ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರ ಭೇಟಿ, ವಿಶೇಷ ಅಭಿಯಾನ 2.0 ರ ಅಡಿಯಲ್ಲಿ ಅಹಮದಾಬಾದ್‌ನ ಡಿಡಿಕೆ ಯಶೋಗಾಥೆಯ ಹಿಂದಿನ ರಹಸ್ಯ

Posted On: 25 OCT 2022 6:03PM by PIB Bengaluru

ಸ್ವಚ್ಛತಾ ಅಭಿಯಾನ ಮತ್ತು ಬಾಕಿ ಉಳಿದಿರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನದ (ಎಸ್‌ಸಿಪಿಡಿಎಂ) 2.0 ರ ಭಾಗವಾಗಿ ಗೌರವಾನ್ವಿತ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅನುರಾಗ್‌ ಸಿಂಗ್‌ ಠಾಕೂರ್‌ ಅವರು 2022ರ ಸೆಪ್ಟೆಂಬರ್‌ 29 ರಂದು ಅಹಮದಾಬಾದ್‌ನ ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು . ಈ ಭೇಟಿಯ ಸುದ್ದಿಯು ಸಚಿವಾಲಯದ ಅಧಿಕಾರಿಗಳಲ್ಲಿ ಅತ್ಯುನ್ನತ ಉತ್ಸಾಹವನ್ನು ಉಂಟುಮಾಡಿ, ಈ ಅಭಿಯಾನವನ್ನು ಒಂದು ಮಹತ್ತರವಾದ ಯಶಸ್ಸನ್ನು ಸಾಧಿಸುವಂತೆ ಮಾಡಿದೆ. ಅವರ ಭೇಟಿಯಿಂದ ಉತ್ತೇಜಿತರಾದ ಅಹಮದಾಬಾದ್‌ ಡಿಡಿಕೆ, ಎಸ್‌ಸಿಪಿಡಿಎಂ 2.0 ಅಡಿಯಲ್ಲಿ ಅತ್ಯುತ್ತಮ ಸಾಧನೆಗಳನ್ನು ಈ ಕೆಳಗಿನಂತೆ ವರದಿ ಮಾಡಿದೆ.

* ಕಚೇರಿಯು ಸುಮಾರು 44 ಟ್ರ್ಯಾಕ್ಟರ್‌ ಲೋಡ್‌ ಹುಲ್ಲು, ಅನುಪಯುಕ್ತ ಸಸಿಗಳ ಬೆಳವಣಿಗೆ ಮತ್ತು ಕಸವನ್ನು ಕ್ಯಾಂಪಸ್‌ನಿಂದ ವಿಲೇವಾರಿ ಮಾಡಿದೆ.
* ಅನುಪಯುಕ್ತ ಸಸಿಗಳು ಮತ್ತು ವಿಷಕಾರಿ ಸರೀಸೃಪಗಳು ಅನುಪಯುಕ್ತ ಹುಲ್ಲುಅಥವಾ ಸಸಿಗಳ ಬೆಳವಣಿಗೆಗಳಲ್ಲಿ ನೆಲೆಗೊಂಡಿದ್ದವು ಮತ್ತು ಕ್ಯಾಂಪಸ್‌ನಿಂದ ಅವುಗಳನ್ನು ವಿಲೇವಾರಿ ಮಾಡಲಾಗಿದೆ.
* ಕಚೇರಿ 8558 ಕೆಜಿ ಕಾಗದದ ತ್ಯಾಜ್ಯ, 1250 ಕೆಜಿ ಪ್ಲಾಸ್ಟಿಕ್‌ ತ್ಯಾಜ್ಯ, 1355 ಕೆಜಿ ಮರದ ತ್ಯಾಜ್ಯ ಮತ್ತು 2755 ಕೆಜಿ ಲೋಹದ ತ್ಯಾಜ್ಯಗಳನ್ನು ಗುರುತಿಸಿ ವಿಲೇವಾರಿ ಮಾಡಲಾಗಿದೆ.
* ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡುವ ಮೂಲಕ ಇಲ್ಲಿಯವರೆಗೆ ಗಳಿಸಿದ ಒಟ್ಟು ಆದಾಯವು 20.40 ಲಕ್ಷ  ರೂಪಾಯಿಗಳಷ್ಟಿದೆ.
* 1070 ಭೌತಿಕ ಕಡತಗಳನ್ನು ಪರಿಶೀಲಿಸಲಾಗಿದ್ದು, 94 ಭೌತಿಕ ಕಡತಗಳನ್ನು ಹೊರತೆಗೆಯಲಾಗಿದೆ.
* ಸುಮಾರು 3900 ಚದರ ಅಡಿ ಒಳಾಂಗಣ ಸ್ಥಳ ಮತ್ತು ಸುಮಾರು 100 ಚದರ ಅಡಿ ಹೊರಾಂಗಣ ಸ್ಥಳವನ್ನು ಅಭಿಯಾನದ ಸಮಯದಲ್ಲಿ ಮುಕ್ತಗೊಳಿಸುವ ಸಾಧ್ಯತೆ ಇದೆ.

 

 

******



(Release ID: 1870913) Visitor Counter : 120