ಪ್ರಧಾನ ಮಂತ್ರಿಯವರ ಕಛೇರಿ

ಮೇ 28ರಂದು ಪ್ರಧಾನಮಂತ್ರಿ ಗುಜರಾತ್ ಗೆ ಭೇಟಿ


ನಾನಾ ಸಹಕಾರಿ ಸಂಸ್ಥೆಗಳ ನಾಯಕರ ‘ಸಹಕಾರದಿಂದ ಸಮೃದ್ಧಿ’ ವಿಚಾರ ಸಂಕಿರಣವನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ

ಕಲೋಲ್ ನಲ್ಲಿ ಇಫ್ಕೋ ನಿರ್ಮಿಸಿರುವ ನ್ಯಾನೋ ಯೂರಿಯಾ (ದ್ರವ) ಘಟಕವನ್ನು ಉದ್ಘಾಟಿಸಲಿರುವ ಪ್ರಧಾನಿ

ರಾಜ್ ಕೋಟ್ ನ ಅಟ್ಕೋಟ್ ನಲ್ಲಿನ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಧಾನಿ ಭೇಟಿ ಮತ್ತು ನಂತರ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಭಾಷಣ

Posted On: 27 MAY 2022 9:17AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಮೇ 28ರಂದು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ  ಸುಮಾರು10 ಗಂಟೆಗೆ ಪ್ರಧಾನಿ ಅವರು ರಾಜ್‌ಕೋಟ್‌ನ ಅಟ್ಕೋಟ್ ನಲ್ಲಿ  ಹೊಸದಾಗಿ ನಿರ್ಮಿಸಿರುವ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುವರು, ನಂತರ ಅವರು ಅದೇ ಸ್ಥಳದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆನಂತರ ಸಂಜೆ 4 ಗಂಟೆಗೆ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ವಿವಿಧ ಸಹಕಾರಿ ಸಂಸ್ಥೆಗಳ ನಾಯಕರ 'ಸಹಕಾರದಿಂದ ಸಮೃದ್ಧಿ' ಕುರಿತು ವಿಚಾರ ಸಂಕಿರಣ ಉದ್ದೇಶಿಸಿ ಪ್ರಧಾನಿ ಮಾತನಾಡುವರು, ಅಲ್ಲದೆ ಅಲ್ಲಿ ಅವರು ಕಲೋಲ್‌ನ ಇಫ್ಕೋ ನಿರ್ಮಿಸಿರುವ ನ್ಯಾನೋ ಯೂರಿಯಾ (ದ್ರವ) ಸ್ಥಾವರವನ್ನು ಉದ್ಘಾಟಿಸಲಿದ್ದಾರೆ. 
ಗಾಂಧಿನಗರದಲ್ಲಿ ಪ್ರಧಾನಮಂತ್ರಿ
ಗುಜರಾತಿನಲ್ಲಿನ ಸಹಕಾರಿ ವಲಯದ ಮಾದರಿ ಇಡೀ ದೇಶದಕ್ಕೆ ಮಾದರಿಯಾಗಿದೆ. ರಾಜ್ಯದ ಸಹಕಾರಿ ವಲಯದಲ್ಲಿ 84,000 ಕ್ಕೂ ಅಧಿಕ ಸೊಸೈಟಿಗಳು ಇವೆ. ಈ ಸಹಕಾರಿ ಸಂಘಗಳೊಂದಿಗೆ ಸುಮಾರು 231 ಲಕ್ಷ ಸದಸ್ಯರು ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಸಹಕಾರಿ ಚಳವಳಿಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮತ್ತೊಂದು ಕ್ರಮವಾಗಿ, ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಾನಾ ಸಹಕಾರಿ ಸಂಸ್ಥೆಗಳ ‘ಸಹಕಾರದಿಂದ ಸಮೃದ್ಧಿ’ ಕುರಿತ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಈ ವಿಚಾರ ಸಂಕಿರಣದಲ್ಲಿ ರಾಜ್ಯಗಳ ನಾನಾ ಸಹಕಾರಿ ಸಂಸ್ಥೆಗಳ 7,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರೈತರ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮತ್ತು ಅವರ ಆದಾಯ ವೃದ್ಧಿಗೆ ಸಹಾಯ ಮಾಡುವ ವಿಧಾನಗಳನ್ನು ಮತ್ತಷ್ಟು ಒದಗಿಸುವ ಪ್ರಯತ್ನದ ಭಾಗವಾಗಿ, ಸುಮಾರು 173 ಕೋಟಿ ರೂ.ವೆಚ್ಚದಲ್ಲಿ ಕಲೋಲ್‌ನನಲ್ಲಿ ಇಫ್ಕೋ ನಿರ್ಮಿಸಿರುದ ನ್ಯಾನೋ ಯೂರಿಯಾ (ದ್ರವ) ಘಟಕವನ್ನು ಪ್ರಧಾನಮಂತ್ರಿ ಉದ್ಘಾಟಿಸಲಿದ್ದಾರೆ. ನ್ಯಾನೊ ಯೂರಿಯಾ ಬಳಕೆಯಿಂದ ಬೆಳೆಗಳ ಇಳುವರಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಅತ್ಯಾಧುನಿಕ ನ್ಯಾನೊ ರಸಗೊಬ್ಬರ ಘಟಕವನ್ನು ಸ್ಥಾಪಿಸಲಾಗಿದೆ. ಸ್ಥಾವರವು ದಿನಕ್ಕೆ 500 ಎಂ.ಎಲ್.ನ ಸುಮಾರು 1.5 ಲಕ್ಷ ಬಾಟಲಿಗಳನ್ನು ಉತ್ಪಾದಿಸುತ್ತದೆ. 
ರಾಜ್ ಕೋಟ್ ನ ಅಟ್ಕೋಟ್ ನಲ್ಲಿ ಪ್ರಧಾನಿ 
ಪ್ರಧಾನಮಂತ್ರಿ ಭೇಟಿ ನೀಡುತ್ತಿರುವ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಶ್ರೀ ಪಟೇಲ್ ಸೇವಾ ಸಮಾಜವು ನಿರ್ವಹಣೆ ಮಾಡುತ್ತಿದೆ. ಇದು ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳ ಲಭ್ಯವಾಗುವಂತೆ ಮಾಡುತ್ತದೆ ಮತ್ತು ಆ ಪ್ರದೇಶದ ಜನರಿಗೆ ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯ ಒದಗಿಸುತ್ತದೆ. ಆಸ್ಪತ್ರೆಯ ಭೇಟಿಯ ನಂತರ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 

***



(Release ID: 1828930) Visitor Counter : 152