ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಅತಿದೊಡ್ಡ ಡ್ರೋನ್ ಉತ್ಸವ - ಭಾರತ್ ಡ್ರೋನ್ ಮಹೋತ್ಸವ 2022 - ಮೇ 27ರಂದು ಪ್ರಗತಿ ಮೈದಾನದಲ್ಲಿ ಪ್ರಧಾನಿ ಅವರಿಂದ ಉದ್ಘಾಟನೆ

Posted On: 26 MAY 2022 10:10AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅತಿದೊಡ್ಡ ಡ್ರೋನ್ ಉತ್ಸವ - ಭಾರತ್ ಡ್ರೋನ್ ಮಹೋತ್ಸವ-2022 ಅನ್ನು ಮೇ 27ರಂದು ನವದೆಹಲಿಯ ಪ್ರಗತಿ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.
ಪ್ರಧಾನಮಂತ್ರಿ ಅವರು ಕಾರ್ಯಕ್ರಮದಲ್ಲಿ ಕಿಸಾನ್ ಡ್ರೋನ್ ಪೈಲಟ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಜತೆಗೆ, ಡ್ರೋನ್ ಹಾರಾಟ ಪ್ರದರ್ಶನಗಳನ್ನು ವೀಕ್ಷಿಸಲಿದ್ದಾರೆ. ನಂತರ ಅವರು ಡ್ರೋನ್ ಪ್ರದರ್ಶನ ಕೇಂದ್ರದಲ್ಲಿ ನವೋದ್ಯಮಗಳ ಉದ್ಯಮಶೀಲರೊಂದಿಗೆ ಸಂವಾದ ನಡೆಸಲಿದ್ದಾರೆ.
ಭಾರತ್ ಡ್ರೋನ್ ಮಹೋತ್ಸವ-2022 2 ದಿನಗಳ ಕಾರ್ಯಕ್ರಮವಾಗಿದ್ದು ಮತ್ತು ಮೇ 27 ಮತ್ತು 28ರಂದು ನಡೆಯಲಿದೆ. ಸರ್ಕಾರಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ರಂಗದ ಉದ್ಯಮಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ನವೋದ್ಯಮಗಳನ್ನು ಒಳಗೊಂಡ 1,600ಕ್ಕೂ ಹೆಚ್ಚು ಪ್ರತಿನಿಧಿಗಳು ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. ಪ್ರದರ್ಶನದಲ್ಲಿ 70 ಕ್ಕೂ ಹೆಚ್ಚು ಪ್ರದರ್ಶಕರು  ವಿವಿಧ ಬಳಕೆಯ ಡ್ರೋನ್‌ಗಳನ್ನು ಪ್ರದರ್ಶಿಸಲಿದ್ದಾರೆ. ವರ್ಚುವಲ್ ಮಹೋತ್ಸವವು ಡ್ರೋನ್ ಪೈಲಟ್ ಪ್ರಮಾಣಪತ್ರಗಳ ವಿತರಣೆ, ಉತ್ಪನ್ನಗಳ ಬಿಡುಗಡೆ, ಗುಂಪು ಚರ್ಚೆಗಳು, ಹಾರಾಟ ಪ್ರದರ್ಶನಗಳು, ಮೇಡ್ ಇನ್ ಇಂಡಿಯಾ ಡ್ರೋನ್ ಟ್ಯಾಕ್ಸಿ ಮಾದರಿಯ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ.

***
 (Release ID: 1828502) Visitor Counter : 206