ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021 ರ ಅಡಿಯಲ್ಲಿ 10 ಯೂ ಟ್ಯೂಬ್‌ ಚಾನಲ್‌ಗಳಿಂದ 45 ಯೂ ಟ್ಯೂಬ್‌ ವೀಡಿಯೊಗಳನ್ನು ನಿರ್ಬಂಧಿಸಿದೆ


ಧಾರ್ಮಿಕ ಸಮುದಾಯಗಳ ವಿರುದ್ಧ ದ್ವೇಷಪೂರಿತ ಭಾಷಣ ಮತ್ತು ಕೋಮು ಸೌಹಾರ್ದವನ್ನು ಕದಡುವ ವೀಡಿಯೊಗಳನ್ನು ನಿರ್ಬಂಧಿಸಲಾಗಿದೆ

ಭಾರತದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಹಾನಿ ಮಾಡಲು ಮಾರ್ಫ್ ಮಾಡಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸಲಾಗುತ್ತಿದೆ

Posted On: 26 SEP 2022 5:44PM by PIB Bengaluru

ಗುಪ್ತಚರ ಏಜೆನ್ಸಿಗಳ ಮಾಹಿತಿಯ ಆಧಾರದ ಮೇಲೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯವು 10 ಯೂಟ್ಯೂಬ್ ಚಾನೆಲ್‌ಗಳಿಂದ 45 ಯೂಟ್ಯೂಬ್ ವೀಡಿಯೊಗಳನ್ನು ನಿರ್ಬಂಧಿಸಲು ಯೂಟ್ಯೂಬಿಗೆ ನಿರ್ದೇಶಿಸಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021 ರ ನಿಬಂಧನೆಗಳ ಅಡಿಯಲ್ಲಿ ಸಂಬಂಧಿಸಿದ ವೀಡಿಯೊಗಳನ್ನು ನಿರ್ಬಂಧಿಸಲು 23.09.2022 ರಂದು ಆದೇಶಗಳನ್ನು ನೀಡಲಾಯಿತು. ನಿರ್ಬಂಧಿಸಲಾದ ವೀಡಿಯೊಗಳು 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದ್ದವು.

ನಿರ್ಬಂಧಿಸಿದ ಯೂಟ್ಯೂಬ್ ವೀಡಿಯೊಗಳ ವಿಷಯವು ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಉದ್ದೇಶದಿಂದ ಹರಡಿದ ನಕಲಿ ಸುದ್ದಿ ಮತ್ತು ಮಾರ್ಫ್ ಮಾಡಿದ ವೀಡಿಯೊಗಳನ್ನು ಒಳಗೊಂಡಿತ್ತು. ಉದಾಹರಣೆಗೆ ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ ಎಂಬ ಸುಳ್ಳು ಮಾಹಿತಿಗಳು, ಧಾರ್ಮಿಕ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಬೆದರಿಕೆಗಳು, ಭಾರತದಲ್ಲಿ ಅಂತರ್ಯುದ್ಧದ ಘೋಷಣೆ ಇತ್ಯಾದಿಗಳನ್ನು ಒಳಗೊಂಡಿವೆ. ಅಂತಹ ವೀಡಿಯೊಗಳು ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡುವ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವ ವಸ್ತುವನ್ನು‌ ಹೊಂದಿರುವುದು ಕಂಡುಬಂದಿದೆ.

ಸಚಿವಾಲಯವು ನಿರ್ಬಂಧಿಸಿದ ಕೆಲವು ವೀಡಿಯೊಗಳನ್ನು ಅಗ್ನಿಪಥ್ ಯೋಜನೆ, ಭಾರತೀಯ ಸಶಸ್ತ್ರ ಪಡೆಗಳು, ಭಾರತದ ರಾಷ್ಟ್ರೀಯ ಭದ್ರತೆ, ಕಾಶ್ಮೀರ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ತಪ್ಪು ಮಾಹಿತಿಯನ್ನು ಹರಡಲು ಬಳಸಲಾಗುತ್ತಿದೆ. ಈ ವಿಷಯವನ್ನು ವಿದೇಶಗಳೊಂದಿಗೆ ಭಾರತದ ಸ್ನೇಹ ಸಂಬಂಧ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸುಳ್ಳು ಮತ್ತು ಸೂಕ್ಷ್ಮವೆಂದು ಗಮನಿಸಲಾಗಿದೆ. 

ಕೆಲವು ವೀಡಿಯೊಗಳು ಭಾರತದ ಭೂಪ್ರದೇಶದ ಹೊರಗೆ ಜಮ್ಮು ಮತ್ತು ಕಾಶ್ಮೀರ  ಮತ್ತು ಲಡಾಖ್‌ನ ಭಾಗಗಳು ಹೊರಗೆ ಇರುವಂತೆ ಭಾರತದ ತಪ್ಪಾದ ಗಡಿಯನ್ನು ಚಿತ್ರಿಸಲಾಗಿದೆ.  ಇಂತಹ ಕಾರ್ಟೊಗ್ರಾಫಿಕ್ ತಪ್ಪು ನಿರೂಪಣೆಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ.

ಸಚಿವಾಲಯವು ನಿರ್ಬಂಧಿಸಿದ ವಿಷಯವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ. ಅದರಂತೆ, ಇಂತಹ ವಿಷಯಗಳು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಸೆಕ್ಷನ್ 69A ರ ವ್ಯಾಪ್ತಿಯಲ್ಲಿ ಒಳಪಡುತ್ತವೆ.

ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳನ್ನು ತಡೆಯಲು ಭಾರತ ಸರ್ಕಾರವು ಬದ್ಧವಾಗಿದೆ.

 

 

 

*******


(Release ID: 1862378) Visitor Counter : 238