ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಗುರುನಾನಕ್ ದೇವ್ ಅವರ 553 ನೇ ಪ್ರಕಾಶಪರ್ವ ಆಚರಣೆಯಲ್ಲಿ ಭಾಗಿಯಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ
"ಗುರ್ಬಾನಿಯಿಂದ ನಾವು ಪಡೆದ ಮಾರ್ಗದರ್ಶನ ಸಂಪ್ರದಾಯ, ನಂಬಿಕೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವಾಗಿದೆ"
"ಪ್ರತಿ ಪ್ರಕಾಶ ಪರ್ವದ ಬೆಳಕು ದೇಶಕ್ಕೆ ಮಾರ್ಗದರ್ಶನ ನೀಡುತ್ತಿದೆ"
"ಗುರುನಾನಕ್ ದೇವ್ ಅವರ ಆಲೋಚನೆಗಳಿಂದ ಪ್ರೇರಿತವಾದ ದೇಶವು 130 ಕೋಟಿ ಭಾರತೀಯರ ಕ್ಷೇಮಾಭಿವೃದ್ಧಿಯ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ"
"ಆಜಾದಿ ಕಾ ಅಮೃತ ಕಾಲದಲ್ಲಿ, ದೇಶವು ರಾಷ್ಟ್ರದ ವೈಭವ ಮತ್ತು ಆಧ್ಯಾತ್ಮಿಕ ಅಸ್ಮಿತೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಪುನಶ್ಚೇತನಗೊಳಿಸಿದೆ"
"ಅತ್ಯುನ್ನತ ಕರ್ತವ್ಯ ಪ್ರಜ್ಞೆಯನ್ನು ಉತ್ತೇಜಿಸುವ ಸಲುವಾಗಿ, ದೇಶವು ಈ ಕಾಲಘಟ್ಟವನ್ನು ಕರ್ತವ್ಯ ಕಾಲ ಎಂದು ಆಚರಿಸಲು ನಿರ್ಧರಿಸಿದೆ"
Posted On:
07 NOV 2022 10:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ಶ್ರೀ ಗುರುನಾನಕ್ ದೇವ್ ಅವರ 553 ನೇ ಪ್ರಕಾಶ ಪರ್ವದ ಆಚರಣೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಪ್ರಧಾನ ಮಂತ್ರಿಯವರಿಗೆ ಶಾಲು, ಸಿರೋಪಾ ಮತ್ತು ಖಡ್ಗ ನೀಡಿ ಗೌರವಿಸಲಾಯಿತು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಗುರುಪೂರಬ್ ಮತ್ತು ಪ್ರಕಾಶ ಪರ್ವ ಹಾಗೂ ದೇವ್ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದರು. ಗುರು ಗೋವಿಂದ್ ಸಿಂಗ್ ಅವರ 350 ನೇ ಪ್ರಕಾಶ ಪರ್ವ, ಗುರು ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ ಪರ್ವ ಮತ್ತು ಗುರುನಾನಕ್ ದೇವ್ ಅವರ 550 ನೇ ಪ್ರಕಾಶೋತ್ಸವದಂತಹ ಪ್ರಮುಖ ಪ್ರಕಾಶ ಪರ್ವಗಳನ್ನು ಆಚರಿಸುವ ಅವಕಾಶ ತಮಗೆ ಸಿಕ್ಕಿದ್ದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು.
"ಈ ಶುಭ ಸಂದರ್ಭಗಳಲ್ಲಿ ದೊರೆತ ಸ್ಫೂರ್ತಿ ಮತ್ತು ಆಶೀರ್ವಾದ ನವ ಭಾರತದ ಶಕ್ತಿಯನ್ನು ಹೆಚ್ಚಿಸುತ್ತಿದೆ. ಪ್ರತಿ ಪ್ರಕಾಶ ಪರ್ವದ ಬೆಳಕು ದೇಶಕ್ಕೆ ಬೆಳಕಿನ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಸಿಖ್ ಸಮುದಾಯವು ಅನುಸರಿಸುತ್ತಿರುವ ಪ್ರಕಾಶ ಪರ್ವದ ಅರ್ಥವು ರಾಷ್ಟ್ರಕ್ಕೆ ಕರ್ತವ್ಯ ಮತ್ತು ಸಮರ್ಪಣೆಯ ಮಾರ್ಗವನ್ನು ತೋರಿಸಿದೆ ಎಂದು ಅವರು ವಿವರಿಸಿದರು. ಈ ಪವಿತ್ರ ಸಂದರ್ಭಗಳಲ್ಲಿ ಪ್ರಧಾನಮಂತ್ರಿಯವರು ಗುರು ಕೃಪಾ, ಗುರ್ಬಾನಿ ಮತ್ತು ಲಂಗರ್ ಕಾ ಪ್ರಸಾದಕ್ಕೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಇದು ಅಂತಃಶಾಂತಿಯನ್ನು ಒದಗಿಸುವುದಲ್ಲದೆ, ಸಮರ್ಪಣಾ ಭಾವದಿಂದ ಸೇವಾಭಾವದ ಇಚ್ಛಾಶಕ್ತಿಯನ್ನು ಸ್ಥಿರವಾಗಿಸುತ್ತದೆ" ಎಂದು ಅವರು ಹೇಳಿದರು.
"ಗುರುನಾನಕ್ ದೇವ್ ಅವರ ಚಿಂತನೆಗಳಿಂದ ಪ್ರೇರಿತರಾಗಿ, ದೇಶವು 130 ಕೋಟಿ ಭಾರತೀಯರ ಕ್ಷೇಮಾಭಿವೃದ್ಧಿಯ ಸ್ಫೂರ್ತಿಯೊಂದಿಗೆ ಮುನ್ನಡೆಯುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಆಧ್ಯಾತ್ಮಿಕ ಜ್ಞಾನೋದಯ, ಲೌಕಿಕ ಸಮೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕಾಗಿ ಗುರು ನಾನಕ್ ದೇವ್ ಅವರ ಬೋಧನೆಯನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಆಜಾದಿ ಕಾ ಅಮೃತ ಕಾಲದಲ್ಲಿ, ದೇಶವು ರಾಷ್ಟ್ರದ ವೈಭವ ಮತ್ತು ಆಧ್ಯಾತ್ಮಿಕ ಅಸ್ಮಿತೆಯ ಬಗ್ಗೆ ಹೆಮ್ಮೆಯ ಭಾವನೆಯನ್ನು ಪುನಶ್ಚೇತನಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅತ್ಯುನ್ನತ ಕರ್ತವ್ಯ ಪ್ರಜ್ಞೆಯನ್ನು ಉತ್ತೇಜಿಸುವ ಸಲುವಾಗಿ, ದೇಶವು ಈ ಕಾಲಘಟ್ಟವನ್ನು ಕರ್ತವ್ಯ ಕಾಲ ಎಂದು ಆಚರಿಸಲು ನಿರ್ಧರಿಸಿದೆ. ಆಜಾದಿ ಕಾ ಅಮೃತ ಕಾಲದ ಈ ಹಂತದಲ್ಲಿ ಸಮಾನತೆ, ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಏಕತೆಯ ಕಾರ್ಯಗಳು ಎಲ್ಲರೊಂದಿಗೆ ಎಲ್ಲರ ವಿಕಾಸ, ಎಲ್ಲರ ವಿಶ್ವಾಸ, ಎಲ್ಲರ ಪ್ರಯತ್ನಗಳೊಂದಿಗೆ ಮುನ್ನಡೆಯುತ್ತಿವೆ ಎಂದು ಅವರು ಹೇಳಿದರು. "ಗುರ್ಬಾನಿಯಿಂದ ನಾವು ಪಡೆದ ಮಾರ್ಗದರ್ಶನವು ಸಂಪ್ರದಾಯ, ನಂಬಿಕೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವಾಗಿದೆ" ಎಂದು ಅವರು ಹೇಳಿದರು.
ಗುರುಜೀ ಅವರ ಬೋಧನೆಯ ಶಾಶ್ವತ ಪ್ರಸ್ತುತತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ಗುರು ಗ್ರಂಥಾಸಾಹಿಬ್ ರೂಪದಲ್ಲಿ ನಾವು ಹೊಂದಿರುವ ಅಮೃತದ ಮಹಿಮೆಯು, ಅದರ ಮಹತ್ವವು ಕಾಲಾತೀತ ಮತ್ತು ಭೌಗೋಳಿಕತೆಯ ಮಿತಿಗಳನ್ನು ಮೀರಿದ್ದು ಎಂದರು. ಬಿಕ್ಕಟ್ಟು ದೊಡ್ಡದಾದಾಗ, ಈ ಪರಿಹಾರಗಳ ಪ್ರಸ್ತುತತೆ ಇನ್ನೂ ಹೆಚ್ಚಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಜಗತ್ತಿನಲ್ಲಿ ಅಶಾಂತಿ ಮತ್ತು ಅಸ್ಥಿರತೆಯ ಸಮಯದಲ್ಲಿ, ಗುರು ಸಾಹಿಬ್ ಅವರ ಬೋಧನೆಗಳು ಮತ್ತು ಗುರುನಾನಕ್ ದೇವ್ ಅವರ ಜೀವನವು ಜಗತ್ತಿಗೆ ಒಂದು ದೀಪದಂತೆ ದಿಕ್ಕನ್ನು ತೋರಿಸುತ್ತಿವೆ. ನಮ್ಮ ಗುರುಗಳ ಆದರ್ಶಗಳನ್ನು ನಾವು ಹೆಚ್ಚು ಹೆಚ್ಚು ಪಾಲಿಸುತ್ತಾ ಜೀವಿಸಿದಷ್ಟೂ ನಾವು 'ಏಕ ಭಾರತ ಶ್ರೇಷ್ಠ ಭಾರತ'ದ ಪ್ರಜ್ಞೆಯನ್ನು ಸಾಕಾರಗೊಳಿಸುತ್ತೇವೆ, ನಾವು ಮಾನವೀಯತೆಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದಷ್ಟೂ, ಗುರು ಸಾಹೇಬರ ಬೋಧನೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು.
ಗುರುನಾನಕ್ ದೇವ್ ಅವರ ಆಶೀರ್ವಾದದಿಂದ ಕಳೆದ 8 ವರ್ಷಗಳಲ್ಲಿ ಶ್ರೇಷ್ಠ ಸಿಖ್ ಪರಂಪರೆಯ ಸೇವೆ ಸಲ್ಲಿಸುವ ಅವಕಾಶ ತಮಗೆ ದೊರೆತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಯಾತ್ರಾರ್ಥಿಗಳ ಅನುಕೂಲಕ್ಕಾಗಿ ದೆಹಲಿ ಉನಾ ವಂದೇ ಭಾರತ್ ಎಕ್ಸ್ ಪ್ರೆಸ್, ಗೋವಿಂದ್ ಘಾಟ್ ನಿಂದ ಹೇಮಕುಂಡ್ ಸಾಹಿಬ್ ವರೆಗಿನ ರೋಪ್ ವೇಗೆ ಶಂಕುಸ್ಥಾಪನೆ ನೆರವೇರಿಸಿದ್ದನ್ನು ಅವರು ಉಲ್ಲೇಖಿಸಿದರು. ಗುರು ಗೋವಿಂದ್ ಸಿಂಗ್ ಜಿ ಮತ್ತು ದೆಹಲಿ ಕಟ್ರ, ಅಮೃತಸರ ಎಕ್ಸ್ ಪ್ರೆಸ್ ಮಾರ್ಗಕ್ಕೆ ಸಂಬಂಧಿಸಿದ ಸ್ಥಳಗಳ ವಿದ್ಯುದೀಕರಣವು ಸಹ ಅನುಕೂಲತೆ ಹೆಚ್ಚಿಸುತ್ತದೆ. ಇದಕ್ಕಾಗಿ ಸರ್ಕಾರ 35 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಈ ಪ್ರಯತ್ನಗಳು ಸೌಕರ್ಯ ಮತ್ತು ಪ್ರವಾಸೋದ್ಯಮದ ಸಾಮರ್ಥ್ಯಕ್ಕೂ ಮಿಗಿಲಾಗಿದೆ, ಇದು ನಮ್ಮ ನಂಬಿಕೆ, ಸಿಖ್ ಪರಂಪರೆ, ಸೇವೆ, ಪ್ರೀತಿ ಮತ್ತು ಭಕ್ತಿಯ ಸ್ಥಳಗಳ ಶಕ್ತಿಯ ಕುರಿತದ್ದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ತೆರೆದ, ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ ನ ಪವಿತ್ರ ರೂಪಗಳನ್ನು ಮರಳಿ ತಂದ ಮತ್ತು ಸಾಹಿಬ್ ಜಾದೆಗಳ ಸರ್ವೋಚ್ಚ ತ್ಯಾಗದ ಗೌರವಾರ್ಥ ಡಿಸೆಂಬರ್ 26ನ್ನು ವೀರ್ ಬಾಲ್ ದಿವಸ್ ಎಂದು ಘೋಷಿಸಿರುವುದು ಮುಂತಾದ ಕ್ರಮಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. "ವಿಭಜನೆಯಲ್ಲಿ ನಮ್ಮ ಪಂಜಾಬಿನ ಜನರು ಮಾಡಿದ ತ್ಯಾಗದ ಸ್ಮರಣಾರ್ಥ, ದೇಶವು ವಿಭಾಜನ್ ವಿಭೀಷಿಕಾ ಸ್ಮೃತಿ ದಿನವನ್ನು ಸಹ ಆಚರಿಸಲು ಪ್ರಾರಂಭಿಸಿದೆ. ಸಿಎಎ ಕಾಯ್ದೆಯನ್ನು ತರುವ ಮೂಲಕ ವಿಭಜನೆಯಿಂದ ಬಾಧಿತರಾದ ಹಿಂದೂ-ಸಿಖ್ ಕುಟುಂಬಗಳಿಗೆ ಪೌರತ್ವ ನೀಡುವ ಮಾರ್ಗವನ್ನು ರಚಿಸಲು ನಾವು ಪ್ರಯತ್ನಿಸಿದ್ದೇವೆ", ಎಂದು ಪ್ರಧಾನಮಂತ್ರಿ ಹೇಳಿದರು.
"ಗುರುಗಳ ಆಶೀರ್ವಾದದೊಂದಿಗೆ, ಭಾರತವು ತನ್ನ ಸಿಖ್ ಸಂಪ್ರದಾಯದ ವೈಭವವನ್ನು ಹೆಚ್ಚಿಸುತ್ತಲೇ ಇರುತ್ತದೆ ಮತ್ತು ಪ್ರಗತಿಯ ಪಥದಲ್ಲಿ ಮುಂದುವರಿಯುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಪಿಐಬಿ ಸಂಗ್ರಹದಿಂದ ಸಂಬಂಧಿತ ಮಾಹಿತಿ
http://ಕೆಂಪು ಕೋಟೆಯಲ್ಲಿ ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400 ನೇ ಪ್ರಕಾಶ್ ಪೂರಬ್ ಆಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ: 21 ಏಪ್ರಿಲ್ 2022ರಂದು ಪ್ರಕಟಿಸಲಾಗಿದೆ
http://ಪಂಜಾಬ್ ನ ಗುರುದಾಸ್ಪುರದ ಡೇರಾ ಬಾಬಾ ನಾನಕ್ ನಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ:
http://09 ನವೆಂಬರ್ 2019 ರಂದು ಪ್ರಕಟಿಸಲಾಗಿದೆ: ಶ್ರೀ ಗುರು ತೇಗ್ ಬಹದ್ದೂರ್ ಜೀ ಅವರ 400 ನೇ ಜಯಂತಿ (ಪ್ರಕಾಶ್ ಪೂರಬ್) ಆಚರಣೆ ಕುರಿತ ಉನ್ನತ ಮಟ್ಟದ ಸಮಿತಿಯಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ.
http://ದಿನಾಂಕ: 08 ಏಪ್ರಿಲ್ 2021 ರಂದು ಪ್ರಕಟಿಸಲಾಗಿದೆ. ಗುಜರಾತ್ ನ ಕಚ್ ನ ಗುರುದ್ವಾರ ಲಖಪತ್ ಸಾಹಿಬ್ ನಲ್ಲಿ ಗುರುಪೂರಾಬ್ ಆಚರಣೆಯ ಕುರಿತು ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ:
http://25 ಡಿಸೆಂಬರ್ 2021 ರಂದು ಪ್ರಕಟಿಸಲಾಗಿದೆ. ದಿನಾಂಕ 05.01.2017 ರಂದು ಬಿಹಾರದ ಪಾಟ್ನಾದಲ್ಲಿ ನಡೆದ ಶ್ರೀ ಗುರು ಗೋವಿಂದ್ ಸಿಂಗ್ ಮಹಾರಾಜ್ ಅವರ 350 ನೇ ಜಯಂತಿ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ.
http://2019ರ ಜನವರಿ 13ರಂದು ಗುರು ಗೋವಿಂದ್ ಸಿಂಗ್ ಅವರ ಜನ್ಮ ಜಯಂತಿ ಅಂಗವಾಗಿ ಸ್ಮರಣಾರ್ಥ ನಾಣ್ಯ ಬಿಡುಗಡೆ
****
(Release ID: 1874516)
Visitor Counter : 174
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam