ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ʻರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರಗಳʼ (ಎನ್ಎಚ್ಎ) ಅಂದಾಜುಗಳಲ್ಲಿ, ವಿಶೇಷವಾಗಿ ಜನರು ಕಿಸೆಯಿಂದ ಭರಿಸುವ ಖರ್ಚಿನಲ್ಲಿ ಇಳಿಕೆ ಕುರಿತಾದ ಅಂದಾಜುಗಳಲ್ಲಿ ಕರಾರುವಕ್ಕತೆ ಇಲ್ಲ ಎಂದು ಸೂಚಿಸುವ ಸುದ್ದಿ ಅಥವಾ ವರದಿಯು ದಾರಿತಪ್ಪಿಸುವಂಥದ್ದು ಮತ್ತು ಸತ್ಯಕ್ಕೆ ದೂರವಾದುದು


ಕಿಸೆಯಿಂದ ಭರಿಸುವ ಆರೋಗ್ಯ ವೆಚ್ಚಗಳಲ್ಲಿ ಇಳಿಕೆಯು 2018-19ನೇ ಸಾಲಿನ ʻರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರʼದ (ʻಎನ್ಎಚ್ಎʼ) ದೃಢವಾದ ದತ್ತಾಂಶವನ್ನು ಆಧರಿಸಿದೆ

Posted On: 07 OCT 2022 1:47PM by PIB Bengaluru

ʻರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರʼಗಳಲ್ಲಿ(ಎನ್ಎಚ್ಎ) ವಿಶೇಷವಾಗಿ ಜನರು ಕಿಸೆಯಿಂದ ಭರಿಸುವ ಖರ್ಚಿನ (ಔಟ್‌ ಆಫ್‌ ಪಾಕೆಟ್‌ ಎಕ್ಸ್‌ಪೆಂಡಿಚರ್-ಒಒಪಿಇ) ಇಳಿಕೆ ಕುರಿತಾದ ಅಂಕಿ-ಅಂಶಗಳಲ್ಲಿ ಖಚಿತತೆ ಇಲ್ಲವೆಂದು ಸೂಚಿಸುವ ಸುದ್ದಿ ಅಥವಾ ವರದಿಯು ದಾರಿತಪ್ಪಿಸುವಂಥದ್ದು ಮತ್ತು ದೋಷಪೂರಿತ. ʻರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರಗಳುʼ(ಎನ್ಎಚ್ಎ) ದೇಶದ ಆರೋಗ್ಯ ವಲಯದಲ್ಲಿ ಮಾಡಿದ ವೆಚ್ಚದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತವೆ. ಈ ಅಂದಾಜುಗಳು ನಿರ್ಣಾಯಕವಾಗಿವೆ, ಏಕೆಂದರೆ ಅವು ದೇಶದ ಅಸ್ತಿತ್ವದಲ್ಲಿರುವ ಆರೋಗ್ಯ ವ್ಯವಸ್ಥೆಯ ಪ್ರತಿಬಿಂಬ ಮಾತ್ರವಲ್ಲದೆ, ವಿವಿಧ ಆರೋಗ್ಯ ಹಣಕಾಸು ಸೂಚಕಗಳಲ್ಲಿ ಆಗಿರುವ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಸರಕಾರಕ್ಕೆ ಸಮರ್ಥ ರೀತಿಯಲ್ಲಿ ನೆರವಾಗುತ್ತವೆ. 

ಇತ್ತೀಚಿನ ʻಎನ್ಎಚ್ಎʼ ಅಂದಾಜುಗಳು (2018-19) ಜನರು ಕಿಸೆಯಿಂದ ಭರಿಸುವ ಖರ್ಚಿನಲ್ಲಿ (ಒಒಪಿಇ) ಗಣನೀಯ ಇಳಿಕೆಯನ್ನು ತೋರಿಸುತ್ತವೆ. ಇದು ನಾಗರಿಕರ ಆರ್ಥಿಕ ಹೊರೆಯನ್ನು ಸರಾಗಗೊಳಿಸುವ ನಿಟ್ಟಿನಲ್ಲಿ ಸರಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ. ಆದರೆ, ಭಾರತದ ಖಾಸಗಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಅರ್ಥಶಾಸ್ತ್ರಜ್ಞರೊಬ್ಬರು ಈ ದತ್ತಾಂಶವನ್ನು "ಮರೀಚಿಕೆ" ಎಂದು ಕರೆದಿರುವುದು ಮತ್ತು ಮಾಧ್ಯಮದ ಕೆಲವು ವಿಭಾಗಗಳಲ್ಲಿ ಈ ಹೇಳಿಕೆಯನ್ನು ಉಲ್ಲೇಖಿಸಿರುವುದು ಸಮರ್ಥನೀಯವಲ್ಲ ಮತ್ತು ಅಂತಹ ವರದಿಗಳು ತರ್ಕಬದ್ಧ ಆಧಾರವನ್ನು ಹೊಂದಿಲ್ಲ.

ಈ ಅಂದಾಜುಗಳ ಮೂಲ ಆಧಾರವಾದ - ʻರಾಷ್ಟ್ರೀಯ ಅಂಕಿ-ಅಂಶ ಸಂಸ್ಥೆʼಯ(ಎನ್ಎಸ್ಒ) ದತ್ತಾಂಶ ಮೇಲೆ ಎತ್ತಲಾದ ಪ್ರಶ್ನೆಗಳೊಂದಿಗೆ ನಾವು ಪ್ರಾರಂಭಿಸೋಣ. ಜನರು ಕಿಸೆಯಿಂದ ಭರಿಸುವ ಖರ್ಚಿನ (ಒಒಪಿಇ) ಕುರಿತಾದ ಮಾಹಿತಿಯ ಮುಖ್ಯ ಮೂಲವು 2017-18ನೇ ಸಾಲಿನ ʻಎನ್ಎಸ್ಒʼ ದತ್ತಾಂಶವನ್ನು ಆಧರಿಸಿದೆ. ಅದರ ಹಿಂದಿನ ಅಂದಾಜುಗಳು 2014ನೇ ಸಾಲಿನ ದತ್ತಾಂಶವನ್ನು ಆಧರಿಸಿವೆ. 71ನೇ ಮತ್ತು 75ನೇ ಸುತ್ತುಗಳ ಎರಡೂ ಸಮೀಕ್ಷೆಗಳಲ್ಲೂ ಮನೆಗಳ ಆಯ್ಕೆಗೆ ಒಂದೇ ಮಾದರಿಯ ವಿನ್ಯಾಸವನ್ನು ಬಳಸಲಾಗಿದೆ. ಇದು ಎರಡೂ ಸುತ್ತುಗಳ ನಡುವೆ ತುಲನಾತ್ಮಕತೆಯನ್ನು ಖಾತರಿಪಡಿಸುತ್ತದೆ. 

ಇದಲ್ಲದೆ, 2017-18ನೇ ಸಾಲಿನ ದತ್ತಾಂಶವು ಒಂದು ವರ್ಷದ ಸಮೀಕ್ಷೆಯಾಗಿದ್ದು, 2014ಅನ್ನು ಆರು ತಿಂಗಳ ಅವಧಿಯಲ್ಲಿ ಮಾಡಲಾಗಿದೆ.  ನಿಯತಕಾಲಿಕತೆ ಪ್ರಮುಖ ಪಾತ್ರ ವಹಿಸುವುದರಿಂದ, 2017-18ನೇ ಸಾಲಿನ ಸಮೀಕ್ಷೆಯು ಖಂಡಿತವಾಗಿಯೂ ಹಿಂದಿನ ಸಮೀಕ್ಷೆಗಿಂತ ಹೆಚ್ಚು ದೃಢವಾಗಿದೆ. ಮತ್ತು, 2014ರ ದತ್ತಾಂಶವನ್ನು ನಿಸ್ಸಂದಿಗ್ಧವಾಗಿ ಒಪ್ಪಿಕೊಂಡಿರುವ ಅದೇ ತಜ್ಞರು  2017-18ರ ಮೌಲ್ಯಮಾಪನವನ್ನು "ಅನುಮಾನಾಸ್ಪದ" ಎಂದು ಹೇಳುವುದು ನಿಜಕ್ಕೂ ವಿಚಾರಹೀನ.

ಅಂತಹ ಟೀಕೆಗಳು, ವಿಮರ್ಶಕರ ವಾದವನ್ನು ಸಮರ್ಥಿಸಲು ದೋಷಪೂರಿತ ಪಾರ್ಶ್ವಸ್ಥತೆ ಮತ್ತು ಆಯ್ಕೆಯಿಂದ ದತ್ತಾಂಶ ಹೆಕ್ಕುವಿಕೆಯನ್ನು ಆಧರಿಸಿವೆ. ತಮ್ಮ ವಾದಕ್ಕೆ ಸಮರ್ಥನೆಯಾಗಿ ನೀಡಲಾದ "ಸಮಸ್ಯಾತ್ಮಕವಾಗಿ ಕಾಣುತ್ತದೆ/ ಅಸಂಭವವೆಂದು ತೋರುತ್ತದೆ" ಎಂಬಂತಹ ಹೇಳಿಕೆಗಳು ಕಾಲ್ಪನಿಕ ಭಿನ್ನಾಭಿಪ್ರಾಯವಲ್ಲದೆ ಮತ್ತೇನೂ ಅಲ್ಲ. 

ಸರಕಾರಿ ಆರೋಗ್ಯ ಸೌಲಭ್ಯಗಳ ಬಳಕೆಯಲ್ಲಿನ ಹೆಚ್ಚಳವು ʻಎನ್ಎಸ್ಒʼ-2017-18ರ ಮತ್ತೊಂದು ಪ್ರಮುಖ ಅಂಶವಾಗಿದೆ. ಈ ʻರಾಷ್ಟ್ರೀಯ ಸ್ಯಾಂಪಲ್‌ ಸರ್ವೇʼ (ಎನ್‌ಎಸ್‌ಎಸ್‌) ಸುತ್ತುಗಳ ಬಗ್ಗೆ ಹೆಸರಾಂತ ನಿಯತಕಾಲಿಕೆ ʻಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿʼಯಲ್ಲಿ ಪ್ರಕಟವಾದ ʻಮುರಳೀಧರನ್ ಮತ್ತು ಇತರರು (2020) ಅಧ್ಯಯನʼ ಸಹ 2017-18ನೇ ಸಾಲಿನಲ್ಲಿ ಕಿಸೆಯಿಂದ ಭರಿಸುವ ಖರ್ಚು ಇಳಿಮುಖವಾಗಿರುವುದನ್ನು ಉಲ್ಲೇಖಿಸಲಾಗಿದೆ. 

ಅಲ್ಲದೆ, ಎರಡು ರಾಷ್ಟ್ರೀಯ ಸ್ಯಾಂಪಲ್‌ ಸಮೀಕ್ಷೆ ಸುತ್ತುಗಳ ನಡುವೆ ಹೊರರೋಗಿ ಮತ್ತು ಒಳರೋಗಿ ಸೇವೆಗಳಿಗಾಗಿ ಸಾರ್ವಜನಿಕ ಆರೋಗ್ಯ ಕೇಂದ್ರಗಳ ಬಳಕೆಯಲ್ಲಿನ ಹೆಚ್ಚಳವು ʻಕಿಸೆಯಿಂದ ಭರಿಸಿದ ಖರ್ಚುʼ ಇಳಿಕೆಯಾಗಲು ಕಾರಣವೆಂದು ಅವರು ಈ ಲೇಖನದಲ್ಲಿ ಗುರುತಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳ ಬಳಕೆಯಲ್ಲಿ ಹೆಚ್ಚಳ ಮಾತ್ರವಲ್ಲದೆ,  ಸಾರ್ವಜನಿಕ ಆರೋಗ್ಯ ಕೇಂದ್ರಗಳ ಸರಾಸರಿ ʻಒಒಪಿಇʼಯಲ್ಲಿ ಕುಸಿತ ಕಂಡುಬಂದಿದೆ ಎಂದು ಅವರು ಗುರುತಿಸಿದ್ದಾರೆ. ಸರಕಾರಿ ಆರೋಗ್ಯ ಕೇಂದ್ರಗಳ ಬಳಕೆ ಪ್ರವೃತ್ತಿ ಹೆಚ್ಚುತ್ತಿರುದನ್ನು ಲಭ್ಯವಿರುವ ʻಎನ್ಎಸ್ಎಸ್‌ʼನ ಪುರಾವೆಗಳು ಸೂಚಿಸುತ್ತವೆ.
  


 

(ಇನ್ಫೋಗ್ರಾಫ್: ಹೆಡ್‌: ಸರಕಾರಿ ಆರೋಗ್ಯ ಕೇಂದ್ರಗಳ ಬಳಕೆಯಲ್ಲಿ ಹೆಚ್ಚಳ ಪ್ರವೃತ್ತಿ / 
ಕಳೆದ  15 ದಿನಗಳಲ್ಲಿ ಆರೋಗ್ಯ ಸಲಹೆ / ಆಸ್ಪತ್ರೆಗೆ ದಾಖಲು / ಶಿಶು ಜನನ
ಗ್ರಾಮೀಣ / ನಗರ)

ʻಎನ್ಎಸ್ಎಸ್ʼ ಪ್ರಕಾರ, ಕಳೆದ 15 ದಿನಗಳಲ್ಲಿ ವೈದ್ಯಕೀಯ ಸಲಹೆ ಪಡೆದವರಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳ ಬಳಕೆ  ಸುಮಾರು 5% ರಷ್ಟು ಹೆಚ್ಚಳವಾಗಿದೆ. ಆಸ್ಪತ್ರೆಗೆ ದಾಖಲು ವಿಚಾರದಲ್ಲಿ, ಈ ಹೆಚ್ಚಳವು ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 4% ಮತ್ತು ನಗರ ಪ್ರದೇಶಗಳಲ್ಲಿ 3%ರಷ್ಟಿದೆ. ಹೆರಿಗೆಯ ಪ್ರಕರಣಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳ ಬಳಕೆ ಪಾಲು 13% ರಷ್ಟು ಹೆಚ್ಚಾಗಿದೆ ಮತ್ತು ನಗರ ಪ್ರದೇಶಗಳಲ್ಲಿ ಇದು 6% ರಷ್ಟು ಹೆಚ್ಚಳವಾಗಿದೆ.
 

(ಇನ್ಫೋಗ್ರಾಫ್: ಹೆಡ್‌: ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಸರಾಸರಿ ಆರೋಗ್ಯ ವೆಚ್ಚದಲ್ಲಿ ಇಳಿಕೆ ಪ್ರವೃತ್ತಿ / 
/ ಆಸ್ಪತ್ರೆಗೆ ದಾಖಲು / ಆಸ್ಪತ್ರೆಗಳಲ್ಲಿ ಹೆರಿಗೆ 
ಗ್ರಾಮೀಣ / ನಗರ)


ಅಲ್ಲದೆ, ಆಸ್ಪತ್ರೆಗೆ ದಾಖಲು ಪ್ರಕರಣಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿನ ಸರಾಸರಿ ವೈದ್ಯಕೀಯ ವೆಚ್ಚಗಳಲ್ಲಿ ಶೇಕಡಾ 20ಕ್ಕಿಂತಲೂ ಹೆಚ್ಚು ಇಳಿಕೆ ಕಂಡುಬಂದಿದೆ. ಸಾಂಸ್ಥಿಕ ಅಥವಾ ಆಸ್ಪತ್ರೆಗಳಲ್ಲಿ ಹೆರಿಗೆ ವಿಚಾರದಲ್ಲಿ, ಈ ವೆಚ್ಚವು ನಗರ ಪ್ರದೇಶಗಳಲ್ಲಿ ಶೇಕಡಾ 9ರಷ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 16ರಷ್ಟು ಕಡಿಮೆಯಾಗಿದೆ.
ಕೆಲವು ತಜ್ಞರು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿನ ಕುಸಿತವನ್ನು ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ "ಯಾವುದೇ ತಾರ್ಕಿಕ ವಿವರಣೆ" ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ಒಳರೋಗಿ ಆರೈಕೆಯಿಂದ ಹೊರರೋಗಿ ಆರೈಕೆಯತ್ತ ಪಲ್ಲಟ ಪ್ರವೃತ್ತಿ ಹೆಚ್ಚುತ್ತಿದ್ದು, ಇಂತಹ ಪಲ್ಲಟ ಅಥವಾ ಬದಲಾವಣೆಯನ್ನು ಉತ್ತೇಜಿಸಲು ಅನೇಕ ದೇಶಗಳು ನಿರ್ದಿಷ್ಟವಾಗಿ ಯೋಜನೆಗಳನ್ನು ವಿನ್ಯಾಸಗೊಳಿಸಿವೆ. ಇದನ್ನು ಗಮನಿಸಲು ಅಥವಾ ಒಪ್ಪಿಕೊಳ್ಳಲು ಅವರು ವಿಫಲರಾಗಿದ್ದಾರೆ.
ಕಳೆದ 15 ದಿನಗಳಲ್ಲಿ ವೈದ್ಯಕೀಯ ಸಲಹೆಯ ಆಧಾರದ ಮೇಲೆ ಚಿಕಿತ್ಸೆ ಪಡೆದವರಲ್ಲಿ, ಹೊರರೋಗಿಗಳಾಗ ಬಯಸುವ ಜನರ ಶೇಕಡಾವಾರು ಪ್ರಮಾಣ ಹೆಚ್ಚಳವಾಗಿದೆ. ವೈದ್ಯಕೀಯ ಸಲಹೆಯ ಆಧಾರದ ಮೇಲೆ ಚಿಕಿತ್ಸೆ ಪಡೆದವರಲ್ಲಿ, ಹೊರರೋಗಿ ಆರೈಕೆಯನ್ನು ಬಯಸುವ ಜನರ ಪಾಲು ʻಎನ್ಎಸ್ಎಸ್ʼ 71ನೇ ಸುತ್ತು ಮತ್ತು ʻಎನ್ಎಸ್ಎಸ್ʼ 75 ನೇ ಸುತ್ತಿನ ನಡುವೆ ಸುಮಾರು 5% ರಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಒಳರೋಗಿ ಸೇವೆಗಳಿಂದ ಹೊರರೋಗಿ ಸೇವೆಗಳ ಕಡೆಗೆ ಜನರ ಆಯ್ಕೆಯಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ. 
ಆದ್ದರಿಂದ, ʻಎನ್ಎಚ್ಎʼ 2018-19 ಕುರಿತಾಗಿ ಕೇಳಿಬಂದಿರುವ ಟೀಕೆಯಲ್ಲಿ ವಾಸ್ತವಾಂಶಗಳು ಮತ್ತು ಬಲವಾದ ಕಾರಣವನ್ನು ನಿರ್ಲಕ್ಷಿಸಿ, ಇದರ ಸಮರ್ಥನೆಯನ್ನು ಇತರರಿಗೆ ಬಿಟ್ಟಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. 
ಬಂಡವಾಳ ವೆಚ್ಚದ ಸೇರ್ಪಡೆಯು ಸರಕಾರದ ಆರೋಗ್ಯ ವೆಚ್ಚ ಹೆಚ್ಚಳ ಕುರಿತಾದ ಟೀಕೆಗಳಲ್ಲಿ ಒಂದಾಗಿದೆ. ನಾವು ಪ್ರಸ್ತುತ ಆರೋಗ್ಯ ವೆಚ್ಚವನ್ನು ಜಿಡಿಪಿಯ ಒಂದು ಪಾಲು ಎಂದು ಪರಿಗಣಿಸಿದರೂ, 2013-14 ರಿಂದ ಇದರಲ್ಲಿ ನಿರಂತರ ಏರಿಕೆ ಕಂಡುಬಂದಿದೆ.

 

 

 
(ಇನ್ಫೋಗ್ರಾಫ್: ಹೆಡ್‌: ʻಜಿಡಿಪಿʼಯ ಒಂದು ಭಾಗವಾಗಿ ಸರಕಾರದ ಹಾಲಿ ಆರೋಗ್ಯ ವೆಚ್ಚ)

 

ಸರ್ಕಾರದ ಪ್ರಸ್ತುತ ಆರೋಗ್ಯ ವೆಚ್ಚವು 2013-14 ಮತ್ತು 2017-18 ರ ನಡುವೆ ನಿರಂತರವಾಗಿ ಹೆಚ್ಚುತ್ತಿದೆ. ಜಿಡಿಪಿಯ ಒಂದು ಭಾಗವಾಗಿ, ಅದೇ ಅವಧಿಯಲ್ಲಿ ಅದು ಶೇಕಡಾ 10ಕ್ಕಿಂತ ಹೆಚ್ಚಾಗಿದೆ.

*****(Release ID: 1865852) Visitor Counter : 135