ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಫೌಡಾ ಎಸ್ 4 ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ/ಇಫ್ಫಿ) ಪ್ರಥಮ ಪ್ರದರ್ಶನಗೊಳ್ಳಲಿದೆ

Posted On: 20 NOV 2022 12:58PM by PIB Bengaluru

ಫೌಡಾ 4ನೇ ಆವೃತ್ತಿ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ/ಇಫ್ಫಿ) ಪ್ರಥಮ ಪ್ರದರ್ಶನ ಕಾಣಲಿದೆ. ರಚನೆಕಾರರು ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರಾದ ಲಿಯೋರ್ ರಾಜ್ ಮತ್ತು ಅವಿ ಇಸಚರಾಫ್ ಅವರು ಎಪಿಸೋಡ್ 1 ರ ಮೂಲಕ ಪ್ರೀಮಿಯರ್ ಪ್ರದರ್ಶನಕ್ಕಾಗಿ ಐಎಫ್ಎಫ್ಐಗೆ ಪ್ರಯಾಣಿಸಲಿದ್ದಾರೆ.
2023 ರಲ್ಲಿ ನೆಟ್ ಫ್ಲಿಕ್ಸ್ ನಲ್ಲಿ ಜಾಗತಿಕವಾಗಿ ಬಿಡುಗಡೆಯಾಗುವ ಈ ಸರಣಿಯು ನವೆಂಬರ್ 27 ರ ಭಾನುವಾರದಂದು ಸ್ಟಾರ್ ಸ್ಟಡ್ಡ್ ಗಾಲಾ ಕಾರ್ಯಕ್ರಮದ ಉತ್ಸವದಲ್ಲಿ ಪ್ರದರ್ಶನ ಕಾಣಲಿದೆ.

ರಚನೆಕಾರರು ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರಾದ ಲಿಯೋರ್ ರಾಜ್ ಮತ್ತು ಅವಿ ಇಸಾಚಾರೋಫ್ ಮಾತನಾಡಿ, " ಫೌಡಾ ಸೀಸನ್ 4ರ ಏಷ್ಯನ್ ಪ್ರೀಮಿಯರ್ ಗಾಗಿ ಭಾರತಕ್ಕೆ ಬರಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ಕಥೆಯು ಭಾರತದ ಅಭಿಮಾನಿಗಳೊಂದಿಗೆ ತುಂಬಾ ಬಲವಾಗಿ ಪ್ರತಿಧ್ವನಿಸಿದೆ ಮತ್ತು ಕಳೆದ ನಾಲ್ಕು ಋತುಗಳಲ್ಲಿ ಎಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾವು ನಿಜವಾಗಿಯೂ ಪ್ರಶಂಸಿಸುತ್ತೇವೆ. ಸೀಸನ್ 4 ರ ಪ್ರತಿಕ್ರಿಯೆಯನ್ನು ನೋಡಲು ನಾವು ಉತ್ಸುಕರಾಗಿದ್ದೇವೆ," ಎಂದು ಹೇಳಿದ್ದಾರೆ.

ಈ ಉಪಕ್ರಮವನ್ನು ಶ್ಲಾಘಿಸಿದ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್, " ಕಲಾತ್ಮಕ ಪ್ರಯತ್ನವನ್ನು ಯಶಸ್ವಿಗೊಳಿಸುವುದರಲ್ಲಿ ಯಾವುದೇ ರಹಸ್ಯವಿಲ್ಲ. ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ವಿವಿಧ ಭಾಷೆಗಳಲ್ಲಿ, ಎಲ್ಲಾ ಪ್ರದೇಶಗಳು, ಜನಾಂಗೀಯತೆ ಮತ್ತು ಸಂಸ್ಕೃತಿಗಳ ವಿಶಿಷ್ಟ ಕಥೆಗಳನ್ನು ಗೌರವಿಸಲಾಗುತ್ತದೆ ಮತ್ತು ಆಚರಿಸಲಾಗುತ್ತದೆ. ಒಟಿಟಿ ಪ್ರಥಮ ಪ್ರದರ್ಶನ ಮತ್ತು ಉತ್ಸವದಲ್ಲಿ ತಮ್ಮ ವಿಷಯವನ್ನು ಪ್ರದರ್ಶಿಸಲು ಮುಂದೆ ಬರುತ್ತಿರುವುದರಿಂದ, ಹೊಸ ನಿರೂಪಣೆಗಳು, ಸೃಜನಶೀಲ ಆಲೋಚನೆಗಳು ಮತ್ತು ಹೊಸ ದೃಷ್ಟಿಕೋನಗಳನ್ನು ಜಗತ್ತಿಗೆ ನೀಡುವ ನಮ್ಮ ಪ್ರಯತ್ನವು ಫಲ ನೀಡುತ್ತದೆ. ನಾವು ಇಸ್ರೇಲ್ ನೊಂದಿಗೆ ಪರಿಣಾಮಕಾರಿ ಧ್ವನಿ-ದೃಶ್ಯ ಒಪ್ಪಂದವನ್ನು ಹೊಂದಿದ್ದೇವೆ ಮತ್ತು ಇದು ಈ ವರ್ಷದ 53 ನೇ ಐಎಫ್ಎಫ್ಐನಲ್ಲಿ ಈ ಪ್ರದೇಶದ ಅಂತಾರಾಷ್ಟ್ರೀಯ ಖ್ಯಾತಿಯ ತಾರೆಗಳಿಗೆ ಆತಿಥ್ಯ ವಹಿಸಲು ನಮಗೆ ಹೆಚ್ಚು ಸಂತೋಷವನ್ನುಂಟು ಮಾಡುತ್ತದೆ!,’’ ಎಂದು ಹೇಳಿದರು.

ಫೌಡಾ ನಾಲ್ಕನೇ ಆವೃತಿಯ ಕಥೆಯು ಇಸ್ರೇಲ್ ನಿಂದಾಚೆಗೆ ಸಾಗುತ್ತದೆ, ಅಲ್ಲಿ ಡೊರಾನ್ (ಲಿಯೊರ್ ರಾಜ್) ತನ್ನ ಅತ್ಯಂತ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಖಂಡಗಳನ್ನು ದಾಟುವ ಬೆದರಿಕೆಯ ಬೆನ್ನಟ್ಟುತ್ತಿದ್ದಾನೆ.

ಇಸ್ರೇಲ್ ಕಂಟೆಂಟ್ ಅನ್ನು ನೆಟ್ ಫ್ಲಿಕ್ಸ್ ಸದಸ್ಯರು ಹೆಚ್ಚು ವೀಕ್ಷಿಸುವ ಅಗ್ರ 20 ದೇಶಗಳಲ್ಲಿ ಭಾರತವೂ ಒಂದಾಗಿದೆ, ಮತ್ತು ಇಸ್ರೇಲಿ ಕಥೆಗಳು ಜಾಗತಿಕವಾಗಿ ಜನಪ್ರಿಯವಾಗಿವೆ, ಶೇಕಡಾ 90 ರಷ್ಟು ವೀಕ್ಷಕರು ಫೌಡಾ (ಎಸ್ 1-ಎಸ್ 3) ಗೆ ಇಸ್ರೇಲ್ ಹೊರಗಿನಿಂದ ಬರುತ್ತಾರೆ.

ಲಿಯೋರ್ ರಾಜ್ ಮತ್ತು ಅವಿ ಇಸ್ಸಾಚಾರೋಫ್ ಅವರು ನಟ ರಾಜ್ ಕುಮಾರ್ ರಾವ್ ಅವರೊಂದಿಗೆ ಇತ್ತೀಚೆಗೆ ನೆಟ್ ಫ್ಲಿಕ್ಸ್ ಚಿತ್ರ ಮೋನಿಕಾ, ಓ ಮೈ ಡಾರ್ಲಿಂಗ್ ಮತ್ತು ಕಂಟೆಂಟ್ ನೆಟ್ ಫ್ಲಿಕ್ಸ್ ಇಂಡಿಯಾದ ವಿಪಿ ಮೋನಿಕಾ ಶೆರ್ಗಿಲ್ ಅವರೊಂದಿಗೆ " ದಿ ಎರಾ ಆಫ್ ಗ್ಲೋಬಲ್ ಎಂಟರ್ಟೈನ್ಮೆಂಟ್ ನಲ್ಲಿ ಕಥೆ ಹೇಳುವುದು," ಕುರಿತ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ.

ಭಾರತದಲ್ಲಿ ಫೌಡಾದ ಜಾಗತಿಕ ಯಶಸ್ಸು ನೆಟ್ ಫ್ಲಿಕ್ಸ್ ಸ್ಥಳೀಯ ಕಥೆಗಳನ್ನು ಜಾಗತಿಕ ಪ್ರೇಕ್ಷಕರಿಗೆ ಹೇಗೆ ತಲುಪಿಸುತ್ತದೆ ಎಂಬುದನ್ನು ಬಿಂಬಿಸುತ್ತದೆ. ಈ ಉತ್ಸವದಲ್ಲಿ ನೆಟ್ ಫ್ಲಿಕ್ಸ್ ಖಾಕಿ: ದಿ ಬಿಹಾರ್ ಚಾಪ್ಟರ್, ಖಲಾ ಮತ್ತು ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚಿಯೋವನ್ನು ಪ್ರದರ್ಶಿಸಲಿದೆ.

ನೆಟ್ ಫ್ಲಿಕ್ಸ್ ಕುರಿತು:

ನೆಟ್ ಫ್ಲಿಕ್ಸ್ ವಿಶ್ವದ ಪ್ರಮುಖ ಪ್ರಸಾರ ಮನರಂಜನಾ ಸೇವೆಯಾಗಿದ್ದು, 190 ಕ್ಕೂ ಹೆಚ್ಚು ದೇಶಗಳಲ್ಲಿ 223 ದಶಲಕ್ಷ ಪಾವತಿಸಿದ ಸದಸ್ಯತ್ವಗಳನ್ನು ಹೊಂದಿದ್ದು, ಟಿವಿ ಸರಣಿಗಳು, ಸಾಕ್ಷ್ಯಚಿತ್ರಗಳು, ವೈಶಿಷ್ಟ್ಯ ಚಲನಚಿತ್ರಗಳು ಮತ್ತು ಮೊಬೈಲ್ ಆಟಗಳನ್ನು ವಿವಿಧ ಪ್ರಕಾರಗಳು ಮತ್ತು ಭಾಷೆಗಳಲ್ಲಿ ಆನಂದಿಸುತ್ತಿದೆ. ಸದಸ್ಯರು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಡಬಹುದು, ವಿರಾಮ ನೀಡಬಹುದು ಮತ್ತು ವೀಕ್ಷಣೆಯನ್ನು ಪುನರಾರಂಭಿಸಬಹುದು ಮತ್ತು ಯಾವುದೇ ಸಮಯದಲ್ಲಿ ತಮ್ಮ ಯೋಜನೆಗಳನ್ನು ಬದಲಾಯಿಸಬಹುದು.

*****



(Release ID: 1877552) Visitor Counter : 150