ಪ್ರಧಾನ ಮಂತ್ರಿಯವರ ಕಛೇರಿ
ಜೂನ್ 9 ರಂದು ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೊ -2022 ಉದ್ಘಾಟಿಸಲಿರುವ ಪ್ರಧಾನಮಂತ್ರಿ
Posted On:
07 JUN 2022 6:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇದೇ ಜೂನ್ 9 ರಂದು ಬೆಳಗ್ಗೆ 10.30ಕ್ಕೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಬಯೋಟೆಕ್ ಸ್ಟಾರ್ಟ್ಅಪ್ ಎಕ್ಸ್ ಪೊ – 2022 ಉದ್ಘಾಟಿಸಲಿದ್ದಾರೆ. ಆನಂತರ ಅವರು, ಈ ಸಂದರ್ಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಎರಡು ದಿನಗಳ ಈ ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೊ -2022 ಜೂನ್ 9 ಮತ್ತು 10ರಂದು ನಡೆಯಲಿದೆ. ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವಿನ ಮಂಡಳಿ(ಬಿಐಆರ್ ಎಸಿ – ಬಿರಾಕ್) ಆಯೋಜಿಸಿದೆ. ಬಿರಾಕ್ ಸ್ಥಾಪನೆಯಾಗಿ 10 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಆಯೋಜಿಸಲಾಗಿದೆ. ಈ ಎಕ್ಸ್ ಪೋನ ಘೋಷವಾಕ್ಯ “ಬಯೋಟೆಕ್ ಸ್ಟಾರ್ಟ್ ಅಪ್ ನಾವಿನ್ಯತೆಗಳು; ಆತ್ಮನಿರ್ಭರ ಭಾರತದತ್ತ’ ಎಂಬುದಾಗಿದೆ.
ಈ ಎಕ್ಸ್ ಪೊ ಉದ್ಯಮಿಗಳು, ಹೂಡಿಕೆದಾರರು, ಕೈಗಾರಿಕೋದ್ಯಮಿಗಳು, ವಿಜ್ಞಾನಿಗಳು, ಸಂಶೋಧಕರು, ಬಯೋ-ಇನ್ ಕ್ಯುಬೇಟರ್ಸ್, ಉತ್ಪಾದಕರು, ನಿಯಂತ್ರಕರು, ಸರ್ಕಾರಿ ಅಧಿಕಾರಿಗಳನ್ನು ಒಗ್ಗೂಡಿಸಿ ಅವರಿಗೆ ವೇದಿಕೆ ಒದಗಿಸಲಿದೆ. ಎಕ್ಸ್ ಪೋದಲ್ಲಿ ಸುಮಾರು 300ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ ಆರೋಗ್ಯ ರಕ್ಷಣೆ, ಜಿನೋಮಿಕ್ಸ್, ಬಯೋಫಾರ್ಮ, ಕೃಷಿ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸಂಪತ್ತಿನಿಂದ ಮೌಲ್ಯ, ಶುದ್ಧ ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ಜೈವಿಕ ತಂತ್ರಜ್ಞಾನ ಅಳವಡಿಕೆ ಕುರಿತ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಗುವುದು.
*****
(Release ID: 1831935)
Visitor Counter : 215
Read this release in:
Telugu
,
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam