ಚುನಾವಣಾ ಆಯೋಗ
azadi ka amrit mahotsav

ಜರ್ಮನಿಯ ವಿದೇಶಾಂಗ ಸಚಿವೆ  ಘನತೆವೆತ್ತ  ಶ್ರೀಮತಿ ಅನ್ನಾಲೆನಾ ಬೇರ್‌ಬಾಕ್  ಅವರು ಭಾರತದ ಚುನಾವಣಾ ಆಯೋಗ (ಇಸಿಐ)ಕ್ಕೆ ಭೇಟಿ ನೀಡಿದರು.


ಜರ್ಮನ್ ನಿಯೋಗವು AVM-VIVIPAT ನಲ್ಲಿ ಬಳಕೆಯಲ್ಲಿರುವ AC ಗಳ ಕಠಿಣ ಪ್ರೋಟೋಕಾಲ್‌ಗಳು ಮತ್ತು ಸುರಕ್ಷತಾ ವೈಶಿಷ್ಟ್ಯಗಳನ್ನು ಗಮನಿಸಿತು.

Posted On: 06 DEC 2022 1:04PM by PIB Bengaluru

ಜರ್ಮನಿಯ ವಿದೇಶಾಂಗ ಸಚಿವೆ ಶ್ರೀಮತಿ ಎಚ್.ಇ.ಅನ್ನಾಲೆನಾ ಬೇರ್‌ಬಾಕ್ ಅವರ ನೇತೃತ್ವದ ಜರ್ಮನ್‌ ನಿಯೋಗವಿಂದು ನವದೆಹಲಿಯ ನಿರ್ವಾಚನ್ ಸದನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಶ್ರೀ ಅನುಪ್ ಚಂದ್ರ ಪಾಂಡೆ ಮತ್ತು ಶ್ರೀ ಅರುಣ್ ಗೋಯೆಲ್ ಅವರನ್ನು ಭೇಟಿಯಾಯಿತು.  ಜರ್ಮನ್ ವಿದೇಶಾಂಗ ಸಚಿವರೊಂದಿಗೆ  ಸಂಸತ್ತಿನ ನಾಲ್ವರು ಸದಸ್ಯರುಗಳಾದ ಶ್ರೀಮತಿ‌ ಅಗ್ನಿಸ್ಕಾ ಬ್ರಗ್ಗರ್, ಶ್ರೀ. ಥಾಮಸ್ ಅರ್ನ್ಡ್ಲ್, ಶ್ರೀ. ಉಲ್ರಿಚ್ ಲೆಚ್ಟೆ, ಶ್ರೀ.  ಆಂಡ್ರಿಯಾಸ್ ಲಾರೆಮ್, ಎಚ್.ಇ.  ಡಾ.  ಫಿಲಿಪ್ ಅಕರ್ಮನ್, ಭಾರತಕ್ಕೆ ಜರ್ಮನ್ ರಾಯಭಾರಿ ಮತ್ತು ಅವರ ವಿದೇಶಾಂಗ ಕಚೇರಿಯ ಇತರ ಅಧಿಕಾರಿಗಳು ನಿಯೋಗದಲ್ಲಿದ್ದರು.

https://static.pib.gov.in/WriteReadData/userfiles/image/image001FUHO.jpg

ಈ ಸಂದರ್ಭದಲ್ಲಿ (ಸಿಇಸಿ)ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ರಾಜೀವ್ ಕುಮಾರ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಕಲ್ಪನೆಯು ಭಾರತದ ಐತಿಹಾಸಿಕ ಪರಿಕಲ್ಪನೆ‌ ಮತ್ತು ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿದರು.  ಭಾರತೀಯ ಚುನಾವಣೆಗಳ  ಅವಲೋಕನ ನಡೆಸಿದ ಅವರು, 1.1 ಮಿಲಿಯನ್ ಮತಗಟ್ಟೆಗಳಲ್ಲಿ 950 ಮಿಲಿಯನ್ ಮತದಾರರಿಗೆ (ECI) (ಇಸಿಐ) ಭಾರತದ ಚುನಾವಣಾ ಆಯೋಗ  ನಡೆಸುತ್ತಿರುವ ಮಾಹಿತಿಯ ವಿವರವನ್ನು ಜರ್ಮನ್ ನಿಯೋಗಕ್ಕೆ ತಿಳಿಸಿದರು.

https://static.pib.gov.in/WriteReadData/userfiles/image/image002Y81W.jpg

ಭಾರತೀಯ ಚುನಾವಣೆಗಳ ಪ್ರಮಾಣವನ್ನು ಗಮನಿಸಿದರೆ, 1.1 ಮಿಲಿಯನ್ ಮತಗಟ್ಟೆಗಳಲ್ಲಿ 950 ಮಿಲಿಯನ್ ಮತದಾರರಿಗೆ, 11 ಮಿಲಿಯನ್ ಮತದಾನ ಸಿಬ್ಬಂದಿಗೆ ಮುಕ್ತ, ನ್ಯಾಯಯುತ ಚುನಾವಣಾ ನಡವಳಿಕೆ ಸಹಕಾರವನ್ನು ಖಚಿತಪಡಿಸಿಕೊಳ್ಳಲು ECI (ಭಾರತೀಯ ಚುನಾವಣಾ ಆಯೋಗ)ನಡೆಸುತ್ತಿರುವ ಕಾರ್ಯವಿಧಾನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಅವರು ಜರ್ಮನ್ ನಿಯೋಗಕ್ಕೆ ನೀಡಿದರು.   ಎಲ್ಲ ಹಂತಗಳಲ್ಲಿ ರಾಜಕೀಯ ಪಕ್ಷಗಳ ಆದಾಯ ವಿವರ ಘೋಷಣೆ ಮತ್ತು ಭಾಗವಹಿಸುವಿಕೆಯನ್ನು ಇಸಿಐ ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.  ನಿರ್ವಹಣೆಯ ಸವಾಲುಗಳ ಹೊರತಾಗಿ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುವ ನಕಲಿ ಸಾಮಾಜಿಕ ಮಾಧ್ಯಮ ನಿರೂಪಣೆಗಳ  ಪರಿಣಾಮವು ಹೆಚ್ಚಿನ ಚುನಾವಣಾ ನಿರ್ವಹಣಾ ಸಂಸ್ಥೆಗಳಿಗೆ ಸಾಮಾನ್ಯ ಸವಾಲಾಗಿ ತೀವ್ರವಾಗಿ ಎದುರಾಗುತ್ತಿದೆ ಎಂಬುದನ್ನೂ ಸಹ  ಶ್ರೀ ಕುಮಾರ್ ಹೇಳಿದರು. 

ಜರ್ಮನಿಯ ವಿದೇಶಾಂಗ ಸಚಿವರು ಆಯೋಗದೊಂದಿಗೆ ಸಂವಾದ ನಡೆಸಿ, ಭಾರತದಲ್ಲಿನ ವೈವಿಧ್ಯಮಯ ಭೌಗೋಳಿಕತೆ, ಸಂಸ್ಕೃತಿಯುಳ್ಳ ಮತದಾರರ ಸವಾಲುಗಳನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿನ  ಭಾರತೀಯ ಚುನಾವಣಾ ಆಯೋಗವು ಸಮರ್ಥವಾಗಿ ನಿರ್ವಹಿಸುತ್ತಿರುವುದಕ್ಕೆ   ಶ್ಲಾಘಿಸಿದರು.  

https://static.pib.gov.in/WriteReadData/userfiles/image/image003MOF0.jpg

ಮತದಾರರ ಭಾಗವಹಿಸುವಿಕೆ, ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಮತ್ತು ಚುನಾವಣಾ ಯಂತ್ರೋಪಕರಣಗಳ ಲಾಜಿಸ್ಟಿಕ್ಸ್ ಎಂಬ ಮೂರು ಅಂಶಗಳ ಅಡಿಯಲ್ಲಿ ವ್ಯಾಪಕವಾಗಿ ಚುನಾವಣೆಗಳನ್ನು ನಡೆಸುವಲ್ಲಿ ಭಾರತದ ಚುನಾವಣಾ ಆಯೋಗದ ತಂತ್ರಜ್ಞಾನದ ವ್ಯಾಪಕ ಬಳಕೆಯ ಬಗ್ಗೆ ಜರ್ಮನಿಯ ವಿದೇಶಾಂಗ ಸಚಿವರಿಗೆ ವಿವರಿಸಲಾಯಿತು. ನಿಯೋಗಕ್ಕಾಗಿ ಭಾರತದ ಚುನಾವಣಾ ಆಯೋಗವು ಆಯೋಜಿಸಿದ EVM-VVPAT(/ಇವಿಎಂ-ವಿವಿಪ್ಯಾಟ್‌) ಕಾರ್ಯನಿರ್ವಹಣೆಯ ಪ್ರಸ್ತುತಿ ವೇಳೆ ಸಚಿವರು ವೈಯಕ್ತಿಕವಾಗಿ EVM ಮೂಲಕ ಮತ ಚಲಾಯಿಸಿ ನೋಡಿದರು.  ಸಂಸದರೊಂದಿಗೆ, ಇವಿಎಂಗಳನ್ನು ಒಳಗೊಂಡ ಚುನಾವಣಾ ಪ್ರಕ್ರಿಯೆಗಳ ಪ್ರತಿಯೊಂದು ಹಂತದಲ್ಲೂ ನಿರ್ವಹಣೆ, ಚಲನೆ, ಸಂಗ್ರಹಣೆ, ಕಾರ್ಯಾಚರಣೆಗಳು ಮತ್ತು ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯ ಪ್ರಕ್ರಿಯೆಯ ಮೇಲೆ ಕಠಿಣ ಆಡಳಿತಾತ್ಮಕ ಪ್ರೋಟೋಕಾಲ್‌ಗಳ ಜೊತೆಗೆ ಸ್ವತಂತ್ರ ಇವಿಎಂಗಳ ಬಲವಾದ ಭದ್ರತಾ ವೈಶಿಷ್ಟ್ಯಗಳನ್ನು ಸೂಕ್ಷ್ಮವಾಗಿ ಅವರು ಗಮನಿಸಿದರು.

ಈ ಸಂದರ್ಭದಲ್ಲಿ ಜರ್ಮನ್ ವಿದೇಶಾಂಗ ಕಚೇರಿ, ನವದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿ ಮತ್ತು ಭಾರತದ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಭಾರತ ಮತ್ತು ಜರ್ಮನಿಗಳೆರಡೂ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಟೋರಲ್ ಅಸಿಸ್ಟೆನ್ಸ್ (IDEA), ಸ್ಟಾಕ್‌ಹೋಮ್ ಮತ್ತು ಕಮ್ಯುನಿಟಿ ಆಫ್ ಡೆಮಾಕ್ರಸಿ, ವಾರ್ಸಾದ ಸದಸ್ಯರಾಗಿದ್ದಾರೆ.  ECI ಯ ನಿರಂತರ ಪ್ರಯತ್ನವೆಂದರೆ ವಿದೇಶದಲ್ಲಿ ಚುನಾವಣಾ ಅಧಿಕಾರಿಗಳೊಂದಿಗೆ ನಿಕಟವಾದ ಚುನಾವಣಾ ಸಹಕಾರವನ್ನು ಬೆಳೆಸುವುದರ ಜೊತೆಗೆ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಬಲಪಡಿಸುವ ಉದ್ದೇಶದಿಂದ ಜನರಿಂದ ಜನರ ಸಂಪರ್ಕವನ್ನು ಗಾಢವಾಗಿಸಲು ಮತ್ತು ಪ್ರಜಾಪ್ರಭುತ್ವಕ್ಕಾಗಿ ಶಿಕ್ಷಣ ಸೇರಿದಂತೆ ನಾಗರಿಕ ಶಿಕ್ಷಣ ಮತ್ತು ಸಾಕ್ಷರತೆಯನ್ನು ಉತ್ತೇಜಿಸುವುದು ಸಹ ಆಗಿದೆ.  ಸಮ್ಮಿಟ್ ಫಾರ್ ಡೆಮಾಕ್ರಸಿಯ ಅಡಿಯಲ್ಲಿ ECI 2023 ರ ರಾಷ್ಟ್ರೀಯ ಮತದಾರರ ದಿನಾಚರಣೆಯ ಮೊದಲು 2023 ರ ಜನವರಿಯಲ್ಲಿ 'ತಂತ್ರಜ್ಞಾನದ ಬಳಕೆ ಮತ್ತು ಚುನಾವಣೆಗಳ ಸಮಗ್ರತೆ' ಕುರಿತು ಎರಡನೇ ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸುತ್ತದೆ.


(Release ID: 1881270) Visitor Counter : 157