ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತ್‌ ಸರ್ಕಾರದ ಮಾಜಿ ಸಚಿವ ಶ್ರೀ ಭಾಗುಭಾಯಿ ಪಟೇಲ್‌ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ.

ಪ್ರಕಟಣಾ ದಿನಾಂಕ: 26 JUN 2022 2:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ ಸರ್ಕಾರದ ಮಾಜಿ ಸಚಿವ ಶ್ರೀ ಭಾಗುಭಾಯಿ ಪಟೇಲ್‌ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿಶ್ರೀ ಪಟೇಲರ ಕೊಡುಗೆಯನ್ನು ಸದಾ ಸ್ಮರಿಸಲಾಗುವುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಪ್ರಧಾನಮಂತ್ರಿ ಅವರು ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ:

‘‘ ಗುಜರಾತ್‌ ಸರ್ಕಾರದ ಮಾಜಿ ಸಚಿವ ಶ್ರೀ ಭಾಗುಭಾಯ್‌ ಪಟೇಲ್‌ ಅವರ ನಿಧನದಿಂದ ನಾವು ದುಃಖಿತರಾಗಿದ್ದೇವೆ. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿಅವರ ಕೊಡುಗೆ ಸದಾ ಸ್ಮರಣೀಯವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಸಾಂತ್ವನಗಳು ...... . ಶಾಂತಿ:’’ ಎಂದಿದ್ದಾರೆ.

******


(ಪ್ರಕಟಣೆ ಐ.ಡಿ.: 1837151) ವಿಸಿಟರ್ ಕೌಂಟರ್ : 165