ಸಂಪುಟ
azadi ka amrit mahotsav

ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದ ಹೊಲೊಂಗಿಯಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ "ದೋನ್ಯಿ ಪೋಲೊ ವಿಮಾನ ನಿಲ್ದಾಣ, ಇಟಾನಗರ" ಎಂದು ಹೆಸರಿಸಲು ಸಂಪುಟದ ಅನುಮೋದನೆ


​​​​​​​ಈ ಹೆಸರು ಅರುಣಾಚಲ ಪ್ರದೇಶದ ಜನರು ಸೂರ್ಯ (ದೋನ್ಯಿ) ಮತ್ತು ಚಂದ್ರ (ಪೋಲೊ) ನೀಡುವ  ಗೌರವವನ್ನು ಪ್ರತಿಬಿಂಬಿಸುತ್ತದೆ.

Posted On: 02 NOV 2022 3:04PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಇಟಾನಗರದ ಹೊಲೊಂಗಿಯಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ “ದೋನ್ಯಿ ಪೋಲೊ ವಿಮಾನ ನಿಲ್ದಾಣ, ಇಟಾನಗರ” ಎಂದು ನಾಮಕರಣ ಮಾಡಲು ಅನುಮೋದನೆ ನೀಡಿದೆ.

ಅರುಣಾಚಲ ಪ್ರದೇಶ ರಾಜ್ಯ ಸರ್ಕಾರವು ವಿಮಾನ ನಿಲ್ದಾಣವನ್ನು 'ದೋನ್ಯಿ ಪೋಲೋ ವಿಮಾನ ನಿಲ್ದಾಣ, ಇಟಾನಗರ' ಎಂದು ಹೆಸರಿಸಲು ನಿರ್ಣಯವನ್ನು ಅಂಗೀಕರಿಸಿತ್ತು, ಇದು ರಾಜ್ಯದ ಸಂಪ್ರದಾಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಕೇತಿಸುವ ಸೂರ್ಯ (ದೋನ್ಯಿ) ಮತ್ತು ಚಂದ್ರ (ಪೋಲೋ) ನಿಗೆ ಜನರು ತೋರುವ ಗೌರವವನ್ನು ಪ್ರತಿಬಿಂಬಿಸುತ್ತದೆ. 

ಜನವರಿ, 2019 ರಲ್ಲಿ ಹೊಲೊಂಗಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಭಾರತ ಸರ್ಕಾರ ತಾತ್ವಿಕ' ಅನುಮೋದನೆಯನ್ನು ನೀಡಿತ್ತು. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದ ಸಹಾಯದಿಂದ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) 646 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿದೆ.

*****


(Release ID: 1873118) Visitor Counter : 172