡಾ. ಬಿಬೆಕ್ ಡೆಬ್ರಾಯ್ ಅವರು ವರದಿಯನ್ನು ಬಿಡುಗಡೆ ಮಾಡಿದರು.

*****
 (Release ID: 1885118) Visitor Counter : 317