ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಸಿಡ್ನಿಯ ವಿವಿಧ ಶಾಲೆಗಳು, ಉನ್ನತ ಮತ್ತು ಕೌಶಲ್ಯ ಸಂಸ್ಥೆಗಳಿಗೆ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಭೇಟಿ ನೀಡಿದರು
ಆಸ್ಟ್ರೇಲಿಯಾದ ಆರಂಭಿಕ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆಯ ಉತ್ತಮ ಅಭ್ಯಾಸಗಳು ಮತ್ತು ಸಕಾರಾತ್ಮಕ ಅನುಭವಗಳನ್ನು ಭಾರತದಲ್ಲಿ ಪುನರಾವರ್ತಿಸಬಹುದು - ಶ್ರೀ ಧರ್ಮೇಂದ್ರ ಪ್ರಧಾನ್
Posted On:
22 AUG 2022 4:59PM by PIB Bengaluru
ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು ಸಿಡ್ನಿಯ ವಿವಿಧ ಶಾಲೆಗಳು, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಸಂಸ್ಥೆಗಳಿಗೆ ಭೇಟಿ ನೀಡಿದರು. ಶಿಕ್ಷಣ, ಸಂಶೋಧನೆ ಮತ್ತು ಕೌಶಲ್ಯ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಸಚಿವರು ನಾಲ್ಕು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
ನ್ಯೂ ಸೌತ್ ವೇಲ್ಸ್ ರಾಜ್ಯದ ಹೋಮ್ಬುಷ್ ವೆಸ್ಟ್ ಪಬ್ಲಿಕ್ ಶಾಲೆಗೆ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಘನತೆವೆತ್ತ ಸಾರಾ ಮಿಚೆಲ್, ಎಂ.ಎಲ್.ಸಿ, ನ್ಯೂ ಸೌತ್ ವೇಲ್ಸ್, ಶಿಕ್ಷಣ ಮತ್ತು ಆರಂಭಿಕ ಬಾಲ್ಯದ ಕಲಿಕೆಯ ಸಚಿವರೊಂದಿಗೆ ಭೇಟಿ ನೀಡಿ ಶಾಲಾ ಉತ್ಕೃಷ್ಟತೆ ಮತ್ತು ಶ್ರೇಷ್ಠತೆಯ ಚೌಕಟ್ಟುಗಳು ಮತ್ತು ಬಾಲ್ಯದ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವಲ್ಲಿನ ಉತ್ತಮ ಅಭ್ಯಾಸಗಳ ಕುರಿತು ಅನುಭವಗಳನ್ನು ಪಡೆದರು. ಶಾಲೆಯ ಯುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಶ್ರೀ ಪ್ರಧಾನ್ ಅವರು ಮಕ್ಕಳಿಗೆ ಕೈಗೆಟುಕುವ, ಸುಲಭವಾಗಿ ಮತ್ತು ಸಾರ್ವತ್ರಿಕ ಆರಂಭಿಕ ಶಿಕ್ಷಣದ ಲಭ್ಯತೆಯು, ಉತ್ತಮ ಕಲಿಕೆಯ ಫಲಿತಾಂಶ ಮತ್ತು ಉಜ್ವಲ ಭವಿಷ್ಯಕ್ಕಾಗಿ ಎಲ್ಲರಿಗೂ ಸಿಗುವ ಅವಕಾಶಗಳು ಇಲ್ಲಿನ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ನ್ಯೂ ಸೌತ್ ವೇಲ್ಸ್ ನಲ್ಲಿನ ಆರಂಭಿಕ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆಯಲ್ಲಿನ ಉತ್ತಮ ಅಭ್ಯಾಸಗಳು ಮತ್ತು ಸಕಾರಾತ್ಮಕ ಅನುಭವಗಳನ್ನು ಭಾರತದಲ್ಲಿ ಅನುಸರಿಸಿ ಪುನರಾವರ್ತಿಸಬಹುದು ಎಂದು ಸಚಿವರು ಹೇಳಿದರು.
ಟಿ.ಎ.ಎಫ್.ಇ. ಎನ್.ಎಸ್.ಎಫ್. ನಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಟೆಕ್ನಾಲಜಿಗೆ ಕೇಂದ್ರ ಸಚಿವ ಶ್ರೀ ಪ್ರಧಾನ್ ಅವರು ಘನತೆವೆತ್ತ ಜೇಸನ್ ಕ್ಲೇರ್ ಅವರೊಂದಿಗೆ ಭೇಟಿ ನೀಡಿದರು. “ಜಾಗತಿಕ ಅವಕಾಶಗಳಿಗೆ ಸಂಬಂಧಿಸಿದ ಹೊಸ-ಯುಗದ ಕೌಶಲ್ಯಗಳೊಂದಿಗೆ ಯುವಕರನ್ನು ಸಜ್ಜುಗೊಳಿಸಲು ಮತ್ತು ಮೂಲಸೌಕರ್ಯ ಯೋಜನೆಗಳು ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಪೂರಕ ಸೌಲಭ್ಯ ಇರುವ ವಿಶೇಷ ತರಬೇತಿ ಕೇಂದ್ರ ಇದಾಗಿದೆ” ಎಂದು ಸಚಿವರು ಹೇಳಿದರು. “ಬೆಳೆಯುತ್ತಿರುವ ಲಾಜಿಸ್ಟಿಕ್ಸ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರಿಗೆ ಕ್ಷೇತ್ರವನ್ನು ಬೆಂಬಲಿಸಲು, ಹಾಗೂ ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ರೂಪಿಸುವ ಗುರಿಯೊಂದಿಗೆ ಭಾರತವು ಬಹು-ಶಿಸ್ತಿನ ಮತ್ತು ಬಹು ಆಯಾಮದ ಗತಿ-ಶಕ್ತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ” ಎಂದು ಸಚಿವರು ಹೇಳಿದರು.
“ಬೆಳೆಯುತ್ತಿರುವ ಲಾಜಿಸ್ಟಿಕ್ಸ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾರಿಗೆ ವಲಯವನ್ನು ಬೆಂಬಲಿಸಲು, ಮುಂದಿನ ಪೀಳಿಗೆಯ ನುರಿತ ವೃತ್ತಿಪರರನ್ನು ರಚಿಸುವ ಗುರಿಯೊಂದಿಗೆ ಭಾರತವು ಬಹು-ಶಿಸ್ತಿನ ಮತ್ತು ಬಹು ಆಯಾಮದ ಗತಿ ಶಕ್ತಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಿದೆ” ಎಂದು ಸಚಿವರು ಹೇಳಿದರು. “ಉದ್ಯಮ-ಕೇಂದ್ರಿತ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು, ಕೌಶಲ್ಯವನ್ನು ಹೆಚ್ಚಿಸುವುದು, ಕೌಶಲ್ಯಗಳ ಅಂತರವನ್ನು ಕಡಿಮೆಗೊಳಿಸುವುದು, ಮರು-ಕೌಶಲ್ಯ ರೂಪಿಸುವುದು, ನೂತನ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸುವಲ್ಲಿ ಗತಿ ಶಕ್ತಿ ವಿಶ್ವವಿದ್ಯಾಲಯ ಮತ್ತು ಇನ್ಸ್ಟಿಟ್ಯೂಟ್ ಆಫ್ ಅಪ್ಲೈಡ್ ಟೆಕ್ನಾಲಜಿ ಫಾರ್ ಕನ್ ಸ್ಟ್ರಕ್ಷನ್ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬಹುದು” ಎಂದು ಸಚಿವರು ಹೇಳಿದರು.
ನಂತರ ಸಂಜೆ, ಸಿಡ್ನಿಯ ಯು.ಎನ್.ಎಸ್.ಡಬ್ಲ್ಯು.ನಲ್ಲಿ ಸಾಂಸ್ಥಿಕ ಸಹಯೋಗದ ಮೂಲಕ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳು ನಮ್ಮ ಭವಿಷ್ಯವನ್ನು ಪರಿವರ್ತಿಸುವ ಕುರಿತು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀ ಪ್ರಧಾನ್ ಅವರು ಭಾಗವಹಿಸಿ, ಆಸ್ಟ್ರೇಲಿಯನ್ ಸರ್ಕಾರದ ಉಪಕುಲಪತಿಗಳು ಮತ್ತು ಶಿಕ್ಷಣ ಇಲಾಖೆಯ ಹಿರಿಯ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
******
(Release ID: 1853702)
Visitor Counter : 156