ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದ ನಾಗರಿಕ ಸೇವಕರಿಗೆ ಎರಡು ವಾರಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಮಸ್ಸೂರಿಯ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದಲ್ಲಿ (NCGG) ಅನಾವರಣಗೊಳಿಸಲಾಯಿತು; ಮಾಲ್ಡೀವ್ಸ್‌ನ 27 ನಾಗರಿಕ ಸೇವಕರು ಮತ್ತು ಬಾಂಗ್ಲಾದೇಶದ 39 ನಾಗರಿಕ ಸೇವಕರು ಈ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ವಸುದೈವ ಕುಟುಂಬಕಂ’ ಮತ್ತು ‘ನೆರೆಹೊರೆ ಮೊದಲು’ ನೀತಿಗೆ ಅನುಗುಣವಾಗಿ ಪರಿಕಲ್ಪನೆ ಮಾಡಲಾಗಿದೆ.
ನಾಗರಿಕರ ಜೀವನ ಮಟ್ಟವನ್ನು ಸುಧಾರಿಸಲು ನಾಗರಿಕ ಸೇವಕರು ಉತ್ತಮ ಆಡಳಿತ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಿಜಿ ಎನ್‌ಸಿಜಿಜಿ, ಶ್ರೀ ಭರತ್ ಲಾಲ್ ಹೇಳುತ್ತಾರೆ
ಆಡಳಿತದಲ್ಲಿನ ಹೊಸ ಸವಾಲುಗಳನ್ನು ಎದುರಿಸಲು ತಮ್ಮ ನಾಗರಿಕ ಸೇವಕರ ಸಾಮರ್ಥ್ಯವನ್ನು ನಿರ್ಮಿಸಲು ನೆರೆಯ ರಾಷ್ಟ್ರಗಳಿಗೆ ಭಾರತ ಸಹಾಯ ಮಾಡುತ್ತಿದೆ ಮತ್ತು ಜನರ ಜೀವನ ಗುಣಮಟ್ಟವನ್ನು ಸುಧಾರಿಸಲು ಸಾರ್ವಜನಿಕ ಸೇವಾ ವಿತರಣೆಯನ್ನು ಖಾತರಿಪಡಿಸುತ್ತದೆ.
ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರವು ಇದುವರೆಗೆ 15 ದೇಶಗಳ ನಾಗರಿಕ ಸೇವಕರಿಗೆ ತರಬೇತಿ ನೀಡಿದೆ
ಬೇಡಿಕೆ ಹೆಚ್ಚುತ್ತಿರುವ ಕಾರಣ ಹಲವು ದೇಶಗಳ ಹೆಚ್ಚಿನ ಸಂಖ್ಯೆಯ ನಾಗರಿಕ ಸೇವಕರಿಗೆ ಅವಕಾಶ ಕಲ್ಪಿಸಲು ಎನ್ ಸಿಜಿಜಿ ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ
Posted On:
13 DEC 2022 1:41PM by PIB Bengaluru
ಮಾಲ್ಡೀವ್ಸ್ ಮತ್ತು ಬಾಂಗ್ಲಾದೇಶದ ನಾಗರಿಕ ಸೇವಕರಿಗೆ ಎರಡು ವಾರಗಳ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ಮಸ್ಸೂರಿಯ ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದಲ್ಲಿ (NCGG) ಅನಾವರಣಗೊಳಿಸಲಾಯಿತು. ಮಾಲ್ಡೀವ್ಸ್‌ನ 27 ನಾಗರಿಕ ಸೇವಕರು ಮತ್ತು ಬಾಂಗ್ಲಾದೇಶದ 39 ನಾಗರಿಕ ಸೇವಕರು ಈ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ 'ವಸುದೈವ ಕುಟುಂಬಕಂ' ಮತ್ತು 'ನೆರೆಹೊರೆ ಮೊದಲು' ನೀತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ ಪರಿಕಲ್ಪನೆ ಮಾಡಲಾಗಿದೆ. ಆಡಳಿತ ಮತ್ತು ಭರವಸೆಯ ಸಾರ್ವಜನಿಕ ಸೇವೆಯಲ್ಲಿ ಕಂಡುಬರುವ ಸವಾಲುಗಳನ್ನು ಎದುರಿಸಲು ತಮ್ಮ ನಾಗರಿಕ ಸೇವಕರ ಸಾಮರ್ಥ್ಯವನ್ನು ಹೆಚ್ಚಿಸಲು ನೆರೆಯ ರಾಷ್ಟ್ರಗಳಿಗೆ ಭಾರತ ಸಹಾಯ ಮಾಡುತ್ತಿದೆ. ಜನರ ಜೀವನ ಗುಣಮಟ್ಟವನ್ನು ಸುಧಾರಿಸಲು ಇಲ್ಲಿ ಭರವಸೆ ಸಿಗುತ್ತದೆ.
ಈ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವು ಸರ್ಕಾರದ ನೀತಿಗಳು ಮತ್ತು ಅವುಗಳ ಅನುಷ್ಠಾನದ ನಡುವಿನ ಅಂತರವನ್ನು ತುಂಬಲು ಸಮರ್ಪಿತ ಪ್ರಯತ್ನಗಳನ್ನು ಮಾಡಲು ನಾಗರಿಕ ಸೇವಕರಿಗೆ ಸಹಾಯ ಮಾಡುತ್ತದೆ. ಜನರಿಗೆ ದೃಢವಾದ ಮತ್ತು ತಡೆರಹಿತ ಸೇವೆಗಳನ್ನು ತಲುಪಿಸಲು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಸಾಮರ್ಥ್ಯ ವೃದ್ಧಿ ಕಾರ್ಯಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉತ್ತಮ ಆಡಳಿತ ಮಂತ್ರದ ಸಾಲಿನಲ್ಲಿದೆ. ಅದು ಅಭಿವೃದ್ಧಿ ಕಾರ್ಯತಂತ್ರದ ಮುಂಚೂಣಿಯಲ್ಲಿ 'ನಾಗರಿಕರಿಗೆ' ಮೊದಲ ಸ್ಥಾನ ನೀಡುವ ಮೂಲಕ 'ಜನರ ಪರವಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ದೇಶದ ನಾಗರಿಕ ಸೇವಕರಲ್ಲಿ ಸೂಕ್ಷ್ಮತೆ, ಸ್ಪಂದಿಸುವಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಮಾಹಿತಿ, ಜ್ಞಾನ ವಿನಿಮಯ, ಹೊಸ ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಕಾರ್ಯಕ್ರಮ ಗುರಿಯನ್ನು ಹೊಂದಿದೆ.
ಜಂಟಿ ಉದ್ಘಾಟನಾ ಅಧಿವೇಶನದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರದ ಮಹಾನಿರ್ದೇಶಕ ಶ್ರೀ ಭರತ್ ಲಾಲ್ ವಹಿಸಿದ್ದರು. ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾಗರಿಕರಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸೇವೆಯನ್ನು ಒದಗಿಸಲು ಒತ್ತು ನೀಡಿದರು. ಪ್ರತಿಯೊಬ್ಬ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ಮತ್ತು ಗುಣಮಟ್ಟದ ಸಾರ್ವಜನಿಕ ಸೇವೆಗಳಿಗೆ ಪ್ರವೇಶ ಹೊಂದುವ ವಾತಾವರಣವನ್ನು ಸೃಷ್ಟಿಸಲು ಪೌರಕಾರ್ಮಿಕರ ಪಾತ್ರವನ್ನು ವಿವರಿಸಿದರು. ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಉತ್ತಮ ಆಡಳಿತ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಅವರು ಒತ್ತಾಯಿಸಿದರು.
ಭಾರತದ ಉತ್ತಮ ಆಡಳಿತದ ಮಾದರಿಗಳಾದ ಉಜ್ವಲ ಯೋಜನೆ ಉದಾಹರಣೆ ನೀಡಿದರು, ಇದು 100 ಮಿಲಿಯನ್‌ಗಿಂತಲೂ ಹೆಚ್ಚು ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ, ಹೆಣ್ಣುಮಕ್ಕಳು ಶುದ್ಧ ಅಡುಗೆ ಅನಿಲ ಸಂಪರ್ಕವನ್ನು ಹೊಂದಿದ್ದಾರೆ, ಕಾಡಿಗೆಯಿಂದ ಉರುವಲು ಸಂಗ್ರಹಿಸುವ ಮತ್ತು ಅಡುಗೆ ಸಮಯದಲ್ಲಿ ಹೊಗೆಯನ್ನು ಉಸಿರಾಡುವ ಸಮಸ್ಯೆಯಿಂದ ಪರಿಹಾರ ಸಿಕ್ಕಿದೆ. WRI ವರದಿಯ ಪ್ರಕಾರ, ಉಜ್ವಲ ಯೋಜನೆಯಿಂದಾಗಿ, ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಜನರು ವಿಶೇಷವಾಗಿ ಮಹಿಳೆಯರು ಶ್ವಾಸಕೋಶಕ್ಕೆ ಸಂಬಂಧಿಸಿದ ತೊಡಕುಗಳು ಮತ್ತು ಮರಣದಿಂದ ಬಚಾವಾಗುತ್ತಿದ್ದಾರೆ.
ಪ್ರತಿ ಗ್ರಾಮೀಣ ಮನೆಗಳಿಗೆ ಶುದ್ಧ ಕೊಳವೆ ನೀರನ್ನು ಪೂರೈಸಲು ಜಲ ಜೀವನ್ ಮಿಷನ್ ನ್ನು ವಿವರಿಸಿದರು. ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ ನೊಬೆಲ್ ಪುರಸ್ಕೃತ ಪ್ರೊ.ಕ್ರಾಮರ್ ಅವರ ಮತ್ತೊಂದು ಅಧ್ಯಯನದ ಪ್ರಕಾರ, ಪ್ರತಿ ವರ್ಷ 1.36 ಲಕ್ಷಕ್ಕೂ ಹೆಚ್ಚು ಶಿಶುಗಳು ಮರಣ ಹೊಂದುವುದನ್ನು ಕಾಪಾಡಬಹುದು. ಹೀಗಾಗಿ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ನಾಗರಿಕ ಸೇವೆಯು ಹೇಗೆ ಶಕ್ತಗೊಳಿಸುವ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಜನರ ಜೀವನದಲ್ಲಿ ಪರಿವರ್ತನೆಯ ಪ್ರಭಾವವನ್ನು ತರುತ್ತದೆ ಎಂದು ಚರ್ಚಿಸಿದರು. ಈ ಕಾರ್ಯಕ್ರಮದ ಕಲಿಕೆಯನ್ನು ಬಳಸಿಕೊಳ್ಳಲು ಮತ್ತು ಕ್ರಿಯಾ ಯೋಜನೆ ಅಥವಾ ಕಲ್ಪನೆಯನ್ನು ಅಭಿವೃದ್ಧಿಪಡಿಸುವಂತೆ ಕೋರಿದರು.
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019 ರಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರ (NCGG), 2024 ರ ವೇಳೆಗೆ ಸಾವಿರ ಮಾಲ್ಡೀವ್ಸ್ ನಾಗರಿಕ ಸೇವಕರ ಸಾಮರ್ಥ್ಯ ನಿರ್ಮಾಣಕ್ಕಾಗಿ ಮಾಲ್ಡೀವ್ಸ್‌ನ ಸಿವಿಲ್ ಸರ್ವಿಸ್ ಕಮಿಷನ್‌ನೊಂದಿಗೆ ತಿಳುವಳಿಕಾ ಒಪ್ಪಂದವನ್ನು ಮಾಡಿಕೊಂಡಿತು. 2024 ರ ವೇಳೆಗೆ 1,800 ನಾಗರಿಕ ಸೇವಕರ ಸಾಮರ್ಥ್ಯ ನಿರ್ಮಾಣಕ್ಕಾಗಿ ಬಾಂಗ್ಲಾದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಉತ್ತಮ ಆಡಳಿತಕ್ಕಾಗಿ ರಾಷ್ಟ್ರೀಯ ಕೇಂದ್ರವನ್ನು 2014 ರಲ್ಲಿ ಭಾರತ ಸರ್ಕಾರವು ದೇಶದ ಅತ್ಯುನ್ನತ ಸಂಸ್ಥೆಯಾಗಿ ಸ್ಥಾಪಿಸಿದ್ದು, ಉತ್ತಮ ಆಡಳಿತ, ನೀತಿ ಸುಧಾರಣೆಗಳು, ತರಬೇತಿ ಮತ್ತು ದೇಶದ ನಾಗರಿಕ ಸೇವಕರ ಸಾಮರ್ಥ್ಯ ವರ್ಧನೆಯ ಮೇಲೆ ಅಭಿವೃದ್ಧಿ ಶೀಲ ರಾಷ್ಟ್ರಗಳು ಕೆಲಸ ಮಾಡುವ ಆದೇಶವನ್ನು ಹೊಂದಿದೆ. ಇದು ಚಿಂತಕರ ಚಾವಡಿಯಾಗಿಯೂ ಕೆಲಸ ಮಾಡುತ್ತದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಭಾಗಿತ್ವದಲ್ಲಿ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳ ನಾಗರಿಕ ಸೇವಕರ ಸಾಮರ್ಥ್ಯ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಇಲ್ಲಿಯವರೆಗೆ, ಇದು 15 ದೇಶಗಳ ನಾಗರಿಕ ಸೇವಕರಿಗೆ ತರಬೇತಿಯನ್ನು ನೀಡಿದೆ. ಅವುಗಳೆಂದರೆ, ಬಾಂಗ್ಲಾದೇಶ, ಕೀನ್ಯಾ, ತಾಂಜಾನಿಯಾ, ಟುನೀಶಿಯಾ, ಸೆಶೆಲ್ಸ್, ಗ್ಯಾಂಬಿಯಾ, ಮಾಲ್ಡೀವ್ಸ್, ಶ್ರೀಲಂಕಾ, ಅಫ್ಘಾನಿಸ್ತಾನ್, ಲಾವೋಸ್, ವಿಯೆಟ್ನಾಂ, ಭೂತಾನ್, ಮ್ಯಾನ್ಮಾರ್ ಮತ್ತು ಕಾಂಬೋಡಿಯಾಗಳು. ಈ ಕಾರ್ಯಕ್ರಮಗಳು ಹೆಚ್ಚು ಬೇಡಿಕೆಯಲ್ಲಿವೆ. NCGG ಬೇಡಿಕೆ ಹೆಚ್ಚುತ್ತಿರುವ ಕಾರಣ ಹೆಚ್ಚಿನ ದೇಶಗಳ ಹೆಚ್ಚಿನ ಸಂಖ್ಯೆಯ ನಾಗರಿಕ ಸೇವಕರಿಗೆ ಅವಕಾಶ ಕಲ್ಪಿಸಲು ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ.
ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವು ಸಾರ್ವಜನಿಕ ಆಡಳಿತ, ಒಟ್ಟು ಗುಣಮಟ್ಟ ನಿರ್ವಹಣೆ, ಲಿಂಗ ಮತ್ತು ಅಭಿವೃದ್ಧಿ, ಭಾರತದಲ್ಲಿ ವಿಕೇಂದ್ರೀಕರಣ, ಸಾರ್ವಜನಿಕ ನೀತಿ ಮತ್ತು ಅನುಷ್ಠಾನ, ನಾಯಕತ್ವ ಮತ್ತು ಸಂವಹನ, ಆರೋಗ್ಯ ರಕ್ಷಣೆ, ನೀರು ಮತ್ತು ನೈರ್ಮಲ್ಯ, ಇ-ಆಡಳಿತ ಮತ್ತು ಡಿಜಿಟಲ್ ಇಂಡಿಯಾ ಕ್ಷೇತ್ರದಲ್ಲಿ ವಿವರವಾದ ಜ್ಞಾನ ಹಂಚಿಕೆಯನ್ನು ಒಳಗೊಳ್ಳುತ್ತದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಸ್ಮಾರ್ಟ್ ಸಿಟಿ, ಇಂದಿರಾ ಪರ್ಯಾಯ ಭವನ, ಝೀರೋ ಎನರ್ಜಿ ಬಿಲ್ಡಿಂಗ್, ಭಾರತ ಸಂಸತ್ತು, ದೆಹಲಿ ಮಹಾನಗರ ಪಾಲಿಕೆ, ಪ್ರಧಾನಮಂತ್ರಿ ಸಂಗ್ರಾಲಯ ಮುಂತಾದ ವಿವಿಧ ಅಭಿವೃದ್ಧಿ ಕಾರ್ಯಗಳು ಮತ್ತು ಸಂಸ್ಥೆಗಳನ್ನು ನೋಡಲು ಭೇಟಿಗಾಗಿ ಕರೆದೊಯ್ಯಲಾಗುತ್ತದೆ.
ಉದ್ಘಾಟನಾ ಅಧಿವೇಶನದಲ್ಲಿ, ಡಾ.ಪೂನಂ ಸಿಂಗ್, ಡಾ.ಅಶುತೋಷ್ ಸಿಂಗ್ ಮತ್ತು ಡಾ.ಸಂಜೀವ್ ಶರ್ಮಾ ಕಾರ್ಯಕ್ರಮದ ಆಯೋಜನೆಯಲ್ಲಿ ಭಾಗಿಯಾಗಿದ್ದರು. ಎನ್‌ಸಿಜಿಜಿ ಆಯೋಜಿಸಿದ್ದ ಉತ್ತಮ ಆಡಳಿತ ಮತ್ತು ಸಾಮರ್ಥ್ಯ ವರ್ಧನೆ ಕಾರ್ಯಕ್ರಮದ ಕುರಿತು ಅವರು ಮಾತನಾಡಿದರು.
*****
(Release ID: 1883156)
Visitor Counter : 165