ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅಂಬ್ ಅಂಡೌರಾ ರೈಲ್ವೆ ನಿಲ್ದಾಣದಲ್ಲಿಪಾದಚಾರಿ ಮೇಲ್ಸೇತುವೆ ಕಾಮಗಾರಿ ಶೀಘ್ರ ಆರಂಭ.
ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರ ಮನವಿಯ ಮೇರೆಗೆ ನಿರ್ಮಾಣ ಕಾಮಗಾರಿಗೆ ರೈಲ್ವೆ ಆದೇಶ.
Posted On:
28 JUN 2022 11:37AM by PIB Bengaluru
ಕೇಂದ್ರ ರೈಲ್ವೆ ಸಚಿವರು ಅಂಬ್ ಅಂಡೌರಾ ರೈಲ್ವೆ ನಿಲ್ದಾಣವನ್ನು ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಆದೇಶಿಸಿದ್ದಾರೆ. ಪಾದಚಾರಿ ಮೇಲ್ಸೇತುವೆಯು ನಿಲ್ದಾಣವನ್ನು ಜಾಮಾ ಮಸೀದಿಗೆ ಸಂಪರ್ಕಿಸುತ್ತದೆ ಮತ್ತು ರೈಲ್ವೆ ನಿಲ್ದಾಣದಿಂದ ಮಸೀದಿಯ ಪ್ರವೇಶವನ್ನು ಸುಲಭಗೊಳಿಸುತ್ತದೆ. ನಿರ್ಮಾಣಕ್ಕಾಗಿ ಟೆಂಡರ್ ತೆರೆಯಲಾಗಿದೆ ಮತ್ತು ಶೀಘ್ರದಲ್ಲೇ ಆರಂಭಿಕ ಕಾರ್ಯ ಪ್ರಾರಂಭವಾಗುವ ನಿರೀಕ್ಷೆಯಿದೆ.
ಮೇಲ್ಸೇತುವೆಗಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು 2022 ರ ಜೂನ್ 1 ರಂದು ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ ನಂತರ ಈ ಆದೇಶ ಬಂದಿದೆ.
******
(Release ID: 1837732)
Visitor Counter : 134