ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರಬಿ ಋತುವಿನ ಅಗತ್ಯಗಳನ್ನು ಪೂರೈಸಲು ದೇಶದಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಎನ್ಪಿಕೆಎಸ್ ಮತ್ತು ಎಸ್ಎಸ್ಪಿ ರಸಗೊಬ್ಬರಗಳ ಸಾಕಷ್ಟು ಲಭ್ಯತೆ ಇದೆ
Posted On:
18 NOV 2022 11:48AM by PIB Bengaluru
ತಮಿಳುನಾಡು ಮತ್ತು ರಾಜಸ್ಥಾನದ ತಿರುಚ್ಚಿಯಲ್ಲಿ ರಸಗೊಬ್ಬರಗಳ ಕೊರತೆಯಿದೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳುತ್ತವೆ. ಇಂತಹ ವರದಿಗಳು ಆಧಾರರಹಿತವಾಗಿವೆ. ರಬಿ ಋತುವಿನ ಅಗತ್ಯತೆಗಳನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ರಸಗೊಬ್ಬರಗಳ ಲಭ್ಯತೆ ಇದೆ ಎಂದು ಸ್ಪಷ್ಟಪಡಿಸಲಾಗಿದೆ. 2022-23 ರ ರಬಿ ಋತುವಿನ ಅವಶ್ಯಕತೆಗಳನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ರಸಗೊಬ್ಬರಗಳ ಲಭ್ಯತೆ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಭಾರತ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಅವುಗಳ ಅವಶ್ಯಕತೆಗೆ ಅನುಗುಣವಾಗಿ ರಸಗೊಬ್ಬರಗಳನ್ನು ಕಳುಹಿಸುತ್ತಿದೆ. ನಂತರ, ತಮ್ಮ ರಾಜ್ಯದಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಜಿಲ್ಲೆಯೊಳಗೆ ಮತ್ತು ಅಂತರ ಜಿಲ್ಲಾ ವಿತರಣೆಯ ಮೂಲಕ ಖಚಿತಪಡಿಸಿಕೊಳ್ಳುವುದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ..
ದೇಶದಲ್ಲಿ ರಸಗೊಬ್ಬರಗಳ ಲಭ್ಯತೆಯ ವಿವರಣೆ ಹೀಗಿದೆ:
ಯೂರಿಯಾ: 2022-23ರ ರಬಿ ಋತುವಿನಲ್ಲಿ ಯೂರಿಯಾಕ್ಕೆ ಇಡೀ ದೇಶದ ಅಗತ್ಯವು 180.18 ಎಲ್.ಎಂ.ಟಿ ಆಗಿದೆ. 16.11.2022 ರವರೆಗಿನ ಪ್ರಮಾಣಕ್ಕೆ ಅನುಗುಣವಾದ ಅವಶ್ಯಕತೆಯು 57.40 ಎಲ್.ಎಂ.ಟಿ ಆಗಿದ್ದು, ಇದಕ್ಕಾಗಿ ರಸಗೊಬ್ಬರ ಇಲಾಖೆ (ಡಿಒಎಫ್) 92.54 ಲಕ್ಷ ಮೆಟ್ರಿಕ್ ಟನ್ ಲಭ್ಯತೆಯನ್ನು ಖಚಿತಪಡಿಸಿದೆ. ಈ ಅವಧಿಯಲ್ಲಿ, ಯೂರಿಯಾ ಮಾರಾಟವು 38.43 ಎಲ್.ಎಂ.ಟಿ ಆಗಿದೆ. ಇದಲ್ಲದೆ, ರಾಜ್ಯಗಳ ಬಳಿ 54.11 ಎಲ್.ಎಂ.ಟಿ ಬಾಕಿ ದಾಸ್ತಾನು ಉಳಿದಿದೆ. ಇದರ ಜೊತೆಗೆ ಯೂರಿಯಾದ ಬೇಡಿಕೆಯನ್ನು ಪೂರೈಸಲು ಯೂರಿಯಾ ಘಟಕಗಳಲ್ಲಿ 1.05 ಎಲ್.ಎಂ.ಟಿ ಮತ್ತು ಬಂದರುಗಳಲ್ಲಿ 5.03 ಎಲ್.ಎಂ.ಟಿ ಲಭ್ಯವಿದೆ.
ಡಿಎಪಿ: 2022-23 ರಬಿ ಅವಧಿಯಲ್ಲಿ ಡಿಎಪಿಗೆ ದೇಶದ ಅಗತ್ಯವು 55.38 ಎಲ್.ಎಂ.ಟಿ ಆಗಿದೆ. 16.11.2022 ರವರೆಗಿನ ಪ್ರಮಾಣಾನುಗುಣವಾದ ಅವಶ್ಯಕತೆಯು 26.98 ಎಲ್.ಎಂ.ಟಿ ಆಗಿದ್ದು, ಇದಕ್ಕಾಗಿ ಡಿಒಎಫ್ 36.90 ಎಲ್.ಎಂ.ಟಿ ಲಭ್ಯತೆಯನ್ನು ಖಚಿತಪಡಿಸಿದೆ. ಈ ಅವಧಿಯಲ್ಲಿ, ಡಿಎಪಿಯ ಮಾರಾಟವು 24.57 ಎಲ್.ಎಂ.ಟಿ ಆಗಿದೆ. ಇದಲ್ಲದೆ, ರಾಜ್ಯಗಳ ಬಳಿ 12.33 ಎಲ್.ಎಂ.ಟಿ ಬಾಕಿ ದಾಸ್ತಾನು ಉಳಿದಿದೆ. ಇದಕ್ಕೆ ಬೇಡಿಕೆಯನ್ನು ಪೂರೈಸಲು, ಹೆಚ್ಚುವರಿಯಾಗಿ ಡಿಎಪಿ ಘಟಕಗಳಲ್ಲಿ 0.51 ಎಲ್.ಎಂ.ಟಿ ಮತ್ತು ಬಂದರುಗಳಲ್ಲಿ 4.51 ಎಲ್.ಎಂ.ಟಿ ಯಷ್ಟು ಸಂಗ್ರಹವಿದೆ.
ಎಂಒಪಿ: 2022-23 ರಬಿ ಅವಧಿಯಲ್ಲಿ ಎಂಒಪಿ ಗಾಗಿ ದೇಶದ ಅಗತ್ಯತೆ 14.35 ಎಲ್.ಎಂ.ಟಿ ಇದೆ. 16.11.2022 ರವರೆಗಿನ ಪ್ರಮಾಣಾನುಗುಣವಾದ ಅವಶ್ಯಕತೆಯು 5.28 ಎಲ್.ಎಂ. ಆಗಿದ್ದು, ಇದಕ್ಕಾಗಿ ಡಿಒಎಫ್ 8.04 ಎಲ್.ಎಂ.ಟಿ ಲಭ್ಯತೆಯನ್ನು ಖಚಿತಪಡಿಸಿದೆ. ಈ ಅವಧಿಯಲ್ಲಿ, ಎಂಒಪಿ ಯ ಮಾರಾಟವು 3.01 ಎಲ್.ಎಂ.ಟಿ ಆಗಿದೆ. ಇದಲ್ಲದೆ, ರಾಜ್ಯಗಳಲ್ಲಿ 5.03 ಎಲ್.ಎಂ.ಟಿ ಯಷ್ಟು ಬಾಕಿ ದಾಸ್ತಾನು ಉಳಿದಿದೆ. ಇದಲ್ಲದೆ ಎಂಒಪಿ ಯ ಬೇಡಿಕೆಯನ್ನು ಪೂರೈಸಲು ಬಂದರುಗಳಲ್ಲಿ 1.17 ಎಲ್.ಎಂ.ಟಿ ಲಭ್ಯವಿದೆ.
ಎನ್ಪಿಕೆಎಸ್: ರಬಿ 2022-23 ರಲ್ಲಿ ಎನ್ಪಿಕೆಎಸ್ ಗಾಗಿ ದೇಶದ ಅಗತ್ಯತೆ 56.97 ಎಲ್.ಎಂ.ಟಿ. ಆಗಿದೆ. 16.11.2022 ರವರೆಗಿನ ಪ್ರಮಾಣಾನುಗುಣವಾದ ಅವಶ್ಯಕತೆಯು 20.12 ಎಲ್.ಎಂ.ಟಿ. ಆಗಿದ್ದು, ಇದಕ್ಕಾಗಿ ಡಿಒಎಫ್ 40.76 ಎಲ್.ಎಂ.ಟಿ ಲಭ್ಯತೆಯನ್ನು ಖಚಿತಪಡಿಸಿದೆ. ಈ ಅವಧಿಯಲ್ಲಿ, ಎನ್ಪಿಕೆಎಸ್ ನ ಮಾರಾಟವು 15.99 ಎಲ್.ಎಂ.ಟಿ ಆಗಿದೆ. ಇದಲ್ಲದೆ, ರಾಜ್ಯಗಳಲ್ಲಿ 24.77 ಎಲ್.ಎಂ.ಟಿ ಯಷ್ಟು ದಾಸ್ತಾನು ಉಳಿದಿದೆ. ಇದರ ಜೊತೆಗೆ ಎನ್ಪಿಕೆಎಸ್ ನ ಬೇಡಿಕೆಯನ್ನು ಪೂರೈಸಲು ಘಟಕಗಳಲ್ಲಿ 1.24 ಎಲ್.ಎಂ.ಟಿ ಮತ್ತು ಬಂದರುಗಳಲ್ಲಿ 2.93 ಎಲ್.ಎಂ.ಟಿ ಲಭ್ಯವಿದೆ.
ಎಸ್ಎಸ್ಪಿ: 2022-23 ರಬಿ ಅವಧಿಯಲ್ಲಿ ಎಸ್ಎಸ್ಪಿಗೆ ದೇಶದ ಅಗತ್ಯತೆ 33.64 ಎಲ್.ಎಂ.ಟಿ ಆಗಿದೆ. 16.11.2022 ರವರೆಗಿನ ಪ್ರಮಾಣಾನುಗುಣವಾದ ಅವಶ್ಯಕತೆಯು 14.05 ಎಲ್.ಎಂ.ಟಿ ಆಗಿದ್ದು, ಡಿಒಎಫ್ 24.79 ಎಲ್.ಎಂ.ಟಿ ಲಭ್ಯತೆಯನ್ನು ಖಚಿತಪಡಿಸಿದೆ. ಈ ಅವಧಿಯಲ್ಲಿ, ಎಸ್ ಎಸ್ ಪಿಯ ಮಾರಾಟವು 9.25 ಎಲ್.ಎಂ.ಟಿ ಆಗಿದೆ. ಇದಲ್ಲದೆ, ರಾಜ್ಯಗಳಲ್ಲಿ 15.54 ಎಲ್.ಎಂ.ಟಿಯಷ್ಟು ದಾಸ್ತಾನು ಮುಚ್ಚುವ ಸ್ಟಾಕ್ ಇದೆ. ಇದರ ಜೊತೆಗೆ ಎಸ್ಎಸ್ಪಿಯ ಬೇಡಿಕೆಯನ್ನು ಪೂರೈಸಲು ಸ್ಥಾವರಗಳಲ್ಲಿ 1.65 ಎಲ್.ಎಂ.ಟಿಯಷ್ಟು ದಾಸ್ತಾನು ಲಭ್ಯವಿದೆ.
ಹೀಗಾಗಿ, ದೇಶದಲ್ಲಿ ಯೂರಿಯಾ, ಡಿಎಪಿ, ಎಂಒಪಿ, ಎನ್ಪಿಕೆಎಸ್ ಮತ್ತು ಎಸ್ಎಸ್ಪಿ ರಸಗೊಬ್ಬರಗಳ ಲಭ್ಯತೆಯು ರಬಿ ಋತುವಿನ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ.
*****
(Release ID: 1877136)
Visitor Counter : 143