ಪ್ರಧಾನ ಮಂತ್ರಿಯವರ ಕಛೇರಿ

ಅಂಡರ್ 20 ವಿಶ್ವ ಚಾಂಪಿಯನ್ ಶಿಪ್ ನಲ್ಲಿ 16 ಪದಕಗಳನ್ನು ಗೆದ್ದ ಭಾರತೀಯ ಕುಸ್ತಿ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

Posted On: 22 AUG 2022 10:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಡರ್ 20 ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ 16 ಪದಕಗಳನ್ನು (ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್ ನಲ್ಲಿ ತಲಾ 7 ಮತ್ತು ಗ್ರೀಕೋ-ರೋಮನ್ ನಲ್ಲಿ 2) ಗೆದ್ದ ಭಾರತೀಯ ಕುಸ್ತಿ ತಂಡವನ್ನು ಅಭಿನಂದಿಸಿದ್ದಾರೆ.

ಈ ಬಗ್ಗೆ ಪ್ರಧಾನ ಮಂತ್ರಿ ಅವರು  ಟ್ವೀಟ್ ಮಾಡಿದ್ದಾರೆ:

"ನಮ್ಮ ಕುಸ್ತಿಪಟುಗಳು ನಮಗೆ ಮತ್ತೆ ಹೆಮ್ಮೆ ತಂದಿದ್ದಾರೆ! ಅಂಡರ್ 20 ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ 16 ಪದಕಗಳನ್ನು (ಪುರುಷರ ಮತ್ತು ಮಹಿಳೆಯರ ಫ್ರೀಸ್ಟೈಲ್ ನಲ್ಲಿ ತಲಾ 7 ಮತ್ತು ಗ್ರೀಕೋ-ರೋಮನ್ ನಲ್ಲಿ 2) ಗೆದ್ದ ನಮ್ಮ ತಂಡಕ್ಕೆ ಅಭಿನಂದನೆಗಳು. ಇದು ಭಾರತದ ಅತ್ಯುತ್ತಮ ಸಾಧನಾ ಪ್ರದರ್ಶನವಾಗಿದೆ. ಇದು ಭಾರತೀಯ ಕುಸ್ತಿಯ ಭವಿಷ್ಯವು ಸುರಕ್ಷಿತ ಕೈಯಲ್ಲಿದೆ ಎಂಬುದನ್ನು ತೋರಿಸುತ್ತದೆ" ಎಂದು ಅವರು ಹೇಳಿದ್ದಾರೆ.

 


 

*****************



(Release ID: 1853768) Visitor Counter : 125