ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಆಹಾರ ಸಂಸ್ಕರಣಾ ವಲಯದಲ್ಲಿ ವೋಕಲ್ ಫಾರ್ ಲೋಕಲ್

Posted On: 26 JUL 2022 12:10PM by PIB Bengaluru

ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ - ಆಹಾರ ಸಂಸ್ಕರಣಾ ವಲಯದಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವ (ವೋಕಲ್ ಫಾರ್ ಲೋಕಲ್) ಉಪಕ್ರಮಕ್ಕಾಗಿ ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ (ಎಂಒಪಿಎಫ್ ಐ) ಹಣಕಾಸು, ತಾಂತ್ರಿಕ ಮತ್ತು ವ್ಯವಹಾರಿಕ ಬೆಂಬಲವನ್ನು ನೀಡಲು ಮತ್ತು  ದೇಶದಲ್ಲಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆ/ಮೇಲ್ದರ್ಜೆಗೇರಿಸಲು ಕೇಂದ್ರದ ಪ್ರಾಯೋಜಿತ ‘ಪ್ರಧಾನಮಂತ್ರಿಗಳ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ಸಾಂಸ್ಥೀಕರಣ ಯೋಜನೆ (ಪಿಎಂಎಫ್ಎಂಇ)’ ಯನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯು ಐದು ವರ್ಷಗಳ ಅವಧಿಗೆ ಅಂದರೆ 2020-21 ರಿಂದ 2024-25 ರವರೆಗೆ ಜಾರಿಯಲ್ಲಿರಲಿದ್ದು, ಅದಕ್ಕೆ 10,000 ಕೋಟಿ ರೂ. ವೆಚ್ಚ ಮಾಡಲಾಗುವುದು. ಯೋಜನೆಯು ಪ್ರಾಥಮಿಕವಾಗಿ ‘ಒಂದು ಜಿಲ್ಲೆ-ಒಂದು ಉತ್ಪನ್ನ’ (ಒಡಿಒಪಿ) ವಿಧಾನವನ್ನು ಅಳವಡಿಸಿಕೊಂಡಿದ್ದು, ಬಂಡವಾಳ ಹರಿವಿನ ಸಂಗ್ರಹಣೆ, ಸಾಮಾನ್ಯ ಸೇವೆಗಳನ್ನು ಪಡೆದುಕೊಳ್ಳುವುದು ಮತ್ತು ಉತ್ಪನ್ನಗಳ ಮಾರುಕಟ್ಟೆಯ ವಿಷಯದಲ್ಲಿ ಪ್ರಮಾಣದ ಗರಿಷ್ಠ ಲಾಭವನ್ನು ಪಡೆದುಕೊಳ್ಳಲು ಉದ್ದೇಶಿಸಲಾಗಿದೆ. ಇದು ಮೌಲ್ಯ ಸರಣಿ ಅಭಿವೃದ್ಧಿ ಮತ್ತು ಬೆಂಬಲ ಮೂಲಸೌಕರ್ಯದ ಸಂಯೋಜನೆಗೆ ನೀತಿಯನ್ನು ಒದಗಿಸುತ್ತದೆ. 

ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ, 2015-16 ಮತ್ತು ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆಯ (ಎನ್ಎಸ್ಎಸ್ಓ) 73ನೇ ಸುತ್ತಿನ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸುಮಾರು 25 ಲಕ್ಷ ನೋಂದಣಿಯಾಗದ/ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳಿವೆ. ದೇಶದಲ್ಲಿ ನೋಂದಣಿಯಾಗದ/ಅಸಂಘಟಿತ ಉದ್ಯಮಗಳ ರಾಜ್ಯವಾರು ಸಂಖ್ಯೆಯ ವಿವರಗಳು ಅಡಕ-I ರಲ್ಲಿ ನೀಡಲಾಗಿದೆ. 

ಸಣ್ಣ ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮತ್ತು ಈ ಉದ್ಯಮಗಳನ್ನು ಮೇಲ್ದೆರ್ಜೆಗೇರಿಸುವುದು ಮತ್ತು ಸಾಂಸ್ಥೀಕರಣವನ್ನು ಬೆಂಬಲಿಸುವ ಗುಂಪುಗಳು ಮತ್ತು ಸಹಕಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ ಮಾಡಲು ಪಿಎಂಎಫ್ಎಂಇ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯು ಆಹಾರ ಸಂಸ್ಕರಣಾ ಉದ್ಯಮದ ಅಸಂಘಟಿತ ವಿಭಾಗದಲ್ಲಿ ಹೊಸ ಮತ್ತು ಹಾಲಿ ಅಸ್ತಿತ್ವದಲ್ಲಿರುವ ವ್ಯಕ್ತಿಗತ ಸಣ್ಣ ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ವಲಯದ ಸಾಂಸ್ಥಿಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪಿಎಂಎಫ್ಎಂಇ ಯೋಜನೆಯಡಿಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳಿಗೆ ಲಭ್ಯವಿರುವ ಸಹಾಯದ ವಿವರಗಳು ಹೀಗಿವೆ:

(i). ವೈಯಕ್ತಿಕ/ಗುಂಪು ವರ್ಗದ ಕಿರು ಉದ್ಯಮಗಳಿಗೆ ಬೆಂಬಲ: ಅರ್ಹ ಯೋಜನಾ ವೆಚ್ಚದ @35% ಸಾಲ ಸಂಯೋಜಿತ ಬಂಡವಾಳ ಸಬ್ಸಿಡಿ, ಪ್ರತಿ ಯೂನಿಟ್‌ಗೆ ಗರಿಷ್ಠ 10 ಲಕ್ಷ ರೂ.ವರೆಗೆ ಮಿತಿ. 

 (ii). ಮೂಲ ಬಂಡವಾಳಕ್ಕಾಗಿ ಸ್ವಸಹಾಯ ಗುಂಪುಗಳಿಗೆ ಬೆಂಬಲ: ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವಸಹಾಯ ಗುಂಪುಗಳ ಪ್ರತಿ ಸದಸ್ಯರಿಗೆ ಮೂಲ ಬಂಡವಾಳ  40,000/- ರೂ.ಗಳನ್ನು ದುಡಿಯುವ ಬಂಡವಾಳಕ್ಕಾಗಿ ಒದಗಿಸಲಾಗುವುದು ಮತ್ತು ಪ್ರತಿ ಸ್ವಸಹಾಯ ಸಂಘಗಳ ಒಕ್ಕೂಟಕ್ಕೆ ಸಣ್ಣ ಉಪಕರಣಗಳ ಖರೀದಿಗೆ ಗರಿಷ್ಠ  4 ಲಕ್ಷ ರೂ. 

 (iii). ಸಾಮಾನ್ಯ ಮೂಲಸೌಕರ್ಯಕ್ಕೆ ಬೆಂಬಲ: ಸಾಮಾನ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಎಫ್ ಪಿಒಗಳು, ಎಸ್ ಎಚ್ ಜಿಗಳು, ಸಹಕಾರಿಗಳು ಮತ್ತು ಯಾವುದೇ ಸರ್ಕಾರಿ ಏಜೆನ್ಸಿಯನ್ನು ಬೆಂಬಲ ನೀಡಲು ಶೇ.35ರಷ್ಟು ಸಾಲ ಸಂಯೋಜಿತ ಬಂಡವಾಳ ಸಬ್ಸಿಡಿ, ಗರಿಷ್ಠ 3 ಕೋಟಿ ರೂ. ವರೆಗೆ ಬೆಂಬಲ. ಸಾಮರ್ಥ್ಯದ ಗಣನೀಯ ಭಾಗವನ್ನು ಬಾಡಿಗೆ ಆಧಾರದ ಮೇಲೆ ಬಳಸಿಕೊಳ್ಳಲು ಇತರ ಘಟಕಗಳು ಮತ್ತು ಸಾರ್ವಜನಿಕರಿಗೆ ಸಾಮಾನ್ಯ ಮೂಲಸೌಕರ್ಯಗಳು ಲಭ್ಯವಿರುತ್ತವೆ. 

(iv). ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬೆಂಬಲ: ಎಫ್‌ಪಿಒಗಳು/ಎಸ್‌ಎಚ್‌ಜಿಗಳು/ಸಹಕಾರಿಗಳು ಅಥವಾ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಅಥವಾ ಎಸ್‌ಪಿವಿ ಗುಂಪುಗಳಿಗೆ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗಾಗಿ ಶೇ.50 ವರೆಗೆ ಅನುದಾನ ನೀಡಲಾಗುವುದು. 

(v). ಸಾಮರ್ಥ್ಯ ವೃದ್ಧಿ: ಈ ಯೋಜನೆಯು ಉದ್ಯಮಶೀಲತೆ ಅಭಿವೃದ್ಧಿ ಕೌಶಲ್ಯ((EDP+)ಕ್ಕಾಗಿ ತರಬೇತಿ ಒದಗಿಸುತ್ತದೆ : ಆಹಾರ ಸಂಸ್ಕರಣಾ ಉದ್ಯಮ ಮತ್ತು ಉತ್ಪನ್ನದ ನಿರ್ದಿಷ್ಟ ಕೌಶಲ್ಯದ ಅವಶ್ಯಕತೆಗಳನ್ನು ಪೂರೈಸಲು ಕಾರ್ಯಕ್ರಮವನ್ನು ಮಾರ್ಪಡಿಸಲಾಗಿದೆ. 

ಕಿರು ಆಹಾರ ಸಂಸ್ಕರಣಾ ಉದ್ಯಮಗಳ ತಾಂತ್ರಿಕ ಉನ್ನತೀಕರಣ ಮತ್ತು ಸಾಂಸ್ಥಿಕರಣದಲ್ಲಿ ಸಾಮರ್ಥ್ಯದ ನಿರ್ಮಾಣ ಮತ್ತು ತರಬೇತಿಯು ಯೋಜನೆಯ ನಿರ್ಣಾಯಕ ಅಂಶವಾಗಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮಾನದಂಡಗಳು, ಸಾಮಾನ್ಯ ನೈರ್ಮಲ್ಯ ಮತ್ತು ಇತರ ಶಾಸನಬದ್ಧ ನಿಯಮಗಳ ಅನುಸಾರ ಉದ್ಯಮಶೀಲತೆ ಅಭಿವೃದ್ಧಿಗೆ ಸಾಮರ್ಥ್ಯಗಳನ್ನು ವೃದ್ಧಿಸಲು ಹೆಚ್ಚಿನ ಒತ್ತು ನೀಡಲಾಗುತ್ತದೆ. ಎಫ್‌ಎಸ್‌ಎಸ್‌ಎಐ ಮತ್ತು ಇತರ ಶಾಸನಬದ್ಧ ನಿಯಮಗಳ ಅನುಸಾರ  ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಕೈಹಿಡಿದು ಬೆಂಬಲ ನೀಡುವ ಹೊಣೆಯನ್ನು ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ (ಡಿಆರ್‌ಪಿ) ವಹಿಸಲಾಗಿದೆ. 

ಅಡಕ

ದೇಶದಲ್ಲಿ ರಾಜ್ಯವಾರು  ನೋಂದಾಯಿತವಲ್ಲದ/ಅಸಂಘಟಿತ ಉದ್ಯಮಗಳ ರಾಜ್ಯವಾರು ವಿವರಗಳು 

ಕ್ರ.ಸಂ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ ಆಹಾರ ಮತ್ತು ಪಾನೀಯ ಉತ್ಪಾದನೆಯಲ್ಲಿ ತೊಡಗಿರುವ ಅಸಂಘಟಿತ ಉದ್ಯಮಗಳ ಸಂಖ್ಯೆ

1 ಅಂಡಮಾನ್ & ನಿಕೋಬಾರ್ ದ್ವೀಪಗಳು 774

2 ಆಂಧ್ರಪದೇಶ 1,54,330

3 ಅರುಣಾಚಲಪ್ರದೇಶ 145

4 ಅಸ್ಸಾಂ 65,997

5 ಬಿಹಾರ್ 1,45,300

6 ಚಂಡೀಗಢ 656

7 ಛತ್ತೀಸ್ ಗಢ 26,957

8 ಡಿ & ಎನ್ ಹವೇಲಿ ಮತ್ತು ದಾಮನ್ & ದಿಯು 758

9 ದೆಹಲಿ 14,350

10 ಗೋವಾ 2,929

11 ಗುಜರಾತ್ 94,066

12 ಹರಿಯಾಣ 24,577

13 ಹಿಮಾಚಲ ಪ್ರದೇಶ 21,885

14 ಜಮ್ಮು & ಕಾಶ್ಮೀರ 28,089

15 ಜಾರ್ಖಂಡ್ 116536

16 ಕರ್ನಾಟಕ 127458

17 ಕೇರಳ 77,167

18 ಲಡಾಖ್ -

19 ಲಕ್ಷದ್ವೀಪ 127

20 ಮಧ್ಯಪ್ರದೇಶ 1,02,808

21 ಮಹಾರಾಷ್ಟ್ರ 2,29,372

22 ಮಣಿಪುರ 6,038

23 ಮೇಘಾಲಯ 3,268

24 ಮಿಜೋರಾಂ 1,538

25 ನಾಗಾಲ್ಯಾಂಡ್ 3,642

26 ಒಡಿಶಾ 77,781

27 ಪುದುಚೇರಿ 3,482

28 ಪಂಜಾಬ್ 63,626

29 ರಾಜಸ್ಥಾನ್ 1,01,666

30 ಸಿಕ್ಕಿಂ 101

31 ತಮಿಳುನಾಡು 1,78,527

32 ತೆಲಂಗಣಾ 80,392

33 ತ್ರಿಪುರಾ 13,998

34 ಉತ್ತರಪ್ರದೇಶ 3,50,883

35 ಉತ್ತರಾಖಂಡ್ 18,116

36 ಪಶ್ಚಿಮ ಬಂಗಾಳ 3,22,590

  ಒಟ್ಟು 24,59,929

ಮೂಲ: ವಾರ್ಷಿಕ ಕೈಗಾರಿಗಳ ಸಮೀಕ್ಷೆ, 2016-17 and ಎನ್ಎಸ್ಎಸ್ಒ 73ನೇ ಸುತ್ತು (ಜುಲೈ 2015-ಜೂನ್ 2016)

 

ಈ ಮಾಹಿತಿಯನ್ನು ಆಹಾರ ಸಂಸ್ಕರಣಾ ಕೈಗಾರಿಕೆಗಳ  ಸಚಿವಾಲಯದ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ನೀಡಿದ್ದಾರೆ. 

 

*********


(Release ID: 1844953) Visitor Counter : 172