ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಜಯದೀಪ್ ಮುಖರ್ಜಿ ಅವರ ಸಾಕ್ಷ್ಯಚಿತ್ರ "ಅದರ್ ರೇ: ದಿ ಆರ್ಟ್ ಆಫ್ ಸತ್ಯಜಿತ್ ರೇ" ಐಎಫ್ ಎಫ್ ಐ53 ಯಲ್ಲಿ ಪ್ರದರ್ಶನ


​​​​​​​ಐಎಫ್ ಎಫ್ ಐ 53 ಯಲ್ಲಿ  "ರೇ ಪೋಸ್ಟರ್ ಮೇಕಿಂಗ್" ಸ್ಪರ್ಧೆಯ ಪ್ರವೇಶಗಳ ಪ್ರದರ್ಶನ

ಐಎಫ್ ಎಫ್ ಐ 53 ಯಲ್ಲಿ ಸತ್ಯಜಿತ್ ರೇ ಕುರಿತು ವಿಶೇಷ ವಿಭಾಗ

Posted On: 25 NOV 2022 1:37PM by PIB Bengaluru

 ನಾನು ಸತ್ಯಜಿತ್ ರೇ ಅವರ ಸೌಂದರ್ಯ ಸೃಜನಶೀಲತೆಯ ಕುರಿತು ನನ್ನ ಸ್ವಂತ ಪರಿಕಲ್ಪನೆ ಪ್ರಸ್ತುತಪಡಿಸಲು ಪ್ರಯತ್ನಿಸಿದೆ: ಜಯದೀಪ್ ಮುಖರ್ಜಿ
 "ಅದರ್ ರೇ: ದಿ ಆರ್ಟ್ ಆಫ್ ಸತ್ಯಜಿತ್ ರೇ" ರೇ ಅವರ ಸೃಜನಶೀಲ ಪ್ರತಿಭೆಯ ಬೇರುಗಳನ್ನು ಗುರುತಿಸುತ್ತದೆ: ಜಯದೀಪ್ ಮುಖರ್ಜಿ

ಐಎಫ್ ಎಫ್ ಐ 53ಯಲ್ಲಿ ಸತ್ಯಜಿತ್ ರೇ ಕುರಿತಾದ ವಿಶೇಷ ವಿಭಾಗದಲ್ಲಿ, ಜಯದೀಪ್ ಮುಖರ್ಜಿಯವರ 34 ನಿಮಿಷಗಳ ನಾನ್-ಫೀಚರ್ ಚಲನಚಿತ್ರ “ಅದರ್ ರೇ: ದಿ ಆರ್ಟ್ ಆಫ್ ಸತ್ಯಜಿತ್ ರೇ” ಅನ್ನು 2022ರ  ನವೆಂಬರ್ 24 ರಂದು ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಮಾಧ್ಯಮ-ವ್ಯಕ್ತಿಗಳು ಮತ್ತು ಐಎಫ್ ಎಫ್ ಐ ಪ್ರತಿನಿಧಿಗಳೊಂದಿಗೆ ಪಿಐಬಿ ಆಯೋಜಿಸಿದ “ಟೇಬಲ್ ಟಾಕ್ಸ್” ನಲ್ಲಿ ಸಂವಾದ ನಡೆಸಿದ ನಿರ್ದೇಶಕ ಜಯದೀಪ್ ಮುಖರ್ಜಿ,  ಈ ಚಲನಚಿತ್ರವು ರೇ ಅವರ ಪ್ರತಿಭೆಯ ಸ್ವಂತ ಪರಿಕಲ್ಪನೆಯನ್ನು ಒಳಗೊಂಡ ಜೀವನಚರಿತ್ರೆಯ ಸಾಕ್ಷ್ಯಚಿತ್ರವಾಗಿದೆ ಎಂದು ಹೇಳಿದರು.

ರೇ ಅವರ ಪ್ರತಿಭೆಯ ವಿವಿಧ ಮಗ್ಗಲುಗಳು - ರೇಖೆಗಳು, ಕ್ಯಾಲಿಗ್ರಾಫರ್, ಸಂಗೀತ ಸಂಯೋಜಕ, ನಿರ್ದೇಶಕ - ಚಿತ್ರದಲ್ಲಿ ಸಮಗ್ರವಾಗಿ ಅಳವಡಿಸಲಾಗಿದೆ ಎಂದು ಶ್ರೀ ಮುಖರ್ಜಿ ಹೇಳಿದರು. ರೇ ಅವರ ತಾತ ಉಪೇಂದ್ರ ಕಿಶೋರ್ ರೇ ಚೌಧರಿ ಮತ್ತು ತಂದೆ ಸುಕುಮಾರ್ ಸೇನ್ ಅವರ ವಂಶವಾಹಿಗಳಲ್ಲಿ ಸೃಜನಶೀಲತೆ ಹರಿದು ಬಂದಿದೆ, ಆದರೆ ಶಾಂತಿನಿಕೇತನದಲ್ಲಿ ನಂದಲಾಲ್ ಬೋಸ್ ಮತ್ತು ಇತರ ದಂತಕಥೆಗಳಿಂದ ದೊರೆತ ತರಬೇತಿಯು ರೇ ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು.

ಜಾಹಿರಾತು ಸಂಸ್ಥೆ ಡಿ.ಜೆ. ಕಿಮರ್ ನಲ್ಲಿ ಕಿರಿಯ ವಿಶ್ಯುಲೈಸರ್ ಆಗಿ ಅಥವಾ ಪ್ರೊಫೆಸರ್ ಅಲೆಕ್ಸ್ ಅರೋನ್ಸನ್ ಅವರಿಂದ ಪಾಶ್ಚಾತ್ಯ ಸಂಗೀತದ ಸಂಕೇತಗಳನ್ನು ಕಲಿಯುವುದು- ಇದು ಅವರ ಚಲನಚಿತ್ರಗಳಲ್ಲಿನ ಅನೇಕ ಧ್ವನಿಗಳಿಗೆ ಅವರ ಸಂಯೋಜನೆ ಮತ್ತು ಆರ್ಕೆಸ್ಟ್ರೇಶನ್ ಪ್ರಕ್ರಿಯೆಯ ಭಾಗವಾಗಿತ್ತು. ಇವು  ವರ್ಷಗಳು ಕಳೆದಂತೆ ರೇ ಅವರ ಪಾತ್ರಗಳ ಬೆಳವಣಿಗೆಯ ಮೇಲೆ ಇತರ ಪ್ರಭಾವಗಳನ್ನು ಸೆರೆಹಿಡಿಯುವಂತೆ ಮಾಡಿತ್ತು ಎಂದು ಶ್ರೀ ಮುಖರ್ಜಿ ಹೇಳಿದರು.

ಸತ್ಯಜಿತ್ ರೇ ಅವರೊಂದಿಗೆ ಮತ್ತೊಬ್ಬ ರೇ ಕಲ್ಪನೆಯನ್ನು ಹೇಗೆ ಚರ್ಚಿಸಿದೆ  ಎಂಬುದನ್ನು ಶ್ರೀ ಮುಖರ್ಜಿ ಅವರು ಸ್ಮರಿಸಿಕೊಂಡರು, ಆದರೆ ಅದಕ್ಕೆ ರೂಪ ನೀಡಲು ಹಲವು ದಶಕಗಳಿಂದ ಹೋರಾಡಬೇಕಾಯಿತು ಎಂದರು. "2007ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಪ್ರದರ್ಶನದಲ್ಲಿ ಸರ್ ರಿಚರ್ಡ್ ಅಟೆನ್‌ಬರೋ ಮತ್ತು ಲಂಡನ್‌ನಲ್ಲಿರುವ ರೇ ಅವರ ಇತರ ಸ್ನೇಹಿತರ ಮಾಹಿತಿಗಳನ್ನು ಸಂಗ್ರಹಪಡಿಸಿ ನಾನು ರೇ ಅವರ ವರ್ಣಚಿತ್ರಗಳು ಮತ್ತು ಇತರ ಕೃತಿಗಳ ಚಿತ್ರಗಳನ್ನು ತೆಗೆದುಕೊಳ್ಳಬೇಕಾಗಿತ್ತು" ಎಂದು ಶ್ರೀ ಮುಖರ್ಜಿ ಹೇಳಿದರು.

ಮುಂದಿನ 2-3 ವರ್ಷಗಳಲ್ಲಿ ಬರಲಿರುವ ಅವರ ಶತಮಾನೋತ್ಸವದ ಸಂದರ್ಭದಲ್ಲಿ ರಿತ್ವಿಕ್ ಘಾಟಕ್ ಮತ್ತು ಮೃಣಾಲ್ ಸೇನ್ ಅವರ ಬಗ್ಗೆ ಇದೇ ರೀತಿಯ ಸಾಕ್ಷ್ಯಚಿತ್ರಗಳನ್ನು ಮಾಡುವ ಉದ್ದೇಶದ ಬಗ್ಗೆ ನಿರ್ದೇಶಕರು ಮಾತನಾಡಿದರು.

ಈ ಸ್ಥಳ "ದಿ ಒನ್ ಅಂಡ್ ಓನ್ಲಿ ರೇ" ವಿಭಾಗವನ್ನು ಸಹ ಒಳಗೊಂಡಿದೆ - ದೇಶದಾದ್ಯಂತ ಚಲನಚಿತ್ರ ಉತ್ಸಾಹಿಗಳಿಂದ ಮರುವಿನ್ಯಾಸಗೊಳಿಸಲಾದ ರೇ ಅವರ ಚಲನಚಿತ್ರಗಳ ಪೋಸ್ಟರ್‌ಗಳೊಂದಿಗೆ ಚಲನಚಿತ್ರ ಪೋಸ್ಟರ್ ವಿನ್ಯಾಸ ಸ್ಪರ್ಧೆ. ಎರಡು ಸತ್ಯಜಿತ್ ರೇ ಕ್ಲಾಸಿಕ್‌ಗಳನ್ನು ಐಎಫ್ ಎಫ್ ಐ2022 ನಲ್ಲಿ ಪ್ರದರ್ಶಿಸಲಾಗುತ್ತಿದೆ - 1977 ರ ಅವಧಿಯ ನಾಟಕ ಶತ್ರಂಜ್ ಕೆ ಖಿಲಾಡಿ ಮತ್ತು 1989ರ ಸಾಮಾಜಿಕ ಚಿತ್ರ ಗಣಶತ್ರು.

ನಿರ್ದೇಶಕ ಜಯದೀಪ್ ಮುಖರ್ಜಿ ಅವರೊಂದಿಗೆ ಸಂಪೂರ್ಣ ಟೇಬಲ್ ಟಾಕ್ ಅನ್ನು ಇಲ್ಲಿ ವೀಕ್ಷಿಸಿ:

* * *

 



(Release ID: 1878847) Visitor Counter : 126