ಸಂಪುಟ
ಭಾರತದಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಕಾರ್ಯಕ್ರಮ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪೂರಕ ವ್ಯವಸ್ಥೆ ನಿರ್ಮಾಣ ಕಾರ್ಯಕ್ರಮದಲ್ಲಿ ಮಾರ್ಪಾಡಿಗೆ ಸಚಿವ ಸಂಪುಟ ಅನುಮೋದನೆ
ತಂತ್ರಜ್ಞಾನದ ಎಲ್ಲ ವಿಧಾನಗಳಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಗಳಿಗೆ ಮತ್ತು ಸಂಯುಕ್ತ ಅರೆವಾಹಕಗಳಿಗೆ, ಪ್ಯಾಕೇಜಿಂಗ್ ಮತ್ತು ಇತರೆ ಸೆಮಿಕಂಡ್ಕರ್ ಸೌಕರ್ಯಗಳಿಗೆ ಶೇ.50ರಷ್ಟು ಪ್ರೋತ್ಸಾಹಧನ
प्रविष्टि तिथि:
21 SEP 2022 3:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಕಾರ್ಯಕ್ರಮ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪೂರಕ ವ್ಯವಸ್ಥೆ ನಿರ್ಮಾಣ ಕಾರ್ಯಕ್ರಮದಲ್ಲಿ ಈ ಕೆಳಗಿನ ಮಾರ್ಪಾಡಿಗೆ ಅನುಮೋದನೆ ನೀಡಿದೆ.
i.ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್‌ಗಳನ್ನು ಸ್ಥಾಪಿಸುವ ಯೋಜನೆಯಡಿಯಲ್ಲಿ ಎಲ್ಲಾ ತಂತ್ರಜ್ಞಾನ ನೋಡ್‌ಗಳಿಗೆ ಪಾರಿ-ಪಾಸು ಆಧಾರದ ಮೇಲೆ ಯೋಜನಾ ವೆಚ್ಚದ ಶೇ.50ರಷ್ಟು ಆರ್ಥಿಕ ಬೆಂಬಲ.
ii. ಡಿಸ್‌ಪ್ಲೇ ಫ್ಯಾಬ್‌ಗಳನ್ನು ಸ್ಥಾಪಿಸುವ ಯೋಜನೆಯ ಅಡಿಯಲ್ಲಿ ಪಾರಿ-ಪಾಸು ಆಧಾರದ ಮೇಲೆ ಯೋಜನಾ ವೆಚ್ಚದ ಶೇ.50ರಷ್ಟು ಆರ್ಥಿಕ ನೆರವು.
iiiಭಾರತದಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್ಸ್/ಸಿಲಿಕಾನ್ ಫೋಟೊನಿಕ್ಸ್/ಸೆನ್ಸಾರ್ಸ್ ಫ್ಯಾಬ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ/ಓಎಸ್ಎಟಿ ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆಯ ಅಡಿಯಲ್ಲಿ ಪಾರಿ-ಪಾಸು ಆಧಾರದ ಮೇಲೆ ಬಂಡವಾಳ ವೆಚ್ಚದ ಶೇ.50 ರಷ್ಟು ಆರ್ಥಿಕ ನೆರವು. ಅಲ್ಲದೆ, ಹೆಚ್ಚುವರಿಯಾಗಿ ಯೋಜನೆಯಡಿಯಲ್ಲಿ ನಿರ್ದಿಷ್ಟ ಗುರಿ ಹೊಂದಿರುವ ತಂತ್ರಜ್ಞಾನಗಳು ಡಿಸ್ಕ್ರೀಟ್ ಸೆಮಿಕಂಡಕ್ಟರ್ ಫ್ಯಾಬ್‌ಗಳನ್ನು ಒಳಗೊಂಡಿರುತ್ತದೆ.
ಪರಿಷ್ಕೃತ ಕಾರ್ಯಕ್ರಮದಡಿಯಲ್ಲಿ, ಸೆಮಿಕಂಡಕ್ಟರ್ ಫ್ಯಾಬ್‌ಗಳನ್ನು ಸ್ಥಾಪಿಸಲು ಎಲ್ಲಾ ತಂತ್ರಜ್ಞಾನ ನೋಡ್‌ಗಳಲ್ಲಿ ಯೋಜನಾ ವೆಚ್ಚದ ಶೇ.50 ರಷ್ಟು ಏಕರೂಪದ ಆರ್ಥಿಕ ಬೆಂಬಲ ನೀಡಲಾಗುವುದು. ಸಂಯುಕ್ತ ಸೆಮಿಕಂಡಕ್ಟರ್‌ಗಳು ಮತ್ತು ಸುಧಾರಿತ ಪ್ಯಾಕೇಜಿಂಗ್‌ಗಳ ಸ್ಥಾಪಿತ ತಂತ್ರಜ್ಞಾನ ಮತ್ತು ಸ್ವರೂಪವನ್ನು ಗಮನಿಸಿದರೆ, ಪರಿಷ್ಕೃತ ಕಾರ್ಯಕ್ರಮದಡಿ ಸಂಯುಕ್ತ ಸೆಮಿಕಂಡಕ್ಟರ್‌ಗಳು / ಸಿಲಿಕಾನ್ ಫೋಟೊನಿಕ್ಸ್ / ಸೆನ್ಸಾರ್ ಗಳು / ಡಿಸ್ಕ್ರೀಟ್ ಸೆಮಿಕಂಡಕ್ಟರ್‌ಗಳ ಫ್ಯಾಬ್‌ಗಳು ಮತ್ತು ಎಟಿಎಂಪಿ/ಒಎಸ್ ಎಟಿ ಗಳನ್ನು ಸ್ಥಾಪಿಸಲು ಪಾರಿ-ಪಾಸು ಮಾದರಿಯಲ್ಲಿ ಬಂಡವಾಳ ವೆಚ್ಚದ ಶೇ.50 ರಷ್ಟು ಆರ್ಥಿಕ ನೆರವನ್ನು ಒದಗಿಸುತ್ತದೆ.
ಈ ಕಾರ್ಯಕ್ರಮವು ಭಾರತದಲ್ಲಿ ಫ್ಯಾಬ್‌ಗಳನ್ನು ಸ್ಥಾಪಿಸಲು ಅನೇಕ ಜಾಗತಿಕ ಸೆಮಿಕಂಡಕ್ಟರ್ ಉದ್ಯಮಗಳನ್ನು ಆಕರ್ಷಿಸಿದೆ. ಪರಿಷ್ಕರಿಸಿದ ಕಾರ್ಯಕ್ರಮವು, ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್ ಪ್ಲೇ ಉತ್ಪಾದನೆಯಲ್ಲಿ ಹೂಡಿಕೆಗಳಿಗೆ ವೇಗ ನೀಡುತ್ತದೆ. ಸಂಭಾವ್ಯ ಹೂಡಿಕೆದಾರರೊಂದಿಗಿನ ಚರ್ಚೆಯ ಆಧಾರದ ಮೇಲೆ, ಮೊದಲ ಸೆಮಿಕಂಡಕ್ಟರ್ ಸೌಲಭ್ಯ ಸ್ಥಾಪನೆ ಕಾರ್ಯ ಶೀಘ್ರವೇ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಭಾರತದ ಸೆಮಿಕಂಡಕ್ಟರ್ ಮಿಷನ್‌ಗೆ ಸಲಹೆ ನೀಡಲು ಉದ್ಯಮ ಮತ್ತು ಶೈಕ್ಷಣಿಕ ವಲಯದ ಜಾಗತಿಕ ತಜ್ಞರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ- ಭಾರತದಲ್ಲಿ ಸೆಮಿಕಂಡಕ್ಟರ್‌ಗಳ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪೂರಕ ಪರಿಸರ ವ್ಯವಸ್ಥೆ ಅಭಿವೃದ್ಧಿಗೆ ಅದು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ.ಸಲಹಾ ಸಮಿತಿಯು ಸೆಮಿಕಂಡಕ್ಟರ್ ಫ್ಯಾಬ್‌ಗಳು / ಸಿಲಿಕಾನ್ ಫೋಟೊನಿಕ್ಸ್ / ಸೆನ್ಸಾರ್‌ಗಳು / ಡಿಸ್ಕ್ರೀಟ್ ಸೆಮಿಕಂಡಕ್ಟರ್ ಫ್ಯಾಬ್‌ಗಳು ಮತ್ತು ಎಟಿಎಂಪಿ/ಒಎಸ್‌ಎಟಿಯ ಎಲ್ಲಾ ತಂತ್ರಜ್ಞಾನ ನೋಡ್‌ಗಳಿಗೆ ಸರ್ವಾನುಮತದಿಂದ ಏಕರೂಪದ ಬೆಂಬಲ ಶಿಫಾರಸು ಮಾಡಿದ್ದು, ಅದನ್ನು ಸರ್ಕಾರವು ಈಗಾಗಲೇ ಅಂಗೀಕರಿಸಿದೆ. 45ಎನ್ ಎಂ ಮತ್ತು ಅದಕ್ಕಿಂತ ಅಧಿಕ ತಂತ್ರಜ್ಞಾನದ ನೋಡ್‌ಗಳು ಹೆಚ್ಚಿನ ಬೇಡಿಕೆ ಹೊಂದಿವೆ, ಅವು ಆಟೋಮೋಟಿವ್, ಇಂಧನ ಮತ್ತು ದೂರಸಂಪರ್ಕ ಅಪ್ಲಿಕೇಷನ್‌ಗಳನ್ನು ಒಳಗೊಂಡಿರುತ್ತದೆ. ಅಲ್ಲದೆ, ಈ ವಿಭಾಗವು ಒಟ್ಟಾರೆ ಸೆಮಿಕಂಡಕ್ಟರ್ ಮಾರುಕಟ್ಟೆಯ ಸುಮಾರು ಶೇ 50 ರಷ್ಟು ಪಾಲು ಹೊಂದಿದೆ.
*****
(रिलीज़ आईडी: 1861220)
आगंतुक पटल : 348
इस विज्ञप्ति को इन भाषाओं में पढ़ें:
Odia
,
Telugu
,
Marathi
,
Tamil
,
Malayalam
,
English
,
Urdu
,
हिन्दी
,
Assamese
,
Manipuri
,
Bengali
,
Punjabi
,
Gujarati