ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೃಷಿ ಮತ್ತು ಗ್ರಾಮೀಣ ಕಾರ್ಮಿಕರಿಗಾಗಿ ಅಖಿಲ ಭಾರತ ಗ್ರಾಹಕರ ಸೂಚ್ಯಂಕ ಸಂಖ್ಯೆಗಳು - ಜುಲೈ 2022

Posted On: 19 AUG 2022 12:23PM by PIB Bengaluru

2022 ರ ಜುಲೈ ತಿಂಗಳಿಗೆ ಅನ್ವಯವಾಗುವಂತೆ ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕರ ಅಖಿಲ ಭಾರತ ಗ್ರಾಹಕರ ಬೆಲೆ ಸೂಚ್ಯಂಕ ಸಂಖ್ಯೆ [ಮೂಲ: 1986-87=100] ಕ್ರಮವಾಗಿ 6 ಅಂಕಗಳ ಏರಿಕೆ ಕಂಡು 1131 ರಲ್ಲಿ [ಒಂದು ಸಾವಿರದ ಒಂದು ನೂರ ಮೂವತ್ತೊಂದು] ಮತ್ತು 1143 [ಒಂದು ಸಾವಿರದ ಒಂದು ನೂರ ನಲವತ್ಮೂರು]ಕ್ಕೆ ಹೆಚ್ಚಳವಾಗಿದೆ. ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಕಾರ್ಮಿಕರ ಸಾಮಾನ್ಯ ಸೂಚ್ಯಂಕ ಏರಿಕೆಗೆ ಆಹಾರ ಗುಂಪಿನಿಂದ 4.41 ಮತ್ತು 4.07 ಅಂಕಗಳ ಏರಿಕೆ ಕಾರಣವಾಗಿದ್ದು, ಪ್ರಮುಖವಾಗಿ ಅಕ್ಕಿ, ಗೋಧಿ, ಗೋಧಿ ಹಿಟ್ಟು, ಸಜ್ಜೆ, ಬೇಳೆಕಾಳುಗಳು, ಹಾಲು, ತಾಜಾ ಮೀನು, ಈರುಳ್ಳಿ, ಮೆಣಸಿನಕಾಯಿ, ಹಸಿರು/ಒಣಶುಂಠಿ, ಮಸಾಲೆ ಮಿಶ್ರಣಗಳು, ತರಕಾರಿಗಳು, ಹಣ್ಣು ಮತ್ತು ಚಹಾ ಇತ್ಯಾದಿ ವಸ್ತುಗಳ ದರ ಏರಿಕೆ ಇದಕ್ಕೆ ಕಾರಣವಾಗಿದೆ.

ಸೂಚ್ಯಂಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದ ನಡುವೆ ಭಿನ್ನವಾಗಿದೆ. ಕೃಷಿ ಕಾರ್ಮಿಕರ ವಲಯದಲ್ಲಿ 20 ರಾಜ್ಯಗಳಲ್ಲಿ 1 ರಿಂದ 13 ಅಂಕಗಳಷ್ಟು ಏರಿಕೆಯಾಗಿದೆ. 1301 ಅಂಕಗಳಷ್ಟು ಏರಿಕೆಯಾಗಿರುವ ತಮಿಳುನಾಡು ಸೂಚ್ಯಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 890 ಅಂಕಗಳನ್ನು ಪಡೆದಿರುವ ಹಿಮಾಚಲ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಗ್ರಾಮೀಣ ಕಾರ್ಮಿಕರ ವಲಯದಲ್ಲಿ 20 ರಾಜ್ಯಗಳಲ್ಲಿ 1 ರಿಂದ 13 ಅಂಕಗಳಷ್ಟು ಏರಿಕೆಯಾಗಿದೆ. 1290 ಅಂಕಗಳೊಂದಿಗೆ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು, 942 ಅಂಕಗಳನ್ನು ಪಡೆದಿರುವ ಹಿಮಾಚಲ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ಈ ರಾಜ್ಯಗಳಲ್ಲಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ವಲಯದ ಗ್ರಾಹಕರ ದರ ಸೂಚ್ಯಂಕದಲ್ಲಿ ಅಸ್ಸಾಂ [ತಲಾ 13 ಅಂಕಗಳು] ಮೊದಲ ಸ್ಥಾನದಲ್ಲಿದ್ದು, ಅಕ್ಕಿ, ಹಸಿರು ಮೆಣಸಿನಕಾಯಿ, ತರಕಾರಿ ಮತ್ತು ಹಣ್ಣುಗಳು, ಇತ್ಯಾದಿ ವಸ್ತುಗಳ ದರದಲ್ಲಿ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ.

ಅಂಕಗಳಿಂದ ಅಂಕಗಳ ಆಧಾರದ ಸಿಪಿಐ-ಎಎಲ್ ಹಾಗೂ ಸಿಪಿಐ-ಆರ್ ಎಲ್ ನ ದರ 2022 ರ ಜೂನ್ ನಲ್ಲಿ 6.43% ಮತ್ತು 6.76% ರಷ್ಟಿತ್ತು, ಇದು 2022 ರ ಜುಲೈನಲ್ಲಿ 6.60% ಮತ್ತು 6.82% ರಷ್ಟಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ 3.92% ಮತ್ತು 4.09% ರಷ್ಟಿತ್ತು. ಆಹಾರ ಹಣದುಬ್ಬರ 2022 ರ ಜುಲೈನಲ್ಲಿ 5.38% ಮತ್ತು 5.44% ರಷ್ಟಿತ್ತು. 2022 ರ ಜೂನ್ ನಲ್ಲಿ 5.09% ಮತ್ತು 5.16% ರಷ್ಟು ದಾಖಲಾಗಿತ್ತು.  ಹಿಂದಿನ ವರ್ಷದ ಇದೇ ತಿಂಗಳಲ್ಲಿ ಕ್ರಮವಾಗಿ 2.66% ಮತ್ತು 2.74% ರಷ್ಟು ದಾಖಲಾಗಿತ್ತು. 

 

ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕ ಸಂಖ್ಯೆ [ಸಾಮಾನ್ಯ ಮತ್ತು ಗುಂಪುವಾರು]:
 

ಗುಂಪು

ಕೃಷಿ ಕಾರ್ಮಿಕರು

ಗ್ರಾಮೀಣ ಕಾರ್ಮಿಕರು

 

June, 2022

July, 2022

June, 2022

July, 2022

ಸಾಮಾನ್ಯ ಸೂಚ್ಯಂಕ

1125

1131

1137

1143

ಆಹಾರ

1052

1058

1060

1066

ಎಲೆ, ಅಡಿಕೆ, ಇತ್ಯಾದಿ.

1911

1913

1920

1923

ಇಂಧನ ಮತ್ತು ದೀಪ

1261

1263

1254

1255

ಬಟ್ಟೆ, ಹಾಸಿಗೆ ಮತ್ತು ಪಾದರಕ್ಷೆ 

1183

1190

1218

1226

ಇತರೆ

1191

1196

1196

1201

 

****************



(Release ID: 1853132) Visitor Counter : 168