ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ರಾಜ್ಯಗಳ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮ್ ಠಾಕೂರ್ ಮತ್ತು ಶ್ರೀ ಜಿ. ಕಿಶನ್ ರೆಡ್ಡಿ

ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಖ್ಯಾತಿ ಹೊಂದಿಲ್ಲದ ಪ್ರವಾಸಿ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ “ನಯಿ ರಾಹಿಂ ನಯಿ ಮಂಝಿಲಿನ್” ಯೋಜನೆ ಪ್ರಾರಂಭಿಸಿದೆ : ಶ್ರೀ ಜೈ ರಾಮ್ ಠಾಕೂರ್

ದೇಶದಲ್ಲಿ ಜನರ ಸಹಭಾಗಿತ್ವದಡಿ ಮತ್ತು ಸಮಗ್ರ ಸರ್ಕಾರದ ಧೋರಣೆಯಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು : ಶ್ರೀ ಜಿ. ಕಿಶನ್ ರೆಡ್ಡಿ

ಎನ್.ಎಸ್.ಎಸ್, ಎನ್.ಸಿ.ಸಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಹಂತಗಳಲ್ಲಿ ಯುವ ಪ್ರವಾಸೋದ್ಯಮ ಕ್ಲಬ್ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುವ ಅಗತ್ಯವಿದೆ : ಶ್ರೀ ಜಿ. ಕಿಶನ್ ರೆಡ್ಡಿ

Posted On: 19 SEP 2022 2:02PM by PIB Bengaluru

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವರ ಎರಡನೇ ದಿನದ ರಾಷ್ಟ್ರೀಯ ಸಮ್ಮೇಳನವನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈರಾಮ್ ಠಾಕೂರ್ ಮತ್ತು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ, ಡಿಒಎನ್ಇಆರ್ ಸಚಿವ ಜಿ. ಕಿಶನ್ ರೆಡ್ಡಿ ಅವರು ವಿವಿಧ ರಾಜ್ಯಗಳ ಗಣ್ಯರನ್ನು ಸನ್ಮಾನಿಸುವ ಮೂಲಕ ಆರಂಭಿಸಿದರು.  ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಹರ್ಯಾಣ, ಮಿಜೋರಾಂ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶಗಳ 12 ರಾಜ್ಯಗಳ ಪ್ರವಾಸೋದ್ಯಮ ಸಚಿವರುಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಮೂರು ದಿನಗಳ ರಾಜ್ಯ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಮ್ಮೇಳನ ಶ್ರೀ ಜಿ. ಕಿಶನ್ ರೆಡ್ಡಿ ಅವರ ಸುದ್ದಿಗೋಷ್ಠಿಯ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿನ್ನೆ ಪ್ರಾರಂಭವಾಯಿತು.

 

ಶ್ರೀ ಜಿ. ಕಿಶನ್ ರೆಡ್ಡಿ ಮಾತನಾಡಿ, ಸಾಂಕ್ರಾಮಿಕ ನಮ್ಮ ಹಿಂದೆ ಇರುವುದರಿಂದ ಪ್ರವಾಸೋದ್ಯಮ ವಲಯ ಇದೀಗ ಪುನರುಜ್ಜೀವನಕ್ಕೆ ಸಜ್ಜಾಗಿದೆ. ಪ್ರವಾಸಿ ತಾಣವಾಗಿ ಭಾರತ ವೈವಿದ್ಯಮಯ ಉತ್ಪನ್ನಗಳು ಮತ್ತು ಅನುಭವಗಳನ್ನು ಒದಗಿಸುತ್ತದೆ. ಭಾರತದ ಶ್ರಿಮಂತ ಪರಂಪರೆ, ಅತ್ಯಂತ ಪುರಾತನ ನಾಗರೀಕತೆ ಹೊಂದಿದ್ದು, ಈ ದೇಶ ಹಬ್ಬಗಳು, ಧರ್ಮಗಳು, ಸಂಪ್ರದಾಯಗಳು ಮತ್ತು ಆಚರಣೆಗಳ ಸಂಗಮವಾಗಿದೆ ಎಂದರು.

ಯಾವುದೇ ಜಾಗತಿಕ ಪ್ರವಾಸಿಗ ಭಾರತ ಕೇವಲ ನೋಡುವ ಮತ್ತು ಭೇಟಿಕೊಡುವ ಸ್ಥಳವಲ್ಲ, ಆದರೆ ಈ ಇದು ಅನುಭವ ಮತ್ತು ಬದುಕನ್ನು ಪರಿವರ್ತಿಸಿಕೊಳ್ಳುವ ತಾಣವಾಗಿದೆ ಎಂದು ಭಾವಿಸುತ್ತಾನೆ. ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಗಳನ್ನು ಮತ್ತು ಅಭಿವೃದ್ಧಿ ಹೊಂದಿದ ದೇಶದ ದೀರ್ಘಕಾಲೀನ ಧ್ಯೇಯಗಳನ್ನು ತ್ವರಿತವಾಗಿ ಸಾಧಿಸಲು ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎರಡು ಅಂಶಗಳಿಗೆ ಒತ್ತು ನೀಡಿದ್ದು, ಮೊದಲನೆಯದಾಗಿ ಸರ್ಕಾರಿ ವಲಯದಲ್ಲಿ ಹಳೆಯ ವಿಧಾನಗಳನ್ನು ಮುರಿಯುವ ಮತ್ತು ಸರ್ಕಾರಿ ಸಚಿವಾಲಯಗಳಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.  ಎರಡನೆಯದಾಗಿ ಇಡೀ ಭಾರತ ಒಂದು ತಂಡದಂತೆ ಕೆಲಸ ಮಾಡುತ್ತದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಟ್ಟೊಟ್ಟಿಗೆ ಕೆಲಸ ಮಾಡಿದರೆ ಅದರ ಲಾಭ ಜನರಿಗೆ ಆಗುತ್ತದೆ. “ಎಲ್ಲಾ ಸರ್ಕಾರದ ಪ್ರತಿನಿಧಿಗಳೇ, ಇದು ಅತ್ಯಂತ ಸೂಕ್ತ ವೇದಿಕೆಯಾಗಿದೆ ಮತ್ತು ಈ ವಲಯದಲ್ಲಿ ಒಂದು ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ” ಎಂದರು. ಪ್ರವಾಸೋದ್ಯಮದ ಲಾಭ ತಳಮಟ್ಟದ ಜನರಿಗೆ ದೊರೆಯುವಂತಾಗಲು ಸ್ಥಳೀಯ ಜನತೆ ಮತ್ತು ಸಮುದಾಯಗಳ ಬೆಂಬಲವನ್ನು ಒಗ್ಗೂಡಿಸಬೇಕು. ದೇಶದಲ್ಲಿ ಜನರ ಸಹಭಾಗಿತ್ವದಡಿ ಮತ್ತು ಸಮಗ್ರ ಸರ್ಕಾರದ ಧೋರಣೆಯಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಹುದು ಎಂದು ಸಚಿವರು ಹೇಳಿದರು.

ಎನ್.ಎಸ್.ಎಸ್, ಎನ್.ಸಿ.ಸಿ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಎಲ್ಲಾ ಹಂತಗಳಲ್ಲಿ ಯುವ ಪ್ರವಾಸೋದ್ಯಮ ಕ್ಲಬ್ ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುವ ಅಗತ್ಯವಿದೆ. ನಮ್ಮ ದೇಶವನ್ನು ನೋಡಿ ಎನ್ನುವ ಪರಿಕಲ್ಪನೆಯನ್ನು ಯುವ ಸಮೂಹಕ್ಕೆ ಪರಿಚಯಿಸುವ  ಈ ಪ್ರವಾಸೋದ್ಯಮ ಕ್ಲಬ್ ಗಳನ್ನು ಸ್ಥಾಪಿಸಲು ರಾಜ್ಯಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು. ಪ್ರವಾಸೋದ್ಯಮದ ನಿಜವಾದ ಸಾಮರ್ಥ್ಯವನ್ನು ಸಾಧಿಸಲು ಎಲ್ಲಾ ಹಂತಗಳಲ್ಲಿ ಸಮನ್ವಯತೆ ಹೊಂದುವುದು ಅತ್ಯಂತ ಪ್ರಮುಖ ಮೂಲಭೂತ ಅಗತ್ಯವಾಗಿದೆ. ಪ್ರತಿಯೊಬ್ಬ ಪಾಲುದಾರರು, ಅದು ಕೇಂದ್ರ, ರಾಜ್ಯ ಅಥವಾ ಕೈಗಾರಿಕೆಗಳೇ ಆಗಿರಬಹುದು, ನಮಗೆ ಸಕಾರಾತ್ಮಕ ಧೋರಣೆ ಅಗತ್ಯವಿದೆ ಎಂದು ಶ್ರೀ ಕಿಶನ್ ರೆಡ್ಡಿ ಹೇಳಿದರು.

ಶ್ರೀ ಜೈರಾಮ್ ಠಾಕೂರ್ ಮಾತನಾಡಿ, ಭಾರತದಾದ್ಯಂತ ಎಲ್ಲಾ ಪ್ರತಿನಿಧಿಗಳು ಇಲ್ಲಿದ್ದು, ನಮಗೆಲ್ಲಾ ಇದು ಅತ್ಯಂತ ಪ್ರಮುಖ ದಿನವಾಗಿದೆ. ನಿಮಗೆಲ್ಲರಿಗೂ ಆತಿಥ್ಯ ನೀಡಲು ನಮಗೆ ಅವಕಾಶ ದೊರೆತಿದ್ದು, ಸಂತಸ ತಂದಿದೆ. ಪ್ರವಾಸೋದ್ಯಮ ಸಚಿವಾಲಯದ ಅತ್ಯುತ್ತಮ ಉಪಕ್ರಮ ಇದಾಗಿದೆ. ಜಗತ್ತಿಗೆ ಹಿಮಾಚಲ ಪ್ರದೇಶ ಅಸಾಧಾರಣ ತಾಣಗಳನ್ನು ಪ್ರಸ್ತುತಪಡಿಸುತ್ತದೆ” ಎಂದರು.

 

ಭಾರತದ ಪ್ರವಾಸೋದ್ಯಮ ಕೈಗಾರಿಕೆ ಹಾಗೂ ಹಿಮಾಚಲ ಪ್ರದೇಶ ಸಾಂಕ್ರಾಮಿಕದಿಂದ ತೀವ್ರ ಬಾಧಿತವಾಗಿದೆ. ಅದಾಗ್ಯೂ ನಾವು ಬದಲಾವಣೆಯ ಉತ್ತುಂಗದಲ್ಲಿದ್ದೇವೆ. “ಹಿಮಾಚಲ ಪ್ರದೇಶದ ಹೆಚ್ಚು ಖ್ಯಾತಿ ಹೊಂದಿಲ್ಲದ ಪ್ರವಾಸಿ ತಾಣಗಳನ್ನು ಪರಿಚಯಿಸಲು ನಮ್ಮ ಸರ್ಕಾರ “ನಯಿ ರಾಹಿಂ ನಯಿ ಮಂಝಿಲಿನ್” ಯೋಜನೆ ಪ್ರಾರಂಭಿಸಿದೆ. ರಾಜ್ಯ ಸರ್ಕಾರ ಪ್ರವಾಸಿಗರನ್ನು ಸೆಳೆಯಲು ಹಲವಾರು ಹೊಸ ಆಕರ್ಷಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಕೇವಲ ವಾರಾಂತ್ಯವಷ್ಟೇ ಅಲ್ಲದೇ ದೀರ್ಘಕಾಲ ಉಳಿಯುವಂತಹ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ” ಎಂದರು.


 

ಪ್ರವಾಸೋದ್ಯಮ ಮತ್ತು ಬಂದರು ಹಾಗೂ ಒಳನಾಡು ಖಾತೆ ರಾಜ್ಯ ಸಚಿವ ಶ್ರೀ ಶ್ರೀಪಾದ್ ನಾಯಕ್ ಮಾತನಾಡಿ, ಪ್ರವಾಸೋದ್ಯಮ ಸಚಿವಾಲಯದಿಂದ ಪ್ರಸಾದ್ ಮತ್ತು ಸ್ವದೇಶಿ ದರ್ಶನ್ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಂತಹ ಉಪಕ್ರಮಗಳು ಮತ್ತು ಪ್ರಯತ್ನಗಳು ಅಗತ್ಯ ಎಂದು ಹೇಳಿದರು. ಪ್ರಸಾದ್ ಯೋಜನೆಯನ್ನು 2014-15 ರಲ್ಲಿ ಆರಂಭಿಸಲಾಗಿದ್ದು, ಯಾತ್ರಾರ್ಥಿಗಳು ಮತ್ತು ಪಾರಂಪರಿಕ ತಾಣಗಳಿಗೆ ಕೊನೆಯ ಹಂತದವರೆಗೆ ಸಂಪರ್ಕ ಕಲ್ಪಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಪ್ರವಾಸೋದ್ಯಮ ಸಚಿವಾಲಯ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯ ಕರಡು ಸಿದ್ಧಪಡಿಸಿದ್ದು, ಇದು ಸಮಗ್ರ ಪ್ರಯೋಜನ ಹೊಂದಿರುವ ಎಲ್ಲಾ ಕ್ಷೇತ್ರಗಳಲ್ಲಿ ಭಾರತವನ್ನು ಪ್ರಮುಖ ಪ್ರವಾಸಿತಾಣವಾಗಿ ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದರು.

ಪ್ರವಾಸೋದ್ಯಮ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಭಟ್ ಮಾತನಾಡಿ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಬೆಳಕಿಗೆ ಬಾರದ ಸಂಸ್ಕೃತಿ ಮತ್ತು ನೈಸರ್ಗಿಕ ಆಯಾಮಗಳನ್ನು ಹೊರತರುವುದು ಇಂದಿನ ಅಗತ್ಯವಾಗಿದೆ ಎಂದು ಸಲಹೆ ಮಾಡಿದರು. “ನಮ್ಮ ದೇಶವನ್ನು ನೋಡು ಉಪಕ್ರಮದ ಮೂಲಕ ನಾವು ಕೋವಿಡ್ 19 ಸಂಕಷ್ಟದ ಸಮಯವನ್ನು ನಿಭಾಯಿಸಿದ್ದೇವೆ. ನಮ್ಮ ಸಮರ್ಥ ನಾಯಕರಾದ ಪ್ರಧಾನಮಂತ್ರಿ ಅವರ ಮಾರ್ಗದರ್ಶನದಲ್ಲಿ ನಿರಂತರವಾಗಿ ಮುಂದುವರೆಯುತ್ತಿದ್ದೇವೆ. ನಮ್ಮಲ್ಲಿ ಅತ್ಯುತ್ತಮ ನೈಸರ್ಗಿಕ ಸೌಂದರ್ಯವಿದ್ದರೂ ಸಹ ಜಾಗತಿಕವಾಗಿ ನಾವು ಶೇ 2 ಕ್ಕಿಂತ ಕಡಿಮೆ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದೇವೆ ಮತ್ತು ಇದು ನಾವು ಸಾಧಿಸಬಹುದಾದ ಸಾಮರ್ಥ್ಯವನ್ನು ಸೂಚಿಸುತ್ತದೆ” ಎಂದು ಹೇಳಿದರು.

 

C:\Users\ABC\Downloads\Capture.PNG

ಭಾರತೀಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಶ್ರೀ ಸಂಬಿತ್ ಪಾತ್ರ ಮಾತನಾಡಿ, “ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮಾನಸಿಕವಾಗಿ ಹೆಚ್ಚು ಸ್ಥಳವನ್ನು ಹೊಂದುವುದು ಮುಖ್ಯವಾಗಿದೆ. ವಿಸ್ಮಯ ಭಾರತದ ಬಗ್ಗೆ ಸೂಕ್ತ ಜಾಹೀರಾತಿನೊಂದಿಗೆ ಮಾನಸಿಕವಾಗಿ ಆಕರ್ಷಿಸುವುದು ಮೊದಲ ಮಂತ್ರವಾಗಿದೆ” ಎಂದರು.  ದೇಶದ ವಿಶಾಲ ಮತ್ತು ವೈವಿದ್ಯಮಯ ಸಂಸ್ಕೃತಿಯನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ “ಕಂಕರ್ ಕಂಕರ್ ಮೇ ಹೈ ಶಂಕರ್” ಮತ್ತು ನಾವು ಭವಿಷ್ಯದ ಪ್ರವಾಸಿಗರಿಗಾಗಿ ನಮ್ಮ ಭವ್ಯ ತಾಣಗಳನ್ನು ತೋರಿಸಲು ಪ್ರಯತ್ನಿಸಬೇಕಾಗಿದೆ. “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಡಿ ಸ್ವದೇಶಿ ದರ್ಶನ್ ಯೋಜನೆಯಡಿ ರಾಮಾಯಣ ಸರ್ಕ್ಯೂಟ್, ಬೌದ್ಧ ಸರ್ಕ್ಯೂಟ್, ಹಿಮಾಲಯ ಸರ್ಕ್ಯೂಟ್ ಮತ್ತಿತರ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಪ್ರಗತಿ ಸಾಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ಹೇಳಿದರು.  

ಪ್ರವಾಸೋದ್ಯಮ ಸಚಿವಾಲಯದ ಕಾರ್ಯದರ್ಶಿ ಶ್ರೀ ಅರವಿಂದ್ ಸಿಂಗ್ ಮಾತನಾಡಿ, ಕೋವಿಡ್ – 19 ನಿಂದ ಪ್ರವಾಸೋದ್ಯಮ ವಲಯ ಕಳೆದ ಎರಡು ವರ್ಷಗಳಲ್ಲಿ ತೀವ್ರ ಬಾಧಿತವಾಗಿದೆ.  ಎರಡು ವರ್ಷಗಳ ನಂತರ ಮೊದಲ ಬಾರಿಗೆ ಪ್ರವಾಸೋದ್ಯಮ ವಲಯವನ್ನು ಪುನಶ್ಚೇತನಗೊಳಿಸಲು ನಾವು ಇಲ್ಲಿ ಭೌತಿಕವಾಗಿ ಸೇರಿದ್ದೇವೆ ಮತ್ತು ಇದು ಪ್ರವಾಸೋದ್ಯಮ ವಲಯದಲ್ಲಿ ಬದಲಾವಣೆಯ ಸಂಕೇತವಾಗಿದೆ ಎಂದರು.

ಭಾರತ ಜಿ-20 ಅಧ್ಯಕ್ಷತೆ ವಹಿಸುತ್ತಿರುವುದು ಪ್ರವಾಸೋದ್ಯಮ ವಲಯದಲ್ಲಿನ ಅಸಾಧಾರಣ ಅವಕಾಶಗಳನ್ನು ಬಳಸಿಕೊಂಡು ಈ ಕ್ಷೇತ್ರಕ್ಕೆ ಪುಷ್ಟಿ ನೀಡಲು ಮತ್ತು ಪ್ರವಾಸೋದ್ಯಮ ವಲಯವನ್ನು ಪುನಶ್ಚೇತನಗೊಳಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ಫೈತ್ ಅಧ್ಯಕ್ಷ ಶ್ರೀ ನಕುಲ್ ಆನಂದ್ ಮಾತನಾಡಿ, ಅನೇಕರಿಗೆ ಜೀವನೋಪಾಯ ಒದಗಿಸಿರುವ ಒಂದು ಸಾಮಾನ್ಯ ಉದ್ದೇಶದ ಅಡಿಯಲ್ಲಿ ನಾವು ಒಟ್ಟಿಗೆ ಭೇಟಿಯಾಗುತ್ತಿದ್ದೇವೆ. ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದರೂ ವಿಶ್ವದ ಪ್ರವಾಸೋದ್ಯಮ ವಲಯದಲ್ಲಿ ನಾವು ಪಾಲು ಕಡಿಮೆ ಹೊಂದಿದೆ. ಪ್ರವಾಸೋದ್ಯಮ ವಲಯಕ್ಕೆ ಕೋವಿಡ್ – 19 ಅತ್ಯಂತ ಕೆಟ್ಟ ಬಿಕ್ಕಟ್ಟು ತಂದಿತ್ತು. ಈ ವರ್ಷ ಹೊಸ ಆಶಾ ಕಿರಣ ದೊರೆತಿದೆ. ಮುಂದಿನ ವರ್ಷ ಸಾಂಕ್ರಾಮಿಕ ಆಘಾತದಿಂದ ಹೊರ ಬರುತ್ತಿದ್ದಂತೆ ಪ್ರಯಾಣದ ಪ್ರಮಾಣ ಹೆಚ್ಚಾಗುವುದನ್ನು ನೋಡುತ್ತೇವೆ. ನಾವು ನಮ್ಮ ಪ್ರವಾಸೋದ್ಯಮವನ್ನು ನಮ್ಮ ಪ್ರಾಚೀನ ಸಂಸ್ಕೃತಿಯೊಂದಿಗೆ ಬೆರೆಸಬೇಕು ಮತ್ತು ಒಗ್ಗೂಡಿಸಬೇಕು. ಪ್ರವಾಸೋದ್ಯಮ ಕೈಗಾರಿಕೆ ಈ ಕಾಲದಲ್ಲಿ ಬೇಡಿಕೆಗಳಿಗೆ ಉತ್ತರಿಸುತ್ತಿದೆ ಮತ್ತು ನಾವು ಅನುಭವಾತ್ಮಕ ಮೌಲ್ಯಗಳ ಮೇಲೆ ಕೇಂದ್ರೀಕರಿಸುವ ಪ್ರವಾಸೋದ್ಯಮ ಕ್ಷೇತ್ರದತ್ತ ಸಾಗುತ್ತಿದ್ದೇವೆ ಎಂದರು.

 

ಪ್ರವಾಸೋದ್ಯಮ ಮೂಲ ಸೌಕರ್ಯ ಅಭಿವೃದ್ಧಿ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಪಾರಂಪರಿಕ ಪ್ರವಾಸೋದ್ಯಮ, ಹಿಮಾಲಯ ರಾಜ್ಯಗಳಲ್ಲಿ ಪ್ರವಾಸೋದ್ಯಮ, ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮ, ಪ್ರವಾಸಿ ತಾಣಗಳು ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ಡಿಜಿಟಲ್ ಆರ್ಥಿಕತೆಯ ಪಾತ್ರ. ಭಾರತದ ಆತಿಥ್ಯ ವಲಯದಲ್ಲಿ ಹೋಂ ಸ್ಟೇ, ಆಯುರ್ವೇದ, ಯೋಗಕ್ಷೇಮ ಮತ್ತು ವೈದ್ಯಕೀಯ ಪ್ರವಾಸದ ಮೌಲ್ಯಗಳು ಹಾಗೂ ಜೀವನ ಶೈಲಿ, ಅರಣ್ಯ ಮತ್ತು ವನ್ಯಜೀವಿ ಪ್ರವಾಸೋದ್ಯಮ ಎಂಬ ವಿಷಯಾಧಾರಿತ ಅಧಿವೇಶನಗಳನ್ನು ಸಮ್ಮೇಳನದಲ್ಲಿ ಆಯೋಜಿಸಲಾಗಿತ್ತು.

******
 (Release ID: 1860917) Visitor Counter : 23