ಪ್ರಧಾನ ಮಂತ್ರಿಯವರ ಕಛೇರಿ

​​​​​​​ಇತ್ತೀಚೆಗೆ ಉಡಾವಣೆಯಾದ ಇ.ಒ.ಎಸ್.-06 ಉಪಗ್ರಹದಿಂದ ಪಡೆಯಲಾದ ಅಚ್ಚರಿದಾಯಕ ಚಿತ್ರಗಳನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ

Posted On: 02 DEC 2022 6:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತ್ತೀಚೆಗೆ ಉಡಾವಣೆಯಾದ ಇ.ಒ.ಎಸ್.-06 ಉಪಗ್ರಹದಿಂದ ಪಡೆಯಲಾದ ಅಚ್ಚರಿದಾಯಕ ಚಿತ್ರಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ. “ಬಾಹ್ಯಾಕಾಶ ತಂತ್ರಜ್ಞಾನದ ಜಗತ್ತಿನಲ್ಲಿನ ಈ ಪ್ರಗತಿ,  ಚಂಡಮಾರುತಗಳನ್ನು ಉತ್ತಮವಾಗಿ ಗ್ರಹಿಸಲು ಮತ್ತು ಕರಾವಳಿ ತೀರದ ಆರ್ಥಿಕತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್ ಮಾಡಿದ್ದಾರೆ;

“ಇತ್ತೀಚೆಗೆ ಉಡಾವಣೆಯಾದ ಇ.ಒ.ಎಸ್.-06 ಉಪಗ್ರಹದಿಂದ ನೀವು ಅಚ್ಚರಿದಾಯಕ ಚಿತ್ರಗಳನ್ನು ನೋಡಿದ್ದೀರಾ? ಗುಜರಾತ್‌ ನ ಕೆಲವು ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಬಾಹ್ಯಾಕಾಶ ತಂತ್ರಜ್ಞಾನದ ಜಗತ್ತಿನಲ್ಲಿನ ಈ ಪ್ರಗತಿ, ಚಂಡಮಾರುತಗಳನ್ನು ಉತ್ತಮವಾಗಿ ಗ್ರಹಿಸಲು ಮತ್ತು ನಮ್ಮ ಕರಾವಳಿ ತೀರದ ಆರ್ಥಿಕತೆಯನ್ನು ಉತ್ತೇಜಿಸಲು ನಮಗೆ ಸಹಾಯವಾಗುತ್ತವೆ.”

   *****



(Release ID: 1880598) Visitor Counter : 130