ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕುನೊದಲ್ಲಿ ಚೀತಾಗಳ ಸುದ್ದಿ ಹಂಚಿಕೊಂಡ ಪ್ರಧಾನ ಮಂತ್ರಿ

प्रविष्टि तिथि: 06 NOV 2022 9:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಡ್ಡಾಯ ಕ್ವಾರಂಟೈನ್ ನಂತರ, ಕುನೊ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ಇಂದು ಮಾಹಿತಿ ನೀಡಿದರು.

ಈ ಸಂಬಂಧ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ:

" ಒಳ್ಳೆಯ ಸುದ್ದಿ! ಕಡ್ಡಾಯ ಕ್ವಾರಂಟೈನ್ ನಂತರ, ಕುನೊ ಆವಾಸಸ್ಥಾನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎಲ್ಲ ಚೀತಾಗಳು ಆರೋಗ್ಯಕರವಾಗಿವೆ, ಸಕ್ರಿಯವಾಗಿವೆ ಮತ್ತು ಉತ್ತಮವಾಗಿ ಹೊಂದಿಕೊಳ್ಳುತ್ತವೆ ಎಂದು ತಿಳಿಯಲು ನನಗೆ ಸಂತೋಷವಾಗಿದೆ," ಎಂದರು.

***


(रिलीज़ आईडी: 1874090) आगंतुक पटल : 197
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam