ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ‌‌ನದಿಂದಾದ ನಷ್ಟ ಹಾಗೂ  ಜೀವಹಾನಿಯ ಬಗ್ಗೆ ಪ್ರಧಾನಮಂತ್ರಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Posted On: 22 NOV 2022 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನದಿಂದ ಸಂಭವಿಸಿದ ಜೀವಹಾನಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ,  ತಮ್ಮ‌‌ ಸಂತಾಪ‌ಗಳನ್ನು ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದುಃಖದ ಸಮಯದಲ್ಲಿ ಇಂಡೋನೇಷ್ಯಾ ಜೊತೆ ಭಾರತ ದೇಶ ನಿಂತಿರುವುದಾಗಿ ಹೇಳಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿ ಅವರು  ಟ್ವೀಟ್ ಮಾಡಿದ್ದು ಹೀಗೆ:

 "ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪನದಿಂದುಂಟಾಗಿರುವ ಜೀವಹಾನಿ ಮತ್ತು ಆದಂತಹ ಆಸ್ತಿ ನಷ್ಟವನ್ನು  ಕಂಡು ಮನಸಿಗೆ ತುಂಬಾ ನೋವಾಗಿದೆ. ಭೂಕಂಪನದ ಸಂತ್ರಸ್ತರಿಗೆ ಹಾಗೂ ಸಂತ್ರಸ್ತರ ಕುಟುಂಬಗಳಿಗೆ‌ ಮನಸಿನಾಳದ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.ಅಲ್ಲದೇ ಈ ದುಃಖದ ಸಮಯದಲ್ಲಿ ಭಾರತವು ಇಂಡೋನೇಷ್ಯಾದೊಂದಿಗೆ ನಿಂತಿರುವುದಾಗಿ ಹೇಳಿದ್ದಾರೆ.

*****


(Release ID: 1878148) Visitor Counter : 129