ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
azadi ka amrit mahotsav

ಗುಣಮಟ್ಟದ ಸುಧಾರಣೆಗಳಿಗಾಗಿ ಎಲ್ಲಾ ಪಾಲುದಾರರ ನಡುವೆ ಸಹಭಾಗಿತ್ವಕ್ಕೆ ಒತ್ತು ನೀಡುವ ಅಗತ್ಯವಿದೆ: ಶ್ರೀ ನಿತಿನ್ ಗಡ್ಕರಿ

Posted On: 08 SEP 2022 2:37PM by PIB Bengaluru

ಗುಣಮಟ್ಟದ ಸುಧಾರಣೆಗಳಿಗಾಗಿ ಎಲ್ಲಾ ಪಾಲುದಾರರ ನಡುವೆ ಸಹಭಾಗಿತ್ವಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. “ಯೋಜನೆಯನ್ನು ಕಾರ್ಯರೂಪಕ್ಕೆ ತರುವ – ಮಂಥನ್” ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಭಿನ್ನಾಭಿಪ್ರಾಯಗಳಿಂದ ಹೊರಬರಬೇಕು ಮತ್ತು ಒಂದೇ ಕಡೆ ಕುಳಿತು ಆಲೋಚಿಸಬಾರದು. ಪಾಲುದಾರರು ಪರಸ್ಪರ ವಿಷಯಗಳ ಬಗ್ಗೆ ಅರ್ಥಮಾಡಿಕೊಳ್ಳಬೇಕು ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ ಭವಿಷ್ಯದ ನೀತಿಗಳ ಬಗ್ಗೆ ಯೋಜನೆ ರೂಪಿಸುವತ್ತ ಗಮನಹರಿಸಿದರೆ ಭಾರತದಲ್ಲಿ ಉತ್ಪಾದಿಸಿದ ಇಂಧನದ ಮೇಲೆ  ದೇಶದ ಸಾರಿಗೆ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಾಗಲಿದೆ. ಗುಣಮಟ್ಟದ ಕೊಡುಗೆ ಮತ್ತು ದೃಷ್ಟಿಕೋನದಿಂದ ದೇಶವನ್ನು ಅತ್ಯಂತ ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು ಎಂದು ಹೇಳಿದರು.

 

https://static.pib.gov.in/WriteReadData/userfiles/image/image0013M7B.jpg

 

ಭಾರತ ಐದು ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯನ್ನು ಹೊಂದಬೇಕಾದರೆ ಬಹುಮಾದರಿ ಸಾರಿಗೆಯೊಂದಿಗೆ ಸಮಗ್ರ ವಿಧಾನದ ಪ್ರಾಮುಖ್ಯತೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸಚಿವರು ಒತ್ತಿ ಹೇಳಿದರು. ಶೇ 90 ರಷ್ಟು ಪ್ರಯಾಣಿಕರ ಸಂಚಾರ ಮತ್ತು ಶೇ 70 ರಷ್ಟು ಸರಕುಗಳನ್ನು ಸಾಗಿಸಲು ರಸ್ತೆಯನ್ನು ಬಳಸಲಾಗುತ್ತಿದೆ ಮತ್ತು ಜಲ ಸಾರಿಗೆ, ರೈಲ್ವೆ ಹಾಗೂ ವಿಮಾನ ನಿಲ್ದಾಣಗಳನ್ನು ಪರಸ್ಪರ ಸಂಪರ್ಕಿಸುವ ಅಗತ್ಯವಿದೆ ಹಾಗೂ ಸಾಗಾಣೆ ವಲಯದ ಪಾರ್ಕ್ ಗಳು ನಿರ್ಣಾಯಕ ಪಾತ್ರ ವಹಿಸಲಿವೆ ಎಂದರು. ರಾಜ್ಯ ಸರ್ಕಾರ ಭೂಮಿ ನೀಡಿದರೆ ರಸ್ತೆ ಸಾರಿಗೆ ಸಚಿವಾಲಯ ಲಾಜಿಸ್ಟಿಕ್ಸ್ ಪಾರ್ಕ್ ಗಳನ್ನು ನಿರ್ಮಿಸಲಿದೆ. ನಿರ್ಮಾಣದ ವೆಚ್ಚವನ್ನು ಕಡಿಮೆ ಮಾಡಬೇಕು ಹಾಗೂ ನಿರ್ಮಾಣದ ಗುಣಮಟ್ಟವನ್ನು ಗಣನೀಯವಾಗಿ ಸುಧಾರಣೆ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.

 

https://static.pib.gov.in/WriteReadData/userfiles/image/image00218RY.jpg

ಸಾಗಾಣೆ ವೆಚ್ಚವನ್ನು ಶೇ 16 ರಿಂದ 10 ಕ್ಕೆ ಇಳಿಸಲು [ಚೈನಾ ಶೇ 10 ರಷ್ಟು, ಐರೋಪ್ಯ ರಾಷ್ಟ್ರಗಳಲ್ಲಿ ಶೇ 12 ರಷ್ಟು] ಸಮಗ್ರ ವಿಧಾನಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಬಸ್ ಗಳು, ಬಂದರುಗಳು ಹೇಗೆ ಬೆಳವಣಿಗೆಯ ಕೇಂದ್ರಗಳಾಗಬಹುದು ಎಂಬ ಉದಾಹರಣೆ ನೀಡಿದ ಸಚಿವರು, ಹೊಸ ತಂತ್ರಜ್ಞಾನಗಳು ಮತ್ತು ಆಧುನಿಕ ಉಪಕರಣಗಳು ಮತ್ತು ಸಾಮಗ್ರಿಗಳನ್ನು ಬಳಸಿ ರಸ್ತೆ ಮೂಲ ಸೌಕರ್ಯ ಸುಧಾರಿಸುವ ಸಂದರ್ಭದಲ್ಲಿ ವಿವಿಧ ಸಾರಿಗೆ ವಲಯಗಳು ಪರಸ್ಪರ ಸಂಪರ್ಕಿಸುವುದು ಅಗತ್ಯ ಎಂದು ಹೇಳಿದರು. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ 750 ಕಿಲೋಮೀಟರ್ ನಷ್ಟು ರಸ್ತೆ ಹೇಗೆ ಗುಂಡಿ ಮುಕ್ತವಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಬಿಟುಮೆನ್ ಬಳಕೆ ಮತ್ತು ಸಿಮೆಂಟ್ ಹೊದಿಕೆ ರಸ್ತೆಯು ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳಾಗಿವೆ. ಮುಂಬೈ ಮಹಾನಗರ ಪಾಲಿಕೆ 6,000 ಕೋಟಿ ರೂಪಾಯಿ ಮೊತ್ತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲು ಕಾರ್ಯೋನ್ಮುಖವಾಗಿದೆ. ಇದರ ಆರಂಭಿಕ ವೆಚ್ಚ ಹೆಚ್ಚಿರಬಹುದು, ಆದರೆ ಇವುಗಳಿಗೆ 25 ವರ್ಷಗಳ ಕಾಲ ನಿರ್ವಹಣಾ ವೆಚ್ಚ ಮಾಡುವ ಅಗತ್ಯವಿಲ್ಲ. 14.2 ಕಿಲೋಮೀಟರ್ ಉದ್ದದ ಜೊಜಿ ಲಾ ಸುರಂಗ ಮಾರ್ಗ ನಿರ್ಮಾಣದಲ್ಲಿ ಪೂರ್ವಭಾವಿಯಾಗಿ ಎರಕಹೊಯ್ದ ವಸ್ತುಗಳು ಮತ್ತು ಆಧುನಿಕ ಸುರಂಗ ಕೊರೆಯುವ ಸಲಕರಣೆಗಳನ್ನು ಬಳಸಿದ ಪರಿಣಾಮ ಸುಮಾರು 5,000 ಕೋಟಿ ರೂ ವೆಚ್ಚವನ್ನು ತಗ್ಗಿಸಲಾಗಿದೆ ಎಂದರು.

https://static.pib.gov.in/WriteReadData/userfiles/image/image0037PTZ.jpg

ಸುಸ್ಥಿರ ವಿಧಾನಗಳ  ಕುರಿತು ಮಾತನಾಡಿದ ಶ್ರೀ ನಿತಿನ್ ಗಡ್ಕರಿ, ಸಚಿವಾಲಯ ಪರಿಸರ ಮತ್ತು ಅರಣ್ಯ ಸಚಿವಾಲಯದೊಂದಿಗೆ ಸೇರಿ “ಮರಗಳ ಬ್ಯಾಂಕ್” ಯೋಜನೆಯನ್ನು ರೂಪಿಸಿದೆ. ಇದರಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ [ಎನ್ಎಚ್ಐಎ] ಹೆದ್ದಾರಿಗಳ ಉದ್ದಕ್ಕೂ ಮರಗಳನ್ನು ನೆಡಲಿದೆ ಮತ್ತು ಆ ಮೂಲಕ ಹಸಿರು ವ್ಯಾಪ್ತಿಯನ್ನು ವಿಸ್ತರಿಸಲಿದೆ ಎಂದು ಹೇಳಿದರು. ಸಚಿವಾಲಯದಿಂದ 80 ಲಕ್ಷ ಮರಗಳನ್ನು ನೆಡಲಾಗಿದೆ ಮತ್ತು ಈ ಮರಗಳು ಇಂಗಾಲ ಡೈ ಆಕ್ಸೈಡ್ ಅನ್ನು ಹೀರಿಕೊಳ್ಳುವುದರಿಂದ ಪರಿಸರಕ್ಕೆ ಅನುಕೂಲವಾಗುತ್ತಿದೆ. ಇದರ ಪರಿಣಾಮ ಹಸಿರು ವ್ಯಾಪ್ತಿಗಳಲ್ಲಿ ಭಾರತದ ಶ್ರೆಯಾಂಕ ಹೆಚ್ಚಾಗಿದೆ ಎಂದು ಹೇಳಿದರು.

 

ರಾಜ್ಯಗಳು ಮತ್ತು ಕೇಂದ್ರದ ಸಹಭಾಗಿತ್ವಕ್ಕೆ ಕರೆ ನೀಡಿದ ಸಚಿವರು, 16,000 ಕೋಟಿ ರೂ ವೆಚ್ಚದ ರಿಮೋಟ್ ಚಾಲಿತ ವಾಹನ ಯೋಜನೆಗೆ ಕೇವಲ ಆರು ರಾಜ್ಯಗಳು ಮಾತ್ರ ತಿಳಿವಳಿಕೆ ಪತ್ರಕ್ಕೆ [ಎಂಒಯು] ಸಹಿ ಹಾಕಿವೆ. ರಾಜ್ಯಗಳು ಮಾಲೀಕತ್ವ ಪಡೆದುಕೊಂಡರೆ ಅವುಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.

https://static.pib.gov.in/WriteReadData/userfiles/image/image004G0QB.jpg

ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ [ಡಾ.] ವಿ.ಕೆ. ಸಿಂಗ್ ರಸ್ತೆ ಸಾರಿಗೆ ವಲಯ ಗಣನೀಯವಾಗಿ ಸುಧಾರಣೆಯಾಗಿರುವುದನ್ನು ಉಲ್ಲೇಖಿಸಿದರು. “ಇದು ಕೊನೆಯಲ್ಲ” 2008 ರಲ್ಲಿ 91,000 ಕಿಲೋಮೀಟರ್ ಇದ್ದ ರಾಷ್ಟ್ರೀಯ ಹೆದ್ದಾರಿ ಪ್ರಮಾಣ ಇದೀಗ 1,41,000 ಕಿಲೋಮೀಟರ್ ಗೆ ಏರಿಕೆಯಾಗಿದೆ. ರಸ್ತೆ ನಿರ್ಮಾಣದ ವೇಗ ಪ್ರತಿದಿನ 12 ಕಿಲೋಮೀಟರ್ ಇತ್ತು. ಈಗ 37 ಕಿಲೋಮೀಟರ್ ಗೆ ಏರಿಕೆಯಾಗಿದೆ. ವಿನ್ಯಾಸದ ಸಾಮರ್ಥ್ಯ, ಆಧುನಿಕ ಪರಿಕರಗಳು, ಮತ್ತಿತರ ಬಳಕೆ ಸಹ ವೃದ್ಧಿಸಿದೆ. ಸಾರಿಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರಗಳು ದೊಡ್ಡ ಪಾಲು ಹೊಂದಿವೆ ಮತ್ತು ಅವುಗಳ ಸಹಕಾರದಿಂದ ಭಾರತ ಅಭಿವೃದ್ಧಿ ಹೊಂದಿದ ದೇಶಗಳನ್ನು ಮೀರಿಸಬಹುದು ಎಂದರು.

ಕರ್ನಾಟಕದ ಲೋಕೋಪಯೋಗಿ ಸಚಿವ ಶ್ರೀ ಸಿ.ಸಿ. ಪಾಟೀಲ್ ರಾಜ್ಯ ಹೆದ್ದಾರಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದರು ಮತ್ತು ಎನ್ಎಚ್ಎಐ ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪಟ್ಟಿ ಮಾಡಿದರು.

ಕಾರ್ಯದರ್ಶಿ [ಆರ್.ಟಿ ಮತ್ತು ಎಚ್] ಶ್ರೀ ಗಿರಿಧರ್ ಅರಮನೆ ಮಾತನಾಡಿ, ಭಾರತ ತನ್ನ ಶತಮಾನೋತ್ಸವ ವರ್ಷ ಆಚರಿಸುವ 2047 ರ ವೇಳೆಗೆ ದೇಶಾದ್ಯಂತ ಮೂಲ ಸೌಕರ್ಯ ವಲಯದಲ್ಲಿ ಅತ್ಯುತ್ತಮವಾದ ಹಂತಕ್ಕೆ ತಲುಪಲು ನಿರ್ಧರಿಸಿದೆ. ಇದು ಸರ್ಕಾರದ ಸ್ವಾವಲಂಬಿ ಭಾರತದ ಕ್ರಮವಾಗಿದೆ ಮತ್ತು “ಮಂಥನ್” ಇದರ ಸಮಾಲೋಚನೆಯ ಭಾಗವಾಗಿದೆ ಎಂದರು.

ಎನ್ಎಚ್ಎಐ ಅಧ್ಯಕ್ಷರಾದ ಶ್ರೀಮತಿ ಅಲ್ಕಾ ಉಪಾಧ್ಯಾಯ ಸ್ವಾಗತ ಭಾಷಣ ಮಾಡಿ, ‘ಮಂಥನ’ ದ ಉದ್ದೇಶ ಹೊಸ ಆಲೋಚನೆಗಳನ್ನು ಸೃಜಿಸುವ ಮತ್ತು ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವುದಾಗಿದೆ. ‘ಮಂಥನ್’ ರಸ್ತೆ ಸಾರಿಗೆ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೃಶ್ಯೀಕರಿಸುವ ಒಂದು ವೇದಿಕೆಯಾಗಿದೆ. ಇದರ ಜೊತೆಗೆ ಸರ್ಕಾರ ಮತ್ತು ಕೈಗಾರಿಕೆಗಳ ನಡುವೆ ಸಹಭಾಗಿತ್ವವನ್ನು ಇದು ಒದಗಿಸಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಶ್ರೀ ನಿತಿನ್ ಗಡ್ಕರಿ ಅವರು ಹ್ಯಾಕಥಾನ್ ನಲ್ಲಿ ಭಾಗವಹಿಸಿದ್ದ 10 ಅಪ್ಲಿಕೆಂಟ್ಸ್ ಗಳನ್ನು ವಿಜೇತರೆಂದು ಪ್ರಕಟಿಸಿದ್ದು, ಪ್ರತಿಯೊಬ್ಬರೂ 10 ಲಕ್ಷ ರೂಪಾಯಿ ಪಡೆಯಲಿದ್ದಾರೆ ಮತ್ತು ಆಪ್ ಗಳ ಅಭಿವೃದ್ಧಿಯಿಂದ ರಸ್ತೆ ಸಾರಿಗೆ ವಲಯದಲ್ಲಿ ಪರಿವರ್ತನೆ ತರಲಿದೆ.

*****

 

 


(Release ID: 1857838) Visitor Counter : 249