ಹಣಕಾಸು ಸಚಿವಾಲಯ
2ನೇ ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಭಾಗವಹಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್
Posted On:
06 JUN 2022 6:44PM by PIB Bengaluru
ಬ್ರಿಕ್ಸ್ ಚೀನಾ ಅಧ್ಯಕ್ಷತೆಯ `ಎರಡನೇ ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ (ಎಫ್ ಎಂಸಿಬಿಜಿ) ಸಭೆʼಯಲ್ಲಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ವರ್ಚುವಲ್ ಮೂಲಕ ಭಾಗವಹಿಸಿದರು. ಸಭೆಯ ಕಾರ್ಯಸೂಚಿಯು 2022ರ ಬ್ರಿಕ್ಸ್ ಹಣಕಾಸು ಸಹಕಾರ ಕಾರ್ಯಸೂಚಿಯ ಫಲಿತಾಂಶಗಳ ಬಗ್ಗೆ ಚರ್ಚೆಗಳನ್ನು ಒಳಗೊಂಡಿತ್ತು. ಇದರಲ್ಲಿ ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಜಂಟಿ ಹೇಳಿಕೆಗಳು, ಮೂಲಸೌಕರ್ಯ ಹೂಡಿಕೆಗಳು, ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ ಮತ್ತು ಹಣಕಾಸು ಬಗೆಗಿನ ಬ್ರಿಕ್ಸ್ ಚಿಂಥನಾ ಚಾವಡಿ ಜಾಲ ಕುರಿತ ಚರ್ಚೆಯೂ ಸೇರಿತ್ತು.
ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಯ ಪಥವನ್ನು ಪುನರ್‌ನಿರ್ಮಿಸುವ ನಿಟ್ಟಿನಲ್ಲಿ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಅನುಭವಗಳು, ಕಾಳಜಿಗಳು ಮತ್ತು ಆಲೋಚನೆಗಳ ವಿನಿಮಯಕ್ಕೆ ಅನುವು ಮಾಡಿಕೊಡಲು ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುವುದನ್ನು ಬ್ರಿಕ್ಸ್ ಮುಂದುವರಿಸಬೇಕು ಎಂದು ಶ್ರೀಮತಿ ಸೀತಾರಾಮನ್ ಅಭಿಪ್ರಾಯಪಟ್ಟರು.
ಭಾರತದ ಬೆಳವಣಿಗೆಯ ದೃಷ್ಟಿಕೋನದ ಬಗ್ಗೆ ಮಾತನಾಡಿದ ಹಣಕಾಸು ಸಚಿವರು, ಭಾರತದ ಆರ್ಥಿಕ ಬೆಳವಣಿಗೆಗೆ ಹೂಡಿಕೆ ಉತ್ತೇಜನದ ಜೊತೆಗೆ ವಿತ್ತೀಯ ವೆಚ್ಚದ ಮೂಲಕವೂ ಬೆಂಬಲವನ್ನು ಮುಂದುವರಿಸಲಾಗುವುದು ಎಂದು ಹೇಳಿದರು, ಇದರಿಂದ ಸೂಕ್ಷ್ಮ ಮಟ್ಟದಲ್ಲಿ ಸರ್ವರ ಕಲ್ಯಾಣದಿಂದ ಪೂರಕವಾದ ಸಮಗ್ರ ಮಟ್ಟದ ಬೆಳವಣಿಗೆಯ ಕಲ್ಪನೆಯನ್ನು ಆಧರಿಸಿದ ಆರ್ಥಿಕತೆಗೆ ವೇಗವನ್ನು ನೀಡುತ್ತದೆ ಎಂದರು.
ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳು ಮೂಲಸೌಕರ್ಯ ಹೂಡಿಕೆ, ನ್ಯೂ ಡೆವಲಪ್ ಮೆಂಟ್ ಬ್ಯಾಂಕ್ (ಎನ್‌ಡಿಬಿ), ಬ್ರಿಕ್ಸ್ ಅನಿಶ್ಚಿತ ಮೀಸಲು ವ್ಯವಸ್ಥೆ (ಸಿಆರ್‌ಎ) ಮುಂತಾದ ಇತರ ಪಾರಂಪರಿಕ ಬ್ರಿಕ್ಸ್ ಹಣಕಾಸು ವಿಷಯಗಳ ಬಗ್ಗೆಯೂ ಚರ್ಚಿಸಿದರು.
*****
(Release ID: 1831764)
Visitor Counter : 235