ಪ್ರಧಾನ ಮಂತ್ರಿಯವರ ಕಛೇರಿ
ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಪ್ರೊ.ರಾಮ್ ಯತ್ನ ಶುಕ್ಲಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
Posted On:
20 SEP 2022 10:45PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಪ್ರೊ. ರಾಮ್ ಯತ್ನ ಶುಕ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರೊ. ಶುಕ್ಲಾ ಅವರ ನಿಧನವು ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ತುಂಬಲಾರದ ನಷ್ಟ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ:
''ಕಾಶಿ ವಿದ್ವತ್ ಪರಿಷತ್ ಅಧ್ಯಕ್ಷ ಪ್ರೊ. ರಾಮ್ ಯತ್ನ ಶುಕ್ಲಾ ಅವರ ನಿಧನವು ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಸಂಸ್ಕೃತ ಭಾಷೆ ಮತ್ತು ಸಾಂಪ್ರದಾಯಿಕ ಧರ್ಮಗ್ರಂಥಗಳನ್ನು ಸಂರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಓಂ ಶಾಂತಿ!'' ಎಂದಿದ್ದಾರೆ.
*****
(Release ID: 1861045)
Visitor Counter : 104
Read this release in:
English
,
Urdu
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam