ಪ್ರಧಾನ ಮಂತ್ರಿಯವರ ಕಛೇರಿ
ಮೇ 30 ರಂದು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಪ್ರಯೋಜನಗಳನ್ನು ಬಿಡುಗಡೆ ಮಾಡಲಿರುವ ಪ್ರಧಾನಿ
Posted On:
29 MAY 2022 11:47AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 30 ಮೇ 2022 ರಂದು ಬೆಳಗ್ಗೆ 10:30 ಕ್ಕೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಪ್ರಯೋಜನಗಳನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿಯವರು ಶಾಲೆಗೆ ಹೋಗುವ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ವರ್ಗಾಯಿಸಲಿದ್ದಾರೆ. ಮಕ್ಕಳಿಗಾಗಿ ಪಿಎಂ ಕೇರ್ಸ್ ನ ಪಾಸ್‌ಬುಕ್ ಮತ್ತು ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಕಾರ್ಡ್ ಅನ್ನು ಕಾರ್ಯಕ್ರಮದ ಸಮಯದಲ್ಲಿ ಮಕ್ಕಳಿಗೆ ಹಸ್ತಾಂತರಿಸಲಾಗುವುದು.
11 ಮಾರ್ಚ್ 2020 ರಿಂದ 28 ಫೆಬ್ರವರಿ 2022ರ ಅವಧಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಪೋಷಕರು ಅಥವಾ ಕಾನೂನುಬದ್ಧ ಪಾಲಕರು ಅಥವಾ ದತ್ತು ಪಡೆದ ಪೋಷಕರು ಅಥವಾ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ಬೆಂಬಲಿಸಲು 29 ಮೇ 2021 ರಂದು ಪ್ರಧಾನ ಮಂತ್ರಿಯವರು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯನ್ನು ಪ್ರಾರಂಭಿಸಿದರು. ಇಂತಹ ಮಕ್ಕಳಿಗೆ ವಸತಿ ಮತ್ತು ನೆಲೆಯನ್ನು ಒದಗಿಸುವ ಮೂಲಕ ನಿರಂತರವಾದ ರೀತಿಯಲ್ಲಿ ಮಕ್ಕಳ ಸಮಗ್ರ ಆರೈಕೆ ಮತ್ತು ರಕ್ಷಣೆಯನ್ನು ಖಚಿತಪಡಿಸುವುದು, ಶಿಕ್ಷಣ ಮತ್ತು ವಿದ್ಯಾರ್ಥಿವೇತನಗಳ ಮೂಲಕ ಅವರನ್ನು ಸಬಲೀಕರಣಗೊಳಿಸುವುದು, 23 ವರ್ಷ ವಯಸ್ಸಿಗೆ ಬಂದ ಕೂಡಲೇ 10 ಲಕ್ಷ ರೂ. ರೂ.ಗಳ ಆರ್ಥಿಕ ಬೆಂಬಲದೊಂದಿಗೆ ಸ್ವಾವಲಂಬಿ ಅಸ್ತಿತ್ವಕ್ಕೆ ಅವರನ್ನು ಸಜ್ಜುಗೊಳಿಸುವುದು ಈ ಯೋಜನೆಯ ಉದ್ದೇಶ. ಜೊತೆಗೆ ಆರೋಗ್ಯ ವಿಮೆಯ ಮೂಲಕ ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು http://pmcaresforchildren.in/ ಹೆಸರಿನ ಪೋರ್ಟಲ್ ನಲ್ಲಿ ಮಕ್ಕಳನ್ನು ನೋಂದಾಯಿಸಲು ಪ್ರಾರಂಭಿಸಲಾಯಿತು. ಪೋರ್ಟಲ್ ಏಕ ಗವಾಕ್ಷಿ ವ್ಯವಸ್ಥೆಯಾಗಿದ್ದು, ಮಕ್ಕಳಿಗಾಗಿ ಅನುಮೋದನೆ ಪ್ರಕ್ರಿಯೆ ಮತ್ತು ಎಲ್ಲಾ ಇತರ ಸಹಾಯವನ್ನು ಸುಗಮಗೊಳಿಸಿದೆ.
***
(Release ID: 1829228)
Visitor Counter : 187
Read this release in:
Telugu
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam