ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಐಎಫ್ಎಫ್ಐ ಏಕೆ?

ಐಎಫ್ಎಫ್ಐ ಏನಿದು? ನಾವು ಹೇಳಿದ್ದೆವಾ? ಹೌದು, ಖಂಡಿತವಾಗಿ. ನಮ್ಮ ಹೃದಯದ, ನಿಮ್ಮ ಹೃದಯದ ಬಾಗಿಲು ಬಡಿಯುತ್ತಿರುವ ಚಲನಚಿತ್ರೋತ್ಸವದ ಬಗ್ಗೆ ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತೇವೆ?

ಹೌದು,  ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವ (ಐಎಫ್ಎಫ್ಐ) 70 ವರ್ಷಗಳ ಹಿಂದೆ ಅಂದರೆ 1952ರಲ್ಲಿ ಆರಂಭವಾಯಿತು. ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. 2004ರಲ್ಲಿ ಮೊದಲ ಬಾರಿಗೆ ಗೋವಾದಲ್ಲಿ ನಡೆದ ಈ ಉತ್ಸವವು ಅಂದಿನಿಂದ, ಸುಂದರ ಪ್ರವಾಸಿ ರಾಜ್ಯದಲ್ಲಿ ನೆಲೆ ಕಂಡುಕೊಂಡಿದೆ, ಪ್ರತಿ ವರ್ಷವೂ ಇಲ್ಲಿಗೆ ಮರಳುತ್ತದೆ. 2014ರಲ್ಲಿ ಗೋವಾವನ್ನು ಐಎಫ್‌ಎಫ್‌ಐಗೆ ಶಾಶ್ವತ ಸ್ಥಳವೆಂದು ಘೋಷಿಸಲಾಯಿತು.

ಐಎಫ್ಎಫ್ಐ ಉತ್ಸವವನ್ನು ಸರ್ಕಾರವಲ್ಲದೆ ಬೇರೆ ಯಾರೂ ಸಹ ನಡೆಸುವುದಿಲ್ಲ ಎಂಬುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಹೌದು, ಆತಿಥೇಯ ರಾಜ್ಯ ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಭಾರತ ಸರ್ಕಾರವು ಪ್ರತಿವರ್ಷ ಈ ಉತ್ಸವವನ್ನು ನಡೆಸುತ್ತಾ ಬಂದಿದೆ.

ಆದ್ದರಿಂದ ಸ್ವಾಭಾವಿಕವಾಗಿ ಒಂದು ಪ್ರಶ್ನೆ ಉದ್ಭವಿಸುತ್ತದೆ, ಅದು ನಿಮ್ಮ ಮನಸ್ಸಿನಲ್ಲಿ ಈಗಾಗಲೇ ಹುಟ್ಟಿಕೊಂಡಿದೆ ಎಂದು ನಾವು ನಂಬುತ್ತೇವೆ. ಐಎಫ್ಎಫ್ಐ ಏಕೆ? ಎಂಬುದೇ ನಿಮ್ಮೆಲ್ಲರ ಪ್ರಶ್ನೆಯಾಗಿದೆ.

ಐಎಫ್ಎಫ್ಐ ಏಕೆ?

ಹೌದು, ನಾವು ಐಎಫ್ಎಫ್ಐ ಅನ್ನು ಏಕೆ ಆಯೋಜಿಸುತ್ತೇವೆ? ಅದಕ್ಕಾಗಿ ಯಾವುದಾದರೂ ಚಲನಚಿತ್ರೋತ್ಸವವನ್ನು ಏಕೆ ನಡೆಸುತ್ತೇವೆ? ಮತ್ತು ನಿರ್ದಿಷ್ಟವಾಗಿ, ಸರ್ಕಾರವೇ ಏಕೆ ಚಲನಚಿತ್ರೋತ್ಸವಗಳನ್ನು ನಡೆಸುತ್ತದೆ? ಸರ್ಕಾರವೇ ನಿರ್ದಿಷ್ಟವಾಗಿ ಐಎಫ್ಎಫ್ಐ ಅನ್ನು ಏಕೆ ನಡೆಸುತ್ತದೆ?

ಸಹಜವಾಗಿ, ನಾವು ಈ ಪ್ರಶ್ನೆಗಳನ್ನು ವಾಕ್ಚಾತುರ್ಯದಿಂದ ಕೇಳುತ್ತಿಲ್ಲ, ನಾವು ಯಾವುದೇ ರೀತಿಯಲ್ಲಿ ಸಲಹೆ ನೀಡುತ್ತಿಲ್ಲ, ನಾವು ಐಎಫ್ಎಫ್ಐ ಅನ್ನು ನಡೆಸಬಾರದು ಎಂದು ಇದನ್ನು ಓದುವ ಕೆಲವರು ಅನುಮಾನಿಸುವ ಸಾಧ್ಯತೆಯಿದೆ. ಬದಲಾಗಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಸರ್ಕಾರವು ನಡೆಸುವ ಈ ಮಹಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿಂದಿನ ಧ್ಯೇಯವನ್ನು ಕಲಿಯಲು, ಅನ್ವೇಷಿಸಲು ಮತ್ತು ಮರುಶೋಧಿಸಲು ನಾವು ಏಕೆ ಮಾಡುತ್ತಿದ್ದೇವೆ ಎಂಬುದರ ಬೇರುಗಳನ್ನು ಅರಿಯಲು ನಾವು ಈ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ.

ಪ್ರಶ್ನೆ ಕೇವಲ ಐಎಫ್ಎಫ್ಐ ನಡೆಸುವ ಬಗ್ಗೆ ಅಲ್ಲ. ನಿಜಕ್ಕೂ ಉತ್ಸವ ನಡೆಸುವುದು ಒಂದು ಅಂತ್ಯವಲ್ಲ ಅಲ್ಲವೇ?

ಆದ್ದರಿಂದ, ಇದು ಸ್ವಾಭಾವಿಕವಾಗಿ ಸಾರ್ವಜನಿಕರ ಭಾಗವಹಿಸುವಿಕೆ, ತೊಡಗಿಸಿಕೊಳ್ಳುವಿಕೆ ಮತ್ತು ಕೊಡುಗೆಗೆ ಸಂಬಂಧಿಸಿದ ಈ ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಐಎಫ್ಎಫ್ಐನಲ್ಲಿ ಸಾರ್ವಜನಿಕರು ಏಕೆ ಭಾಗವಹಿಸುತ್ತಾರೆ? ಅವರು ಏನನ್ನು ಎದುರು ನೋಡುತ್ತಿದ್ದಾರೆ, ಅವರು ಈ ಉತ್ಸವದಿಂದ ಯಾವ ಅರ್ಥ ಪಡೆಯುತ್ತಾರೆ?

ಐಎಫ್ಎಫ್ಐ ಚಲನಚಿತ್ರೋತ್ಸವದ ನಿಜವಾದ ಪ್ರೇಕ್ಷಕರು ಯಾರು? ಅವರು ಯಾರಾಗಿರಬೇಕು? ಚಲನಚಿತ್ರ ನಿರ್ಮಾಪಕರೆ, ಚಲನಚಿತ್ರ ಬಂಧುಗಳೆ, ಚಲನಚಿತ್ರ ಪ್ರೇಮಿಗಳೆ ಮತ್ತು ಚಲನಚಿತ್ರ ರಸಿಕರೆ? ಅಥವಾ ಅದು ಇತರರೂ ಆಗಿರಬಹುದಾ? ಸಾಮಾನ್ಯ ವ್ಯಕ್ತಿಯೆ, ಬೀದಿಯಲ್ಲಿರುವ ಪುರುಷ ಮತ್ತು ಮಹಿಳೆಯೆ? ಅಥವಾ ಇದು ಕೇವಲ ಸ್ಥಾಪಿತ ಪ್ರೇಕ್ಷಕರಿಗಾಗಿಯೇ?

ನಾವು ಐಎಫ್ಎಫ್ಐಗೆ ಹೋಗೋಣ; ಅಲ್ಲಿ ಎಲ್ಲವೂ ಪ್ರಾರಂಭವಾಗಿದೆ

ಈ ನಿರ್ದಿಷ್ಟ ಪ್ರಶ್ನೆಗಳು ಪ್ರತಿಫಲಿಸವುದನ್ನು ನಾವು ಮುಂದುವರಿಸಿದಾಗ, ನಾವು ಯಾವಾಗಲೂ ಮಾಡುವಂತೆ, ಉತ್ಸವದ ಆರಂಭಕ್ಕೆ ಹೋಗೋಣ. ಐಎಫ್ಎಫ್ಐ ಮೊದಲ ಆವೃತ್ತಿಯ ಸಂಘಟನಾ ಸಮಿತಿಯ ಅಧ್ಯಕ್ಷ ಸಿ.ಎಂ. ಅಗರ್ ವಾಲಾ ಅವರು ಏನು ಹೇಳಿದ್ದಾರೆ ಎಂದು ಒಮ್ಮೆ ಕೇಳೋಣ.

“ಭಾರತದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸುವ ಪ್ರಸ್ತಾಪವನ್ನು ಮೊದಲು ಮುಂದೆ ತಂದಾಗ ಪದೇಪದೆ ಕೇಳಲಾಗಿದ್ದ ಪ್ರಶ್ನೆಯೆಂದರೆ: ಅಂತಹ ಉತ್ಸವದ ಉದ್ದೇಶವಾದರೂ ಏನು? ಅದು ಯಾವ ಉದ್ದೇಶವನ್ನು ಪೂರೈಸುತ್ತದೆ? ಅದಕ್ಕೆ 2 ಕಾರಣಗಳುಳ್ಳ ಸ್ಪಷ್ಟ ಉತ್ತರ ನೀಡಲಾಗಿತ್ತು: ಮೊದಲನೆಯದಾಗಿ, ವಿವಿಧ ದೇಶಗಳಲ್ಲಿ ನಿರ್ಮಿಸಿದ ಅತ್ಯುತ್ತಮ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುವ ಪ್ರೇಕ್ಷಕರಿಗಾಗಿ ಚಲನಚಿತ್ರೋತ್ಸವ ಆಯೋಜಿಸಲಾಗುತ್ತದೆ; ಎರಡನೆಯದಾಗಿ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವ ದೇಶಗಳ ಚಲನಚಿತ್ರ ಉದ್ಯಮದಲ್ಲಿ ತೊಡಗಿರುವವರನ್ನು ಭೇಟಿಯಾಗಲು, ಅವರೆಲ್ಲರ ಸಾಮಾನ್ಯ ಕಾಳಜಿಯ ವಿಷಯಗಳನ್ನು ಚರ್ಚಿಸಲು, ಈ ಪ್ರಕಾರದ ಕಲೆಯ ಪ್ರಗತಿಯನ್ನು ಹೋಲಿಸಲು ಮತ್ತು ಭವಿಷ್ಯದ ಅಭಿವೃದ್ಧಿಗಾಗಿ ಸಂಗೀತ ಕಾರ್ಯಕ್ರಮಗಳನ್ನು ನಡೆಸಲು ಇದು ಅವಕಾಶ ನೀಡುತ್ತದೆ."

ಹೌದು, ಅದು ಸರಿ, ಇದು 1952ರಲ್ಲಿ ಮೊದಲ ಬಾರಿಗೆ ಅಂದಿನ ಬಾಂಬೆಯಲ್ಲಿ ನಡೆಸಿದ ಏಷ್ಯಾದ ಅತ್ಯಂತ ಹಳೆಯ ಚಲನಚಿತ್ರೋತ್ಸವದ ಮೊದಲ ಆವೃತ್ತಿಯ ಸಂಘಟಕರ ಮಾತುಗಳು ಇವು. ಅವರು 1952 ಜನವರಿ 24ರಂದು ತಮ್ಮ ಸ್ವಾಗತ ಭಾಷಣದಲ್ಲಿ ಈ ಮಾತುಗಳನ್ನು ಆಡಿದ್ದರು.

ನಮ್ಮ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ನಮ್ಮ ಮಾನವೀಯ ಸಂಬಂಧಗಳ ಮೇಲೆ ಸಿನಿಮಾ ಮಾಧ್ಯಮ ಬೀರುತ್ತಿರುವ  ಅತ್ಯುನ್ನತ ಪ್ರಭಾವವನ್ನು ಅಧ್ಯಕ್ಷರು ಪ್ರಸ್ತಾಪಿಸಿದ್ದರು.

ಈ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಚಲನಚಿತ್ರಗಳಲ್ಲಿ ಕೆಲವು ಹೊಸ ಮನರಂಜನೆಯಾಗಿ ಪ್ರಾರಂಭವಾದ ಮೋಷನ್-ಪಿಚ್ಚರ್ ಚಲನಚಿತ್ರಗಳು ಮಾನವ ಸಂಬಂಧಗಳು, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳನ್ನು ಎಷ್ಟು ಆಕ್ರಮಿಸಿವೆ ಎಂಬುದನ್ನು ತೋರಿಸುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ, ನಿರ್ದಿಷ್ಟವಾಗಿ ಇದು ಹೊಸ ವಿಸ್ಟಾಗಳನ್ನು ತೆರೆದಿದೆ, ಅದರ ಪ್ರಾಮುಖ್ಯತೆಯನ್ನು ಈಗ ಸ್ವಲ್ಪಮಟ್ಟಿಗೆ ಮಾತ್ರ ಗ್ರಹಿಸಬಹುದು. ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದು ಅಂತಾರಾಷ್ಟ್ರೀಯ ಸಂಸ್ಕೃತಿಯ ಅಡಿಪಾಯ ಹಾಕುವಲ್ಲಿ ಮಹತ್ವದ ಪಾತ್ರ  ವಹಿಸಿದೆ ಮತ್ತು ನಿರ್ವಹಿಸುತ್ತಿದೆ. ಆದರೆ ಮಾನವ ಸಂಬಂಧಗಳ ಯಾವುದೇ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಕ್ಷೇತ್ರಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯ ಮೋಷನ್ ಪಿಚ್ಚರ್ ಗಳಿಲ್ಲ. ರಾಷ್ಟ್ರಗಳ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಬಂಧಗಳಿಗೆ ಸಂಬಂಧಿಸಿದಂತೆ ಅದರ ಶಕ್ತಿ ಒಳ್ಳೆಯದು ಅಥವಾ ಕೆಟ್ಟದ್ದು ಎಲ್ಲರಿಗೂ ಸ್ಪಷ್ಟವಾಗಿದೆ.

ವಿವಿಧ ರಾಷ್ಟ್ರಗಳ ಜನರ ನಡುವೆ ಪರಸ್ಪರ ಸೌಹಾರ್ದತೆ ಮತ್ತು ತಿಳುವಳಿಕೆ  ಬೆಳೆಸಲು ಮತ್ತು ಅದು ಹೇಗೆ "ಜಗತ್ತಿನಾದ್ಯಂತ ಸಾಹಿತ್ಯದ ಆರಂಭ ನೀಡುತ್ತದೆ" ಎಂಬುದರ ಸಿನೆಮಾದ ನೈಜ ಶಕ್ತಿಯನ್ನು ಅಧ್ಯಕ್ಷರು ಪ್ರಸ್ತಾಪಿಸಿದ್ದರು.

"ಮಾನವ ಸಂಬಂಧ ಮತ್ತು ಆಲೋಚನೆಗಳ ವಿನಿಮಯ ಸೇರಿದಂತೆ ಮೋಷನ್ ಪಿಚ್ಚರ್ ಗಳ ತಯಾರಿಕೆ ಮತ್ತು ವಿತರಣೆಯಲ್ಲಿ ನಿಜವಾದ ಅಂತಾರಾಷ್ಟ್ರೀಯ ಸಹಕಾರವು ಪರಸ್ಪರ ಸೌಹಾರ್ದತೆ ಮತ್ತು ತಿಳುವಳಿಕೆಗೆ ಕಾರಣವಾಗಬಹುದು. ಪರದೇಶದ ಜನರು ನೋಡಲು ವಿದೇಶಕ್ಕೆ ಕಳುಹಿಸುವ ಪ್ರತಿಯೊಂದು ಚಲನಚಿತ್ರವು, ಆ ದೇಶದ ಜನರು ವಿಶ್ವದ ಜನಸಾಮಾನ್ಯರಿಗೆ ಕಳುಹಿಸುವ ನಿಜವಾದ ರಾಯಭಾರಿ ಇದ್ದಂತೆ. ಇದು ಎಲ್ಲರಿಗೂ ಅರ್ಥವಾಗುವ ಸಾರ್ವತ್ರಿಕ ಭಾಷೆಯನ್ನು ಮಾತನಾಡುತ್ತದೆ. ಭಾಷೆಯಿಂದ ಬೇರ್ಪಟ್ಟ ಜನರು ಇತರ ದೇಶಗಳಲ್ಲಿನ ತಮ್ಮ ಸಹೋದ್ಯೋಗಿಗಳ ಬಗ್ಗೆ ರೇಡಿಯೊ ಅಥವಾ ಪತ್ರಿಕಾ ಮಾಧ್ಯಮದಿಂದ ಕಲಿಯಲು ಸಾಧ್ಯವಾಗದ್ದನ್ನು ಪರದೆಯಿಂದ ಕಲಿಯಲು ಅತ್ಯಾಸಕ್ತಿ ಹೊಂದುತ್ತಾರೆ. ಚಿತ್ರ ಪರದೆಯಿಂದ ಕಲಿಯುವ ವಿಷಯವು ಅಂತರ-ಜನಾಂಗೀಯ ಅಪನಂಬಿಕೆ ಮತ್ತು ದ್ವೇಷಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಇದು ಸಾರ್ವತ್ರಿಕ ಭಾಷೆಯನ್ನು ಮಾತನಾಡುವ ಕಾರಣ, ಮೋಷನ್ ಪಿಚ್ಚರ್ ಗಳು ವಿಶ್ವಾದ್ಯಂತ ಸಾಹಿತ್ಯದ ಆರಂಭ ನೀಡುತ್ತವೆ - ಇದು ನಿರಂತರವಾಗಿ ಮನುಕುಲದ ಎಲ್ಲಾ ಅಥವಾ ಬಹುತೇಕ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುವ ಸಾಹಿತ್ಯವಾಗಿದೆ. ನಮ್ಮ ಮನರಂಜನೆ ಮತ್ತು ಮಾಹಿತಿಗಾಗಿ, ಇದು ಭೂತಕಾಲವನ್ನು ಪುನರುತ್ಪಾದಿಸುತ್ತದೆ, ವರ್ತಮಾನವನ್ನು ಜೀವಂತಗೊಳಿಸುತ್ತದೆ ಮತ್ತು ನಾಳೆಗೆ ಸಂಬಂಧಿಸಿದಂತೆ, ಇದು ನಮಗೆ "ಭವಿಷ್ಯದಲ್ಲಿ ಮುಳುಗಲು, ಮಾನವ ಕಣ್ಣು ನೋಡುವಷ್ಟು ದೂರದವರೆಗೆ, ಪ್ರಪಂಚದ ದೃಷ್ಟಿ ಮತ್ತು ಎಲ್ಲಾ ಅದ್ಭುತಗಳನ್ನು ನೋಡಲು ಅನುವು ಮಾಡುತ್ತದೆ.

ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವದ ಮೊದಲ ಆವೃತ್ತಿಯಲ್ಲಿ  ಪ್ರತಿನಿಧಿಗಳನ್ನು ಸ್ವಾಗತಿಸಿದಾಗ ಆಯೋಜಕರು, ಅಂತಾರಾಷ್ಟ್ರೀಯ ವಿನಿಮಯಕ್ಕಾಗಿ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಪ್ರತಿಪಾದಿಸಿದ್ದರು. ಒಂದು ದೇಶವು ಅಂತಾರಾಷ್ಟ್ರೀಯ ಪ್ರೇಕ್ಷಕರಿಗೆ ಕಳುಹಿಸುವ ಚಲನಚಿತ್ರಗಳು, ಅಲ್ಲಿನ ಜನರ ಜೀವನ ವಿಧಾನ ಮತ್ತು ನಾಗರಿಕತೆಯ ಮೇಲೆ ಆಕ್ರಮಣ ಮಾಡುವ ದೊಡ್ಡ ಸಮಸ್ಯೆಗಳ ಕಡೆಗೆ ಅವರ ಮನೋಭಾವವನ್ನು ತಪ್ಪಾಗಿ ನಿರೂಪಿಸಬಾರದು ಎಂದು ಪ್ರತಿಪಾದಿಸಿದ್ದರು.

ಅಧ್ಯಕ್ಷರು ತಮ್ಮ ಭಾಷಣವನ್ನು ಹೀಗೆ ಮುಕ್ತಾಯಗೊಳಿಸಿದ್ದರು: ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವವನ್ನು ಮಹಾನ್ ರಾಷ್ಟ್ರ ಭಾರತದಲ್ಲಿ ನಡೆಸುವ ಘನ ಉದ್ದೇಶ ಮತ್ತು ಪ್ರೇರಣೆಗಳನ್ನು ಅವರು ಪ್ರಸ್ತಾಪಿಸಿದ್ದರು.

“ಕೊನೆಯದಾಗಿ, ನಾನು ನಿಮ್ಮೆಲ್ಲರನ್ನೂ ನೆನಪಿಸುವ ವಿಷಯವೇನೆಂದರೆ, ಈ ಹಬ್ಬವು ಭಾರತದಲ್ಲಿ ಅಥವಾ ಏಷ್ಯಾದಲ್ಲಿ ನಡೆಯುತ್ತಿರುವ ಚೊಚ್ಚಲ ಉತ್ಸವವಾಗಿದೆ. ಆದರೆ ಇದು ಸ್ಪರ್ಧಾತ್ಮಕವಲ್ಲ, ಕೇವಲ ಪ್ರಾತಿನಿಧಿಕವಷ್ಟೆ. ಇಲ್ಲಿ ನಾವು ಭೇಟಿಯಾಗುವುದು ಪೈಪೋಟಿಗಾಗಿ ಅಲ್ಲ, ಆದರೆ ಪರಸ್ಪರರ ಕಲೆ, ಕೌಶಲ್ಯ ಮತ್ತು ಪ್ರಗತಿಯನ್ನು ವೀಕ್ಷಿಸಲು ಮತ್ತು ಪ್ರಶಂಸಿಸಲು; ಪರಸ್ಪರರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು; ಪರಸ್ಪರರ ಜೀವನ ವಿಧಾನಗಳನ್ನು ಕಲಿಯಲು; ಮತ್ತು ಪ್ರಪಂಚದ ಜನರಲ್ಲಿ ಶ್ರೀಮಂತ ಸಾಂಸ್ಕೃತಿಕ ಜೀವನವನ್ನು ಉತ್ತೇಜಿಸುವ ಉದ್ದೇಶವಾಗಿದೆ.

ನೆನಪಿನಂಗಳಕ್ಕೆ ಇಳಿಯುವುದು, ಸ್ಫೂರ್ತಿಯ ಆಳಕ್ಕೆ ಹೋಗುವುದು ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನು ನಮಗೆ ತಿಳಿಸಿ. ಇದು ಸ್ವರಮೇಳವನ್ನು ಸ್ಪರ್ಶಿಸುತ್ತದೆಯೇ, ನೀವು ಐಎಫ್ಎಫ್ಐ, ಚಲನಚಿತ್ರಗಳು ಮತ್ತು ಜೀವನದೊಂದಿಗೆ ಮತ್ತೆ ಪ್ರೀತಿಯಲ್ಲಿ ಮುಳುಗಲು ಸಹಾಯ ಮಾಡುತ್ತದೆಯೇ? ಇಲ್ಲವೇ? ನಾವು ಐಎಫ್ಎಫ್ಐ ಅನ್ನು ಹೇಗೆ ಇನ್ನೂ ಉತ್ತಮವಾಗಿ ಆಚರಿಸಬಹುದು ಎಂಬುದನ್ನು ನಮಗೆ ತಿಳಿಸಿ.

ಮತ್ತು ಸಹಜವಾಗಿ, ನಮಗೆ ತಿಳಿಸಿ - #ಐಎಫ್ಎಫ್ಐ ಏಕೆ? ನಿಮ್ಮ ಪ್ರತಿಕ್ರಿಯೆಗಳನ್ನು ನೀವು iffi-pib[at]nic[dot]in ನಲ್ಲಿ ನಮಗೆ ಕಳುಹಿಸಬಹುದು; ಇನ್ನೂ ಉತ್ತಮವಾಗಿ, ಅವುಗಳನ್ನು ಟ್ವೀಟ್ ಮಾಡುವ ಮೂಲಕ ವಿಶ್ವದೊಂದಿಗೆ ಹಂಚಿಕೊಳ್ಳಿ (#WhyIFFI ಹ್ಯಾಶ್‌ಟ್ಯಾಗ್ ಬಳಸಲು ಮರೆಯದಿರಿ. ಹಾಗಾಗಿ, ನಾವು ನಿಮ್ಮ ಉತ್ತರಗಳು ಕಳೆದುಹೋಗಲು ಬಿಡುವುದಿಲ್ಲ).

53ನೇ ಆವೃತ್ತಿಯ ಐಎಫ್ಎಫ್ಐ ಸಂಬಂಧಿತ ಎಲ್ಲಾ ಪರಿಷ್ಕೃತ ಮಾಹಿತಿಗಳನ್ನು  ಚಲನಚಿತ್ರೋತ್ಸವದ ವೆಬ್‌ಸೈಟ್ www.iffigoa.org, ಪಿಐಬಿ ವೆಬ್‌ಸೈಟ್‌ (pib.gov.in), ಟ್ವಿಟರ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್, ಐಎಫ್ಎಫ್ಐ ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ಪಿಐಬಿ ಗೋವಾದ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳಲ್ಲಿ ಪಡೆಯಬಹುದು. ಟ್ಯೂನ್ ಆಗಿರಿ, ಸಿನಿಮಾದ ಆಚರಣೆಯನ್ನು ಯಥೇಚ್ಛವಾಗಿ ಸಂಭ್ರಮಿಸೋಣ ಮತ್ತು ಅದರ ಸಂತೋಷ, ಆನಂದವನ್ನು ಹಂಚಿಕೊಳ್ಳೋಣ.

***

iffi reel

(Release ID: 1874676) Visitor Counter : 236