ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ಆಗ್ನಿವೀರರು ಸೇವಾವಧಿಯಲ್ಲಿ ಪಡೆಯುವ ತರಬೇತಿಯನ್ನು ಪದವಿಗೆ ಅಂಕಗಳ ರೂಪದಲ್ಲಿ ಪರಿಗಣಿಸಲಿರುವ ಶಿಕ್ಷಣ ಸಚಿವಾಲಯ


ಇಗ್ನೋದಿಂದ ವಿಶೇಷವಾಗಿ ಸಿದ್ಧಪಡಿಸಲಾದ ಪದವಿ ಕೋರ್ಸ್ ನಲ್ಲಿ ಸೇವಾವಧಿ ತರಬೇತಿಯನ್ನು ಶೇ.50ರಷ್ಟು ಅಂಕಕ್ಕೆ ಪರಿಗಣನೆ, ಉಳಿದಿದ್ದು ಆಯ್ಕೆ ಆಧಾರಿತ ಇತರೆ ಕೋರ್ಸ್ ಗಳ ಗುಚ್ಛದಿಂದ ಪಡೆಯಲು ಅವಕಾಶ

ಕೋರ್ಸ್ ನಲ್ಲಿ ಪ್ರತಿಯೊಂದು ಹಂತದಲ್ಲೂ ಹಲವು ಪ್ರವೇಶ-ನಿರ್ಗಮನ ಅವಕಾಶಗಳಿದ್ದು, ಅವುಗಳಿಗೆ ಸೂಕ್ತ ಪ್ರಮಾಣಪತ್ರ ನೀಡಲಾಗುವುದು

ಇಗ್ನೋ ನೀಡುವ ಪದವಿಯಿಂದ ಭಾರತ ಮತ್ತು ವಿದೇಶಗಳಲ್ಲಿ ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾನ್ಯತೆ

ಕೋರ್ಸ್ ಅಗ್ನಿವೀರರಿಗೆ ತಮ್ಮ ಆಯ್ಕೆಯ ನಾಗರಿಕ ವೃತ್ತಿಗಳನ್ನು ಮುಂದುವರಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ

Posted On: 15 JUN 2022 2:34PM by PIB Bengaluru

ಕೇಂದ್ರ ಸಚಿವ ಸಂಪುಟವು 2022ರ ಜೂನ್ 14 ರಂದು, ಅಗ್ನಿಪತ್ ಎಂಬ ಹೆಸರಿನಲ್ಲಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ಯುವಕರಿಗೆ ಆಕರ್ಷಕ ನೇಮಕಾತಿ ಯೋಜನೆಗೆ ಅನುಮೋದನೆ ನೀಡಿದೆ ಮತ್ತು ಯೋಜನೆಯಡಿಯಲ್ಲಿ ಆಯ್ಕೆಯಾದ ಯುವಕರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಅಗ್ನಿಪಥ್, ದೇಶಭಕ್ತಿ ಮತ್ತು ಉತ್ತೇಜಿತ ಯುವಕರಿಗೆ ನಾಲ್ಕು ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುತ್ತದೆ. ಅಗ್ನಿಪಥ್ ಯೋಜನೆಯನ್ನು ಸಶಸ್ತ್ರ ಪಡೆಗಳಲ್ಲಿ ಯುವಜನತೆಯ ಸಬಲತೆಯನ್ನು ಸಕ್ರಿಯಗೊಳಿಸುವ ಉದ್ದೇಶದಿಂದ  ರೂಪಿಸಲಾಗಿದೆ.ನಮ್ಮ ಅಗ್ನಿವೀರರ ಭವಿಷ್ಯದ ವೃತ್ತಿಯನ್ನು ಉಜ್ವಲಗೊಳಿಸಲು ಮತ್ತು ನಾಗರಿಕ ಸೇವಾ ವಲಯದಲ್ಲಿ ನಾನಾ ಬಗೆಯ ಉದ್ಯೋಗಗಳಿಗೆ ಅವರನ್ನು ಸಜ್ಜುಗೊಳಿಸಲು, ಶಿಕ್ಷಣ ಸಚಿವಾಲಯವು ರಕ್ಷಣಾ ಸಿಬ್ಬಂದಿಗೆ ಸೇವೆ ಸಲ್ಲಿಸುವವರಿಗಾಗಿ ಮೂರು ವರ್ಷಗಳ ವಿಶೇಷ ಕೌಶಲ್ಯ ಆಧಾರಿತ  ಪದವಿ ಕೋರ್ಸ್ ಅನ್ನು ಪ್ರಾರಂಭಿಸಲಿದ್ದು, ಅದು ರಕ್ಷಣಾ ಸಂಸ್ಥೆಗಳಲ್ಲಿ ಅವರ ಸೇವಾವಧಿಯಲ್ಲಿ ಅವರು ಪಡೆದ ತರಬೇತಿಯ ಕೌಶಲ್ಯವನ್ನು ಗುರುತಿಸುತ್ತದೆ ಅಥವಾ ಮಾನ್ಯ ಮಾಡುತ್ತದೆ.  ಇಗ್ನೋ ವಿನ್ಯಾಸಗೊಳಿಸಿರುವ ಮತ್ತು ಅವರಿಂದಲೇ ಜಾರಿಗೊಳಿಸಲಿರುವ ಈ ಕೋರ್ಸ್ ನ  ಅಡಿಯಲ್ಲಿ, ಪದವಿ ಪಡೆಯಲು ಅಗತ್ಯವಿರುವ ಶೇ. 50ರಷ್ಟು ಅಂಕಗಳು ಅಗ್ನಿವೀರರು ಪಡೆದ ತಾಂತ್ರಿಕ ಮತ್ತು ತಾಂತ್ರಿಕವಲ್ಲದ  ಕೌಶಲ್ಯ ತರಬೇತಿಯಿಂದ ಬರುತ್ತವೆ. ಮತ್ತು ಉಳಿದ ಶೇ.50 ರಷ್ಟು ಅಂಕಗಳು ಭಾಷೆಗಳು, ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ ವಿಜ್ಞಾನ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ, ವಾಣಿಜ್ಯ, ಪ್ರವಾಸೋದ್ಯಮ, ವೃತ್ತಿಪರ ಅಧ್ಯಯನಗಳು, ಕೃಷಿ ಮತ್ತು ಇಂಗ್ಲಿಷ್‌ನಲ್ಲಿ ಪರಿಸರ ಅಧ್ಯಯನಗಳು ಮತ್ತು ಸಂವಹನ ಕೌಶಲ್ಯಗಳ ಕುರಿತು  ಸಾಮರ್ಥ್ಯ ವರ್ಧನೆಯ ಜ್ಯೋತಿಶ್ ನಂತಹ ಕೋರ್ಸ್‌ಗಳಂತಹ ವಿವಿಧ ವಿಷಯಗಳನ್ನು ಒಳಗೊಂಡಿರುವ ಕೋರ್ಸ್‌ಗಳ ಗುಚ್ಛದಿಂದ ಬರುತ್ತದೆ. ಕೋರ್ಸ್  ಯುಜಿಸಿ ಮಾನದಂಡಗಳೊಂದಿಗೆ ಮತ್ತು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅಡಿಯಲ್ಲಿ ಕಡ್ಡಾಯಗೊಳಿಸಿದ ರಾಷ್ಟ್ರೀಯ ಮೌಲ್ಯಾಂಕನ ಚೌಕಟ್ಟು (ಕ್ರೆಡಿಟ್ ಫ್ರೇಮ್‌ವರ್ಕ್ ) / ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (ಎನ್ ಎಸ್ ಕ್ಯೂಎಫ್) ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಹಲವು ಹಂತಗಳಲ್ಲಿ ಪ್ರವೇಶ-ನಿರ್ಗಮನ ಅವಕಾಶಗಳನ್ನೂ ಸಹ ಹೊಂದಿದೆ - ಮೊದಲ ವರ್ಷದ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ ಪದವಿ ಪ್ರಮಾಣಪತ್ರ, ಮೊದಲ ಮತ್ತು ಎರಡನೇ ವರ್ಷದ ಕೋರ್ಸ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೇಲೆ ಪದವಿಪೂರ್ವ ಡಿಪ್ಲೊಮಾ ಮತ್ತು ಮೂರು ವರ್ಷಗಳ ಕಾಲಮಿತಿಯೊಳಗೆ ಎಲ್ಲಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಮೇಲೆ ಪದವಿ ನೀಡಲಾಗುವುದು. ಈ ಕೋರ್ಸ್ ನ ಚೌಕಟ್ಟನ್ನು ಸಂಬಂಧಪಟ್ಟ ನಿಯಂತ್ರಕ ಸಂಸ್ಥೆಗಳು - ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಮತ್ತು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿ (ಎನ್ ಸಿವಿಇಟಿ) ಮತ್ತು ಯುಜಿಸಿಯಿಂದ ಸೂಕ್ತವಾಗಿ ಗುರುತಿಸಲಾಗಿದೆ. ಯುಜಿಸಿ ತಾನು ಬೇರೆ ಬೇರೆ ಹೆಸರಿನಿಂದ ಕರೆಯುವ ಇಗ್ನೋ ಕೋರ್ಸ್ ಗಳ ಪದವಿಯನ್ನು ನೀಡಲಾಗುತ್ತದೆ, ಅವೆಂದರೆ (ಬಿಎ; ಬಿ.ಕಾಂ.; ಬಿಎ (ವೃತ್ತಿಪರ);ಬಿಎ (ಪ್ರವಾಸೋದ್ಯಮ ನಿರ್ವಹಣೆ) ಮತ್ತು ಈ ಪದವಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯ ಮಾಡಲಾಗುತ್ತದೆ. ಯೋಜನೆಯ ಅನುಷ್ಠಾನಕ್ಕಾಗಿ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು  ಇಗ್ನೋದೊಂದಿಗೆ ಜ್ಞಾಪನಾ ಪತ್ರ (ಎಂಒಯು- ಒಡಂಬಡಿಕೆ) ಗೆ ಸಹಿ ಹಾಕಲಿವೆ.

 

***

 (Release ID: 1834420) Visitor Counter : 131