ಕೃಷಿ ಸಚಿವಾಲಯ

​​​​​​​ಪಿಎಂಎಫ್‌ಬಿವೈ ಅಡಿಯಲ್ಲಿ ತಡೆಗಟ್ಟಲಾಗದ ನೈಸರ್ಗಿಕ ಅಪಾಯಗಳ ಕಾರಣದಿಂದ ಬೆಳೆ ನಷ್ಟಕ್ಕೆ ಸಮಗ್ರ ವಿಮಾ ರಕ್ಷಣೆಯನ್ನು ಒದಗಿಸಲು ಬದ್ಧ-ಕೇಂದ್ರ ಸರ್ಕಾರ 


ಪಿಎಂಎಫ್‌ಬಿವೈ ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗುವ ಹಾದಿಯಲ್ಲಿದ್ದು, ಪ್ರತಿ ವರ್ಷ ಯೋಜನೆಯಡಿ ಸುಮಾರು 5 ಕೋಟಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ

ಕಳೆದ 6 ವರ್ಷಗಳಲ್ಲಿ ಬೆಳೆ ವಿಮಾ ಯೋಜನೆಗೆ ಪಾವತಿಸಿದ 25,186 ಕೋಟಿ ರೂಪಾಯಿ ಪ್ರೀಮಿಯಂಗೆ ರೈತರಿಗೆ ಇದುವರೆಗೆ 1,25,662 ಕೋಟಿ ರೂಪಾಯಿ ಪಾವತಿ.

ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ಅತ್ಯಲ್ಪ ಮೊತ್ತದ ವಿಮೆ ಸಿಗುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ. ಅವರಲ್ಲಿ ಹೆಚ್ಚಿನವರು ಕೇವಲ ಭಾಗಶಃ ವಿಮೆ ಮೊತ್ತದ ಹಕ್ಕುದಾರರು, 

ರೈತರ ವಿಶಿಷ್ಠ ಗುರುತಿನ ಚೀಟಿ ಹೊಂದಿರುವವರಿಗೆ ಮಹಾರಾಷ್ಟ್ರ ಸರ್ಕಾರ ಕನಿಷ್ಠ 1000 ರೂಪಾಯಿ ಪಾವತಿಸುವ ನಿಬಂಧನೆ ತಂದಿದೆ.

Posted On: 01 DEC 2022 3:14PM by PIB Bengaluru

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ, ತಡೆಗಟ್ಟಲಾಗದ ನೈಸರ್ಗಿಕ ಅಪಾಯಗಳ ಕಾರಣದಿಂದ ಉಂಟಾಗುವ ರೈತರ ಬೆಳೆ ನಷ್ಟಕ್ಕೆ ಸಮಗ್ರ ವಿಮಾ ರಕ್ಷಣಾ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಇಂದು ಪುನರುಚ್ಚರಿಸಿದೆ.

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ವಿಶ್ವದ ಮೂರನೇ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದ್ದು, ಮುಂಬರುವ ವರ್ಷಗಳಲ್ಲಿ ಮೊದಲ ಸ್ಥಾನಕ್ಕೆ ಬರುವ ಹಾದಿಯ ಸನ್ನಿಹಿತದಲ್ಲಿದೆ. ಪ್ರತಿ ವರ್ಷ ಯೋಜನೆಯಡಿ ಸುಮಾರು 5 ಕೋಟಿ ರೈತರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಕಳೆದ 6 ವರ್ಷಗಳಲ್ಲಿ ಈ ಯೋ ಜನೆಯ ಸೌಲಭ್ಯವನ್ನು ಪಡೆಯುತ್ತಿರುವ ರೈತರ ಸಂಖ್ಯೆ ಹೆಚ್ಚಾಗಿದೆ. 2016 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಸಾಲ ಪಡೆಯದ ರೈತರು, ಅತ್ಯಲ್ಪ ಮತ್ತು ಸಣ್ಣ ರೈತರ ಪಾಲು ಶೇಕಡಾ 282ರಷ್ಟು ಹೆಚ್ಚಾಗಿದೆ.

ಕಳೆದ 6 ವರ್ಷಗಳಲ್ಲಿ, ಕೇಂದ್ರ ಸರ್ಕಾರ ರೈತರಿಗೆ 25,186 ಕೋಟಿ ರೂಪಾಯಿ ಪ್ರೀಮಿಯಂ ಆಗಿ ಪಾವತಿಸಿದೆ. ಕಳೆದ ಅಕ್ಟೋಬರ್ 31ಕ್ಕೆ ರೈತರಿಗೆ 1,25,662 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಯೋಜನೆಯ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಪ್ರೀಮಿಯಂನ್ನು ಭರಿಸುತ್ತವೆ.

ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯಗಳು ರಬಿ 22-23 ರ ಅಡಿಯಲ್ಲಿ ರೈತರ ದಾಖಲಾತಿಗಳನ್ನು ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಸತ್ಯಕ್ಕೆ ದೂರವಾದ ವರದಿ ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅದೇನೆಂದರೆ ಮಹಾರಾಷ್ಟ್ರ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೈತರಿಗೆ ವಿಮಾ ಹಕ್ಕಿನಲ್ಲಿ ಅತ್ಯಲ್ಪ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು. 

ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಂಭೀರವಾಗಿ ತೆಗೆದುಕೊಂಡ ಸಚಿವಾಲಯ ಅದು ಸತ್ಯವೇ ಎಂದು ಪರೀಕ್ಷಿಸಲು ಪ್ರಯತ್ನಿಸಿತು. ಅದಾಗ್ಯೂ, ನಿಖರ ದತ್ತಾಂಶಗಳ ಕೊರತೆಯಿಂದಾಗಿ ಕೇವಲ ಒಬ್ಬ ರೈತರನ್ನು ಮಾತ್ರ ಗುರುತಿಸಲಾಗಿದ್ದು ಅವರು ಶ್ರೀ. ಪಾಂಡುರಂಗ ಭಾಸ್ಕರ್ ರಾವ್ ಕದಮ್ ಎಂಬುವವರಾಗಿದ್ದಾರೆ. ಅವರಿಗೆ ಒಂದು ಕಂತಿನ ವಿಮೆಯ ಒಟ್ಟು 595 ರೂಪಾಯಿ ಮೊತ್ತವನ್ನು ಸರ್ಕಾರ ಸಂದಾಯ ಮಾಡಿದ್ದರೂ ಅವರಿಗೆ ಒಂದು ಬೆಳೆ ಕಂತಿಗೆ ಕೇವಲ 37 ರೂಪಾಯಿ 31 ಪೈಸೆ ಮತ್ತು ಮತ್ತೊಂದು ಕಂತಿನಲ್ಲಿ 327 ರೂಪಾಯಿ ಸಿಕ್ಕಿದೆ ಎಂದು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೆ ವಾಸ್ತವ ದತ್ತಾಂಶ ಪ್ರಕಾರ, ಇದುವರೆಗೆ ಅವರಿಗೆ ಒಟ್ಟು 2080 ರೂಪಾಯಿ 40 ಪೈಸೆ ಸಿಕ್ಕಿದೆ.

ಅದು ಅವರು ಪಾವತಿಸಿದ ಪ್ರೀಮಿಯಂಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಅವರಿಗೆ ಸಿಕ್ಕಿದ 2,080 ರೂಪಾಯಿ 40 ಪೈಸೆ ಕೇವಲ ಭಾಗಶಃ ಹಕ್ಕಿನಮೊತ್ತವಾಗಿದ್ದು, ಪಾವತಿಸಿದ ಭಾಗ ಮೊತ್ತವಾಗಿದ್ದು, ನಿಜವಾದ ಪಾವತಿ ಹಣವಲ್ಲ. ವಿಮಾ ಕ್ಲೈಮ್‌ಗಳ ಅಂತಿಮ ಪರಿಹಾರ ಮೊತ್ತ ಪೂರ್ಣಗೊಂಡ ನಂತರ ಪಾಂಡುರಂಗ ರಾವ್ ಅವರಿಗೆ ಹೆಚ್ಚಿನ ಹಣ ಸಿಗಲೂಬಹುದು. ಪರ್ಭಾನಿ ಜಿಲ್ಲೆಯ ಕೆಲವು ರೈತರು 50,000 ಕ್ಕೂ ಅಧಿಕ ವಿಮಾ ಮೊತ್ತವನ್ನು ಪಡೆದಿದ್ದಾರೆ, ಒಬ್ಬ ರೈತ ಅಂತಿಮ ಪಾವತಿ ಮೊತ್ತಕ್ಕೆ ಮೊದಲು 94,534 ರೂಪಾಯಿ ಪಡೆದಿದ್ದಾರೆ.

ಪರ್ಬಾನಿ ಜಿಲ್ಲೆಯಲ್ಲಿ 6.66 ಲಕ್ಷ ರೈತರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 48.11 ಕೋಟಿ ರೂಪಾಯಿಗಳನ್ನು ರೈತರು ಪ್ರೀಮಿಯಂ ಪಾವತಿಸಿದ್ದು, ಇಲ್ಲಿಯವರೆಗೆ ರೈತರಿಗೆ 113 ಕೋಟಿ ರೂಪಾಯಿ ಬೆಳೆವಿಮೆ ಮೊತ್ತ ಸಿಕ್ಕಿದೆ. ಆದಾಗ್ಯೂ, ಸಾವಿರ ರೂಪಾಯಿಗಿಂತ ಕಡಿಮೆ ವಿಮೆ ಮೊತ್ತ ಸಿಕ್ಕಿದೆ ಎಂದು ಲೆಕ್ಕ ತೋರಿಸಿದ ರೈತರಿಗೆ ಅಂತಿಮ ಪರಿಹಾರದ ಸಮಯದಲ್ಲಿ ಕನಿಷ್ಠ ಸಾವಿರ ರೂಪಾಯಿಗಳನ್ನು ಪಾವತಿಸಲಾಗುವುದು ಎಂಬ ಷರತ್ತಿನೊಂದಿಗೆ ಪಾವತಿಸಲಾಗುತ್ತದೆ.

ಖಾರಿಫ್ ಋತು-2022 ರಲ್ಲಿ ಮಹಾರಾಷ್ಟ್ರ ಸರ್ಕಾರ ರೈತರಿಂದ ಪಡೆದ 79.53 ಲಕ್ಷ ಅರ್ಜಿಗಳಲ್ಲಿ, ರಾಜ್ಯದಲ್ಲಿ ಸುಮಾರು 283 ಅರ್ಜಿಗಳು 100 ರೂಪಾಯಿಗಳಿಗಿಂತ ಕಡಿಮೆ ವಿಮಾ ಮೊತ್ತವನ್ನು ಹೊಂದಿದೆ. 21,603 ಅರ್ಜಿಗಳು ಸಾವಿರ ರೂಪಾಯಿಗಿಂತ ಕಡಿಮೆ ವಿಮಾ ಮೊತ್ತವನ್ನು ಹೊಂದಿದೆ. ಕೆಲವು ರೈತರು ಹಲವು ಅರ್ಜಿಗಳನ್ನು ಹಾಕಿರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ, ರೈತರ ವಿಮೆ ಕಡಿಮೆಯಿರುವುದರಿಂದ ಸಿಗುವ ಹಣದ ಹಕ್ಕು ಕಡಿಮೆ ಬಂದಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಲು, ಮಹಾರಾಷ್ಟ್ರ ಸರ್ಕಾರವು ಯಾವುದೇ ವಿಶಿಷ್ಟ ಗುರುತು ಚೀಟಿ ಹೊಂದಿರುವ ರೈತರಿಗೆ ಕನಿಷ್ಟ ಸಾವಿರ ರೂಪಾಯಿ ವಿಮೆ ಕ್ಲೈಮ್ ಮೊತ್ತ ಪಾವತಿಸಬೇಕೆಂದು ನಿಬಂಧನೆ ಮಾಡಲಾಗಿದೆ.

ಈ ಯೋಜನೆಯನ್ನು ಆಕ್ಚುರಿಯಲ್/ಬಿಡ್ಡ್ ಪ್ರೀಮಿಯಂ ದರದಲ್ಲಿ ಜಾರಿಗೊಳಿಸಲಾಗುತ್ತಿದೆ, ಆದರೆ ಸಣ್ಣ ರೈತರು ಸೇರಿದಂತೆ ರೈತರು ಖಾರಿಫ್‌ಗೆ ಗರಿಷ್ಠ ಶೇಕಡಾ 2, ರಬಿ ಆಹಾರ ಮತ್ತು ಎಣ್ಣೆಕಾಳು ಬೆಳೆಗಳಿಗೆ ಶೇಕಡಾ 1.5 ಮತ್ತು ವಾಣಿಜ್ಯ/ತೋಟಗಾರಿಕಾ ಬೆಳೆಗಳಿಗೆ ಶೇಕಡಾ 5ರಷ್ಟು ಪಾವತಿಸಬೇಕಾಗುತ್ತದೆ. ಇದರ ಮಿತಿಗಿಂತ ಹೆಚ್ಚಿನ ಪ್ರೀಮಿಯಂನ್ನು ಈಶಾನ್ಯ ಭಾಗಗಳು ಹೊರತುಪಡಿಸಿ ಬೇರೆ ಕಡೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಹಂಚಿಕೊಳ್ಳುತ್ತವೆ. ಈಶಾನ್ಯ ಭಾಗಗಳಲ್ಲಿ ಖಾರಿಫ್ ಋತು 2020ರಿಂದ ಅದು 90:10 ಆಗಿದೆ. ಈ ಯೋಜನೆಯು ವಿಮಾ ತತ್ವಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ವಿಮೆಯ ವ್ಯಾಪ್ತಿ, ಬೆಳೆ ಹಾನಿಯ ವ್ಯಾಪ್ತಿ, ವಿಮೆಯ ಒಟ್ಟು ಮೊತ್ತ  ಕೈಗೆ ಸಿಗುವ ವಿಮೆ ಹಣದಲ್ಲಿ ಪ್ರಮುಖ ನಿರ್ಣಾಯಕವಾಗಿದೆ.

ನಿಖರವಾದ ಕೃಷಿಯೊಂದಿಗೆ ಫಸಲ್ ಭೀಮಾ ಯೋಜನೆ ರೈತರನ್ನು ತಲುಪಲು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ. ಕೃಷಿ-ತಂತ್ರಜ್ಞಾನ ಮತ್ತು ಗ್ರಾಮೀಣ ವಿಮೆಯ ಒಕ್ಕೂಟವು ಆರ್ಥಿಕ ಸೇರ್ಪಡೆಯಲ್ಲಿ ತಂತ್ರ ಸೂತ್ರವನ್ನು ತಂದು ರೈತರು ಈ ವಿಮಾ ಯೋಜನೆಯಲ್ಲಿ ಹೆಚ್ಚು ನಂಬಿಕೆ ಇಡುವಂತೆ ಮಾಡಬಹುದು. 

ಇತ್ತೀಚೆಗೆ ಪರಿಚಯಿಸಲಾದ ಹವಾಮಾನ ಮಾಹಿತಿ ಮತ್ತು ಸಂಪರ್ಕಜಾಲ ದತ್ತಾಂಶ ವ್ಯವಸ್ಥೆ (WINDS), ತಂತ್ರಜ್ಞಾನದ ಆಧಾರದ ಮೇಲೆ ಇಳುವರಿ ಅಂದಾಜು ವ್ಯವಸ್ಥೆ (YES-Tech), ನೈಜ ಸಮಯದ ವೀಕ್ಷಣೆಗಳ ಸಂಗ್ರಹ ಮತ್ತು ಬೆಳೆಗಳ ಛಾಯಾಚಿತ್ರಗಳು (CROPIC) ಮುಂತಾದ ಕೆಲವು ಕ್ರಮಗಳು ಫಸಲ್ ಭೀಮಾ ಯೋಜನೆಯನ್ನು ಇನ್ನಷ್ಟು ದಕ್ಷತೆ ಮತ್ತು ಪಾರದರ್ಶಕತೆಯಿಂದ ತರಲು ಪರಿಣಾಮಕಾರಿಯಾಗಬಲ್ಲವು. ರೈತರ ಕುಂದುಕೊರತೆಗಳನ್ನು ನೈಜ ಸಮಯದಲ್ಲಿ ಪರಿಹರಿಸಲು ಛತ್ತೀಸ್‌ಗಢದಲ್ಲಿ ಸಂಯೋಜಿತ ಸಹಾಯವಾಣಿ ವ್ಯವಸ್ಥೆಯು ಆರಂಭಿಕ ಅಭಿವೃದ್ಧಿ ಮತ್ತು ಪರೀಕ್ಷಾ ಹಂತದಲ್ಲಿದೆ.

*****
 



(Release ID: 1880394) Visitor Counter : 209