ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಏಕ್ತಾ ನಗರ್ ದಲ್ಲಿ ಮೇಜ್ ಉದ್ಯಾನವನ ಮತ್ತು ಮಿಯಾವಕಿ ಅರಣ್ಯವನ್ನು ಸಮರ್ಪಣೆ ಮಾಡಿದ ಪ್ರಧಾನಮಂತ್ರಿ
Posted On:
30 OCT 2022 7:25PM by PIB Bengaluru
ಗುಜರಾತ್ ನ ಏಕ್ತಾ ನಗರ್ ದಲ್ಲಿ ಮೇಜ್ ಉದ್ಯಾನವನ ಮತ್ತು ಮಿಯಾವಕಿ ಅರಣ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಮರ್ಪಣೆ ಮಾಡಿದರು.
ಬುದ್ಧನ ಪ್ರತಿಮೆ ಸೇರಿದಂತೆ ಅರಣ್ಯದ ಹಾದಿಯಲ್ಲಿ ಸಂಚರಿಸಿದ ಪ್ರಧಾನಮಂತ್ರಿ ಅವರು ತರುವಾಯ ಮೇಜ್ ಉದ್ಯಾನವನಕ್ಕೆ ತೆರಳಿದರು ಮತ್ತು ಅವರು ವಿಶ್ರಾಂತಿ ಗೃಹದ ಹೊಸ ಕಟ್ಟಡ ಮತ್ತು ಒವೈಒ ದೋಣಿ ಮನೆಯನ್ನು ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು ಮೇಜ್ ಉದ್ಯಾಯನವನದಲ್ಲಿ ಓಡಾಡಿದರು.
ಹಿನ್ನೆಲೆ
ರಾಜ್ಯದ ಏಕತಾ ಪ್ರತಿಮೆಯಲ್ಲಿ ಮಿಯಾವಕಿ ಅರಣ್ಯ ಮತ್ತು ಮೇಜ್ ಉದ್ಯಾನವನಗಳು ಹೊಸ ಆಕರ್ಷಣೆಯಾಗಿವೆ. ನಾಲ್ಕು ವರ್ಷಗಳ ಹಿಂದೆ ಏಕತಾ ಪ್ರತಿಮೆಯನ್ನು ಉದ್ಘಾಟಿಸಲಾಗಿದ್ದು, ಇದು ಎಲ್ಲಾ ವಯೋಮಿತಿಯವರಿಗೆ ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರಧಾನಮಂತ್ರಿ ಅವರ ದೃಷ್ಟಿಕೋನದ ತಾಣವಾಗಿದೆ. ಇದರ ಪರಿಣಾಮ ಈ ವರೆಗೆ 8 ದಶಲಕ್ಷ ಮಂದಿ ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ.
2,100 ಮೀಟರ್ ಮಾರ್ಗದೊಂದಿಗೆ ಮೂರು ಎಕರೆಗಳಷ್ಟು ವಿಸ್ತಾರವಾಗಿರುವ ಇದು ಎಂಟು ತಿಂಗಳ ಅಲ್ಪಾವಧಿಯಲ್ಲಿ ಅಭಿವೃದ್ಧಿಪಡಿಸಲಾದ ದೇಶದ ಅತಿ ದೊಡ್ಡ ಜಟಿಲ ಉದ್ಯಾನವನವಾಗಿದೆ. ಮೇಜ್ ಉದ್ಯಾನವನ್ನು ಯಂತ್ರದ ಸ್ವರೂಪದಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಸಕಾರಾತ್ಮಕ ಶಕ್ತಿ ಹೊರ ಹೊಮ್ಮುವ ನಿರೀಕ್ಷೆ ಹೊಂದಲಾಗಿದೆ. ಈ ವಿನ್ಯಾಸವನ್ನು ಆಯ್ಕೆ ಮಾಡುವ ಪ್ರಮುಖ ಉದ್ದೇಶವೆಂದರೆ ಸಂಕಿರ್ಣ ಜಾಲವನ್ನು ನಿರ್ಮಾಣಗೊಳ್ಳುವುದನ್ನು ಇದು ಕೇಂದ್ರೀಕರಿಸಿಗೊಂಡಿದೆ. ಈ ಉದ್ಯಾನವನದ ಮಾರ್ಗಗಳಲ್ಲಿ ಸಂಚರಿಸುವುದರಿಂದ ಪ್ರವಾಸಿಗರ ಮನಸ್ಸು, ದೇಹ ಮತ್ತು ಇಂದ್ರಿಯಗಳು ಸವಾಲಿನಿಂದ ಕೂಡಿರುತ್ತದೆ. ಸಾಹಸದ ಪ್ರಜ್ಞೆ ಹುಟ್ಟುಹಾಕುವಾಗ ಅಡೆತಡೆಗಳ ಮೇಲೆ ವಿಜಯದ ಭಾವನೆ ಮೂಡಿಸುತ್ತದೆ. ಮೇಜ್ ಉದ್ಯಾನವನ ಸಮೀಪದಲ್ಲಿ 1,80,000 ಗಿಡಗಳನ್ನು ನೆಟ್ಟಿದ್ದು, ಆರೆಂಜ್ ಜಮಿನಿ, ಮಧು ಕಾಮಿನಿ, ಗ್ಲೋರಿ ಬೋವರ್ ಮತ್ತು ಮೆಹಂದಿ ಗಿಡಗಳನ್ನು ಇದು ಒಳಗೊಂಡಿದೆ. ಜಟಿಲ ಉದ್ಯಾನವನದ ಸ್ಥಳ ಮೂಲತಃ ಶಿಲಾಖಂಡ ರಾಶಿಗಳ ತಾಣವಾಗಿದ್ದು, ಅದು ಈಗ ಹಸಿರು ಭೂ ಪ್ರದೇಶವಾಗಿ ಮಾರ್ಪಟ್ಟಿದೆ. ಈ ಬಂಜರು ಭೂಮಿಯ ಪುನರುಜ್ಜೀವನವು ಆಸುಪಾಸಿನ ಪರಿಸರವನ್ನು ಸುಂದರಗೊಳಿಸುವುದಲ್ಲದೇ ಪಕ್ಷಿಗಳು, ಚಿಟ್ಟೆಗಳು ಮತ್ತು ಜೇನುನೋಣಗಳು ಅಭಿವೃದ್ದಿಹೊಂದುವ ರೋಚಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಸಹಕಾರಿಯಾಗಲಿದೆ.
ಏಕ್ತಾ ನಗರಕ್ಕೆ ಭೇಟಿ ನೀಡಲಿರುವವರಿಗೆ ಮಿಯಾವಕಿ ಅರಣ್ಯ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಲಿದೆ. ಜಪಾನಿನ ಸಸ್ಯ ಶಾಸ್ತ್ರಜ್ಞ ಮತ್ತು ಪರಿಸರ ತಜ್ಞ ಡಾ. ಅಕಿರಾ ಮಿಯಾವಕಿ ಅವರು ವಿವಿಧ ಜಾತಿಗಳ ಸಸ್ಯಗಳನ್ನು ನೆಡಲು ಅಭಿವೃದ್ಧಿಪಡಿಸಿದ ತಂತ್ರಗಾರಿಕೆ ಅಳವಡಿಕೆ ನಂತರ ಈ ಅರಣ್ಯಕ್ಕೆ ಮಿಯಾವಕಿ ಎಂದು ಹೆಸರಿಡಲಾಗಿದೆ ಮತ್ತು ಇದು ದಟ್ಟ ನಗರ ಅರಣ್ಯವಾಗಿ ಬೆಳೆಯಲಿದೆ. ಈ ವಿಧಾನದಿಂದ ಗಿಡಗಳು ಹತ್ತುಪಟ್ಟ ತ್ವರಿತವಾಗಿ ಬೆಳೆಯುತ್ತವೆ ಮತ್ತು ಇದರ ಫಲಿತಾಂಶದಿಂದ ಅರಣ್ಯ ಮೂವತ್ತು ಪಟ್ಟು ದಟ್ಟವಾಗಲಿದೆ. ಮಯಾವಕಿ ವಿಧಾನದಿಂದ ಅರಣ್ಯ ಬೆಳೆಸಲು ಸಾಂಪ್ರದಾಯಿಕವಾಗಿ 30 ರಿಂದ 40 ವರ್ಷ ತೆಗೆದುಕೊಳ್ಳುವ ಸಮಯ ಕೇವಲ ಮೂರರಿಂದ ನಾಲ್ಕು ವರ್ಷಕ್ಕೆ ತಗ್ಗಲಿದೆ. ಮಿಯಾವಕಿ ಅರಣ್ಯ ಈ ಕೆಳಕಂಡ ವಿಭಾಗಗಳನ್ನು ಒಳಗೊಂಡಿದೆ. ಹೂವಿನ ಉದ್ಯಾನವನ, ಮರದ ಉದ್ಯಾನವನ, ಹಣ್ಣುಗಳ ಉದ್ಯಾನವನ, ಔಷಧ ಉದ್ಯಾನವನ, ಮಿಶ್ರ ಜಾತಿಗಳ ಮಿಯಾವಕಿ ವಿಭಾಗ ಮತ್ತು ಡಿಜಿಟಲ್ ತರಬೇತಿ ಕೇಂದ್ರವನ್ನು ಇದು ಹೊಂದಿದೆ.
ಅಸಂಖ್ಯಾತ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲು ಈ ಅಭಿವೃದ್ಧಿ ಪ್ರವಾಸಿಗರಿಗೆ ಅವರ ಭೇಟಿ ಸಮಯದಲ್ಲಿ ಸಮಗ್ರ ಅನುಭವವನ್ನು ಒದಗಿಸುವ ಪ್ರಧಾನಮಂತ್ರಿ ಅವರ ದೂರದೃಷ್ಟಿಯಿಂದ ನಿರ್ದೇಶಿಲ್ಪಟ್ಟಿದೆ ಮತ್ತು ಇದು ಏಕರೂಪದ ಅನುಭವವಾಗಿ ಉಳಿಯುವುದಿಲ್ಲ. ಪ್ರಕೃತಿಯೊಂದಿಗೆ ಈ ಆಕರ್ಷಣೆಯ ನಿಕಟ ಸಂಬಂಧದ ಪರಿಸರ ವ್ಯವಸ್ಥೆಯನ್ನು ಇದು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಸಂಸ್ಕೃತಿಯಲ್ಲಿ ಅದಕ್ಕೆ ನೀಡಿರುವ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ. ವಿಶೇಷ ನಿದರ್ಶನವೆಂದರೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮೇಜ್ ಉದ್ಯಾನವನ, ಅದರ ವಿನ್ಯಾಸ ನಮ್ಮ ಸಂಸ್ಕೃತಿಯಲ್ಲಿ ನಿರಂತರವಾಗಿ ಹರಿಯುತ್ತದೆ ಮತ್ತು ಸಕಾರಾತ್ಮಕತೆಯ ಚಿಂತನೆಗಳನ್ನು ಪಸರಿಸಲು ಪ್ರಕೃತಿ ಹೇಗೆ ಪ್ರಬಲ ಸಾಧನವಾಗಿದೆ ಎಂಬುದನ್ನು ಇದು ಪ್ರತಿಂಬಿಸುತ್ತದೆ.
ಏಕತಾ ಪ್ರತಿಮೆಯ ಪ್ರಮುಖ ಪ್ರವಾಸಿ ಗಾಣಗಳೆಂದರೆ ಟೆಂಟ್ ನಗರ, ಆರೋಗ್ಯ ವನ [ಹರ್ಬಲ್ ಗಾರ್ಡನ್], ಚಿಟ್ಟೆಗಳ ಉದ್ಯಾನವ, ಪಾಪಸ್ಸು ಕಳ್ಳಿ ಉದ್ಯಾನವನ, ವಿಶ್ವ ವನ, ಹೂವುಗಳ ಕಣಿವೆ [ಭಾರತ ವನ], ಏಕತೆ ಮೆರಗಿನ ಉದ್ಯಾನವನ, ಮಕ್ಕಳ ಪೌಷ್ಟಿಕ ಉದ್ಯಾನವನ, ಅರಣ್ಯ ಸಫಾರಿ [ಅತ್ಯಾಧುನಿಕ ಪ್ರಾಣಿಗಳ ಉದ್ಯಾನವನ]ಯನ್ನು ಇದು ಒಳಗೊಂಡಿದೆ.
*****
(Release ID: 1872877)
Visitor Counter : 193
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam