ಪ್ರಧಾನ ಮಂತ್ರಿಯವರ ಕಛೇರಿ

ಸಿಡಬ್ಲ್ಯೂಜಿ 2022 ಮಹಿಳೆಯರ 50 ಕೆ.ಜಿ. ಬಾಕ್ಸಿಂಗ್ ನಲ್ಲಿ ಸ್ವರ್ಣಪದಕ ಗೆದ್ದ ನಿಖತ್ ಝರೀನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

Posted On: 07 AUG 2022 8:11PM by PIB Bengaluru

ಕಾಮನ್ ವೆಲ್ತ್ ಕ್ರೀಡಾಕೂಟ 2022 ರ ಮಹಿಳೆಯರ 50 ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ ಸ್ವರ್ಣಪದಕ ಗೆದ್ದ ನಿಖತ್ ಝರೀನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ

“ನಿಖತ್ ಝರೀನ್ ಭಾರತದ ಹೆಮ್ಮೆ. ತನ್ನ ಕೌಶಲ್ಯಕ್ಕಾಗಿ ಆಕೆ ಮೆಚ್ಚುಗೆ ಪಡೆದ ವಿಶ್ವದರ್ಜೆಯ ಅಥ್ಲೀಟ್. ವಿವಿಧ ಟೂರ್ನಿಗಳಲ್ಲಿ ಮಿಂಚಿದ ಅವರು ಉತ್ತಮ ಸ್ಥಿರತೆಯನ್ನು ಪ್ರದರ್ಶಿಸಿದ್ದಾರೆ. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. #ಚೀರ್4ಭಾರತ” ಎಂದು ಹೇಳಿದ್ದಾರೆ.

 


*******



(Release ID: 1853574) Visitor Counter : 92