ಪ್ರಧಾನ ಮಂತ್ರಿಯವರ ಕಛೇರಿ
ಅಕ್ಟೋಬರ್ 16 ರಂದು 75 ಜಿಲ್ಲೆಗಳಾದ್ಯಂತ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ
ದೇಶದಲ್ಲಿ ಹಣಕಾಸು ಸೇವೆಗಳನ್ನು ಮತ್ತಷ್ಟು ಹೆಚ್ಚಿಸಲಿರುವ ಡಿಬಿಯುಗಳು
ಡಿಜಿಟಲ್ ಹಣಕಾಸು ಸಾಕ್ಷರತೆಯನ್ನು ಪಸರಿಸಿ, ಸೈಬರ್ ಭದ್ರತೆಯ ಅರಿವು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಹಕರಿಗೆ ಶಿಕ್ಷಣ ನೀಡಲಿರುವ ಡಿಬಿಯುಗಳು
ವರ್ಷಪೂರ್ತಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ವರ್ಧಿತ ಡಿಜಿಟಲ್ ಅನುಭವವನ್ನು ಒದಗಿಸಲಿರುವ ಡಿಬಿಯುಗಳು
Posted On:
14 OCT 2022 3:43PM by PIB Bengaluru
ಹಣಸೇವೆಗಳನ್ನು ಹೆಚ್ಚಿಸುವ ಮತ್ತೊಂದು ಕ್ರಮವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 16 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು (ಡಿಬಿಯು) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
2022-23ರ ಕೇಂದ್ರ ಬಜೆಟ್ ಭಾಷಣದಲ್ಲಿ, ನಮ್ಮ ದೇಶದ ಸ್ವಾತಂತ್ರ್ಯದ 75ನೇ ವರ್ಷದ ಸ್ಮರಣೆಗಾಗಿ ದೇಶದ 75 ಜಿಲ್ಲೆಗಳಲ್ಲಿ 75 ಡಿಬಿಯುಗಳನ್ನು ಸ್ಥಾಪಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದರು. ಡಿಜಿಟಲ್ ಬ್ಯಾಂಕಿಂಗ್ ನ ಪ್ರಯೋಜನಗಳು ದೇಶದ ಮೂಲೆ ಮೂಲೆಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಡಿಬಿಯುಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಇದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ. 11 ಸಾರ್ವಜನಿಕ ವಲಯದ ಬ್ಯಾಂಕುಗಳು, 12 ಖಾಸಗಿ ವಲಯದ ಬ್ಯಾಂಕುಗಳು ಮತ್ತು ಒಂದು ಸಣ್ಣ ಹಣಕಾಸು ಬ್ಯಾಂಕ್ ಈ ಪ್ರಯತ್ನದಲ್ಲಿ ಭಾಗಿಯಾಗಿವೆ.
ಡಿಬಿಯುಗಳು ಇಟ್ಟಿಗೆ ಮತ್ತು ಗಾರೆ ಮಳಿಗೆಗಳಾಗಿದ್ದು, ಉಳಿತಾಯ ಖಾತೆ ತೆರೆಯುವುದು, ಖಾತೆಯಲ್ಲಿರುವ ಹಣದ ವಿವರ ನೋಡುವುದು, ಪಾಸ್ ಪುಸ್ತಕದ ಮುದ್ರಣ, ನಿಧಿಗಳ ವರ್ಗಾವಣೆ, ಸ್ಥಿರ ಠೇವಣಿಗಳಲ್ಲಿ ಹೂಡಿಕೆ, ಸಾಲದ ಅರ್ಜಿಗಳು, ವಿತರಿಸಿದ ಚೆಕ್ ಗಳಿಗೆ ಹಣ ಪಾವತಿಸದಂತೆ (ಸ್ಟಾಪ್-ಪೇಮೆಂಟ್) ಸೂಚನೆಗಳು, ಕ್ರೆಡಿಟ್ / ಡೆಬಿಟ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸುವುದು, ಖಾತೆಯ ವಹಿವಾಟಿನ್ನು ನೋಡುವುದು, ತೆರಿಗೆಗಳನ್ನು ಪಾವತಿಸುವುದು, ಬಿಲ್ ಗಳನ್ನು ಪಾವತಿಸುವುದು, ನಾಮನಿರ್ದೇಶನಗಳನ್ನು ಮಾಡುವುದು ಮುಂತಾದ ವಿವಿಧ ಡಿಜಿಟಲ್ ಬ್ಯಾಂಕಿಂಗ್ ಇತ್ಯಾದಿ. ಸೌಲಭ್ಯಗಳನ್ನು ಜನರಿಗೆ ಒದಗಿಸುತ್ತವೆ.
ಡಿಬಿಯುಗಳು ಗ್ರಾಹಕರಿಗೆ ವರ್ಷವಿಡೀ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಕಡಿಮೆ ವೆಚ್ಚದ ಪರಿಣಾಮಕಾರಿ, ಅನುಕೂಲಕರ ಪ್ರವೇಶ ಮತ್ತು ವರ್ಧಿತ ಡಿಜಿಟಲ್ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಅವು ಡಿಜಿಟಲ್ ಹಣಕಾಸು ಸಾಕ್ಷರತೆಯನ್ನು ಪಸರಿಸುತ್ತವೆ ಮತ್ತು ಸೈಬರ್ ಭದ್ರತೆ ಜಾಗೃತಿ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಹಕರ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುತ್ತವೆ. ಅಲ್ಲದೆ, ಡಿಬಿಯುಗಳು ನೇರವಾಗಿ ಅಥವಾ ವ್ಯವಹಾರ ಆಯೋಜಕರು / ಬಾತ್ಮೀದಾರರುಗಳ ಮೂಲಕ ಒದಗಿಸುವ ವ್ಯವಹಾರ ಮತ್ತು ಸೇವೆಗಳಿಂದ ಉದ್ಭವಿಸುವ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಲು ಮತ್ತು ಸಕಾಲಿಕ ಸಹಾಯವನ್ನು ನೀಡಲು ಸಾಕಷ್ಟು ಡಿಜಿಟಲ್ ಕಾರ್ಯವಿಧಾನಗಳು ಇರುವಂತೆ ಮಾಡುತ್ತವೆ.
*******
(Release ID: 1868154)
Visitor Counter : 165
Read this release in:
Bengali
,
Tamil
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam