ಸಹಕಾರ ಸಚಿವಾಲಯ
“ಭವಿಷ್ಯದಲ್ಲಿ ನಗರ ಸಹಕಾರ ಸಾಲ ವಲಯದ ಪಾತ್ರ’’ ಕುರಿತಂತೆ ನವದೆಹಲಿಯಲ್ಲಿ ನಾಳೆ ನಡೆಯಲಿರುವ ಶೆಡ್ಯೂಲ್ಡ್ ಮತ್ತು ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸೊಸೈಟಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ.
ಈ ಸಮಾವೇಶದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಮೃದ್ಧಿ’ ದೂರದೃಷ್ಟಿ ಮತ್ತಷ್ಟು ಬಲವರ್ಧನೆ.
ಸಮಾವೇಶದಲ್ಲಿ ಶೆಡ್ಯೂಲ್ಡ್ ಮತ್ತು ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸೊಸೈಟಿಗಳಿಗೆ ಸಂಬಂಧಿಸಿದಂತೆ ನಾನಾ ವಿಷಯಗಳ ಚರ್ಚೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿ 100 ವರ್ಷ ಪೂರ್ಣಗೊಳಿಸಿರುವ ನಗರ ಸಹಕಾರಿ ಬ್ಯಾಂಕುಗಳಿಗೆ ನೆರವು.
Posted On:
22 JUN 2022 12:08PM by PIB Bengaluru
ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ನವದೆಹಲಿಯಲ್ಲಿ ನಾಳೆ ನಡೆಯಲಿರುವ “ಭವಿಷ್ಯದಲ್ಲಿ ನಗರ ಸಹಕಾರ ಸಾಲ ವಲಯದ ಪಾತ್ರ’’ ಕುರಿತ ಶೆಡ್ಯೂಲ್ಡ್ ಮತ್ತು ಮಲ್ಟಿ ಸ್ಟೇಟ್ ಸಹಕಾರಿ ಬ್ಯಾಂಕುಗಳು ಮತ್ತು ಸಾಲ ಸೊಸೈಟಿಗಳ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಮಾವೇಶದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ‘ಸಹಕಾರದಿಂದ ಸಮೃದ್ಧಿ’ ದೂರದೃಷ್ಟಿ ಮತ್ತಷ್ಟು ಬಲವರ್ಧನೆಯಾಗಲಿದೆ.
ಸಮಾವೇಶದ ಕಲಾಪದಲ್ಲಿ ಶೆಡ್ಯೂಲ್ಡ್ ಮತ್ತು ಮಲ್ಟಿ-ಸ್ಟೇಟ್ ನಗರ ಸಹಕಾರಿ ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಸೊಸೈಟಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ ಮತ್ತು ಸಹಕಾರಿ ಕ್ರೆಡಿಟ್ ವಲಯದಲ್ಲಿ ನಗರ ಸಹಕಾರಿ ಬ್ಯಾಂಕ್‌ಗಳ ಭವಿಷ್ಯದ ಪಾತ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್ ಬಿಐ)ನ ತಜ್ಞರ ಸಮಿತಿಯ ಶಿಫಾರಸುಗಳು, ನಗರ ಸಹಕಾರಿ ವಲಯಕ್ಕೆ ರಾಷ್ಟ್ರೀಯ ಸಹಕಾರಿ ಹಣಕಾಸು ಮತ್ತು ಅಭಿವೃದ್ಧಿ ಸಹಕಾರ ಸಂಸ್ಥೆ ಮಹತ್ವದ ಬದಲಾವಣೆಗಳು, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2020 ಮತ್ತು ಅದರ ಪರಿಣಾಮ ಮತ್ತು ಬೆಳವಣಿಗೆಗಳು, ಹಣಕಾಸು ವಲಯದ ಸದ್ಯದ ಸ್ಥಿತಿಯಲ್ಲಿ ಕ್ರೆಡಿಟ್ ಸೊಸೈಟಿಗಳ ಪಾತ್ರ, ಮಲ್ಟಿ-ಸ್ಟೇಟ್ ಸೊಸೈಟಿಗಳಿಗೆ ವಿಶೇಷ ಉಲ್ಲೇಖ ಮತ್ತು ಸಹಕಾರಿ ಕ್ರೆಡಿಟ್ ಸೊಸೈಟಿಗಳ ನಿಯಂತ್ರಣ ಮತ್ತು ತೆರಿಗೆಯ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು.
ಸಮಾಜ ಸೇವೆಯಲ್ಲಿ 100 ವರ್ಷ ಪೂರೈಸಿದ ನಗರ ಸಹಕಾರಿ ಬ್ಯಾಂಕ್‌ಗಳನ್ನು ಸಹ ಸಮಾವೇಶ ಗೌರವಿಸುತ್ತದೆ. ದೇಶದಲ್ಲಿ ಅಂತಹ 197 ಬ್ಯಾಂಕ್‌ಗಳಿವೆ. ಇದು ದೇಶದಲ್ಲಿ ಸಹಕಾರಿ ಮತ್ತು ಸಹಕಾರಿ ಬ್ಯಾಂಕ್‌ಗಳ ಬೇರುಗಳು ಆಳವಾಗಿ ಬೇರೂರಿವುದನ್ನು ಸೂಚಿಸುತ್ತದೆ. ಗಣ್ಯರಿಂದ ಸನ್ಮಾನ ಸ್ವೀಕರಿಸಲು ಹಲವು ಬ್ಯಾಂಕ್‌ಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ನಗರ ಸಹಕಾರಿ ಬ್ಯಾಂಕ್‌ಗಳು ದೇಶದ ಅತ್ಯಂತ ಹಳೆಯ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಸೇರಿವೆ. ಅವುಗಳು ಒಂದು ಶತಮಾನಕ್ಕೂ ಅಧಿಕ ಕಾಲದಿಂದ ಅಸ್ತಿತ್ವದಲ್ಲಿವೆ. ಅವುಗಳನ್ನು ಎಲ್ಲ ವರ್ಗದ ಜನರು ಸಂಘಟಿಸುತ್ತಿದ್ದಾರೆ ಮತ್ತು ಸಂಯೋಜಿಸುತ್ತಿದ್ದಾರೆ. ಅವುಗಳಲ್ಲಿ ಶಿಕ್ಷಕರು, ವಕೀಲರು, ವ್ಯಾಪಾರಿಗಳು, ವೈದ್ಯರು, ಇಂಜಿನಿಯರ್‌ಗಳು, ಸಮಾಜ ಕಾರ್ಯಕರ್ತರು ಮತ್ತಿತರರೂ ಸಹ ಒಳಗೊಂಡಿದ್ದು, ಅವು ತಮ್ಮ ಸದಸ್ಯರಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತವೆ.
ಸಹಕಾರ ಖಾತೆ ರಾಜ್ಯ ಸಚಿವರಾದ ಶ್ರೀ ಬಿ.ಎಲ್.ವರ್ಮಾ, ಸಹಕಾರ ಸಚಿವಾಲಯದ ಹಿರಿಯ ಅಧಿಕಾರಿಗಳು, ನ್ಯಾಷನಲ್ ಫೆಡರೇಶನ್ ಆಫ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಸ್ ಅಂಡ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ (ಎನ್ ಎಎಫ್ ಸಿಯುಬಿ) ಒಕ್ಕೂಟದ ಅಧ್ಯಕ್ಷ ಡಾ. ಎಚ್.ಕೆ. ಪಾಟೀಲ್, ಎನ್ ಎ ಎಫ್ ಸಿಯುಬಿ ಅಧ್ಯಕ್ಷ ಶ್ರೀ ಜ್ಯೋತೀಂದ್ರ ಮೆಹ್ತಾ ಮತ್ತು ಎನ್ ಎಎಫ್ ಸಿಯುಬಿ ಉಪಾಧ್ಯಕ್ಷ ಶ್ರೀ ವಿ.ವಿ. ಅನಸ್ಕರ್ ಮತ್ತಿತರರು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
******
(Release ID: 1836204)
Visitor Counter : 193