ಪ್ರಧಾನ ಮಂತ್ರಿಯವರ ಕಛೇರಿ

ಅಶುರಾ ದಿನದಂದು ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವನ್ನು ಸ್ಮರಿಸಿದ ಪ್ರಧಾನಿ

Posted On: 09 AUG 2022 10:32AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಶುರಾ ದಿನದಂದು ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವನ್ನು ಸ್ಮರಿಸಿದ್ದಾರೆ ಮತ್ತು ಸತ್ಯಕ್ಕಾಗಿ ಅವರ ಅಚಲವಾದ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಹೋರಾಟಕ್ಕಾಗಿ ಅವರನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

 

ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಿಯವರು, "ಇಂದು ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಸತ್ಯಕ್ಕಾಗಿ ಅವರ ಅಚಲ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಹೋರಾಟಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಸಮಾನತೆ ಮತ್ತು ಸಹೋದರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು." ಎಂದು ತಿಳಿಸಿದ್ದಾರೆ.

 

ಇಂದು ಹಜರತ್ ಇಮಾಮ್ ಹುಸೇನ್ (ಎಎಸ್) ಅವರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ. ಸತ್ಯಕ್ಕಾಗಿ ಅವರ ಅಚಲ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಹೋರಾಟಕ್ಕಾಗಿ ಅವರನ್ನು ಸ್ಮರಿಸಲಾಗುತ್ತದೆ. ಅವರು ಸಮಾನತೆ ಮತ್ತು ಸಹೋದರತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು

— ನರೇಂದ್ರ ಮೋದಿ (@narendramodi) ಆಗಸ್ಟ್ 9, 2022

 


 

***********



(Release ID: 1850411) Visitor Counter : 112