ಸಂಪುಟ
azadi ka amrit mahotsav

ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ ನಡುವಿನ ಶೈಕ್ಷಣಿಕ ಅರ್ಹತೆಗಳ ಪರಸ್ಪರ ಗುರುತಿಸುವಿಕೆಗೆ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದವನ್ನು ಸಚಿವ ಸಂಪುಟವು ಅನುಮೋದಿಸಿದೆ

Posted On: 07 SEP 2022 4:08PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 07.09.2022 ರಂದು ನಡೆದ ಕೇಂದ್ರ ಸಚಿವ ಸಂಪುಟವು 25.04.2022 ರಂದು ಸಹಿ ಮಾಡಲಾದ ಶೈಕ್ಷಣಿಕ ಅರ್ಹತೆಗಳ ಪರಸ್ಪರ ಗುರುತಿಸುವಿಕೆಯ ಕುರಿತು ಭಾರತ ಗಣರಾಜ್ಯ ಸರ್ಕಾರ ಮತ್ತು ಯುನೈಟೆಡ್ ಕಿಂಗ್‌ಡಮ್ ಆಫ್ ಗ್ರೇಟ್ ಬ್ರಿಟನ್  ಸರ್ಕಾರ ಹಾಗು ಉತ್ತರ ಐರ್ಲೆಂಡ್ ಸರ್ಕಾರದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಹಿಂದಿನಿಂದ ಜಾರಿಗೆ ಬರುವಂತೆ ಅನುಮೋದನೆಯನ್ನು ನೀಡಿತು. 

ಭಾರತ ಮತ್ತು ಯುಕೆ ನಡುವಿನ ಅರ್ಹತೆಗಳ ಪರಸ್ಪರ ಗುರುತಿಸುವಿಕೆ ಶೈಕ್ಷಣಿಕ ಸಹಯೋಗ ಮತ್ತು ವಿದ್ಯಾರ್ಥಿಗಳ ಭೇಟಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ತಮ್ಮ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕೆ ಮಾನ್ಯತೆ ನೀಡುವಂತೆ ಯುಕೆ ಕಡೆಯಿಂದ ಮಾಡಿದ ಮನವಿಯನ್ನು ಪರಿಗಣಿಸಲಾಯಿತು ಮತ್ತು 16 ಡಿಸೆಂಬರ್ 2020 ರಂದು ನವದೆಹಲಿಯಲ್ಲಿ ನಡೆದ ಉಭಯ ದೇಶಗಳ ಶಿಕ್ಷಣ ಮಂತ್ರಿಗಳ ನಡುವಿನ ಸಭೆಯಲ್ಲಿ, ಜಂಟಿ ಕಾರ್ಯಪಡೆಯನ್ನು ಸ್ಥಾಪಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಮೊದಲ ಸಭೆಯನ್ನು ಫೆಬ್ರವರಿ 04, 2021 ರಂದು ನಡೆಸಲಾಯಿತು ಮತ್ತು ನಂತರ ವಿವರವಾದ ಚರ್ಚೆಗಳು ಮತ್ತು ಮಾತುಕತೆಗಳ ನಂತರ ಎರಡೂ ಕಡೆಯವರು ತಿಳುವಳಿಕೆ ಒಪ್ಪಂದದ ಕರಡನ್ನು ಒಪ್ಪಿಕೊಂಡರು.


ಶೈಕ್ಷಣಿಕ ಅರ್ಹತೆಗಳು, ಕೈಗೊಂಡ ಅಧ್ಯಯನದ ಅವಧಿಗಳು, ಶೈಕ್ಷಣಿಕ ಪದವಿಗಳು/ಅರ್ಹತೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಉಭಯ ದೇಶಗಳೊಳಗಿನ ಶಿಕ್ಷಣ ಸಂಸ್ಥೆಗಳಿಂದ ಮಾನ್ಯತೆಗಳನ್ನು ಪರಸ್ಪರ ಗುರುತಿಸುವದು ಈ  ಗುರಿಯನ್ನು ಹೊಂದಿದೆ. ಎಂಜಿನಿಯರಿಂಗ್, ಔಷಧಿ, ನರ್ಸಿಂಗ್ ಮತ್ತು ಪ್ಯಾರಾ-ಮೆಡಿಕಲ್ ಶಿಕ್ಷಣ, ಫಾರ್ಮಸಿ, ಕಾನೂನು ಮತ್ತು ವಾಸ್ತುಶಿಲ್ಪದಂತಹ ವೃತ್ತಿಪರ ಪದವಿಗಳು ಈ ಒಪ್ಪಂದದ  ವ್ಯಾಪ್ತಿಯಿಂದ ಹೊರಗಿದೆ. ಶಿಕ್ಷಣದ ಇಂಟೆಲ್-ರಾಷ್ಟ್ರೀಕರಣಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ನಮ್ಮ ಉದ್ದೇಶಗಳಲ್ಲಿ ಒಂದಾದ ಉನ್ನತ ಶಿಕ್ಷಣ ಸಂಸ್ಥೆಗಳ ನಡುವೆ ಜಂಟಿ/ದ್ವಿ ಪದವಿ ಕೋರ್ಸ್‌ಗಳನ್ನು ಸ್ಥಾಪಿಸಲು ಇದು ಅನುಕೂಲ ಮಾಡುತ್ತದೆ.

ಈ ತಿಳಿವಳಿಕೆ ಒಪ್ಪಂದವು ಶೈಕ್ಷಣಿಕ ರಚನೆ, ಕಾರ್ಯಕ್ರಮಗಳು ಮತ್ತು ಮಾನದಂಡಗಳ ಬಗ್ಗೆ ದ್ವಿಪಕ್ಷೀಯ ಮಾಹಿತಿ ವಿನಿಮಯವನ್ನು ಉತ್ತೇಜಿಸುತ್ತದೆ ಮತ್ತು ಎರಡು ದೇಶಗಳ ನಡುವೆ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಭೇಟಿಗಳನ್ನು ಹೆಚ್ಚಿಸುತ್ತದೆ. ಮೂರು ದೇಶದ ಸರ್ಕಾರಗಳು ಪರಸ್ಪರ ಒಪ್ಪಿದಂತೆ ಇದು ಅಧ್ಯಯನ ಕಾರ್ಯಕ್ರಮಗಳ ಅಭಿವೃದ್ಧಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಕಾರದ ಇತರ ಕ್ಷೇತ್ರಗಳನ್ನು ಉತ್ತೇಜಿಸುತ್ತದೆ.


ಎರಡು ದೇಶಗಳ ರಾಷ್ಟ್ರೀಯ ನೀತಿ, ಕಾನೂನು, ನಿಯಮಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಅನುಮೋದಿಸಲಾದ ಅರ್ಹತೆಗಳ ಸ್ವೀಕಾರಾರ್ಹತೆಗೆ ಸಂಬಂಧಿಸಿದಂತೆ ಸಮಾನತೆಗೆ ಅನುಗುಣವಾಗಿ ಈ ತಿಳುವಳಿಕೆ ಒಪ್ಪಂದವು ಸಮಾನತೆಯನ್ನು ಗುರುತಿಸುತ್ತದೆ.

*****(Release ID: 1857655) Visitor Counter : 105