ಗೃಹ ವ್ಯವಹಾರಗಳ ಸಚಿವಾಲಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಹರ್ ಘರ್ ತಿರಂಗಾ ಕರೆಯ ಹಿನ್ನೆಲೆಯಲ್ಲಿ ನವದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರದ ತ್ರಿವರ್ಣಧ್ವಜ ಹಾರಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಮಾತೃಭೂಮಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಧೈರ್ಯಶಾಲಿ ನಾಯಕರಿಗೆ ನಮನ ಸಲ್ಲಿಸಿದ ಶ್ರಿ ಅಮಿತ್ ಶಾ


ದೇಶಪ್ರೇಮವನ್ನು ಜಾಗೃತಗೊಳಿಸಲು ಅಭಿಯಾನದ ಭಾಗವಾಗಿ ಆಗಸ್ಟ್ 13ರಿಂದ 15ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವಂತೆ ದೇಶವಾಸಿಗಳಿಗೆ ಮನವಿ


ರಾಷ್ಟ್ರ ಧ್ವಜದ ಜೊತೆಗಿನ ಫೋಟೋವನ್ನು http://harghartiranga.com ನಲ್ಲಿ ಅಪ್ ಲೋಡ್ ಮಾಡಿ ಮತ್ತು ಇತರರೂ ಸಹ ತ್ರಿವರ್ಣ ಧ್ವಜ ಜೊತೆ ಫೋಟೋ ಅಪ್ ಲೋಡ್ ಮಾಡಲು ಪ್ರೇರೇಪಿಸಿ

Posted On: 13 AUG 2022 11:35AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗಾ ಕರೆಯ ಭಾಗವಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು ಹಾರಿಸಿದರು. ತಾಯ್ನಾಡಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು.

          ಶ್ರೀ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ, “ತಿರಂಗಾ ನಮ್ಮ ಹೆಮ್ಮೆ. ಇದು ಪ್ರತಿಯೊಬ್ಬ ಭಾರತೀಯರನ್ನು ಒಂದುಗೂಡಿಸುತ್ತದೆ ಮತ್ತು ಪ್ರೇರಣೆ ನೀಡುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹರ್ ಘರ್ ತಿರಂಗಾ ಕರೆಯ ಭಾಗವಾಗಿ ನಾನು ಇಂದು ದೆಹಲಿಯ ನನ್ನ ನಿವಾಸದಲ್ಲಿ ತಿರಂಗಾವನ್ನು ಹಾರಿಸಿ, ಮಾತೃಭೂಮಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ನಮ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದೆನು’’ ಎಂದು ಹೇಳಿದ್ದಾರೆ.

 ಕೇಂದ್ರ ಗೃಹ ಸಚಿವರು, “ಆಗಸ್ಟ್ 13 ರಿಂದ 15 ರವರೆಗೆ ತಮ್ಮ ತಮ್ಮ ಮನೆಗಳಲ್ಲಿ ತಿರಂಗಾವನ್ನು ಹಾರಿಸಲು ನಾನು ಎಲ್ಲಾ ದೇಶವಾಸಿಗಳಿಗೆ ಮನವಿ ಮಾಡುತ್ತೇನೆ ಮತ್ತು ಪ್ರತಿಯೊಬ್ಬರ ಹೃದಯದಲ್ಲಿ ದೇಶಭಕ್ತಿಯ ಭಾವನೆ ಜಾಗೃತಗೊಳಿಸುವ ಈ ಅಭಿಯಾನದ ಭಾಗವಾಗಿರಿ. ಅಲ್ಲದೆ, ತಿರಂಗಾದೊಂದಿಗೆ ನಿಮ್ಮ ಫೋಟೋವನ್ನು http://harghartiranga.com ನಲ್ಲಿ ಅಪ್‌ಲೋಡ್ ಮಾಡಿ ಮತ್ತು ಅದನ್ನು ಮಾಡಲು ಇತರರನ್ನು ಉತ್ತೇಜಿಸಿ’’ ಎಂದು ಹೇಳಿದ್ದಾರೆ. 

********

 



(Release ID: 1851595) Visitor Counter : 168