ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೂನ್ 5 ರಂದು 'ಮಣ್ಣು ಉಳಿಸಿ ಆಂದೋಲನ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ

प्रविष्टि तिथि: 04 JUN 2022 9:37AM by PIB Bengaluru

ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜೂನ್ 5 ರಂದು ಬೆಳಿಗ್ಗೆ 11 ಗಂಟೆಗೆ ವಿಜ್ಞಾನ ಭವನದಲ್ಲಿ ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

'ಮಣ್ಣು ಉಳಿಸಿ ಆಂದೋಲನ’ವು ಮಣ್ಣಿನ ಆರೋಗ್ಯ ಹದಗೆಡುತ್ತಿರುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದನ್ನು ಸುಧಾರಿಸಲು ಜಾಗೃತ ಜವಾಬ್ದಾರಿಯನ್ನು ಮೂಡಿಸುವ ಜಾಗತಿಕ ಆಂದೋಲನವಾಗಿದೆ. ಈ ಚಳುವಳಿಯನ್ನು ಸದ್ಗುರುಗಳು ಮಾರ್ಚ್ 2022ರಲ್ಲಿ ಪ್ರಾರಂಭಿಸಿದರು, ಅವರು 27 ದೇಶಗಳ ಮೂಲಕ ಹಾದುಹೋಗುವ 100 ದಿನಗಳ ಮೋಟಾರ್‌ಸೈಕಲ್ ಪ್ರಯಾಣವನ್ನು ಪ್ರಾರಂಭಿಸಿದರು. ಜೂನ್ 5, 100 ದಿನಗಳ ಪ್ರಯಾಣದ 75 ನೇ ದಿನವನ್ನು ಸೂಚಿಸುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಗವಹಿಸುವಿಕೆಯು ಭಾರತದಲ್ಲಿನ ಮಣ್ಣಿನ ಆರೋಗ್ಯವನ್ನು ಸುಧಾರಿಸುವ ಬಗ್ಗೆ ಹಂಚಿಕೊಂಡ ಕಾಳಜಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

*****
 


(रिलीज़ आईडी: 1831181) आगंतुक पटल : 246
इस विज्ञप्ति को इन भाषाओं में पढ़ें: Tamil , Telugu , English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Malayalam