ಗೃಹ ವ್ಯವಹಾರಗಳ ಸಚಿವಾಲಯ

2022ರ ಅಕ್ಟೋಬರ್ 27 ಮತ್ತು 28 ರಂದು ಹರಿಯಾಣದ ಸೂರಜ್ ಕುಂಡ್ ನಲ್ಲಿ ನಡೆಯಲಿರುವ 'ರಾಜ್ಯಗಳ ಗೃಹ ಸಚಿವರ ಚಿಂತನ ಶಿಬಿರ'ದ ಅಧ್ಯಕ್ಷತೆ ವಹಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


2022ರ ಅಕ್ಟೋಬರ್ 28 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಿಂತನ ಶಿಬಿರ ಉದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಚಿಂತನ ಶಿಬಿರದಲ್ಲಿ ಭಾಗವಹಿಸಲಿರುವ ರಾಜ್ಯಗಳ ಗೃಹ ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಪ ರಾಜ್ಯಪಾಲರುಗಳು ಮತ್ತು ಆಡಳಿತಗಾರರು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ' 2047 ಮುನ್ನೋಟ' ಮತ್ತು ಪಂಚ ಪ್ರಾಣದ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು ಚಿಂತನ ಶಿಬಿರದ ಉದ್ದೇಶವಾಗಿದೆ

ಸೈಬರ್ ಅಪರಾಧ ನಿರ್ವಹಣೆಗಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು, ಪೊಲೀಸ್ ಪಡೆಗಳ ಆಧುನೀಕರಣ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಐಟಿಯ ಬಳಕೆಯ ವರ್ಧನೆ, ಭೂ ಗಡಿ ನಿರ್ವಹಣೆ ಮತ್ತು ಕರಾವಳಿ ಭದ್ರತೆ ಹಾಗೂ ಇತರ ಆಂತರಿಕ ಭದ್ರತೆಯಂತಹ ವಿಷಯಗಳ ಬಗ್ಗೆ ಚರ್ಚಿಸಲಿರುವ ಸಮ್ಮೇಳನ

'2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ'ದ ಗುರಿಯನ್ನು ಸಾಧಿಸಲು 'ನಾರಿ ಶಕ್ತಿ'ಯ ಪಾತ್ರ ಮಹತ್ವದ್ದಾಗಿದ್ದು, ಮಹಿಳೆಯರ ಸುರಕ್ಷತೆಗೆ ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ವಿಶೇಷ ಒತ್ತು ನೀಡಲಾಗುವುದು

ರಾಷ್ಟ್ರೀಯ ನೀತಿ ನಿರೂಪಣೆ ಮತ್ತು ಉತ್ತಮ ಯೋಜನೆ ಮತ್ತು ಸಮನ್ವಯವನ್ನು ಸುಗಮಗೊಳಿಸುವುದು ಸಹ ಸಮ್ಮೇಳನದ ಉದ್ದೇಶವಾಗಿದೆ

ಸಮ್ಮೇಳನದ ಮೊದಲ ದಿನ, ಗೃಹರಕ್ಷಕ ದಳ, ಪೌರ ರಕ್ಷಣೆ, ಅಗ್ನಿಶಾಮಕ, ಶತ್ರು ಆಸ್ತಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು

ಎರಡನೇ ದಿನ, ಸೈಬರ್ ಭದ್ರತೆ, ಮಾದಕವಸ್ತು ಕಳ್ಳಸಾಗಣೆ, ಮಹಿಳಾ ಭದ್ರತೆ ಮತ್ತು ಗಡಿ ನಿರ್ವಹಣೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು

ಈ ವಿಷಯಗಳಲ್ಲಿ ರಾಜ್ಯ ಸರ್ಕಾರಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಖಾತ್ರಿಪಡಿಸಿಕೊಳ್ಳುವುದು ವಿವಿಧ ವಿಷಯಗಳ ಮೇಲಿನ ಗೋಷ್ಠಿಗಳ ಉದ್ದೇಶವಾಗಿದೆ

Posted On: 26 OCT 2022 1:18PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು 2022 ರ ಅಕ್ಟೋಬರ್ 27 ಮತ್ತು 28 ರಂದು ಹರಿಯಾಣದ ಸೂರಜ್ ಕುಂಡ್ ನಲ್ಲಿ ನಡೆಯಲಿರುವ ರಾಜ್ಯಗಳ 'ಗೃಹ ಸಚಿವರ ಚಿಂತನ ಶಿಬಿರ'ದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಅಕ್ಟೋಬರ್ 28 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಿಂತನ ಶಿಬಿರವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎಲ್ಲಾ ರಾಜ್ಯಗಳ ಗೃಹ ಸಚಿವರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉಪ ರಾಜ್ಯಪಾಲರುಗಳು ಮತ್ತು ಆಡಳಿತಗಾರರನ್ನು ಎರಡು ದಿನಗಳ ಚಿಂತನ ಶಿಬಿರದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ರಾಜ್ಯ ಗೃಹ ಕಾರ್ಯದರ್ಶಿಗಳು, ಪೊಲೀಸ್ ಮಹಾನಿರ್ದೇಶಕರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮಹಾನಿರ್ದೇಶಕರು ಚಿಂತನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ " 2047ರ ಮುನ್ನೋಟ" ಮತ್ತು 'ಪಂಚ ಪ್ರಾಣ' ಗಳ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು ಎರಡು ದಿನಗಳ ಚಿಂತನ ಶಿಬಿರದ ಉದ್ದೇಶವಾಗಿದೆ. ಗೃಹ ಸಚಿವರ ಸಮಾವೇಶದಲ್ಲಿ, ಸೈಬರ್ ಅಪರಾಧ ನಿರ್ವಹಣೆಗಾಗಿ ಪರಿಸರ ವ್ಯವಸ್ಥೆಯ ಅಭಿವೃದ್ಧಿ, ಪೊಲೀಸ್ ಪಡೆಗಳ ಆಧುನೀಕರಣ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಐಟಿ ಬಳಕೆ ಹೆಚ್ಚಳ, ಭೂ ಗಡಿ ನಿರ್ವಹಣೆ ಮತ್ತು ಕರಾವಳಿ ಭದ್ರತೆ ಹಾಗೂ ಇತರ ಆಂತರಿಕ ಭದ್ರತಾ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. '2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ'ದ ಗುರಿಯನ್ನು ಸಾಧಿಸಲು 'ನಾರಿ ಶಕ್ತಿ'ಯ ಪಾತ್ರ ಮಹತ್ವದ್ದಾಗಿದೆ ಮತ್ತು ಮಹಿಳೆಯರ ಸುರಕ್ಷತೆ ಮತ್ತು ಅವರಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ವಿಶೇಷ ಒತ್ತು ನೀಡಲಾಗುವುದು. ರಾಷ್ಟ್ರೀಯ ನೀತಿ ನಿರೂಪಣೆ ಮತ್ತು ಮೇಲೆ ತಿಳಿಸಿದ ಕ್ಷೇತ್ರಗಳಲ್ಲಿ ಉತ್ತಮ ಯೋಜನೆ ಮತ್ತು ಸಮನ್ವಯವನ್ನು ಸುಗಮಗೊಳಿಸುವುದು ಸಹ ಸಮ್ಮೇಳನದ ಉದ್ದೇಶವಾಗಿದೆ.

'ಚಿಂತನ ಶಿಬಿರ'ದ ಆರು ಗೋಷ್ಠಿಗಳಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು. ಸಮ್ಮೇಳನದ ಮೊದಲ ದಿನ, ಗೃಹರಕ್ಷಕ ದಳ, ಪೌರ ರಕ್ಷಣೆ, ಅಗ್ನಿಶಾಮಕ ಮತ್ತು ಶತ್ರು ಆಸ್ತಿಯಂತಹ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಎರಡನೇ ದಿನ ಸೈಬರ್ ಭದ್ರತೆ, ಮಾದಕ ದ್ರವ್ಯ ಕಳ್ಳಸಾಗಣೆ, ಮಹಿಳೆಯರ ಸುರಕ್ಷತೆ ಮತ್ತು ಗಡಿ ನಿರ್ವಹಣೆಯಂತಹ ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು, ಎನ್.ಡಿ.ಪಿಎಸ್ ಕಾಯ್ದೆ, ಎಎನ್.ಸಿ.ಓ.ಆರ್.ಡಿ. ನಿಧಾನ್ ಮತ್ತು ನಶಾ ಮುಕ್ತ ಭಾರತ ಅಭಿಯಾನ ಸೇರಿದಂತೆ ಮಾದಕವಸ್ತು ಕಳ್ಳಸಾಗಣೆಯ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಯಲಿದೆ. ಭೂ ಗಡಿ ನಿರ್ವಹಣೆ ಮತ್ತು ಕರಾವಳಿ ಭದ್ರತೆಯ ವಿಷಯಗಳ ಅಡಿಯಲ್ಲಿ ಗಡಿಗಳ ರಕ್ಷಣೆ ಮತ್ತು ಗಡಿ ಪ್ರದೇಶಗಳ ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು. ಐಸಿಜೆಎಸ್ ಮತ್ತು ಸಿಸಿಟಿಎನ್ಎಸ್ ವ್ಯವಸ್ಥೆಗಳು ಮತ್ತು ಐಟಿ ಮಾದರಿಗಳಾದ ಎನ್ಎಎಫ್ಐಎಸ್, ಐಟಿಎಸ್ಎಸ್ಒ ಮತ್ತು ಎನ್.ಡಿ.ಎಸ್ಒ ಮತ್ತು ಕ್ರಿ-ಮ್ಯಾಕ್ ಅನ್ನು ಬಳಸಿಕೊಂಡ ತಂತ್ರಜ್ಞಾನ ಆಧಾರಿತ ತನಿಖೆಯ ಮೂಲಕ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾಗುವುದು. ಸುರಕ್ಷಿತ ನಗರ ಯೋಜನೆ, 112- ಏಕ ತುರ್ತುಸ್ಥಿತಿ ಸ್ಪಂದನೆ, ಜಿಲ್ಲೆಗಳಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ಘಟಕಗಳು, ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿಗಳು ಮತ್ತು ಮೀನುಗಾರರಿಗೆ ಬಯೋಮೆಟ್ರಿಕ್ ಗುರುತಿನ ಚೀಟಿಗಳಂತಹ ಉಪಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು. ಈ ವಿಷಯಗಳಲ್ಲಿ ರಾಜ್ಯ ಸರ್ಕಾರಗಳ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಖಾತ್ರಿಪಡಿಸಿಕೊಳ್ಳುವುದು ವಿವಿಧ ವಿಷಯಗಳ ಮೇಲಿನ ಚರ್ಚಾಗೋಷ್ಠಿಯ ಅಧಿವೇಶನಗಳ ಉದ್ದೇಶವಾಗಿದೆ.

******



(Release ID: 1870949) Visitor Counter : 134