ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರು ಜುಲೈ 10 ರಂದು ಸಹಜ ಕೃಷಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ

Posted On: 09 JUL 2022 10:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜುಲೈ 10, 2022 ರಂದು ಬೆಳಗ್ಗೆ 11:30 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಹಜ ಕೃಷಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ, 2022 ರ ಮಾರ್ಚ್‌ನಲ್ಲಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಿಯವರು ಪ್ರತಿ ಹಳ್ಳಿಯಲ್ಲಿ ಕನಿಷ್ಠ 75 ರೈತರು ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು. ಪ್ರಧಾನಮಂತ್ರಿಯವರ ಈ ದೃಷ್ಟಿಕೋನದ ಮಾರ್ಗದರ್ಶನದಲ್ಲಿ ಸೂರತ್ ಜಿಲ್ಲಾಡಳಿತವು ಸಹಜ ಕೃಷಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಸಹಾಯ ಮಾಡಲು ರೈತ ಗುಂಪುಗಳು, ಚುನಾಯಿತ ಪ್ರತಿನಿಧಿಗಳು, ತಲಾಥಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿಗಳು), ಸಹಕಾರಿ ಸಂಸ್ಥೆಗಳು, ಬ್ಯಾಂಕ್‌ಗಳು ಮುಂತಾದ ವಿವಿಧ ಭಾಗೀದಾರರು ಮತ್ತು ಸಂಸ್ಥೆಗಳನ್ನು ಸಂವೇದನಾಶೀಲಗೊಳಿಸಲು ಮತ್ತು ಪ್ರೇರೇಪಿಸಲು ಸಂಘಟಿತ ಪ್ರಯತ್ನವನ್ನು ಕೈಗೊಂಡಿದೆ. ಪರಿಣಾಮವಾಗಿ, ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಕನಿಷ್ಠ 75 ರೈತರನ್ನು ಗುರುತಿಸಲಾಗಿದೆ ಮತ್ತು ನೈಸರ್ಗಿಕ ಕೃಷಿ ಕೈಗೊಳ್ಳಲು ಪ್ರೇರೇಪಣೆ ಮತ್ತು ತರಬೇತಿ ನೀಡಲಾಗಿದೆ. ರೈತರಿಗೆ 90 ವಿವಿಧ ಕ್ಲಸ್ಟರ್‌ಗಳಲ್ಲಿ ತರಬೇತಿ ನೀಡಲಾಗಿದ್ದು, ಜಿಲ್ಲೆಯಾದ್ಯಂತ 41,000 ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಗಿದೆ.

ಗುಜರಾತಿನ ಸೂರತ್‌ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಸೂರತ್‌ನಲ್ಲಿ ಸಹಜ ಕೃಷಿಯ ಯಶೋಗಾಥೆಗೆ ಕಾರಣರಾದ ಸಾವಿರಾರು ರೈತರು ಮತ್ತು ಎಲ್ಲಾ ಇತರ ಭಾಗೀದಾರರು ಇದರಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದಲ್ಲಿ ಗುಜರಾತ್ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳೂ ಸಹ ಭಾಗವಹಿಸಲಿದ್ದಾರೆ.

*****



(Release ID: 1840419) Visitor Counter : 167