ಸಂಪುಟ

ಭಾರತ ಗಣರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಮಾಲ್ಡೀವ್ಸ್ ಗಣ್ಯರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಡುವೆ ಸಹಕಾರ ಸಾಧಿಸುವ ಕುರಿತ ತಿಳಿವಳಿಕೆ ಪತ್ರಕ್ಕೆ [ಎಂಒಯು] ಸಂಪುಟ ಅನುಮೋದನೆ

Posted On: 07 SEP 2022 4:03PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ 2022 ರ ಆಗಸ್ಟ್ 2 ರಂದು ಭಾರತ ಗಣರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಮಾಲ್ಡೀವ್ಸ್ ಗಣ್ಯರಾಜ್ಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಡುವೆ ಸಹಕಾರ ಸಾಧಿಸುವ ಕುರಿತ ತಿಳಿವಳಿಕೆ ಪತ್ರಕ್ಕೆ [ಎಂಒಯು] ಸಹಿ ಹಾಕಿದ್ದು, ಇದಕ್ಕೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ.

ಲಾಭಗಳು:

ಈ ತಿಳಿವಳಿಕೆ ಪತ್ರ ಭಾರತ ಮತ್ತು ಮಾಲ್ಡೀವ್ಸ್ ರಾಷ್ಟ್ರಗಳೆರಡೂ ಪರಸ್ಪರ ವಿಪತ್ತು ನಿರ್ವಹಣಾ ಕಾರ್ಯವಿಧಾನದಿಂದ ಪ್ರಯೋಜನ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸಲಿವೆ ಮತ್ತು ಇದರಿಂದ ವಿಪತ್ತು ನಿರ್ವಹಣಾ ವಲಯದಲ್ಲಿ ಸನ್ನದ್ಧತೆ, ಪ್ರತಿಕ್ರಿಯೆ ನೀಡುವ ಹಾಗೂ ಸಾಮರ್ಥ್ಯ ವೃದ್ಧಿಸಲು ಸಹಕಾರಿಯಾಗಲಿದೆ.

ತಿಳಿವಳಿಕೆ ಪತ್ರದ ಮೂಲಭೂತ ಅಂಶಗಳು

i.ತನ್ನ ಭೂ ಪ್ರದೇಶದಲ್ಲಿ ಸಂಭವಿಸುವ ದೊಡ್ಡ ಪ್ರಮಾಣದ ವಿಪತ್ತು ಸಂದರ್ಭದಲ್ಲಿ ತುರ್ತು ಪರಿಹಾರ, ಪ್ರತಿಕ್ರಿಯೆ, ಮಾನವೀಯ ನೆರವಿನ ಕ್ಷೇತ್ರದಲ್ಲಿ ಒಂದು ಕಡೆಯಿಂದ ಬೆಂಬಲ ಕೋರಿದರೆ ಬೆಂಬಲ ದೊರಕಿಸುವುದು.

 ii.ವಿಪತ್ತು ಪ್ರತಿಕ್ರಿಯೆ, ತಗ್ಗಿಸುವಿಕೆ, ಯೋಜನೆ ಮತ್ತು ಸನ್ನದ್ಧತೆ, ಮಾಹಿತಿ ಮತ್ತು ಅನುಭವಗಳ ವಿನಿಮಯ ಮಾಡಿಕೊಳ್ಳುವುದು.

 iii.ವಿಪತ್ತನ್ನು ತಗ್ಗಿಸಲು ಉಭಯ ಪಕ್ಷಗಳಿಂದ ದೂರ ಸಂವೇದಿ ದತ್ತಾಂಶ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಅಪ್ಲಿಕೇಶನ್          ಗಳು, ವಿಪತ್ತು ನಿಯಂತ್ರಣ ಕುರಿತ ಮಾಹಿತಿ ಹಾಗೂ ಅಪಾಯವನ್ನು ಅಂದಾಜಿಸುವ ವಿವರಗಳನ್ನು                                      ಪರಿಣಾಮಕಾರಿಯಾಗಿ ಹಂಚಿಕೊಳ್ಳುವುದು.

 iv.ಆಧುನಿಕ ಮಾಹಿತಿ ತಂತ್ರಜ್ಞಾನ, ಮುಂದಾಗಿಯೇ ಮುನ್ನಚ್ಚರಿಕೆ ನೀಡುವ ವ್ಯವಸ್ಥೆ, ದೂರ ಸಂವೇದಿ, ಉಪಗ್ರಹ ಸಂಪರ್ಕ ಹಾಗೂ ನೌಕಾ ವಲಯದ ಸೇವೆಗಳಲ್ಲಿ ಸಹಕಾರ ಹೆಚ್ಚಳಕ್ಕೆ ಕ್ರಮ.

 v.ವಿಪತ್ತು ತಗ್ಗಿಸುವ ವಲಯನ್ನು ಮುಖ್ಯವಾಹಿಗೆ ತರಲು ತರಬೇತಿ, ಸಾಮರ್ಥ್ಯ ವರ್ಧನೆ ಕಾರ್ಯಕ್ರಮಗಳನ್ನು ಪರಿಗಣಿಸುವ, ಹಿರಿಯ ಅಧಿಕಾರಿಗಳು ಮತ್ತು ತುರ್ತು ನಿರ್ವಹಣಾ ರಕ್ಷಣಾ ಸೇವೆಯ ಸಿಬ್ಬಂದಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ತರಬೇತಿ ನೀಡಲು ಅವಕಾಶ ಒದಗಿಸುವುದು.  

vi.ಉಭಯ ದೇಶಗಳಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲದೇ ಕಸರತ್ತು ಮತ್ತು ಸಂಶೋಧನೆ, ಜ್ಞಾನ ವಿನಿಮಯ, ಬೋಧನಾ ವಲಯದಲ್ಲಿ ಬೆಂಬಲದ ಕಾರ್ಯಕ್ರಮಗಳು, ಅಪಾಯ ತಗ್ಗಿಸುವ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವದಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಹವಾಮಾನ ಬದಲಾವಣೆ ಹೊಂದಾಣಿಕೆ ವಲಯದಲ್ಲಿನ ಉಪಕ್ರಮಗಳನ್ನು ದಾಖಲು ಮಾಡಲು ಕ್ರಮ.

vii.ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಲ್ಲಿ ಹೆಚ್ಚಿನ ದೃಢವಾದ ಸಹಕಾರ ಹೊಂದುವುದು.

viii.ಕರಾವಳಿಯ ಸಾಗರ ವಲಯದ ವಿಪತ್ತುಗಳಿಂದಾಗಿ ಸುನಾಮಿ ಸಲಹೆಗಳು, ಚಂಡಮಾರುತಗಳ ಉಲ್ಬಣ, ದೊಡ್ಡ ಅಲೆಗಳ ಬಗ್ಗೆ ಮುನ್ನೆಚ್ಚರಿಕೆ, ಬಹು ಅಪಾಯಕಾರಿ ಹಾಗೂ ಅಪಾಯದ ಮೌಲ್ಯ ಮಾಪನದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು.

ix.ಹವಾಮಾನ ಸಾಂಖ್ಯಿಕ ಮುನ್ನೆಚ್ಚರಿಕೆ [ಎನ್.ಡಬ್ಲ್ಯೂ.ಪಿ] ಉತ್ಪನ್ನಗಳು ಹಾಗೂ ವಿಸ್ತರಿತ ಶ್ರೇಣಿ ಮುನ್ನೆಚ್ಚರಿಕೆ [ಇ.ಆರ್.ಎಫ್] ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು.

 x.ಭಾರತೀಯ ಹವಾಮಾನ ಉಪಗ್ರಹ ದತ್ತಾಂಶವನ್ನು ದೃಶ್ಯೀಕರಿಸುವ ಉತ್ಪನ್ನಗಳು ಮತ್ತು ನೈಜ ಸಮಯದಲ್ಲಿ ಮಾಹಿತಿ ಪ್ರಸರಣದ ವಿಶ್ಲೇಷಣೆ [ರಾಪಿಡ್] ವ್ಯವಸ್ಥೆಗೆ ಮಾಹಿತಿ ಒದಗಿಸುವುದು. ಐಎಂಡಿಯಿಂದ ಎನ್.ಡಬ್ಲ್ಯೂ.ಪಿ ಹಾಗೂ ಉಪಗ್ರಹದ ಪವನಶಾಸ್ತ್ರದ ಬಗ್ಗೆ ತರಬೇತಿ ನೀಡುವುದು ಸೇರಿದಂತೆ ಮಾಹಿತಿಯನ್ನು ವಿನಿಯಮ ಮಾಡಿಕೊಳ್ಳಬಹುದು.

 xi.ವಿವಿಧ ಭೌಗೋಳಿಕ ಸನ್ನಿವೇಶದಲ್ಲಿ ವಾರ್ಷಿಕ ವಿಪತ್ತು ನಿರ್ವಹಣಾ ಅಭ್ಯಾಸವನ್ನು ಎರಡೂ ರಾಷ್ಟ್ರಗಳು ಆರಂಭಿಸಲು ಕ್ರಮ ತೆಗೆದುಕೊಳ್ಳುವುದು.

*****
 



(Release ID: 1857653) Visitor Counter : 157