ಗೃಹ ವ್ಯವಹಾರಗಳ ಸಚಿವಾಲಯ
ರೋಹಿಂಗ್ಯಾ ಅಕ್ರಮ ವಿದೇಶಿಯರು
Posted On:
17 AUG 2022 3:16PM by PIB Bengaluru
ರೋಹಿಂಗ್ಯಾ ಅಕ್ರಮ ವಿದೇಶಿಯರ ಕುರಿತು ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿ, ನವದೆಹಲಿಯ ಬಕ್ಕರ್ ವಾಲಾದಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರಿಗೆ ಇಡಬ್ಲ್ಯೂಎಸ್ ವರ್ಗದ ವಸತಿ ಫ್ಲಾಟ್ ಗಳನ್ನು ಒದಗಿಸುವಂತೆ ಯಾವುದೇ ನಿರ್ದೇಶನ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.
ದೆಹಲಿ ಸರ್ಕಾರ ರೋಹಿಂಗ್ಯಾ ಅಕ್ರಮ ವಲಸಿಗರನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಆದರೆ ಕೇಂದ್ರ ಗೃಹ ಸಚಿವಾಲಯ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿ, ಇವರನ್ನು ಪ್ರಸ್ತುತ ಕಾಂಚನ್ ಕಂಜ್, ಮದನ್ಪುರ್ ಪ್ರದೇಶದಲ್ಲಿ ಇರಿಸಿದ್ದು, ಇಲ್ಲೇ ಮುಂದುವರೆಸುವಂತೆ ಸೂಚಿಸಿದೆ. ಗೃಹ ವ್ಯವಹಾರಗಳ ಸಚಿವಾಲಯ ಈ ವಿಷಯವನ್ನು ಸಂಬಂಧಪಟ್ಟ ದೇಶದೊಂದಿಗೆ ಅಕ್ರಮವಾಗಿ ನುಸುಳಿರುವ ವಿದೇಶಿಯರನ್ನು ಗಡಿಪಾರು ಮಾಡುವ ವಿಷಯವನ್ನು ಪ್ರಸ್ತಾಪಿಸಿದೆ.
ಅಕ್ರಮ ವಿದೇಶಿಯರನ್ನು ಗಡಿಪಾರು ಮಾಡುವವರೆಗೆ ಕಾನೂನು ಪ್ರಕಾರ ಬಂಧನ ಕೇಂದ್ರದಲ್ಲಿ ಇಡಬೇಕು. ಆದರೆ ದೆಹಲಿ ಸರ್ಕಾರ ಪ್ರಸ್ತುತ ಇವರನ್ನು ಇರಿಸಿರುವ ಸ್ಥಳವನ್ನು ಬಂಧನ ಕೇಂದ್ರ ಎಂದು ಘೋಷಿಸಿಲ್ಲ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
**************
(Release ID: 1852565)
Visitor Counter : 268