ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೂನ್ 30 ರಂದು ನಡೆಯಲಿರುವ 'ಉದ್ಯಮಿ ಭಾರತ್' ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಪ್ರಧಾನಮಂತ್ರಿ.


ಎಂ.ಎಸ್.ಎಂ.ಇ. ವಲಯದ ಉತ್ತೇಜನಕ್ಕೆ ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ.

'ಎಂ.ಎಸ್.ಎಂ.ಇ. ಕಾರ್ಯಕ್ಷಮತೆಯ ಹೆಚ್ಚಳ ಮತ್ತು ವೇಗವರ್ಧನೆ' (RAMP), 'ಮೊದಲ ಬಾರಿಯ ರಫ್ತುದಾರರ ಸಾಮರ್ಥ್ಯ ವರ್ಧನೆ' (ಸಿಬಿಎಫ್ ಟಿಇ) ಯೋಜನೆ ಮತ್ತು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿ.ಎಂ.ಇ.ಜಿ.ಪಿ.) ಹೊಸ ವೈಶಿಷ್ಟ್ಯಗಳಿಗೆ ಯೋಜನೆಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ.

ಪಿ.ಎಂ.ಇ.ಜಿ.ಪಿ.ಯ ಫಲಾನುಭವಿಗಳಿಗೆ ನೆರವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಲಿರುವ ಪ್ರಧಾನಮಂತ್ರಿ.

ಎಂಎಸ್ಎಂಇ ಐಡಿಯಾ ಹ್ಯಾಕಥಾನ್, 2022 ರ ಫಲಿತಾಂಶ ಘೋಷಿಸಲಿರುವ ಮತ್ತು ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿ 2022ನ್ನು ಪ್ರದಾನಮಾಡಲಿರುವ ಪ್ರಧಾನಮಂತ್ರಿ.

Posted On: 28 JUN 2022 7:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 30ರಂದು ಬೆಳಗ್ಗೆ 10:30ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ 'ಉದ್ಯಮಿ ಭಾರತ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು 'ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಳ ಮತ್ತು ವೇಗವರ್ಧನೆ' (RAMP) ಯೋಜನೆ, 'ಮೊದಲ ಬಾರಿಯ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ' (ಸಿಬಿಎಫ್.ಟಿಇ) ಯೋಜನೆ ಮತ್ತು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿಯವರು 2022-23ನೇ ಸಾಲಿನ ಪಿಎಂಇಜಿಪಿ ಫಲಾನುಭವಿಗಳಿಗೆ ಡಿಜಿಟಲ್ ರೂಪದಲ್ಲಿ ನೆರವನ್ನು ವರ್ಗಾಯಿಸಲಿದ್ದಾರೆ. ಎಂಎಸ್ಎಂಇ ಐಡಿಯಾ ಹ್ಯಾಕಥಾನ್, 2022 ರ ಫಲಿತಾಂಶಗಳನ್ನು ಘೋಷಿಸಲಿರುವ ಅವರು, ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿ 2022ನ್ನು ಪ್ರದಾನ ಮಾಡಲಿದ್ದಾರೆ; ಮತ್ತು ಸ್ವಾವಲಂಬಿ ಭಾರತ (SRI ಶ್ರೀ) ನಿಧಿಯಲ್ಲಿ 75 ಎಂಎಸ್ಎಂಇಗಳಿಗೆ ಡಿಜಿಟಲ್ ಈಕ್ವಿಟಿ ಪ್ರಮಾಣಪತ್ರಗಳನ್ನು ವಿತರಿಸಲಿದ್ದಾರೆ.

ಎಂಎಸ್ಎಂಇಗಳ ಸಬಲೀಕರಣಕ್ಕಾಗಿ ಮೊದಲ ದಿನದಿಂದಲೇ ಶ್ರಮಿಸುತ್ತಿರುವ ಸರ್ಕಾರದ ನಿರಂತರ ಬದ್ಧತೆಯನ್ನು 'ಉದ್ಯಮಿ ಭಾರತ್' ಪ್ರತಿಬಿಂಬಿಸುತ್ತದೆ. ಮುದ್ರಾ ಯೋಜನೆ, ತುರ್ತು ಸಾಲ ಖಾತ್ರಿ ಯೋಜನೆ, ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನ ನಿಧಿ ಯೋಜನೆ (ಎಸ್ ಎಫ್ ಯುಆರ್.ಟಿಐ) ಇತ್ಯಾದಿಗಳಂತಹ ಹಲವಾರು ಉಪಕ್ರಮಗಳನ್ನು ಸರ್ಕಾರವು ಕಾಲಕಾಲಕ್ಕೆ ಪ್ರಾರಂಭಿಸಿದೆ, ಇದು ಎಂಎಸ್ಎಂಇ ವಲಯಕ್ಕೆ ಅಗತ್ಯ ಮತ್ತು ಸಕಾಲಿಕ ಬೆಂಬಲವನ್ನು ಒದಗಿಸುತ್ತಿದೆ, ಇದು ದೇಶಾದ್ಯಂತ ಕೋಟ್ಯಂತರ ಜನರಿಗೆ ಪ್ರಯೋಜನವನ್ನು ನೀಡಲು ನೆರವಾಗಿದೆ.

ಸುಮಾರು 6000 ಕೋಟಿ ರೂ.ಗಳ ವೆಚ್ಚದ 'ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಳ ಮತ್ತು ವೇಗವರ್ಧನೆ' (RAMP) ಯೋಜನೆಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಅಸ್ತಿತ್ವದಲ್ಲಿರುವ ಎಂಎಸ್ಎಂಇ ಯೋಜನೆಗಳ ಪ್ರಭಾವವರ್ಧನೆಯೊಂದಿಗೆ ರಾಜ್ಯಗಳಲ್ಲಿ ಎಂಎಸ್ಎಂಇಗಳ ಅನುಷ್ಠಾನ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ಇದು ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಪೂರಕವಾಗಿರಲಿದೆ, ಕಲ್ಪನೆಗಳನ್ನು ಪ್ರೋತ್ಸಾಹಿಸುತ್ತದೆ, ಗುಣಮಟ್ಟದ ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಮೂಲಕ ಹೊಸ ವ್ಯಾಪಾರ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ, ರೂಢಿಗಳು ಮತ್ತು ಪ್ರಕ್ರಿಯೆಗಳನ್ನು ಸುಧಾರಿಸುತ್ತದೆ, ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುತ್ತದೆ, ತಾಂತ್ರಿಕ ಸಾಧನಗಳನ್ನು ನಿಯುಕ್ತಿಗೊಳಿಸುತ್ತದೆ ಮತ್ತು ಎಂಎಸ್ಎಂಇಗಳನ್ನು ಸ್ಪರ್ಧಾತ್ಮಕ ಮತ್ತು ಸ್ವಾವಲಂಬಿಗಳನ್ನಾಗಿ ಮಾಡಲು ಉದ್ಯಮ 4.0 ಅನ್ನು ನಿಯೋಜಿಸುತ್ತದೆ.

ಪ್ರಧಾನಮಂತ್ರಿಯವರು 'ಮೊದಲ ಬಾರಿಯ ಎಂಎಸ್ಎಂಇ ರಫ್ತುದಾರರ ಸಾಮರ್ಥ್ಯ ವರ್ಧನೆ' (ಸಿಬಿಎಫ್.ಟಿಇ) ಯೋಜನೆಗೆ ಚಾಲನೆ ನೀಡಲಿದ್ದು, ಇದು ಜಾಗತಿಕ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಎಂಎಸ್ಎಂಇಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಜಾಗತಿಕ ಮೌಲ್ಯ ಸರಪಳಿಯಲ್ಲಿ ಭಾರತೀಯ ಎಂಎಸ್ಎಂಇಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅವರ ರಫ್ತು ಸಾಮರ್ಥ್ಯವನ್ನು ಅರಿತುಕೊಳ್ಳಲು ಅವರಿಗೆ ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು 'ಪ್ರಧಾನಮಂತ್ರಿ ಉದ್ಯೋಗ ಸೃಜನ ಕಾರ್ಯಕ್ರಮ'ದ (ಪಿಎಂಇಜಿಪಿ) ಹೊಸ ವೈಶಿಷ್ಟ್ಯಗಳಿಗೂ ಚಾಲನೆ ನೀಡಲಿದ್ದಾರೆ. ಉತ್ಪಾದನಾ ವಲಯಕ್ಕೆ ಗರಿಷ್ಠ ಯೋಜನಾ ವೆಚ್ಚವನ್ನು 50 ಲಕ್ಷ ರೂ.ಗಳಿಗೆ (25 ಲಕ್ಷ ರೂ.ಗಳಿಂದ) ಮತ್ತು ಸೇವಾ ವಲಯದಲ್ಲಿ 20 ಲಕ್ಷ ರೂ.ಗಳಿಗೆ (10 ಲಕ್ಷ ರೂ.ಗಳಿಂದ) ಹೆಚ್ಚಿಸುವುದು ಮತ್ತು ಹೆಚ್ಚಿನ ಸಹಾಯಧನ ಪಡೆಯಲು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ತೃತೀಯ ಲಿಂಗಿ ಅರ್ಜಿದಾರರನ್ನು ವಿಶೇಷ ವರ್ಗದ ಅರ್ಜಿದಾರರಲ್ಲಿ ಸೇರಿಸುವುದೂ ಇದರಲ್ಲಿ ಸೇರಿದೆ. ಅಲ್ಲದೆ, ಬ್ಯಾಂಕಿಂಗ್, ತಾಂತ್ರಿಕ ಮತ್ತು ಮಾರುಕಟ್ಟೆ ತಜ್ಞರನ್ನು ತೊಡಗಿಸಿಕೊಳ್ಳುವ ಮೂಲಕ ಅರ್ಜಿದಾರರು / ಉದ್ಯಮಿಗಳ ಕೈಹಿಡಿದು ಮಾರ್ಗದರ್ಶಿ ಬೆಂಬಲವನ್ನು ಒದಗಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಎಂಎಸ್ಎಂಇ ಐಡಿಯಾ ಹ್ಯಾಕಥಾನ್, 2022 ರ ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ. 2022ರ ಮಾರ್ಚ್ 10ರಂದು ಪ್ರಾರಂಭಿಸಲಾದ ಈ ಹ್ಯಾಕಥಾನ್, ಅನ್ವೇಷಿಸದ ಸೃಜನಶೀಲತೆಯನ್ನು ಉತ್ತೇಜಿಸುವುದು ಮತ್ತು ಬೆಂಬಲಿಸುವುದು, ಎಂಎಸ್ಎಂಇಗಳಲ್ಲಿ ಇತ್ತೀಚಿನ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಆಯ್ಕೆಯಾದ ಹೊರಹೊಮ್ಮಿದ ಆಲೋಚನೆಗಳಿಗೆ ಪ್ರತಿ ಅನುಮೋದಿತ ಕಲ್ಪನೆಗೆ 15 ಲಕ್ಷ ರೂ.ಗಳವರೆಗೆ ಧನಸಹಾಯದ ಬೆಂಬಲವನ್ನು ಒದಗಿಸಲಾಗುತ್ತದೆ.

ಪ್ರಧಾನಮಂತ್ರಿಯವರು 2022ರ ರಾಷ್ಟ್ರೀಯ ಎಂಎಸ್ಎಂಇ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಿದ್ದಾರೆ. ಭಾರತದ ಕ್ರಿಯಾಶೀಲ ಎಂಎಸ್ಎಂಇ ವಲಯದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತ್ಯುತ್ತಮ ಸಾಧನೆಗಾಗಿ ಎಂಎಸ್ಎಂಇಗಳು, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು, ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಯಾಂಕುಗಳ ಕೊಡುಗೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.

******


(Release ID: 1837735) Visitor Counter : 269