ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಹರ್ ಘರ್ ತಿರಂಗಾ ಅಭಿಯಾನ: ಸ್ವಾತಂತ್ರ್ಯ ದಿನಾಚರಣೆಯವರೆಗೆ ರಜಾದಿನಗಳೂ ಸೇರಿದಂತೆ ಎಲ್ಲಾ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಅಂಚೆ ಕಚೇರಿಗಳು


ಇದು ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುಕೂಲ ಕಲ್ಪಿಸುತ್ತದೆ

Posted On: 06 AUG 2022 6:30PM by PIB Bengaluru

ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರಾಷ್ಟ್ರಧ್ವಜಗಳ ಮಾರಾಟ ಮತ್ತು ವಿತರಣೆಗೆ ಅನುವಾಗುವಂತೆ, ಎಲ್ಲಾ ಅಂಚೆ ಕಚೇರಿಗಳು 2022ರ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಬರುವ ರಜಾದಿನಗಳಲ್ಲೂ ಕಾರ್ಯನಿರ್ವಹಿಸುತ್ತವೆ.

ಈ ಸಾರ್ವಜನಿಕ ಅಭಿಯಾನವನ್ನು ಬೆಂಬಲಿಸಲು ದೇಶಾದ್ಯಂತದ ಎಲ್ಲಾ ವಿತರಣಾ ಅಂಚೆ ಕಚೇರಿಗಳು ಮತ್ತು ಇತರ ಪ್ರಮುಖ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತವೆ.

ಸಾರ್ವಜನಿಕ ರಜಾದಿನಗಳಲ್ಲಿ ಅಂದರೆ 2022ರ ಆಗಸ್ಟ್ 7, 9 ಮತ್ತು 14 ರಂದು ಅಂಚೆ ಕಚೇರಿಗಳಲ್ಲಿ ಕನಿಷ್ಠ ಒಂದು ಕೌಂಟರ್ ಮೂಲಕ ರಾಷ್ಟ್ರಧ್ವಜಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ವಿತರಣಾ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳ ವಿತರಣೆಗೆ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗುವುದು.

 

*******(Release ID: 1849204) Visitor Counter : 128